ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳುನಾಡು ಅರುಣಾಚಲೇಶ್ವರ ದೇವಾಲಯದ ಮಾದರಿ ಅಭಿವೃದ್ದಿಯೆ ಗಿರಿಪ್ರದಕ್ಷಿಣೆ ಉದ್ದೇಶ

ಇಲ್ಲಿಂದ ನೂರಾರು ಕಿ ಮಿ ದೂರದ ಅರುಣಾಚಲ ದೇವಾಲಯಕ್ಕೆ ಹೋಗಿ ಅಲ್ಲಿನ ದೇವಾಲಯ ಸುತ್ತುವ ಕನಸು ಕೆಲವು ಭಕ್ತರಿಗೆ ಇಡೇರದೆ ಇರಬಹುದು ಅಂತವರೆಲ್ಲರಿಗೂ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿನ‌ ಅರುಣಾಚಲ ದೇವರ ದರ್ಶನ ಪಡೆದು ಗಿರಿಪ್ರದಕ್ಷಿಣೆ ಮಾಡುವುದರಿಂದ ದೇವರಿಗೆ ಇನ್ನಷ್ಟು ಮೆಚ್ಚುಗೆಯಾಗುತ್ತದೆಂಬ ಉದ್ದೇಶದಿಂದ ನಂದಿಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಲಾಗಿದೆ

ತಿಂಗಳಿಗೆ ಭಕ್ತರ ಪಾಲ್ಗೊಳ್ಳುವಿಕೆ ಹೆಚ್ಚುತ್ತೆ ಎಂಬುದು ನನ್ನ ನಂಬಿಕೆ

-

Profile
Ashok Nayak May 2, 2026 12:26 AM

ಚಿಕ್ಕಬಳ್ಳಾಪುರ: ಇಲ್ಲಿಂದ ನೂರಾರು ಕಿ ಮಿ ದೂರದ ಅರುಣಾಚಲ ದೇವಾಲಯಕ್ಕೆ ಹೋಗಿ ಅಲ್ಲಿನ ದೇವಾಲಯ ಸುತ್ತುವ ಕನಸು ಕೆಲವು ಭಕ್ತರಿಗೆ ಇಡೇರದೆ ಇರಬಹುದು ಅಂತವರೆಲ್ಲರಿಗೂ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿನ‌ ಅರುಣಾಚಲ ದೇವರ ದರ್ಶನ ಪಡೆದು ಗಿರಿಪ್ರದಕ್ಷಿಣೆ ಮಾಡುವುದರಿಂದ ದೇವರಿಗೆ ಇನ್ನಷ್ಟು ಮೆಚ್ಚುಗೆಯಾಗುತ್ತದೆಂಬ ಉದ್ದೇಶದಿಂದ ನಂದಿಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಲಾಗಿದೆ ಎಂದು ಸಂಸದ ಡಾ.ಕೆ‌.ಸುಧಾಕರ್(MP Dr. K. Sudhakar)ತಿಳಿಸಿದರು.

ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ನಂದಿ ಭೋಗನಂದೀಶ್ವರ ದೇವಾಲಯದಿಂದ ಹುಣ್ಣಿಮೆ ಅಂಗವಾಗಿ ವಿಷೇಶ ಗಿರಿ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿತ್ತು.ಮೂರನೆ ಗಿರಪ್ರದಕ್ಷಿಣೆ ಇಂದು ಆದಿಚುಂಚನಗಿರಿ ಮಹಾಪೀಠಾದ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮಿ ಆಗಮಿಸಿ ಪ್ರದಕ್ಷಿಣೆಗೆ ಚಾಲನೆ ನೀಡಿದರು.

ಇದನ್ನೂ ಓದಿ: MP Dr K Sudhakar: ಕರಕುಶಲಕರ್ಮಿಗಳು ಪಿ.ಎಂ.ವಿಶ್ವಕರ್ಮ ಯೋಜನೆಯ ಸದುಪಯೋಗ ಪಡೆಯಿರಿ : ಸಂಸದ ಡಾ.ಕೆ.ಸುಧಾಕರ್ ಕರೆ

ಈ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್ ನಮ್ಮ ಇವತ್ತಿನ ಗಿರಿಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಬಂದಿದ್ದು ಮತ್ತಷ್ಟು ಕಳೆ ಬಂದಿದೆ ಭಕ್ತರ ಇಚ್ವೆಯಂತೆ ಗಿರಿ ಪ್ರದಕ್ಷಿಣೆ ಪ್ರಾರಂಭ ಮಾಡಿದ್ದೇವೆ ಇದು ತಮಿಳುನಾಡು ಅರುಚಲೇಶ್ವರ ದೇವಾಲಯ ಸುತ್ತಿದಷ್ಟೆ ಪವಿತ್ರ ಮತ್ತು ಪಾವನವಾದ ಪ್ರದಕ್ಷಿಣೆ ಎಂದು ನಾನು ಭಾವಿಸಿದ್ದೇನೆ.

ಪ್ರದಕ್ಷಿಣೆ ಪ್ರಾರಂಬ ಮಾಡಿ ಮೂರು ತಿಂಗಳಾಗಿದೆ ಪ್ರತಿ ಹುಣ್ಣಿಮೆಗೆ ನಡೆಯುವ ಈ ಗಿರಿ ಪ್ರದಕ್ಷಿಗೆ ತಿಂಗಳಿಂದ ತಿಂಗಳಿಗೆ ಭಕ್ತರ ಸಂಖ್ಯೆ ಹೆಚ್ಚಳವಾಗುತಿದೆ ಇದು ಮುಂದಿನ ದಿನಗಳಲ್ಲಿ ಈ ಗಿರಿಪ್ರದಕ್ಷಿಣೆ ಇನ್ನಷ್ಟು ಮತ್ತಷ್ಟು ಪ್ರಸಿದ್ದಿಯನ್ನು ಪಡೆಯಲಿದೆ ಎಂದು ತಿಳಿಸಿದರು.

ಈ ವೇಳೆ ಚಿಮುಲ್ ನಿರ್ದೇಶಕ ಕೆ. ವಿ.ನಾಗರಾಜ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ,ಜೈ ಫೌಂಡೇಶನ್ ಅಧ್ಯಕ್ಷ ಜಯಕುಮಾರ್, ಗಿರೀಶ್ ಹರಿಸ್ಥಳ, ಬಾಗೇಪಲ್ಲಿ ಜೆಡಿಎಸ್ ಮುಖಂಡ ಹರಿನಾಥ್ ರೆಡ್ಡಿ, ಮಧು ಚಂದ್ರ ಸಂಸದರ ಅಭಿಮಾನಿಗಳು ಹಿರಿಯರು ಕಿರಿಯರು ಮಹಿಳೆಯರು ಪಾಲ್ಗೊಂಡಿದ್ದರು.