Star Summer Fashion Interview: ಬೇಸಿಗೆಯಲ್ಲಿ ನಟಿ ಸುಕೃತಾ ವಾಗ್ಲೆಯ ಕಾಟನ್ ಸೀರೆ ಲವ್
Star Summer Fashion Interview: ಸಮ್ಮರ್‌ನಲ್ಲಿ ಸೀರೆಯಲ್ಲಿ ಕೂಲಾಗಿ ಫ್ಯಾಷೆನಬಲ್ ಆಗಿ ಕಾಣಿಸಿಕೊಂಡಿರುವ ನಟಿ ಸುಕೃತಾ ವಾಗ್ಲೆ ವಿಶ್ವವಾಣಿ ನ್ಯೂಸ್‌ನ ಸಮ್ಮರ್ ಸೆಲೆಬ್ರೆಟಿ ಫ್ಯಾಷನ್ ಕಾಲಂಗಾಗಿ ಮಾತನಾಡಿದ್ದಾರೆ. ಅವರ ಈ ಸೀಸನ್ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ, ತಮ್ಮ ಫಾಲೋವರ್ಸ್‌ಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

ಚಿತ್ರಗಳು: ಸುಕೃತಾ ವಾಗ್ಲೆ, ನಟಿ

ಸಂದರ್ಶನ: ಶೀಲಾ ಸಿ. ಶೆಟ್ಟಿ
ಬೇಸಿಗೆಯ ಸೀಸನ್‌ನಲ್ಲೂ ಸೀರೆಯಲ್ಲಿ ಕೂಲಾಗಿ ಫ್ಯಾಷೆನಬಲ್ ಆಗಿ ಕಾಣಿಸಿಕೊಂಡಿರುವ ನಟಿ ಸುಕೃತಾ ವಾಗ್ಲೆಯವರಿಗೆ ಈ ಸೀಸನ್‌ಗೆ ಹೊಂದುವಂತಹ ಕೂಲ್ ಹಾಗೂ ಉಲ್ಲಾಸ ನೀಡುವಂತಹ ತಿಳಿ ಬಣ್ಣಗಳೆಂದರೆ ಪ್ರಿಯವಂತೆ. ನನ್ನ ಸಮ್ಮರ್ ಫ್ಯಾಷನ್ ಕಂಪ್ಲೀಟ್ ಸಿಂಪಲ್ (Star Summer Fashion Interview) ಆಗಿರುತ್ತದೆ ಎನ್ನುತ್ತಾರೆ. ಮ್ಯಾಕ್ಸ್ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ಗೆದ್ದಿರುವ ಸುಕೃತಾ, ಈಗಾಗಲೇ ಕಿರಗೂರಿನ ಗಯ್ಯಾಳಿಗಳು, ದಯವಿಟ್ಟು ಗಮನಿಸಿ, ಮಾರ್ಟಿನ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವವಾಣಿ ನ್ಯೂಸ್‌ನ ಸಮ್ಮರ್ ಸೆಲೆಬ್ರೆಟಿ ಫ್ಯಾಷನ್ ಕಾಲಂಗಾಗಿ ಸಂದರ್ಶನ ನೀಡಿರುವ ಅವರು ತಮ್ಮ ಸಮ್ಮರ್ ಫ್ಯಾಷನ್ & ಸ್ಟೈಲ್‌ಸ್ಟೇಟ್‌ಮೆಂಟ್ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ತಮ್ಮ ಫಾಲೋವರ್ಸ್‌ಗೆ ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ. ಅವರ ಸಂದರ್ಶನದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.

