Valentine’s Day Colour Code 2025: ವ್ಯಾಲೆಂಟೈನ್ಸ್ ಡೇಯಂದು ಧರಿಸುವ ಔಟ್‌ಫಿಟ್ ಬಣ್ಣದ ಅರ್ಥ ಗೊತ್ತೆ?
ನೀವು ವ್ಯಾಲೆಂಟೈನ್ಸ್ ಡೇಯಂದು ಧರಿಸುವ ಉಡುಪಿನ ಬಣ್ಣ ನಾನಾ ಅರ್ಥವನ್ನು ಸೂಚಿಸುತ್ತದೆ. ಆ ದಿನದಂದು ಧರಿಸುವ ಉಡುಪಿನ ಕಲರ್ ಮನಸ್ಸಿನೊಳಗಿನ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ ಎನ್ನುತ್ತಾರೆ. ಹಾಗಾಗಿ ಈ ದಿನ ಕೆಲವು ಬಣ್ಣದ ಉಡುಪುಗಳನ್ನು ಧರಿಸುವಾಗ ಒಂದಿಷ್ಟು ಅಂಶಗಳನ್ನು ಗಮನಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
![ವ್ಯಾಲೆಂಟೈನ್ಸ್ ಡೇಯಂದು ಧರಿಸುವ ಔಟ್‌ಫಿಟ್ ಬಣ್ಣದ ಅರ್ಥ ಗೊತ್ತೆ?](https://cdn-vishwavani-prod.hindverse.com/media/original_images/Valentines_Day_Colour_Code_2025.jpg)
ಚಿತ್ರಕೃಪೆ: ಪಿಕ್ಸೆಲ್
![ಶೀಲಾ ಸಿ ಶೆಟ್ಟಿ](https://cdn-vishwavani-prod.hindverse.com/media/images/1233333.2e16d0ba.fill-100x100.jpg)
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಂಗಳೂರು: ವ್ಯಾಲೆಂಟೈನ್ಸ್ ಡೇಯಂದು ಯುವಕ-ಯುವತಿಯರು ಧರಿಸುವ ಉಡುಪುಗಳ ಬಣ್ಣಗಳಿಗೂ (Valentine’s Day Colour Code 2025) ಅರ್ಥವಿದೆ. ಹೌದು, ಆ ದಿನದಂದು ಧರಿಸುವ ಉಡುಪಿನ ಕಲರ್ ಮನಸ್ಸಿನೊಳಗಿನ ಭಾವನೆಗಳನ್ನು ಪ್ರತಿಬಿಂಬಿಸುತ್ತವಂತೆ. ಹಾಗಾಗಿ ಈ ದಿನ ಕೆಲವು ಬಣ್ಣದ ಉಡುಪುಗಳನ್ನು ಧರಿಸುವಾಗ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ವ್ಯಾಲೆಂಟೈನ್ ದಿನ ಧರಿಸುವ ಔಟ್‌ಫಿಟ್‌ಗಳ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಆದರೆ ಇದು ಈ ದಿನಕ್ಕೆ ಮಾತ್ರ ಸೀಮಿತ. ಬೇರೆ ದಿನಕ್ಕೆ ಯಾವುದೇ ಸಂಬಂಧವಿರುವುದಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್. ಅವರು ಹೇಳುವಂತೆ ಪ್ರೇಮಿಗಳ ದಿನಾಚರಣೆಯಂದು ಸಿಂಗಲ್ ಆಗಿರುವವರು ಹೊರಗಡೆ ಹೋಗುವಾಗ, ಪಾರ್ಟಿಗಳಲ್ಲಿ ಪಾಲ್ಗೊಳ್ಳುವಾಗ, ಔಟಿಂಗ್ ತೆರಳಿದಾಗ, ಸ್ನೇಹಿತರೊಂದಿಗೆ ಬೆರೆತಾಗ ನಿಮ್ಮ ಪ್ರಸ್ತುತ ಸ್ಟೇಟಸ್‌ನಂತೆ ಡ್ರೆಸ್‌ಕೋಡ್ ಫಾಲೋ ಮಾಡುವುದು ಉತ್ತಮ.
![4](https://cdn-vishwavani-prod.hindverse.com/media/images/4_Fxx2PRx.max-1200x800.jpg)
ರಿಲೇಷನ್‌ಶಿಪ್‌ಗೆ ರೆಡಿ ಎಂದು ಬಿಂಬಿಸುವ ನೀಲಿ ಬಣ್ಣ: ನೀವು ನೀಲಿ ಶೇಡ್ಸ್‌ನ ಉಡುಪು ಧರಿಸಿದರೆ, ಯಾವುದೇ ರಿಲೇಷನ್‌ಶಿಪ್‌ಗೂ ರೆಡಿ ಎಂಬ ಅರ್ಥವನ್ನು ಕಲ್ಪಿಸುತ್ತದಂತೆ.
