Wedding Fashion 2025: ಮದುವೆಯ ಅರಿಶಿಣ ಶಾಸ್ತ್ರದಲ್ಲಿ ಟ್ರೆಂಡಿಯಾದ ಹಳದಿ ಬಣ್ಣದ ಡ್ರೆಸ್ ಕೋಡ್‌ಗಳಿವು!
Wedding Fashion 2025: ಮದುವೆಯ ಅರಿಶಿಣ ಶಾಸ್ತ್ರದಲ್ಲಿ ಇದೀಗ ನಾನಾ ಬಗೆಯ ಹಳದಿ ಹಾಗೂ ಸನ್ ಕಲರ್ ಶೇಡ್‌ನ ಡಿಸೈನರ್‌ವೇರ್‌ಗಳು ಟ್ರೆಂಡಿಯಾಗಿವೆ. ಅವು ಯಾವುವು? ಚಾಯ್ಸ್ ಹೇಗೆ? ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.
![Wedding Fashion 2025](https://cdn-vishwavani-prod.hindverse.com/media/images/Wedding_Fashion_2025.max-1280x720.jpg)
![ಶೀಲಾ ಸಿ ಶೆಟ್ಟಿ](https://cdn-vishwavani-prod.hindverse.com/media/images/1233333.2e16d0ba.fill-100x100.jpg)
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಗೂ ಮುನ್ನ ನಡೆಯುವ ಅರಿಶಿಣ ಶಾಸ್ತ್ರದ ಸಮಾರಂಭಕ್ಕಾಗಿ (Wedding Fashion 2025) ನಾನಾ ಬಗೆಯ ವೈವಿಧ್ಯಮಯ ಹಳದಿ ಹಾಗೂ ಸನ್ ಕಲರ್ ಶೇಡ್ ಡಿಸೈನರ್‌ವೇರ್‌ಗಳು ವೆಡ್ಡಿಂಗ್ ಫ್ಯಾಷನ್‌ಗೆ ಕಾಲಿಟ್ಟಿದ್ದು, ಸದ್ಯ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಪ್ರತಿ ಮದುಮಗ ಹಾಗೂ ಮದುಮಗಳ ಮನೆಯಲ್ಲಿ ಈ ಅರಿಶಿಣ ಶಾಸ್ತ್ರದ ಕಾರ್ಯಕ್ರಮಗಳು ನಡೆಯುತ್ತವೆ. ಅಂತಹ ಸಮಯದಲ್ಲಿ ಇಬ್ಬರಿಗೂ ಕುಟುಂಬದವರು ಹಾಗೂ ಆಪ್ತ ವಲಯದವರು ಅರಿಶಿಣ ಹಚ್ಚುವುದು ಕಾಮನ್. ಈ ಸಂದರ್ಭದಲ್ಲಿ ಸೂಟ್ ಆಗುವಂತಹ ಅರಿಶಿಣ ವರ್ಣದ ಅಂದರೆ, ಸನ್ ಕಲರ್, ಯೆಲ್ಲೊ ಡಿಸೈನರ್ ಉಡುಪುಗಳನ್ನು ಧರಿಸುವುದು ಯೂನಿಫಾರ್ಮಿಟಿ ಫಾಲೋ ಮಾಡುವುದು ಇತ್ತೀಚಿನ ಟ್ರೆಂಡ್‌ಗಳಲ್ಲೊಂದಾಗಿದೆ ಎನ್ನುತ್ತಾರೆ ವೆಡ್ಡಿಂಗ್ ಫ್ಯಾಷನ್ ಡಿಸೈನರ್ ರೇಷ್ಮಾ.