ವಿಶ್ವವಾಣಿ ನ್ಯೂಸ್: ನಿಮ್ಮ ಸಮ್ಮರ್ ಸೀರೆ ಫ್ಯಾಷನ್ ಬಗ್ಗೆ ಹೇಳಿ?
ಸುಕೃತಾ ವಾಗ್ಲೆ: ನನ್ನ ಸಮ್ಮರ್ ಫ್ಯಾಷನ್‌ನಲ್ಲಿ ಕಾಟನ್, ಜೂಟ್ ಹಾಗೂ ಲೆನಿನ್ ಸೀರೆಗಳಿಗೆ ಪ್ರಾಮುಖ್ಯತೆ. ನಾನು ನನ್ನ ಅಕ್ಕ ಇಬ್ಬರೂ ವಾರ್ಡ್ರೋಬ್ ಹಂಚಿಕೊಳ್ಳುವುದರಿಂದ ಈಗಾಗಲೇ ಸರಿ ಸುಮಾರು 80 ಕ್ಕೂ ಹೆಚ್ಚು ಸೀರೆಗಳಿವೆ. ಇನ್ನು, ನಾನು ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿರುವ ಸೀರೆ ಜೂಟ್‌ನದ್ದು. ತಿಳಿ ಪಿಂಕ್ ಶೇಡ್‌ನ ಈ ಸೀರೆಯಲ್ಲಿ 2 ಶೈಲಿಯಲ್ಲಿ ಕಾಣಿಸಿಕೊಂಡಿದ್ದೇನೆ. ಒಂದು ನಾರ್ಮಲ್ ಲುಕ್ ಇನ್ನೊಂದು ಗ್ಲಾಮರಸ್ ಕಾರ್ಪೋರೇಟ್ ಲುಕ್.
ವಿಶ್ವವಾಣಿ ನ್ಯೂಸ್: ಸಮ್ಮರ್ ಫ್ಯಾಷನ್ ಫಾಲೋ ಮಾಡ್ತೀರಾ? ಮಾಡಿದರೆ ಏನೆಲ್ಲಾ ಇರುತ್ತೆ?
ಸುಕೃತಾ ವಾಗ್ಲೆ: ಖಂಡಿತಾ. ಆದಷ್ಟೂ ಮ್ಯಾಕ್ಸಿ, ಶಾರ್ಟ್ಸ್, ಎ ಲೈನ್ ಡ್ರೆಸ್‌ಗಳನ್ನು ಧರಿಸುತ್ತೇನೆ. ಸನ್‌ಗ್ಲಾಸ್ ಇಲ್ಲದೇ ಹೊರ ಹೋಗುವುದಿಲ್ಲ. ಲೈಟ್ ಬಣ್ಣಗಳಾದ ಪೀಚ್, ಪಿಂಕ್, ಲ್ಯಾವೆಂಡರ್ ಶೇಡ್‌ನ ಉಡುಪನ್ನು ಪ್ರಿಫರ್ ಮಾಡುತ್ತೇನೆ.

ವಿಶ್ವವಾಣಿ ನ್ಯೂಸ್: ಸಮ್ಮರ್‌ನಲ್ಲಿ ಫಾಲೋ ಮಾಡುವ ಬ್ಯೂಟಿ ಟಿಪ್ಸ್?
ಸುಕೃತಾ ವಾಗ್ಲೆ: ನಾನು ಆದಷ್ಟೂ ಆಯುರ್ವೇದ ಚಿಕಿತ್ಸೆಗಳನ್ನು ಮಾಡುತ್ತೇನೆ. ಚಂದನಾ, ಕುಂಕುಮಾದಿ ತೈಲ ಹಚ್ಚುತ್ತೇನೆ. ಅಂಡರ್‌ವಾಟರ್ ಹೈಡ್ರೋ ಥೆರಪಿಗೆ ಒಳಗಾಗುತ್ತೇನೆ. ಮುಖದ ಕಾಂತಿ ಹೆಚ್ಚಿಸಲು ಆದಷ್ಟೂ ಆರೋಗ್ಯಕರ ಸೀಸನ್ ಹಣ್ಣುಗಳನ್ನು ಸೇವಿಸುತ್ತೇನೆ. ಅದರಲ್ಲೂ ಸಿಟ್ರಸ್ ಅಂಶವಿರುವ ಹಣ್ಣುಗಳನ್ನು ಹೆಚ್ಚು ಸವಿಯುತ್ತೇನೆ.
ವಿಶ್ವವಾಣಿ ನ್ಯೂಸ್: ಸಮ್ಮರ್ ಟ್ರಾವಲ್ ಫ್ಯಾಷನ್‌ನಲ್ಲಿ ಇರುವುದೇನು ?
ಸುಕೃತಾ ವಾಗ್ಲೆ: ಉಡುಪುಗಳೊಂದಿಗೆ ಪ್ರಮುಖವಾಗಿ ಅಂಬ್ರೆಲ್ಲಾ, ಸನ್‌ಸ್ಕ್ರೀನ್, ನೀರಿನ ಬಾಟಲ್, ಲೈಟ್‌ವೈಟ್ ಉಡುಪುಗಳು.
ವಿಶ್ವವಾಣಿ ನ್ಯೂಸ್: ನಿಮ್ಮ ಫಾಲೋವರ್ಸ್‌ಗೆ ನೀವು ನೀಡುವ ಟಿಪ್ಸ್‌ಗಳೇನು?
ಸುಕೃತಾ ವಾಗ್ಲೆ: ಟ್ರಾವೆಲ್ ಸಮಯದಲ್ಲಿ ಆದಷ್ಟೂ ಲೂಸಾದ ಔಟ್‌ಫಿಟ್ ಧರಿಸಿ. ನೀರನ್ನು ಹೆಚ್ಚಾಗಿ ಕುಡಿಯಿರಿ. ಹೊರ ಹೋಗುವಾಗ ಕ್ಯಾಪ್ ಹಾಗೂ ಸನ್‌ಗ್ಲಾಸ್ ಧರಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Celebrities Ugadi Fashion: ಟ್ರೆಡಿಷನಲ್‌ವೇರ್‌ನಲ್ಲಿ ಯುಗಾದಿ ಹಬ್ಬ ಆಚರಿಸಿದ ಸೆಲೆಬ್ರೆಟಿಗಳಿವರು