ಲವ್‌ಗೆ ಗ್ರೀನ್ ಸಿಗ್ನಲ್ ನೀಡುವ ಹಸಿರು ಬಣ್ಣ: ಹಸಿರು ಬಣ್ಣದ ಉಡುಪುಗಳು, ಪ್ರಪೋಸ್ ಮಾಡಬೇಕೆಂದುಕೊಂಡಿದ್ದವರಿಗೆ ಗ್ರೀನ್ ಸಿಗ್ನಲ್ ನೀಡಲು ಪ್ರಚೋದಿಸುತ್ತದಂತೆ.
![3](https://cdn-vishwavani-prod.hindverse.com/media/images/3_LLjwhTN.max-1200x800.jpg)
ಎದ್ದು ಕಾಣುವ ಕೇಸರಿ ಬಣ್ಣದ ಅರ್ಥ: ಕೇಸರಿ ಬಣ್ಣದ ಔಟ್‌ಫಿಟ್ ಧರಿಸಿದ್ದೀರಾ ಎಂದಾದಲ್ಲಿ, ನೀವು ಪ್ರಪೋಸ್ ಮಾಡಲು ಹೋಗುತ್ತಿದ್ದೀರಾ ಎಂಬುದನ್ನು ಸೂಚಿಸುತ್ತದಂತೆ.
ಒಪ್ಪಿಗೆ ಸೂಚಿಸುವ ಪಿಂಕ್ ಬಣ್ಣ: ಪಿಂಕ್ ಬಣ್ಣದ ಉಡುಗೆಗಳನ್ನು ಧರಿಸಿದ್ದರೆ, ಈಗಷ್ಟೇ ಲವ್ ಪ್ರಪೋಸಲನ್ನು ಸ್ವೀಕರಿಸಿದ್ದೀರಿ ಎಂಬುದನ್ನು ಸೂಚಿಸುತ್ತದಂತೆ.
![5](https://cdn-vishwavani-prod.hindverse.com/media/images/5_wh6CgQ9.max-1200x800.jpg)
ಆಸಕ್ತಿ ಇಲ್ಲ ಎಂಬುದನ್ನು ತೋರುವ ಬೂದು ಬಣ್ಣ: ಮಾಸಿದ ಗ್ರೇ ಬಣ್ಣವು ಪ್ರೀತಿಯಲ್ಲಿ ನನಗೆ ಆಸಕ್ತಿಯಿಲ್ಲಎಂಬುದನ್ನು ತೋರ್ಪಡಿಸುತ್ತದಂತೆ.
ಎಂಗೇಜ್ ಆಗಿದ್ದೇನೆ ಎಂದು ಬಿಂಬಿಸುವ ರೆಡ್ ಔಟ್‌ಫಿಟ್ಸ್: ಕೆಂಪು ಬಣ್ಣವು ನಾನು ಈಗಾಗಲೇ ಎಂಗೇಜ್ ಆಗಿದ್ದೇನೆ ಎಂಬುದನ್ನು ಸೂಚಿಸುತ್ತದಂತೆ.
ಈ ಸುದ್ದಿಯನ್ನೂ ಓದಿ | Valentine’s Season Kurta Fashion 2025: ವ್ಯಾಲೆಂಟೈನ್ಸ್ ವೀಕ್ ಸೀಸನ್‌ನಲ್ಲಿ ಟ್ರೆಂಡಿಯಾದ ಕುರ್ತಾಗಳಿವು
ಒಟ್ಟಾರೆ ಈ ಮೇಲಿನ ಬಣ್ಣದ ಔಟ್‌ಫಿಟ್‌ಗಳು ನಾನಾ ಅರ್ಥವನ್ನು ಪ್ರತಿಬಿಂಬಿಸುತ್ತವೆ. ಹಾಗಾಗಿ ಪ್ರೇಮಿಗಳ ದಿನಾಚರಣೆಯಂದು ಉಡುಪು ಧರಿಸುವ ಮುನ್ನ, ಔಟ್‌ಫಿಟ್‌ನ ಬಣ್ಣ ಹಾಗೂ ಶೇಡ್ಸ್‌ಅನ್ನು ಗಮನದಲ್ಲಿಟ್ಟುಕೊಂಡು ಧರಿಸಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)