Winter Shopping Ideas: ವೀಕೆಂಡ್ ಶಾಪಿಂಗ್ ಪ್ರಿಯರಿಗೆ 5 ಸಿಂಪಲ್ ಐಡಿಯಾ
ವೀಕೆಂಡ್‌ಗಳಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರದ ಕೊನೆಯ ದಿನಗಳಲ್ಲಿ ಸಮಯವಕಾಶ ಹೆಚ್ಚಿರುವುದೇ ಇದಕ್ಕೆ ಕಾರಣ ಎನ್ನುವ ಶಾಪಿಂಗ್ ಎಕ್ಸ್‌ಪರ್ಟ್ಸ್, ವೀಕೆಂಡ್ ಶಾಪಿಂಗ್ ಪ್ರಿಯರಿಗೆ ಉಪಯೋಗವಾಗುವಂತಹ 5 ಐಡಿಯಾಗಳನ್ನು ನೀಡಿದ್ದಾರೆ. ಏನದು ಆ ಐದು ಐಡಿಯಾ? ಯಾಕಾಗಿ ಪಾಲಿಸಬೇಕು? ಇಲ್ಲಿದೆ ಉತ್ತರ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೀಕೆಂಡ್‌ಗಳಲ್ಲಿ ಶಾಪಿಂಗ್ ಮಾಡುವವರ (Winter Shopping Ideas) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರದ ಕೊನೆಯ ದಿನಗಳಲ್ಲಿ ಸಮಯವಕಾಶ ಹೆಚ್ಚಿರುವುದೇ ಇದಕ್ಕೆ ಕಾರಣ ಎನ್ನುವ ಶಾಪಿಂಗ್ ಎಕ್ಸ್‌ಪರ್ಟ್ಸ್, ವೀಕೆಂಡ್ ಶಾಪಿಂಗ್ ಪ್ರಿಯರಿಗೆ ಉಪಯೋಗವಾಗುವಂತಹ ಐದು ಐಡಿಯಾಗಳನ್ನು (Winter Shopping Ideas) ಇಲ್ಲಿ ನೀಡಿದ್ದಾರೆ.
ಶಾಪಿಂಗ್ ಪ್ಲಾನಿಂಗ್ ಮಾಡಿ
ಈ ಸೀಸನ್‌ನಲ್ಲಿ ಶಾಪಿಂಗ್ ಮಾಡುವುದನ್ನು ಮೊದಲೇ ಪ್ಲಾನ್ ಮಾಡಿ. ಅಗತ್ಯವಿರುವ ವಿಂಟರ್‌ವೇರ್‌ಗಳನ್ನು ಖರೀದಿಸುವ ಬಗ್ಗೆ ಮೊದಲೇ ಲೆಕ್ಕವಿಡಿ. ವಾರ್ಡ್ರೋಬ್‌ನಲ್ಲಿರುವ ವಿಂಟರ್‌ವೇರ್‌ಗಳನ್ನು ಒಮ್ಮೆ ರೀಚೆಕ್ ಮಾಡಿ. ಇದರಿಂದ ಮತ್ತೊಮ್ಮೆ ರೀಪಿಟ್ ಆಗುವಂತಹ ಔಟ್‌ಫಿಟ್ ಖರೀದಿ ಮಾಡುವುದು ತಪ್ಪುತ್ತದೆ.
ಸೀಸನ್ ಡ್ರೆಸ್‌ಗಳಿಗೆ ಆದ್ಯತೆ ನೀಡಿ
ಶಾಪಿಂಗ್ ಮಾಡುವಾಗ ಆದಷ್ಟೂ ಸೀಸನ್ ಔಟ್‌ಫಿಟ್‌ಗಳಿಗೆ ಮಾನ್ಯತೆ ನೀಡಿ. ಡಲ್ ಆಗಿರುವ ಉಡುಪುಗಳ ಬದಲು ಕಲರ್‌ಫುಲ್ ಆಯ್ಕೆ ಮಾಡಿ. ಡಬ್ಬಲ್ ಹಾಗೂ ತ್ರಿಬಲ್ ಲೇಯರ್ ನೀಡುವ ಉಡುಪುಗಳನ್ನ ಆಯ್ಕೆ ಮಾಡಿ. ಇತರೇ ಸೀಸನ್‌ನಲ್ಲೂ ಪ್ರತ್ಯೇಕಿಸಿ ಇವನ್ನು ಧರಿಸಬಹುದು.
