ಸ್ಥೂಲಕಾಯ ತರುವ ಸಮಸ್ಯೆಗಳಿಗೆ ಉಪವಾಸವೇ ಪರಿಹಾರ!
ಸ್ಥೂಲಕಾಯ ತರುವ ಸಮಸ್ಯೆಗಳಿಗೆ ಉಪವಾಸವೇ ಪರಿಹಾರ!
Vishwavani News
September 27, 2019
ಸ್ಥೂಲಕಾಯ ನೀಗಿಸಲು ಹಸುರು ತರಕಾರಿ, ಬೆರ್ರಿ, ಸಿಹಿ ಗೆಣಸನ್ನು ಬ್ರೆೆಡ್ ಮತ್ತು ಪಾಸ್ತಾಗಳ ಜಾಗದಲ್ಲಿ ಬದಲಿಸಿಕೊಳ್ಳಿ. ಸಕ್ಕರೆ, ಆಲ್ಕೋೋಹಾಲ್ ಸೇವಿಸುವುದಂತೂ ಬಿಟ್ಟೇಬಿಡಿ!
ದಿನದ ಮುಖ್ಯ ಆಹಾರ ಬೆಳಗಿನ ಉಪಾಹಾರ ಎನ್ನುವುದು ತಪ್ಪುು ಎಂದು ನಾನು ಹೇಳಿದರೆ, ಏನನ್ನು ಸೇವಿಸುತ್ತೀರಿ ಎಂಬುದಕ್ಕಿಿಂತ ಯಾವಾಗ ಅದನ್ನು ತೆಗೆದುಕೊಳ್ಳುತ್ತೀರಿ ಎಂಬುದು ಮುಖ್ಯ ಎಂದರೆ ನಿಮ್ಮ ಪ್ರತಿಕ್ರಿಿಯೆ ಹೇಗಿರುತ್ತದೆ? ಹಾಗೆ ಬೆಳಗಾಗೆದ್ದು ಪುಷ್ಕಳ ಉಪಾಹಾರವನ್ನು ದೇಹಕ್ಕೆೆ ಒದಗಿಸಬೇಕು, ಬಳಿಕ ‘ಮಿನಿ ಮೀಲ್‌ಸ್’ ಹಾಗೂ ದಿನವಿಡೀ ಏನನ್ನಾಾದರೂ ಬಾಯಾಡುವುದು ಮುಂತಾದವು ಎಂಬುದು ಇಲ್ಲಿತನಕ ನಾವು ಕಲಿತುಬಂದ ಆಹಾರ ನೀತಿ. ಆದರೆ ಕಳೆದೆರಡು ದಶಕಗಳಲ್ಲಿ ಇಂತಹ ‘ಸೂತ್ರ’ಗಳು ಅಗಾಧ ಬದಲಾವಣೆ ಕಂಡಿವೆ ಎಂಬುದನ್ನು ನಿಮಗೆ ತಿಳಿಸಬಯಸುತ್ತೇನೆ. ಇತ್ತೀಚೆಗೆ ಏರುತ್ತಿಿರುವ ಸ್ಥೂಲಕಾಯ, ಮಧುಮೇಹ ಹಾಗೂ ಹೃದಯಸಂಬಂಧಿ ಕಾಯಿಲೆಗಳು ಸಮರ್ಪಕ ಪೋಷಣೆಯ ಆಯ್ಕೆೆ ಮಾಡಿದಲ್ಲಿ ತಡೆಗಟ್ಟಬಲ್ಲಂಥವು ಹಾಗೂ ನಾವು ತಿಳಿದುಕೊಂಡಿರುವುದಕ್ಕಿಿಂತ ಬಹಳ ಬಹಳ ಪರಿಣಾಮಕಾರಿ.
