Wedding Fashion: ವೆಡ್ಡಿಂಗ್ ಬ್ರೈಡಲ್‌ವೇರ್ ಶಾಪಿಂಗ್ ಮಾಡುವವರಿಗೆ 5 ಸಿಂಪಲ್ ಐಡಿಯಾ
Wedding Fashion: ವೆಡ್ಡಿಂಗ್ ಸೀಸನ್‌ನಲ್ಲಿ ಮದುಮಗಳ ಬ್ರೈಡಲ್‌ವೇರ್ ಶಾಪಿಂಗ್ ಮಾಡುವವರು, ಫ್ಯಾಷನ್‌ವೇರ್‌ಗಳನ್ನು ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲವು ರೂಲ್ಸ್ ಫಾಲೋ ಮಾಡಬೇಕು. ಆಗಷ್ಟೇ ಆಕರ್ಷಕವಾಗಿ ಕಾಣಲು ಸಾಧ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗ್ಗೆ ಫಾಲೋ ಮಾಡಬೇಕಾದ 5 ರೂಲ್ಸ್ ತಿಳಿಸಿದ್ದಾರೆ.

ಚಿತ್ರಗಳು: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್ ಸೀಸನ್‌ನಲ್ಲಿ ಮದುಮಗಳ ಟ್ರೆಂಡಿ ಬ್ರೈಡಲ್‌ವೇರ್ ಶಾಪಿಂಗ್ (Wedding Fashion) ಮಾಡುವವರು ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೇವಲ ಟ್ರೆಂಡಿಯಾಗಿರುವ ಡಿಸೈನರ್‌ವೇರ್ ಆಯ್ಕೆ ಮಾಡುವುದು ಮಾತ್ರವಲ್ಲ, ಇನ್ನಿತರೆ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ. ಒಂದಿಷ್ಟು ರೂಲ್ಸ್ ಫಾಲೋ ಮಾಡಬೇಕಾಗುತ್ತದೆ. ಆಗಷ್ಟೇ, ಖರೀದಿಸಿದ ಡಿಸೈನರ್‌ವೇರ್ ಎಲ್ಲರ ಪ್ರೀತಿಗೆ ಪಾತ್ರವಾಗುವುದಲ್ಲದೇ, ಮದುವೆಯಲ್ಲಿ ಧರಿಸಿದಾಗ ಖುಷಿಯಾಗುತ್ತದೆ. ಮದುವೆಯ ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ. ಈ ಕುರಿತಂತೆ ಮದುಮಗಳು ಖರೀದಿಸುವಾಗ ಪಾಲಿಸಬೇಕಾದ 5 ಬ್ರೈಡಲ್‌ವೇರ್ ರೂಲ್ಸ್ ತಿಳಿಸಿದ್ದಾರೆ.
ದುಬಾರಿ ಬೆಲೆಗಿಂತ ಗುಡ್ ಲುಕಿಂಗ್‌ಗೆ ಆದ್ಯತೆ, ಮದುವೆಗೆ ಧರಿಸಿದ ಡಿಸೈನರ್‌ವೇರ್‌ಗಳನ್ನು ಮತ್ತೊಮ್ಮೆ ಧರಿಸುವುದು ತೀರಾ ಅಪರೂಪ. ಅಂತಹವರ ಲಿಸ್ಟ್‌ನಲ್ಲಿ ನೀವಿದ್ದಲ್ಲಿ, ಹೆಚ್ಚು ಬೆಲೆ ತೆರಬೇಡಿ. ಸುಖಾಸುಮ್ಮನೇ ಬ್ರಾಂಡ್ ಹೆಸರಲ್ಲಿ ಹಣ ಸುರಿಯಬೇಡಿ. ಲೋಕಲ್ ಬೋಟಿಕ್‌ಗಳಲ್ಲಿ ನಿಮಗೆ ಬೇಕಾದ ಡಿಸೈನ್ಸ್ ತೋರಿಸಿ ವಿನ್ಯಾಸ ಮಾಡಿಸಿಕೊಳ್ಳಿ. ಹಣ ಉಳಿಸಬಹುದು.

ಮದುವೆಯ ಥೀಮ್‌ಗೆ ತಕ್ಕಂತೆ ಇರಲಿ ಬ್ರೈಡಲ್‌ವೇರ್
ಆಯಾ ಮದುವೆ ಕಾನ್ಸೆಪ್ಟ್ ಅಥವಾ ಥೀಮ್‌ಗೆ ಹೊಂದುವಂತೆ ಮದುಮಗಳು ಡಿಸೈನರ್‌ವೇರ್ ಶಾಪಿಂಗ್ ಪ್ಲಾನ್ ಮಾಡಬೇಕಾಗುತ್ತದೆ. ಥೀಮ್‌ಗೆ ಅನುಗುಣವಾಗಿ ಕಲರ್‌ಕೋಡ್ ಡಿಸೈನ್‌ಗಳನ್ನು ಸ್ಟೈಲಿಸ್ಟ್ ಇಲ್ಲವೇ ಡಿಸೈನರ್‌ಬಳಿ ಚರ್ಚಿಸಿ ಪ್ಲಾನ್ ಮಾಡಬೇಕಾಗುತ್ತದೆ. ಆಗ ಕ್ಲಿಕ್ಕಿಸುವ ಫೋಟೋಗಳು, ವಿಡಿಯೋಗಳು ಎಲ್ಲವೂ ಸುಂದರವಾಗಿ ಕಾಣುತ್ತವೆ.