ಸೇಲ್‌ನಲ್ಲಿ ಎಚ್ಚರ ವಹಿಸಿ ಖರೀದಿಸಿ
ಖರೀದಿಸುವ ಚಳಿಗಾಲದ ಉಡುಪುಗಳು ಟ್ರೆಂಡಿಯಾಗಿರಬೇಕು. ಯಾವುದೋ ಹಳೆಯ ಉಡುಪಿನಂತೆ ಕಾಣಕೂಡದು. ಟ್ರಯಲ್ ನೋಡಿ, ಕೊಳ್ಳಿ. ಕೆಲವೊಮ್ಮೆ ಕಳೆದ ವರ್ಷದ ಮಾರಾಟವಾಗದ ವಿಂಟರ್ ವೇರ್‌ಗಳನ್ನು ಮರು ಸೇಲ್ ಮಾಡಲು ಇರಿಸಿರುತ್ತಾರೆ. ಹಾಗಾಗಿ ಟ್ರೆಂಡ್‌ನಲ್ಲಿದೆಯೇ ಎಂಬುದನ್ನು ಕ್ರಾಸ್ ಚೆಕ್ ಮಾಡಿಕೊಳ್ಳಿ.
ಲೈಟ್‌ವೇಟ್ ವಿಂಟರ್‌ವೇರ್ ಆಯ್ಕೆ
ಭಾರಿ ಗಾತ್ರದ ವಿಂಟರ್‌ವೇರ್ ಖರೀದಿಸುವುದರಿಂದ ಅವನ್ನು ಟ್ರಾವೆಲ್ ಮಾಡುವಾಗ ಅಥವಾ ಇತರೆ ಸಮಯದಲ್ಲಿ ಹೊರಲಾಗದು. ಹಾಗಾಗಿ ಆದಷ್ಟೂ ಲೈಟ್‌ವೇಟ್‌ನ ವಿಂಟರ್‌ವೇರ್ಸ್ ಆಯ್ಕೆ ಮಾಡಿ ಕೊಳ್ಳಿ. ಆಗ ಕ್ಯಾರಿ ಮಾಡಲು ಸುಲಭವಾಗುತ್ತದೆ. ಹೊರೆಯಾಗುವುದಿಲ್ಲ!
ಈ ಸುದ್ದಿಯನ್ನೂ ಓದಿ | Winter Partywear Fashion 2025: ವಿಂಟರ್ ಪಾರ್ಟಿವೇರ್ಸ್‌ಗೂ ಸಿಕ್ತು ಲೇಯರ್ಡ್ ಲುಕ್!
ಆಕ್ಸೆಸರೀಸ್ ಶಾಪಿಂಗ್ ಐಡಿಯಾ
ಚಳಿಗಾಲದ ಆಕ್ಸೆಸರೀಸ್‌ಗಳಾದ ಕ್ಯಾಪ್, ಗ್ಲೌಸ್, ಶಾಲು, ಸ್ಟೋಲ್, ಸ್ಕಾರ್ಫ್ ಖರೀದಿಸುವಾಗ ಕಾಮನ್ ಕಲರ್ ಇರುವಂತದ್ದಕ್ಕೆ ಪ್ರಾಮುಖ್ಯತೆ ನೀಡಿ. ಆಗ ಎಲ್ಲಾ ಬಗೆಯ ವಿಂಟರ್‌ವೇರ್‌ಗಳಿಗೂ ಮಿಕ್ಸ್ ಮ್ಯಾಚ್ ಮಾಡಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)