ಅನೇಕ ವರ್ಷಗಳ ಹಿಂದೆ, ನರ್ಸ್ ಆಗಿ ನಾನು ತರಬೇತಿ ಹೊಂದುತ್ತಿಿದ್ದಾಾಗ ಮತ್ತು ಆಮೇಲೆ ವೃತ್ತಿಿನಿರತಳಾಗಿದ್ದಾಾಗ ‘ಕಡಿಮೆ ತಿನ್ನುವುದು ಹಾಗೂ ಹೆಚ್ಚು ವ್ಯಾಾಯಾಮ ಮಾಡುವುದು’ ಒಂದು ಮುಖ್ಯ ಪೋಷಣಾ ನಿಯಮವಾಗಿತ್ತು. ಆದರೆ ಈಗ ನನಗೆ ಈ ನಿಯಮ ನಿಷ್ಪ್ರಯೋಜಕ ಎಂಬ ಅರಿವಾಗಿದೆ. ಏಕೆಂದರೆ ನನ್ನ ಮಹಿಳಾ ಪೇಷಂಟ್‌ಗಳಲ್ಲಿ ಬಹುಪಾಲು ಮಂದಿಗೆ ಎಷ್ಟು ಕ್ಯಾಾಲೋರಿ ‘ಒಳಗೆ’ ಹೋಗುತ್ತದೆ ಮತ್ತು ದೈಹಿಕ ಚಟುವಟಿಕೆಗಳ ಮೂಲಕ ಎಷ್ಟು ‘ಹೊರಗೆ’ ಹೋಗುತ್ತದೆ ಎನ್ನುವುದಷ್ಟೇ ಸಾಲದು. ಜೀವನ ಶೈಲಿಯ ಆಯ್ಕೆೆ ಮತ್ತು ದೇಹತೂಕ ಕಾಯ್ದುಕೊಳ್ಳುವುದು ಹಾಗೂ ಆರೋಗ್ಯಪೂರ್ಣ ವೃದ್ಧಾಾಪ್ಯದೆಡೆ ಸಾಗುವುದಕ್ಕೆೆ ಇರುವ ಸಂಬಂಧವನ್ನು ಅವರೊಂದಿಗೆ ನಾನು ಚರ್ಚಿಸುತ್ತೇನೆ. ವಯಸ್ಸಾಾದಂತೆ ತೂಕ ಹೆಚ್ಚಾಾಗುವುದು ಮಹಿಳೆಯರಲ್ಲಿ ಸಹಜ, ಅದನ್ನು ಅವರು ಸ್ವೀಕರಿಸಬೇಕು ಎಂಬ ಸೀಮಿತ ತಿಳಿವಳಿಕೆಯನ್ನು ನಾನು ನಂಬುವುದೂ ಇಲ್ಲ ಮತ್ತು ಬೆಂಬಲಿಸುವುದೂ ಇಲ್ಲ.
ಒಂದು ನಿದರ್ಶನ ಕೊಡುವುದಾದರೆ 70ರ ದಶಕಗಳಲ್ಲಿ ಬಹುತೇಕ ಅಮೆರಿಕನ್ನರು ದಿನಕ್ಕೆೆ ಮೂರು ಊಟ ಸೇವಿಸಿ, ಕುರುಕಲು ತಿಂಡಿ ತಪ್ಪಿಿಸುತ್ತಿಿದ್ದರು. ಆ ವರ್ಷಗಳ ಸ್ಥೂಲಕಾಯ ಸಮಸ್ಯೆೆಗೂ ಈಗ ವೇಗವಾಗಿ ಏರಿರುವ ಒಬೆಸಿಟಿ ಪ್ರಮಾಣಕ್ಕೂ ತುಲನೆ ಮಾಡಿದರೆ, ನಮ್ಮ ಈಗಿನ ಅಭ್ಯಾಾಸವಾದ ಮೂರು ಊಟ ಹಾಗೂ ದಿನವಿಡೀ ಕುರುಕಲು ಸೇವನೆಯೇ ಸ್ಥೂಲಕಾಯ ಸಮಸ್ಯೆೆ ಹೆಚ್ಚಾಾಗಲು ಕಾರಣ ಎಂಬುದು ಗೊತ್ತಾಾಗುತ್ತದೆ. ಆರೋಗ್ಯ ಸೇವಾ ಕಾರ್ಯಕರ್ತರು ಈ ಕುರಿತು ಪ್ರಚಾರ ಮಾಡಿ, ಮಾಡಿ ದಿನವಿಡೀ ಬಾಯಾಡುವುದು ಮಹಿಳೆಯರಿಗೆ ಅಭ್ಯಾಾಸವಾಗಿಬಿಟ್ಟಿಿದೆ. ಆದರೆ ಸದಾ ತಿನ್ನುತ್ತಿಿರುವುದು ನಮ್ಮ ಮೇದೋಜೀರಕಾಂಗವನ್ನು, ಜೀರ್ಣಾಂಗ ವ್ಯೂೆಹವನ್ನು ಅತಿಯಾಗಿ ದುಡಿಸಿದಂತೆ. ಅತಿಯಾಗಿ ಕೆಲಸ ಕೊಟ್ಟಾಾಗ ಸಹಜವಾಗಿಯೇ ಅವು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಪರಿಣಾಮವೆಂದರೆ ಸೇವಿಸಿದ ಸತ್ವಯುತ ಆಹಾರ ಸರಿಯಾಗಿ ಹೀರಿಕೆಯಾಗುವುದಿಲ್ಲ.