ಪರ್ಸನಾಲಿಟಿಗೆ ತಕ್ಕಂತಿರಲಿ ಬ್ರೈಡಲ್‌ವೇರ್ ಡಿಸೈನ್ಸ್
ಮದುವೆಯ ಸೀಸನ್‌ಗೆ ತಕ್ಕಂತೆ ಮದುಮಗಳು ವೆಡ್ಡಿಂಗ್ ಶಾಪಿಂಗ್ ಮಾಡುವುದು ಮಾತ್ರವಲ್ಲ, ಆಕೆಯ ಪರ್ಸನಾಲಿಟಿ ಹಾಗೂ ಬಿಎಂಐಗೆ ತಕ್ಕಂತೆ ಬ್ರೈಡಲ್‌ವೇರ್ ಸೆಲೆಕ್ಟ್ ಮಾಡಬೇಕು. ಡಿಸೈನ್ಸ್ ಆಕೆಯ ಸ್ಕಿನ್‌ಟೋನ್‌ಗೆ ಹೊಂದಬೇಕು. ಮೊದಲು ಇದನ್ನು ಗಮನಿಸಬೇಕು ಎನ್ನುತ್ತಾರೆ ಸ್ಟೈಲಿಸ್ಟ್ಸ್.

ಟ್ರಯಲ್ ನೋಡಿ ಆಯ್ಕೆ ಮಾಡಿ
ಪ್ರತಿ ಮದುಮಗಳು ತನ್ನ ಬಾಡಿ ಟೈಪ್‌ಗೆ ತಕ್ಕಂತೆ ಬ್ರೈಡಲ್‌ವೇರ್ ಆಯ್ಕೆ ಮಾಡಬೇಕಾಗುತ್ತದೆ. ಮದುಮಗಳು ಹವರ್‌ಗ್ಲಾಸ್ ಶೇಪ್‌ನಲ್ಲಿದ್ದರೇ ಏನೂ ಕೂಡ ಯೋಚನೆಯೇ ಮಾಡಬೇಕಾಗಿಲ್ಲ. ಯಾವ ಬಗೆಯ ಡ್ರೆಸ್ ಆದರೂ ಸರಿಯೇ ಪರ್ಸನಾಲಿಟಿಗೆ ಸೂಟ್ ಆಗುತ್ತದೆ. ಹೊಂದುವ ವರ್ಣವನ್ನು ಚೂಸ್ ಮಾಡಿದರಾಯಿತು. ಟ್ರಯಲ್ ಮಾಡಿ ನೋಡಿ ನಿರ್ಧರಿಸಿ. ಪರ್ಫೆಕ್ಟ್ ಶೆಪ್ ಇಲ್ಲದಾಗ ಯೋಚಿಸಬೇಡಿ. ಟ್ರಯಲ್ ನೋಡಿ, ಖರೀದಿಸಿ. ಟ್ರಯಲ್ ಡಿಸೈನರ್‌ವೇರ್‌ನಲ್ಲಿ ಫೋಟೊ ಕ್ಲಿಕ್ಕಿಸಿ, ಇತರರ ಅಭಿಪ್ರಾಯ ಪಡೆದು ಖರೀದಿಸಿ.
ಈ ಸುದ್ದಿಯನ್ನೂ ಓದಿ | Star Summer Fashion Interview: ಬೇಸಿಗೆಯಲ್ಲಿ ನಟಿ ಸುಕೃತಾ ವಾಗ್ಲೆಯ ಕಾಟನ್ ಸೀರೆ ಲವ್
ಎತ್ತರಕ್ಕೆ ತಕ್ಕಂತಿರಲಿ ಬ್ರೈಡಲ್‌ವೇರ್
ಉದ್ದಗಿರುವವರು ಅಷ್ಟೇ ಲಾಂಗ್‌ಲೆಂತ್‌ನದ್ದನ್ನು ಚೂಸ್ ಮಾಡಬಹುದು. ಲೆಹೆಂಗಾ, ಗಾಗ್ರ ಎಲ್ಲವೂ ಸೂಟ್ ಆಗ್ತುತವೆ. ಫ್ಯಾಬ್ರಿಕ್ ದಪ್ಪನಾಗಿದ್ದರೂ ಓಕೆ. ಹೆವಿ ಡಿಸೈನ್‌ಗಳು ಕೂಡ ಮ್ಯಾಚ್ ಆಗುತ್ತವೆ. ಕುಳ್ಳಗೆ ಅಥವಾ ಪ್ಲಂಪಿಯಾಗಿರುವವರು ಡಿಸೈನರ್‌ವೇರ್ ಚೂಸ್ ಮಾಡುವಾಗ ಆದಷ್ಟೂ ಜಾಗ್ರತೆ ವಹಿಸಬೇಕು. ಹೆವಿ ಪ್ರಿಂಟ್‌ಇಲ್ಲವೇ ಹೆವಿ ಡಿಸೈನ್ ಹಾಗೂ ದಪ್ಪ ಫ್ಯಾಬ್ರಿಕ್‌ನದ್ದನ್ನು ಅವಾಯ್ಡ್ ಮಾಡಿ. ಆದಷ್ಟೂ ಸ್ಮಾಲ್‌ಬಾರ್ಡರ್‌ನ ಕಾಂಟ್ರಸ್ಟ್ ದುಪಟ್ಟಾ ಹೊಂದಿರುವ ಲೆಹೆಂಗಾ, ಗಾಗ್ರಾ ಚೂಸ್ ಮಾಡಬೇಕಾಗುತ್ತದೆ. ಫ್ಲೋಟ್ ಆಗುವಂತಹ ಫ್ಯಾಬ್ರಿಕ್‌ನ ಡಿಸೈನರ್‌ವೇರ್ ಉತ್ತಮ.
(ಲೇಖಕಿ: ಫ್ಯಾಷನ್‌ಪತ್ರಕರ್ತೆ)