![5](https://cdn-vishwavani-prod.hindverse.com/media/images/5_juej4Xr.max-1200x800.jpg)
ಸನ್ ಕಲರ್- ಹಳದಿ ಬಣ್ಣದ ಎಥ್ನಿಕ್ ಉಡುಪುಗಳು
ಈ ಸಮಾರಂಭಕ್ಕೆ ಪುರುಷರು, ಹಳದಿ-ಸನ್ ಕಲರ್‌ನ ನಾನಾ ಶೇಡ್‌ನ ಕುರ್ತಾ-ಪೈಜಾಮ, ಜುಬ್ಬಾ –ಪೈಜಾಮ ಅಥವಾ ಕಾಟನ್ ಅಥವಾ ಸಿಲ್ಕ್ ಶರ್ಟ್ ಜತೆಗೆ ಪಂಚೆ ಧರಿಸಬಹುದು. ಇನ್ನು ಹೆಣ್ಣುಮಕ್ಕಳು ಹಳದಿ ಸೀರೆ ಧರಿಸಬಹುದು. ಕಷ್ಟವೆನಿಸಿದರೆ, ಕುರ್ತಾ ಇಲ್ಲವೇ, ದಾವಣಿ-ಲಂಗ, ಉದ್ದ-ಲಂಗದಂತಹ ಎಥ್ನಿಕ್ ಸ್ಕರ್ಟ್ ಧರಿಸಬಹುದು. ಆದರೆ, ಇವೆಲ್ಲವೂ ಅರಿಶಿಣ ಬಣ್ಣದ ಅಥವಾ ಸನ್ ಕಲರ್‌ನದ್ದಾಗಿರಬೇಕು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ದಿಯಾ.
![6](https://cdn-vishwavani-prod.hindverse.com/media/images/6_iDYjYp8.max-1200x800.jpg)
ವಧು-ವರನ ಹಳದಿಯ ಡ್ರೆಸ್‌ಕೋಡ್
ವಧು-ವರರ ಸನ್ ಕಲರ್ ಅಥವಾ ಹಳದಿ ಬಣ್ಣದ ಡ್ರೆಸ್‌ಕೋಡ್ ಆದಷ್ಟೂ ಲೈಟ್‌ವೇಟ್‌ನದ್ದಾಗಿರಲಿ. ಎಲ್ಲದಕ್ಕಿಂತ ಹೆಚ್ಚಾಗಿ ಹೆಚ್ಚು ದುಬಾರಿಯಾಗಿರುವುದನ್ನು ಆವಾಯ್ಡ್ ಮಾಡಿ. ಯಾಕೆಂದರೆ, ಅದು ಶಾಸ್ತ್ರದ ನಂತರ ಬಳಸಲಾಗದು. ಬಣ್ಣ ಹಾಗೂ ನೀರಿನಿಂದ ಒದ್ದೆಯಾದ ಉಡುಪು ಒಂದೇ ಬಾರಿಗೆ ಮಾತ್ರ ಎಂಬುದು ನೆನಪಿನಲ್ಲಿರಲಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
![7](https://cdn-vishwavani-prod.hindverse.com/media/images/7_e6FiIR5.max-1200x800.jpg)
ಹಳದಿ ಬಣ್ಣದ ಡ್ರೆಸ್‌ಕೋಡ್ ಆಯ್ಕೆಗೆ ಒಂದಿಷ್ಟು ಟಿಪ್ಸ್
* ಆದಷ್ಟೂ ಟ್ರೆಂಡಿಯಾಗಿರುವುದನ್ನು ಆಯ್ಕೆ ಮಾಡಿ.
* ಯೆಲ್ಲೊ ಅತಿಥಿಗಳಿಗಾದಲ್ಲಿ ವರ-ವಧುವಿಗೆ ಶ್ವೇತ ವರ್ಣದ್ದು ಚೂಸ್ ಮಾಡಿ.
* ಹೆವ್ವಿ ಆಭರಣಗಳನ್ನು ಧರಿಸುವುದು ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Winter Shawl Styling 2025: ಚಳಿಗಾಲದಲ್ಲಿ ಶಾಲನ್ನು ಸ್ಟೈಲಿಶ್ ಆಗಿ ಧರಿಸಲು ಇಲ್ಲಿದೆ ಸೂಪರ್ ಐಡಿಯಾ!