ದಿನಕ್ಕೆೆ ಎಷ್ಟು ಊಟ ಮಾಡುತ್ತೇವೆ ಅಥವಾ ಎಷ್ಟು ಬಾರಿ ಆಹಾರ ಸೇವಿಸುತ್ತೇವೆ ಎಂಬುದಕ್ಕೆೆ ಸಂಬಂಧಿಸಿದ ಹಾಗೆ ಈ ದಿನಗಳಲ್ಲಿ ಪ್ರಚಲಿತವಿರುವ ಇನ್ನೊೊಂದು ಮುಖ್ಯ ವಾದ ಎಂದರೆ ‘ಶುಗರ್ ಬರ್ನರ್‌ಸ್-ಶರ್ಕರಪಿಷ್ಟ ವ್ಯಯಿಸುವವರು’ ಹಾಗೂ ‘ಫ್ಯಾಾಟ್ ಬರ್ನರ್‌ಸ್-ಕೊಬ್ಬು ವ್ಯಯಿಸುವವರು’ ಎಂಬ ವಿಂಗಡಣೆ. ಇದನ್ನು ವಿವರಿಸಬೇಕೆಂದರೆ, ಶುಗರ್ ಬರ್ನರ್‌ಸ್ ಅಧಿಕ ಪಿಷ್ಟ ಪದಾರ್ಥ ಸೇವಿಸುತ್ತಾಾರೆ ಮತ್ತು ಅದರ ಅಂತಿಮ ಘಟಕವಾದ ‘ಗ್ಲೂಕೋಸ್’ನಿಂದ ದೇಹದ ಚಟುವಟಿಕೆಗಳಿಗೆ ಬೇಕಾದ ಶಕ್ತಿಿ ಪಡೆಯುತ್ತಾಾರೆ. ಆದರೆ ಇಷ್ಟು ದೇಹಕ್ಕೆೆ ಸಾಕಾಗುವುದಿಲ್ಲ. ಇಂತಹವರನ್ನು ಗಮನಿಸಿ, ಸದಾ ಹಸಿವು ಅನ್ನುತ್ತಿಿರುತ್ತಾಾರೆ, ಕೋಪ ಬೇಗ ಬರುತ್ತದೆ, ಆಗಾಗ ಶಕ್ತಿಿ ಕುಸಿತ-ಇದು ಬಹಳ ಗಮನಿಸಬೇಕಾದ ಸಂಗತಿ-ಅನುಭವಿಸುತ್ತಿಿರುತ್ತಾಾರೆ. ಇಂತಹವರಿಗೆ ಕೊಬ್ಬು ಇಳಿಸುವುದು ತೂಕ ಕಡಿಮೆ ಮಾಡಿಕೊಳ್ಳುವುದು ಹೆಚ್ಚು ಕಷ್ಟ. ಏಕೆಂದರೆ ಅವರಲ್ಲಿ ಇನ್‌ಸುಲಿನ್ ಪ್ರಮಾಣ ಅಧಿಕವಾಗಿರುತ್ತದೆ. ಹಾಗಿದ್ದಾಾಗ ಹೆಚ್ಚು ಒತ್ತಡ (ಆಕ್ಸಿಿಡೇಟಿವ್ ಸ್ಟ್ರೆೆಸ್) ಅನುಭವಿಸುತ್ತಾಾರೆ, ತೂಕ ಕಳೆದುಕೊಳ್ಳುವುದು ಹೆಚ್ಚು ಕಷ್ಟವಾಗುತ್ತದೆ.
