Wedding Bridal Package: ವೆಡ್ಡಿಂಗ್ ಸೀಸನ್‌ನಲ್ಲಿ ರೀ ಎಂಟ್ರಿ ಕೊಟ್ಟ ಬ್ರೈಡಲ್ ಪ್ಯಾಕೇಜ್
Wedding Bridal Package Trend 2025: ಈ ಸೀಸನ್‌ನ ವೆಡ್ಡಿಂಗ್ ಬ್ಯೂಟಿ ಟ್ರೆಂಡ್‌ನಲ್ಲಿ, ಹೊಸ ಬಗೆಯ ಬ್ಯೂಟಿ ಪ್ಯಾಕೇಜ್‌ಗಳು ಮರು ಎಂಟ್ರಿ ನೀಡಿವೆ. ಏನೆಲ್ಲಾ ಈ ಪ್ಯಾಕೇಜ್‌ಗಳಲ್ಲಿ ಲಭ್ಯ? ನಿರ್ಧರಿಸುವುದು ಹೇಗೆ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ, ಮದುಮಗಳ ಸೌಂದರ್ಯ ಹೆಚ್ಚಿಸುವ ವೆರೈಟಿ ಹೊಸ ಬಗೆಯ ಬ್ಯೂಟಿ ಪ್ಯಾಕೇಜ್‌ಗಳು (Wedding Bridal Package Trend 2025) ಮರು ಎಂಟ್ರಿ ನೀಡಿವೆ. ಹೌದು, ಮದುವೆಗೆ ಹಿಂದೆಯೇ, ಅದರಲ್ಲೂ ಸೇಷನ್ ಲೆಕ್ಕದಲ್ಲಿ, ತಿಂಗಳಾನುಗಟ್ಟಲೇ ಮದುಮಗಳಿಗೆ ಸರ್ವಿಸ್ ನೀಡುವ ನಾನಾ ಬ್ಯೂಟಿ ಪ್ಯಾಕೇಜ್‌ಗಳು, ಇದೀಗ ವೆಡ್ಡಿಂಗ್ ಸೀಸನ್‌ನಲ್ಲಿ, ಕಾಲಿಟ್ಟಿದ್ದು, ಮದುಮಗಳನ್ನು ಮಾತ್ರವಲ್ಲ, ಇಡೀ ಫ್ಯಾಮಿಲಿಯನ್ನು ಸೆಳೆದಿವೆ. ಹಾಗಿದ್ರೆ ಈ ಬ್ರೈಡಲ್ ಪ್ಯಾಕೇಜ್‌ಗಳು ಯಾವುವು? ಯಾವ್ಯಾವ ಪ್ಯಾಕೇಜ್‌ಗಳು ಟ್ರೆಂಡಿಂಗ್‌ನಲ್ಲಿವೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ವೆಡ್ಡಿಂಗ್ ಬ್ಯೂಟಿ ಪ್ಯಾಕೇಜ್
ಮೊದಲೆಲ್ಲಾ, ಕೇವಲ ಮದುವೆಯ ದಿನ ಹಾಗೂ ಸಮಾರಂಭಗಳಿಗೆ ಮಾತ್ರ ಬ್ಯೂಟಿ ಪಾರ್ಲರ್‌ಗೆ ಸಂಪರ್ಕಿಸುವ ಕಾಲವಿತ್ತು. ಆದರೆ, ಇದೀಗ ಈ ಕಾನ್ಸೆಪ್ಟ್ ಸಂಪೂರ್ಣ ಬದಲಾಗಿದೆ. ಮದುಮಗಳ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ನಿಶ್ಚಿತಾರ್ಥದಿಂದಿಡಿದು ಮದುವೆಯವರೆಗೂ ನಾನಾ ಬಗೆಯ ಬ್ಯೂಟಿ ಪ್ಯಾಕೇಜ್‌ಗಳು ಎಂಟ್ರಿ ನೀಡಿವೆ ಎನ್ನುತ್ತಾರೆ ಇಂಟರ್‌ನ್ಯಾಷನಲ್ ಹೇರ್ ಮತ್ತು ಬ್ಯೂಟಿ ಎಕ್ಸ್‌ಪರ್ಟ್ ನಿಶಾ.
