-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಎರಡನೇಯ ದಿನ ಪ್ರಪೋಸ್ ಡೇ (Valentines Week Proposal Day Styling). ಸಮೀಕ್ಷೆಯೊಂದರ ಪ್ರಕಾರ, ಈ ದಿನದಂದು ಲೆಕ್ಕವಿಲ್ಲದಷ್ಟು ಯುವಕರ- ಯುವತಿಯರು ಲವ್ ಪ್ರಪೋಸ್ ಮಾಡುತ್ತಾರಂತೆ. ಪ್ರೇಮಿಯನ್ನು ಇಂಪ್ರೆಸ್ ಮಾಡಲು ಹೊಗಳಿಕೆ ಮಾತುಗಳು ಹಾಗೂ ಗಿಫ್ಟ್ ಮಾತ್ರ ಸಾಲುವುದಿಲ್ಲ. ಅದರೊಂದಿಗೆ ಧರಿಸಿರುವ ಡ್ರೆಸ್‌ಕೋಡ್ ಹಾಗೂ ಡ್ರೆಸ್ಸಿಂಗ್ ಸೆನ್ಸ್ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಈ ದಿನದಂದು ಪ್ರಪೋಸ್ ಮಾಡಲು ಬಯಸುವವರು ಯಾವ ಬಗೆಯ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡರೇ ಉತ್ತಮ? ಹೇಗೆಲ್ಲಾ ಸ್ಟೈಲಿಂಗ್ ಮಾಡಿ ಇಂಪ್ರೆಸ್ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದೈದು ಟಿಪ್ಸ್ ತಿಳಿಸಿದ್ದಾರೆ.

ಪರ್ಸನಾಲಿಟಿಗೆ ತಕ್ಕಂತಿರಲಿ ಡ್ರೆಸ್‌ಕೋಡ್
ಯುವಕ-ಯುವತಿಯರು ತಂತಮ್ಮ ಪರ್ಸನಾಲಿಟಿಗೆ ತಕ್ಕಂತೆ ಡ್ರೆಸ್‌ಕೋಡ್ ಆಯ್ಕೆ ಮಾಡುವುದು ಉತ್ತಮ. ಪ್ರಪೋಸ್ ಮಾಡುವವರನ್ನು ಇಂಪ್ರೆಸ್ ಮಾಡುವಂತಿರಬೇಕು. ಉದಾಹರಣೆಗೆ, ಎತ್ತರ ಹಾಗೂ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುವಂತಿರಬೇಕು.

ಅಭಿರುಚಿಗೆ ಹೊಂದುವಂತಿರಲಿ
ಪ್ರಪೋಸ್ ಮಾಡುವವರ ಅಭಿರುಚಿಯನ್ನು ಮೊದಲೇ ತಿಳಿದುಕೊಂಡಿರಬೇಕು. ಆಕೆ ಅಥವಾ ಆತ ಫಾರ್ಮಲ್ಸ್, ಕ್ಯಾಶುವಲ್ ಅಥವಾ ದೇಸಿ ಲುಕ್ ಪ್ರಿಯರೇ ಎಂಬುದನ್ನು ಮೊದಲೇ ಅರಿತುಕೊಂಡು, ಅವರಿಗೆ ಇಷ್ಟವಾಗುವಂತಹ ರೀತಿಯಲ್ಲಿ ಔಟ್‌ಫಿಟ್ ಧರಿಸಿ ಪ್ರಪೋಸ್ ಮಾಡುವುದು ಉತ್ತಮ.

ಡ್ರೆಸ್‌ಕೋಡ್ ಟ್ರೆಂಡಿಯಾಗಿರಲಿ
ಹಳೆ ಜಮಾನದಂತಿರುವ ಔಟ್‌ಫಿಟ್ ಸೈಡಿಗಿಟ್ಟು, ಇದೀಗ ಟ್ರೆಂಡಿಯಾಗಿರುವ ಡ್ರೆಸ್‌ಕೋಡ್ ಧರಿಸುವುದು ಉತ್ತಮ. ಅದು ಟ್ರೆಂಡ್‌ನಲ್ಲಿದ್ದರೆ, ನೀವೂ ಕೂಡ ಅಪ್ಡೇಟೆಡ್ ಎಂದು ತಿಳಿದುಕೊಳ್ಳುತ್ತಾರೆ. ಇದು ನಿಮಗೆ ಸಹಕಾರಿಯಾಗಬಹುದು.
ಎದ್ದು ಕಾಣುವ ರೆಡ್ ಶೇಡ್ ಔಟ್‌ಫಿಟ್‌ಗೆ ಜೋತು ಬೀಳಬೇಡಿ
ಕೆಲವರು ವ್ಯಾಲೆಂಟೈನ್ಸ್ ವೀಕ್ ಎಂದಾಕ್ಷಣಾ ರೆಡ್ ಶೇಡ್‌ಗೆ ಜೋತು ಬೀಳುತ್ತಾರೆ. ಇದು ಹುಡುಗಿಯರಿಗೆ ಚೆನ್ನಾಗಿ ಕಾಣುತ್ತದೆ. ಯುವಕರು ಈ ಶೇಡ್ ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕಾಗುತ್ತದೆ. ಯಾಕೆಂದರೆ, ರೆಡ್‌ಮಯವಾಗಿರುವ ಡ್ರೆಸ್‌ಕೋಡ್ ಹುಡುಗರನ್ನು ಜೋಕರ್‌ನಂತೆ ಬಿಂಬಿಸಬಹುದು. ಹಾಗಾಗಿ ಎಚ್ಚರ ವಹಿಸಿ ಆಯ್ಕೆ ಮಾಡಿ.
ಈ ಸುದ್ದಿಯನ್ನೂ ಓದಿ | Wedding Bridal Package: ವೆಡ್ಡಿಂಗ್ ಸೀಸನ್‌ನಲ್ಲಿ ರೀ ಎಂಟ್ರಿ ಕೊಟ್ಟ ಬ್ರೈಡಲ್ ಪ್ಯಾಕೇಜ್
ಸ್ಮಾರ್ಟ್ ಲುಕ್‌ಗೆ ಆದ್ಯತೆ
ಎಲ್ಲದಕ್ಕಿಂತ ಹೆಚ್ಚಾಗಿ ನೀವು ಧರಿಸುವ ಉಡುಪು ನೋಡಿದಾಕ್ಷಣ ಆಕರ್ಷಕವಾಗಿ ಕಾಣಬೇಕು. ನಿಮಗೆ ಫಿಟ್ ಆಗಿರುವಂತೆ ಬಿಂಬಿಸಬೇಕು. ಪ್ಲಂಪಿಯಾಗಿದ್ದಲ್ಲೂ ಯೋಚನೆ ಬೇಡ. ನಿಮಗೆ ಹೊಂದುವಂತಹ ಔಟ್‌ಫಿಟ್ ಆಯ್ಕೆ ಮಾಡಿ. ಮುಖದಲ್ಲಿ ಮಂದಹಾಸ ತುಂಬಿರಲಿ. ಉಡುಪಿನೊಂದಿಗೆ ನಿಮ್ಮ ಮಾತುಗಳು ಸಕಾರತ್ಮಕವಾಗಿರಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)