ತದ್ವಿಿರುದ್ಧವಾಗಿ ಕೊಬ್ಬು ವ್ಯಯಿಸುವವರು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿಿನ ಸಂಗ್ರಹದ ಮೇಲೆ ಅವಲಂಬಿತರಾಗಿರುತ್ತಾಾರೆ. ಬೇಗ ಸುಸ್ತಾಾಗುವುದಿಲ್ಲ. ನಡೆವಳಿಕೆ ಹೆಚ್ಚು ಸಮಾಧಾನಕರವಾಗಿರುತ್ತದೆ, ಗ್ರಹಿಕೆಯಿಂದ ಕೂಡಿರುತ್ತದೆ. ಇವರಿಗೆ ತೂಕ ಇಳಿಸುವುದು ಸುಲಭ. ಚೆನ್ನಾಾಗಿ ನಿದ್ದೆೆ ಬರುತ್ತದೆ. ಬೇಗ ವೃದ್ಧಾಾಪ್ಯ ಆವರಿಸುವುದಿಲ್ಲ. ಆಹಾರ ಸೇವನೆ ಯಾವಾಗ ಮತ್ತು ಎಷ್ಟು ಸಾರಿ ಮಾಡುತ್ತೇವೆ ಎಂಬುದು ಎಷ್ಟು ಮುಖ್ಯ ಎಂಬುದು ಇದರಿಂದ ಗೊತ್ತಾಾಗುತ್ತದೆ.
ಈಗ ಮಹಿಳೆಯರಿಗೆ ಸಂಬಂಧಪಟ್ಟ ಹಾಗೆ ಆರೋಗ್ಯಪೂರ್ಣ ವಯಸ್ಸಾಾಗುವಿಕೆ ಕುರಿತ ಕೆಲ ಅಂಕಿ-ಅಂಶಗಳನ್ನು ನೋಡೋಣ. 40-50 ವಯೋಮಾನದ ಮೂರನೇ ಎರಡು ಭಾಗ ಮಹಿಳೆಯರು ಅಧಿಕ ತೂಕವುಳ್ಳವರಾಗಿರುವುದು ಮತ್ತು ಅರ್ಧಕ್ಕಿಿಂತಲೂ ಹೆಚ್ಚು ಪ್ರಮಾಣದಲ್ಲಿ ಸ್ಥೂಲಕಾಯ ಸಮಸ್ಯೆೆಯಿಂದ ಬಳಲುತ್ತಿಿರುವುದು ಸಾಮಾನ್ಯವಾಗಿ ಕಾಣಿಸುತ್ತದೆ. ಹೇಗೆ ಇದನ್ನು-ತತ್ಕಾಾಲಕ್ಕೆೆ ತೇಪೆ ಹಚ್ಚದೇ-ಸರಿಪಡಿಸಬಹುದು ನೋಡೋಣ. ಅಧಿಕ ದೇಹತೂಕದ ಸಮಸ್ಯೆೆ ಹೊತ್ತು ನನ್ನ ಬಳಿ ಬರುವ ಮಹಿಳೆಯರಿಗೆ ಏನಾದರೂ ಸುಲಭವಾದ ‘ಪ್ರಿಿಸ್ಕ್ರಿಿಪ್ಷನ್’ ಕೊಟ್ಟುಬಿಡಲಿ ಎಂಬ ಬಯಕೆ. ಅಳುವಂತಾಗುತ್ತದೆ ನನಗೆ. ಆಹಾರ ಸೇವನೆಯ ಬದಲಾವಣೆ, ಹೆಚ್ಚು ವ್ಯಾಾಯಾಮ ಇನ್ನಿಿತರ ಜೀವನಶೈಲಿ ಮಾರ್ಪಡಿಸುವ ಸಲಹೆಗಳು ಅವರಿಗೆ ಅಷ್ಟೇನೂ ಸೇರುವುದಿಲ್ಲ.