ಸ್ಕಿನ್‌ಟೋನ್‌ಗೆ ತಕ್ಕಂತೆ ಪ್ಯಾಕೇಜ್ ಸೌಲಭ್ಯ
ಆಯಾ ಮದುಮಗಳ ಸ್ಕಿನ್‌ಟೋನ್‌ಗೆ ತಕ್ಕಂತೆ ಬ್ಯೂಟಿ ಪ್ಯಾಕೇಜ್ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಕೊಂಚ ಡಾರ್ಕ್ ಸ್ಕಿನ್‌ನವರಿಗೆ ಅಗತ್ಯವಿರುವ ಫೇಶಿಯಲ್ಸ್, ಎಕ್ಸ್‌ಟ್ರಾ ಗ್ಲೋ ನೀಡುವಂತಹ ಆರೈಕೆಗಳನ್ನು ಸೇರಿಸಲಾಗುತ್ತದೆ. ಇನ್ನು ಮದುವೆಯಲ್ಲಿ ಹೆಚ್‌ಡಿ ಮೇಕಪ್ ಮಾಡಿಸುವವರಿಗೆ ಮೂರು ತಿಂಗಳು ಮೊದಲಿನಿಂದಲೇ ನಾನಾ ಬಗೆಯ ಫೇಶಿಯಲ್ಸ್, ಡಾರ್ಕ್‌ಸ್ಪಾಟ್ಸ್ ಹೋಗಲಾಡಿಸುವಂತಹ ಫೇಶಿಯಲ್ಸ್, ಫೇಸ್ ಪ್ಯಾಕ್ಸ್ ಹೊಂದಿರುವಂತಹ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದು ವಿವರಿಸುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ರಾಣಿ.
ವೆಡ್ಡಿಂಗ್ ಬ್ರೈಡೆಲ್ ಪ್ಯಾಕೇಜ್
ಸ್ಕಿನ್‌ಕೇರ್, ಹೇರ್‌ಕೇರ್, ಪೆಡಿಕ್ಯೂರ್, ಮೆನಿಕ್ಯೂರ್, ನೇಲ್‌ಕೇರ್, ಮೇಕಪ್, ಸ್ಯಾರಿ ವೇರಿಂಗ್ ಎಲ್ಲವೂ ಈ ಬ್ರೈಡಲ್ ಪ್ಯಾಕೇಜ್‌ನಲ್ಲಿ ದೊರೆಯುತ್ತದೆ. ಬೆಲೆ ಆಯಾ ಬ್ಯೂಟಿ ಪಾರ್ಲರ್ ಹಾಗೂ ಕಸ್ಟಮೈಸ್ಡ್ ಬ್ಯೂಟಿ ಪ್ಯಾಕೇಜ್‌ಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
ಈ ಸುದ್ದಿಯನ್ನೂ ಓದಿ | Wedding Fashion 2025: ಮದುವೆಯ ಅರಿಶಿಣ ಶಾಸ್ತ್ರದಲ್ಲಿ ಟ್ರೆಂಡಿಯಾದ ಹಳದಿ ಬಣ್ಣದ ಡ್ರೆಸ್ ಕೋಡ್‌ಗಳಿವು!
ಬ್ರೈಡಲ್ ಪ್ಯಾಕೇಜ್ ಪಡೆಯುವ ಮುನ್ನ ಗಮನಿಸಬೇಕಾದ ವಿಷಯಗಳು
- ವೆಡ್ಡಿಂಗ್ ದಿನ ಗೊತ್ತಾದ ತಕ್ಷಣ ಬ್ರೈಡೆಲ್ ಪ್ಯಾಕೇಜ್ ಪ್ಲಾನ್ ಮಾಡುಡುವುದು ಉತ್ತಮ.
- ಪಾರ್ಲರ್‌ನಲ್ಲಿ, ಉತ್ತಮ ರೀತಿಯ ಪ್ರಾಡೆಕ್ಟ್ ಬಳಸುತ್ತಾರೆಯೋ ಇಲ್ಲವೋ ಎಂಬುದನ್ನು ಅರಿಯುವುದು ಎಲ್ಲದಕ್ಕಿಂತ ಮುಖ್ಯ.
- ಗುಣಮಟ್ಟದ ಸೇವೆ ನೀಡುವ ಬ್ಯೂಟಿ ಪಾರ್ಲರ್ ಆಯ್ಕೆ ಮಾಡಿ.
- ಬ್ಯೂಟಿ ಕೇರ್ ಕೌನ್ಸೆಲಿಂಗ್ ಸೌಲಭ್ಯ ಪಡೆದುಕೊಳ್ಳಿ.
- ಯಾವುದೇ ಆರೈಕೆಯನ್ನು ಮದುವೆಯ ಹಿಂದಿನ ದಿನ ಪ್ರಯೋಗಿಸಬಾರದು.
- ಸ್ಕಿನ್ ಅಲರ್ಜಿಯಾದಲ್ಲಿ ತೊರೆಯುವುದು ಉತ್ತಮ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)