Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ಟಾಪ್ ಲಿಸ್ಟ್‌ಗೆ ಸೇರಿದ ಗ್ಲಾಮರಸ್ ಲುಕ್ ನೀಡುವ ಬ್ಯಾಕ್‌ಲೆಸ್ ಡ್ರೆಸ್
Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ಇದೀಗ ಬ್ಯಾಕ್‌ಲೆಸ್ ಡ್ರೆಸ್‌ಗಳದ್ದೇ ಕಾರುಬಾರು! ಧರಿಸಿದಾಗ ನೋಡಲು ಸೆಲೆಬ್ರೆಟಿ ಲುಕ್ ನೀಡುವ ಈ ಉಡುಗೆಗಳು ಯಾವ್ಯಾವ ಫ್ಯಾಬ್ರಿಕ್ ಹಾಗೂ ವಿನ್ಯಾಸಗಳಲ್ಲಿ ಬಂದಿವೆ? ಆಯ್ಕೆ ಹೇಗೆ? ಈ ಎಲ್ಲದರ ಕುರಿತಂತೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನಲ್ಲಿ ಬಗೆಬಗೆಯ ಬ್ಯಾಕ್‌ಲೆಸ್ ಡ್ರೆಸ್‌ಗಳದ್ದೇ (Summer Fashion) ಕಾರುಬಾರು! ಹೌದು, ಬಾಲಿವುಡ್ ನಟಿಯರಾದ ಅನನ್ಯಾ, ಜಾನ್ವಿ, ಖುಷಿ, ಮೌನಿ, ಕರೀನಾ, ದಿಶಾ ಪಟಾಣಿ ಸೇರಿದಂತೆ ಎಲ್ಲರೂ ಯಾವುದೇ ರೆಡ್‌ಕಾರ್ಪೆಟ್ ಫಂಕ್ಷನ್ ಇರಲಿ, ಆವಾರ್ಡ್ ಸಮಾರಂಭಗಳಿರಲಿ, ಇಲ್ಲವೇ ಕ್ಯಾಶುವಲ್ ಟೈಮ್ ಇರಲಿ ಗ್ಲಾಮರಸ್ ಲುಕ್ ನೀಡುವ ಬ್ಯಾಕ್‌ಲೆಸ್ ಗೌನ್, ಫ್ರಾಕ್‌ಗಳಲ್ಲೆ ಮಿಂಚಲಾರಂಭಿಸಿದ್ದಾರೆ. ಪರಿಣಾಮ, ಸಾಮಾನ್ಯ ಹುಡುಗಿಯರು ಕೂಡ ಈ ಉಡುಗೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಬ್ಯಾಕ್‌ಲೆಸ್ ಉಡುಪುಗಳು ಗ್ಲಾಮರಸ್ ಲುಕ್ ನೀಡುವುದು ಮಾತ್ರವಲ್ಲ, ಆಕರ್ಷಕವಾಗಿಯೂ ಕಾಣುತ್ತವೆ. ಹಾಗೆಂದು ಎಲ್ಲರಿಗೂ ಈ ಶೈಲಿಯ ಡ್ರೆಸ್, ಬ್ಲೌಸ್ ಹಾಗೂ ಚೂಡಿದಾರ್‌ಗಳು ಒಪ್ಪುವುದಿಲ್ಲ. ಹಾಗೆಂದೂ ಕೈಗಳು ಹಾಗೂ ಬೆನ್ನಿನ ಭಾಗ ಸುಕೋಮಲವಾಗಿರುವಂತಹವರು ಮಾತ್ರ ಧರಿಸಬೇಕೆಂಬ ರೂಲ್ಸ್ ಕೂಡ ಇಲ್ಲ. ತೆಳ್ಳಗಿರುವವರೂ ಮಾತ್ರವಲ್ಲ, ದಪ್ಪಗಿರುವವರೂ ಕೂಡ ಧರಿಸಬಹುದು. ಆದರೆ ಅವರ ಪರ್ಸನಾಲಿಟಿಗೆ ಹೊಂದಬೇಕಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಉಡುಗೆಗಳ ಬ್ಯಾಕ್‌ಲೆಸ್ ವಿನ್ಯಾಸ
ಗೌನ್, ಲಾಂಗ್ ಟಾಪ್, ಫ್ರಾಕ್, ಮ್ಯಾಕ್ಸಿ ಸೇರಿದಂತೆ ನಾನಾ ಉಡುಪುಗಳ ವಿನ್ಯಾಸಕ್ಕೆ ತಕ್ಕಂತೆ ಬಗೆ ಬಗೆಯ ಬ್ಯಾಕ್‌ಲೆಸ್ ಡಿಸೈನ್ಸ್ ಇಂದು ಫ್ಯಾಷನ್‌ವರ್ಲ್ಡ್‌ಗೆ ಲಗ್ಗೆ ಇಟ್ಟಿವೆ. ಹಾಗೆಂದು ಎಲ್ಲಾ ಬಗೆಯ ಡಿಸೈನ್ಸ್ ಎಲ್ಲರೂ ಧರಿಸಲು ಸಾಧ್ಯವಿಲ್ಲ. ಸೆಲೆಬ್ರೆಟಿಗಳು, ಮಾಡೆಲ್‌ಗಳು, ತಾರೆಗಳು ಹಾಕುವ ಬ್ಯಾಕ್‌ಲೆಸ್ ಉಡುಪುಗಳು ಅವರ ಪರ್ಸನಲ್ ಡಿಸೈನರ್‌ಗಳು ಸಿದ್ಧಪಡಿಸುವುದರಿಂದ ಯಾವುದೇ ಬಗೆಯ ಸಮಸ್ಯೆಯಾಗುವುದಿಲ್ಲ. ಆದರೆ, ಸಾಮಾನ್ಯ ಮಹಿಳೆಯರು ಇದನ್ನು ಕೊಳ್ಳುವಾಗ ಇಲ್ಲವೇ, ಡಿಸೈನ್ ಮಾಡಿಸುವಾಗ ಕೊಂಚ ಜಾಗ್ರತೆ ವಹಿಸಬೇಕು ಎನ್ನುತ್ತಾರೆ ಡಿಸೈನರ್ ರಾಜೇಶ್.

ಫ್ಯಾಬ್ರಿಕ್ ಆಯ್ಕೆ ಹೀಗಿರಲಿ
ಆದಷ್ಟೂ ಕ್ರೆಪ್, ಜಾರ್ಜೆಟ್, ವೆಲ್ವೆಟ್ ಶೈನಿ ಉಡುಪುಗಳ ಬ್ಯಾಕ್‌ಲೆಸ್ ಡ್ರೆಸ್‌ಗಳು ಆಕರ್ಷಕವಾಗಿ ಕಾಣಿಸುತ್ತವೆ. ಇನ್ನು, ತೀರಾ ಗಿಡ್ಡನಾದ ಅಥವಾ ಸಡಿಲವಾದ ಬ್ಯಾಕ್‌ಲೆಸ್ ಉಡುಪುಗಳು ಧರಿಸಿದಾಗ ಎಕ್ಸ್‌ಪೋಸ್ ಆಗುವುದರೊಂದಿಗೆ ಫಿಟ್ಟಿಂಗ್ ಇಲ್ಲದೇ ಮುಜುಗರ ಉಂಟು ಮಾಡಬಹುದು. ಹಾಗಾಗಿ, ಫಿಟ್ಟಿಂಗ್ ಇರುವಂತದ್ದನ್ನೇ ಆಯ್ಕೆ ಮಾಡುವುದು ಜಾಣತನ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.

ಬ್ಯಾಕ್‌ಲೆಸ್ ಡ್ರೆಸ್ ಪ್ರಿಯರು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು
- ಫಿಟ್ಟಿಂಗ್ ಇರುವಂತಹ ಬ್ಯಾಕ್‌ಲೆಸ್ ಡ್ರೆಸ್ ಆಯ್ಕೆ ಮಾಡಿ.
- ಬ್ಯಾಕ್‌ಲೆಸ್ ಡ್ರೆಸ್‌ಗಳು ಮುಂಭಾಗದ ಅಂಗಾಂಗಗಳನ್ನು ಪ್ರದರ್ಶಿಸುವಂತಿರಬಾರದು.
- ಸಮ್ಮರ್‌ಗೆ ಮಾತ್ರ ಇವು ಆರಾಮದಾಯಕ.
- ಮುಜುಗರ ಎನಿಸಿದಲ್ಲಿ ಕೇಪ್ ಧರಿಸಬಹುದು.
- ವೆಸ್ಟರ್ನ್‌ವೇರ್ ಹಾಗೂ ಎಥ್ನಿಕ್ ವೇರ್ ಬ್ಯಾಕ್‌ಲೆಸ್ ಡಿಸೈನ್ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Wedding Fashion: ಸಮ್ಮರ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಗೋಲ್ಡನ್ ಲುಕ್