50-60 ವಯೋಮಾನದ ಮಹಿಳೆಯರ ವಿಷಯಕ್ಕೆೆ ಬಂದರೆ, ಸರಾಸರಿ ವರ್ಷಕ್ಕೆೆ ಒಂದೂವರೆ ಪೌಂಡ್‌ನಷ್ಟು ಅವರ ದೇಹತೂಕ ಹೆಚ್ಚಾಾಗುತ್ತದೆ. ಆ ಸಮಯದಲ್ಲಿ ಆಗುವ ಹಾರ್ಮೋನು ಬದಲಾವಣೆಗಳು ಸ್ವಲ್ಪಮಟ್ಟಿಿಗೆ ಇದಕ್ಕೆೆ ಕಾರಣ. ಪುರುಷರಿಗಿಂತ ತೆಳುವಾದ ಮಾಂಸಖಂಡಗಳನ್ನು ಹೊಂದಿರುವ ಕಾರಣ ಕಡಿಮೆ ನಿದ್ದೆೆ, ಮೂಡ್ ಬದಲಾವಣೆಗಳೂ ಈಗ ಸಾಮಾನ್ಯ. ಆದರೆ ಇವನ್ನೆೆಲ್ಲಾಾ ದೂರವೇ ಇರಿಸಬಹುದು, ನಾನು ಹೇಳಲಿರುವ ಕೆಲ ಉಪಾಯಗಳನ್ನು ಅನುಸರಿಸಿದರೆ. ಭಾಷಣ ಕೇಳುತ್ತಿಿರುವ ನಿಮಗೆಲ್ಲಾಾ ನನ್ನ ಕಿವಿಮಾತೆಂದರೆ ದಯವಿಟ್ಟು ‘ಆ ಪೌಡರ್, ಈ ಔಷಧ’ ಎಂದು ಸುಮ್ಮನೇ ಖರ್ಚು ಮಾಡಬೇಡಿ. ಏಕೆಂದರೆ ಅವು ಶಾಶ್ವತ ಪರಿಹಾರಗಳಲ್ಲ. ತೂಕ ಇಳಿಸಿಕೊಳ್ಳಲು ನನ್ನ ಬಳಿ ಹೆಚ್ಚು ಉತ್ತಮ ಪರಿಹಾರವಿದೆ, ಅದುವೇ ಆಗಾಗ ಉಪವಾಸ ಆಚರಿಸುವುದು! ದಯವಿಟ್ಟು ಇದನ್ನು ಅನುಸರಿಸಿ ಎಂದು ನನ್ನ ಎಲ್ಲಾಾ ಮಹಿಳಾ ಪೇಷಂಟ್‌ಸ್‌ಗೆ ಸೂಚಿಸಬಯಸುತ್ತೇನೆ.
ಆಗಾಗ ನಿರಶನ ಮಾಡುವುದರಿಂದ ದೇಹದ ಕೊಬ್ಬು ಉರಿದುಹೋಗುವುದಲ್ಲದೆ ಇನ್ನೂ ಹಲವು ಲಾಭಗಳಿವೆ. ಒಂದೊಂದಾಗಿ ಹೇಳುತ್ತಾಾ ಹೋಗುತ್ತೇನೆ. ಉಪವಾಸ ಆಚರಿಸಿ ಕಳೆದು ಹೋದ ತಮ್ಮ ಆರೋಗ್ಯವನ್ನು, ಶಕ್ತಿಿಯನ್ನು, ತಮ್ಮತನವನ್ನು ಮರಳಿ ಪಡೆಯುವುದು ಮಹಿಳೆಯರ ಆತ್ಮಸಮ್ಮಾಾನವನ್ನು ಎಷ್ಟೊೊಂದು ಹೆಚ್ಚಿಿಸುತ್ತದೆಂದರೆ ಅದಕ್ಕೆೆ ಸರಿಸಾಟಿಯಾಗಿ ಬೇರೆ ಯಾವ ವಿಧಾನವೂ ನಿಲ್ಲಲಾರದು. ‘ಯಾವಾಗ ಬೇಕಾದರೂ ಆಚರಿಸಬಹುದು, ಬೇಕೆಂದಾಗ ಉಪವಾಸ ಇರೋಣ ಎಂದು ನಿರ್ಧರಿಸಬಹುದು’ ಎಂಬ ಬಿಗಿ ಕಟ್ಟು ಕಟ್ಟಳೆ ಇಲ್ಲದೆ ಹೊಂದಿಸಿಕೊಳ್ಳಲು ಬರುವ ‘ಫ್ಲೆೆಕ್ಸಿಿಬಲಿಟಿ’ಯೂ ಈ ‘ಉಚಿತ’ ಮತ್ತು ‘ಸರಳ’ ವಿಧಾನಕ್ಕೆೆ ಇರುವುದನ್ನು ಗಮನಿಸಿ! ಎಷ್ಟೊೊಂದು ‘ಕೂಲ್’ ಅಲ್ಲವೇ?
