Fashion Tips 2026: ಹೊಸ ರೂಪದಲ್ಲಿ ಮರಳಿದ ಬ್ಯಾಗಿ ಪ್ಯಾಂಟ್ ಸ್ಟೈಲಿಂಗ್ಗೆ ಇಲ್ಲಿದೆ 5 ಟಿಪ್ಸ್
ರೆಟ್ರೊ ಫ್ಯಾಷನ್ನಲ್ಲಿದ್ದ ಬ್ಯಾಗಿ ಪ್ಯಾಂಟ್ಸ್ ಇದೀಗ ಹೊಸ ರೂಪದಲ್ಲಿ ಮರಳಿವೆ. ತ್ರಿ ಡಿ ಗ್ರಾಫಿಕ್ ಡಿಸೈನ್ನಲ್ಲಿ ಆಗಮಿಸಿರುವ ಈ ಪ್ಯಾಂಟ್ಗಳ ಸ್ಟೈಲಿಂಗ್ ಹೇಗೆ? ಈ ಬಗ್ಗೆ ಸ್ಟೈಲಿಸ್ಟ್ಗಳು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಚಿತ್ರಗಳು: ವಾಮಿಕಾ ಗಬ್ಬಿ, ಬಾಲಿವುಡ್ ನಟಿ -
ಬ್ಯಾಗಿ ಪ್ಯಾಂಟ್ಸ್ ಫ್ಯಾಷನ್ ಮರಳಿದೆ. ಹೌದು, ಒಂದಾನೊಂದು ಕಾಲದಲ್ಲಿ ಹಳೆ ಸಿನಿಮಾಗಳಲ್ಲಿ ಹಾಗೂ ರೆಟ್ರೊ ಫ್ಯಾಷನ್ನಲ್ಲಿ ಸೂಪರ್ ಹಿಟ್ ಆಗಿದ್ದ ಈ ಬ್ಯಾಗಿ ಪ್ಯಾಂಟ್ಗಳು ಇದೀಗ ಡೆನಿಮ್ ಫ್ಯಾಬ್ರಿಕ್ನಲ್ಲಿ ಜೀನ್ಸ್ ಪ್ಯಾಂಟ್ ರೂಪ ತೆಳೆದು ವಾಪಸ್ಸಾಗಿವೆ. ಜೆನ್ ಜಿ ಹುಡುಗಿಯರನ್ನು ಮಾತ್ರವಲ್ಲ, ಯೂನಿಸೆಕ್ಸ್ ಫ್ಯಾಷನ್ ಹೆಸರಲ್ಲಿ ಹುಡುಗರನ್ನು ಸವಾರಿ ಮಾಡತೊಡಗಿವೆ.
ಈ ಬ್ಯಾಗಿ ಪ್ಯಾಂಟ್ಗಳನ್ನು ಹೇಗೆಲ್ಲಾ ಸ್ಟೈಲಿಂಗ್ ಮಾಡಿದರೇ ಆಕರ್ಷಕವಾಗಿ ಕಾಣಿಸುತ್ತದೆ ಎಂಬುದರ ಬಗ್ಗೆ ಸ್ಟೈಲಿಸ್ಟ್ ಜೆನ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಟ್ರೆಂಡಿಯಾಗಿರುವ ಡೆನಿಮ್ ಬ್ಯಾಗಿ ಪ್ಯಾಂಟ್ ಆಯ್ಕೆ
ಮೊದಲಿಗೆ ಸೀಸನ್ನಲ್ಲಿ ಟ್ರೆಂಡಿಯಾಗಿರುವ ಡೆನಿಮ್ ಬ್ಯಾಗಿ ಪ್ಯಾಂಟ್ ಆಯ್ಕೆ ಮಾಡಿ. ಇದು ಸದ್ಯ ಜೆನ್ ಜಿ ಫ್ಯಾಷನ್ನ ಲಿಸ್ಟ್ನಲ್ಲಿದೆ. ನೋಡಲು ದೊಗಲೆಯಾಗಿ ಕಂಡರೂ ಟ್ರೆಂಡಿಯಾಗಿದೆ.
ಬ್ಯಾಗಿ ಪ್ಯಾಂಟ್ ಪ್ರಿಂಟ್ಸ್
ಡೆನಿಮ್ ಬ್ಯಾಗಿ ಪ್ಯಾಂಟ್ಗಳು ಇದೀಗ ಪ್ರಿಂಟ್ಸ್ನಲ್ಲಿ ಲಭ್ಯ. ಅದರಲ್ಲೂ 3ಡಿ ಪ್ರಿಂಟ್ಸ್ ಹಾಗೂ ಗ್ರಾಫಿಕ್ ಡಿಸೈನ್ಗಳು ಬ್ಯಾಗಿ ಪ್ಯಾಂಟ್ನಲ್ಲಿ ಕಂಡು ಬರುತ್ತಿವೆ. ಇವು ಇತ್ತೀಚೆಗೆ ಹೆಚ್ಚು ಪ್ಯಾಷನ್ನಲ್ಲಿವೆ. ಇವನ್ನೇ ಚೂಸ್ ಮಾಡಿ.
ಬ್ಯಾಗಿ ಪ್ಯಾಂಟ್ಗೆ ಟಾಪ್ ಹೀಗಿರಲಿ
ಬ್ಯಾಗಿ ಪ್ಯಾಂಟ್ನ ಪ್ಯಾಂಟ್ನ ಟಾಪ್ಗಳ ಆಯ್ಕೆ ಸೂಕ್ತವಾಗಿರಬೇಕು. ಪ್ಯಾಂಟ್ ಪ್ರಿಂಟ್ನದ್ದಾಗಿದ್ದಲ್ಲಿ ಟಾಪ್ ಸಾದಾ ಇರಬೇಕು. ದೊಗಲೆಯಾಗಿರಕೂಡದು. ಆಗಷ್ಟೇ ನೋಡಲು ಚೆನ್ನಾಗಿ ಕಾಣಿಸುವುದು.
ಸ್ಟ್ರೀಟ್ ಸ್ಟೈಲ್ ಕೆಟಗರಿಗೆ ಪರ್ಫೆಕ್ಟ್
ಬ್ಯಾಗಿ ಪ್ಯಾಂಟ್ ನಿಮ್ಮ ಸ್ಟ್ರೀಟ್ ಸ್ಟೈಲ್ ಕೆಟಗರಿಗೆ ಸೇರುತ್ತದೆ. ಹಾಗಾಗಿ ಅದಕ್ಕೆ ಹೊಂದುವಂತಹ ಮೇಕೋವರ್ ಮಾಡಿ. ಅದು ಅತಿಯೆನಿಸಕೂಡದು. ನೋಡಲು ಬಿಂದಾಸ್ ಲುಕ್ ನೀಡುತ್ತದೆ.
ಫುಟ್ವೇರ್ ಆಯ್ಕೆ ಹೀಗಿರಲಿ
ಆದಷ್ಟೂ ಬ್ಯಾಗಿ ಪ್ಯಾಂಟ್ಗೆ ಸಮತಟ್ಟಾದ ಫುಟ್ವೇರ್ ಬೇಡ. ಕೊಂಚವಾದರೂ ಹೀಲ್ಸ್ ಇರಲಿ. ಇಲ್ಲವಾದಲ್ಲಿ ಪಾದ ಮುಳುಗಿದಂತೆ ಕಾಣಿಸಬಹುದು. ಹೀಲ್ಸ್ ಆಫ್ ಶೂಗಳು ಅಥವಾ ವೆಡ್ಜಸ್ಗಳು ಬೆಸ್ಟ್.