ಆಗಾಗ ಉಪವಾಸ ಮಾಡುವುದು ಅಂದರೆ ನಿಜವಾಗಿ ಏನು ಎಂದು ಈಗ ತಿಳಿದುಕೊಳ್ಳೋೋಣ. ನಿಗದಿತ ಅವಧಿಯಲ್ಲಿ ಆಹಾರ ಸೇವಿಸದೇ ಇರುವುದೇ ನಿರಶನ. ನಾವೆಲ್ಲ ಒಂದೋ ‘ಹೊಟ್ಟೆೆ ತುಂಬಿದ-ಫೆಡ್’ ಸ್ಥಿಿತಿಯಲ್ಲಿರುತ್ತೇವೆ, ಇಲ್ಲವೇ ‘ಖಾಲಿ ಹೊಟ್ಟೆೆಯ-ಫಾಸ್ಟೆೆಡ್’ ಸ್ಥಿಿತಿಯಲ್ಲಿರುತ್ತೇವೆ ಎಂಬುದು ಗೊತ್ತಿಿರಲಿ. ಉದಾರಣೆಗೆ ನೀವೆಲ್ಲ ಬೆಳಗಿನ ಉಪಾಹಾರ ಸೇವಿಸಿ ಬಂದಿದ್ದೀರಿ. ಪ್ಯಾಾಂಕ್ರಿಿಯಾಸ್‌ನಲ್ಲಿ ಸ್ರವಿಸಲ್ಪಟ್ಟ ಇನ್‌ಸುಲಿನ್ ಹಾರ್ಮೋನು, ಅದನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ ಪ್ರತಿ ಜೀವಕೋಶಕ್ಕೂ ಕಳಿಸಿದೆ. ಹೆಚ್ಚುವರಿ ಸಕ್ಕರೆ ಪಿತ್ತಕೋಶದಲ್ಲಿ ಸಂಗ್ರಹವಾಗಿದೆ. ಕೆಲ ಅಂಶ ತಲೆಬುರುಡೆಯ ಮಾಂಸಖಂಡಗಳಲ್ಲೂ ಶೇಖರವಾಗಿದೆ. ಇನ್ನೂ ಉಳಿದರೆ ಅದು ಕೊಬ್ಬಾಾಗಿ ಸಂಗ್ರಹವಾಗಿರುತ್ತದೆ.
ಉಪವಾಸ ಮಾಡಿದಾಗ ಇನ್‌ಸುಲಿನ್ ಪ್ರಮಾಣ ಕುಸಿಯುತ್ತದೆ. ಆಗ ಸಂಗ್ರಹವಾಗಿರುವ ಕೊಬ್ಬಿಿನಿಂದ ಶಕ್ತಿಿ ಪಡೆಯಲು ದೇಹ ಉಪಕ್ರಮಿಸುತ್ತದೆ. ಉದಾಹರಣೆಗೆ ಬೆಳಗಿನ ಉಪಾಹಾರ ಬಿಟ್ಟಿಿರಿ ಎಂದುಕೊಳ್ಳೋೋಣ, ಆಗ ನಿಮ್ಮ ಕ್ಯಾಾಲೊರಿ ಸೇವನೆ 20-40% ಇಳಿಯುತ್ತದೆ. ನನ್ನ ಮಹಿಳಾ ಪೇಷಂಟ್‌ಗಳಿಗೆ ಅತ್ಯುತ್ತಮ ಎಂದು ನಾನು ಶಿಫಾರಸು ಮಾಡುವುದು ದಿನಕ್ಕೆೆ 16 ತಾಸು ಉಪವಾಸ ಮತ್ತು ಆನಂತರ 8 ತಾಸು ಅದನ್ನು ಮುರಿಯುವ ವಿಧಾನ. ಇದನ್ನು ಕ್ರಮೇಣ ರೂಢಿಸಿಕೊಂಡು ಹೇಗೆ ಬೇಕಾದರೂ ವಿನ್ಯಾಾಸ ಮಾಡಿಕೊಳ್ಳಬಹುದು. ಒಟ್ಟು ಫಲವೆಂದರೆ 20-40% ಕ್ಯಾಾಲೊರಿ ಇಳಿತ ಎಂದರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ವ್ಯಯವಾಗುತ್ತದೆ. ವಿಶೇಷವಾಗಿ ಶರೀರದ ಮುಖ್ಯ ಅಂಗಗಳ ಸುತ್ತ ಶೇಖರವಾಗಿರುವ ಕೊಬ್ಬು ಕಡಿಮೆಯಾಗುತ್ತದೆ. ಮಾನಸಿಕ ಸ್ಪಷ್ಟತೆ ಹೆಚ್ಚುತ್ತದೆ. ಇನ್‌ಸುಲಿನ್ ಪ್ರಮಾಣ ಏರಿದಾಗ ಬೆಳವಣಿಗೆಯ ಅಂಶ-ಗ್ರೋೋತ್ ಹಾರ್ಮೋನ್ ಹೆಚ್ಚಾಾಗಿ ಮಾಂಸಖಂಡಗಳು ತೆಳುವಾಗುತ್ತವೆ. ಇದೊಂದು ರೀತಿ ನಮ್ಮ ಜೀವಕೋಶಗಳಿಗೆ ‘ವಸಂತ ಕಾಲದ ಒಪ್ಪಗೊಳಿಸುವಿಕೆ-ಸ್ಪ್ರಿಂಗ್ ಕ್ಲೀನಿಂಗ್’.
ರಕ್ತದೊತ್ತಡ ಸುಧಾರಿಸುವುದು, ಕೊಲೆಸ್ಟ್ರಾಾಲ್ ಕಡಿಮೆಯಾಗುವುದು ಹೆಚ್ಚುವರಿ ಲಾಭ. ಇದರೊಂದಿಗೆ ಕ್ಯಾಾನ್ಸರ್‌ಗಾಗಲೀ, ಆಲ್‌ಝೈಮರ್ ಕಾಯಿಲೆಯಾಗಲೀ ತುತ್ತಾಾಗುವ ಸಂಭವ ಕಡಿಮೆಯಾಗುತ್ತದೆ. ನಮ್ಮ ಮಿದುಳನ್ನು ಸುಸ್ಥಿಿತಿಯಲ್ಲಿಡುವುದಕ್ಕಿಿಂತ ಬೇರೆ ಬೇಕೆ? ಆದರೆ ಬಿಟ್ಟು ಬಿಟ್ಟು ಉಪವಾಸ ಮಾಡುವ ಈ ವಿಧಾನ ಮಧುಮೇಹ ಹೊಂದಿರುವವರಿಗೆ, ಹದಿವಯಸ್ಸಿಿನವರಿಗೆ ಅಥವಾ 70 ಮೀರಿದ ವೃದ್ಧರಿಗೆ, ಗರ್ಭಿಣಿಯರಿಗೆ, ಹೃದಯ ಅಥವಾ ಮೂತ್ರಪಿಂಡದ ತೊಂದರೆ ಇರುವವರಿಗೆ ಅತ್ಯುತ್ತಮ ಅಲ್ಲದಿರಬಹುದು. ಆಹಾರ ಕಂಡರೆ ಹೇವರಿಕೆ ತರುವ ಅನೊರೆಕ್ಸಿಿಯ ಅಥವಾ ಅತಿಯಾದ ಹಸಿವಿನಿಂದ ಬಳಲಿ ಸಿಕ್ಕಿಿದ್ದನ್ನೆೆಲ್ಲಾಾ ತಿನ್ನುವ ಬುಲೀಮಿಯಾದಂತಹ ಕಾಯಿಲೆಗಳಿಗೆ ತುತ್ತಾಾಗಿದ್ದವರಿಗೂ ಸೂಕ್ತವಲ್ಲ.
ಮತ್ತೂ ಹೇಳಬೇಕೆಂದರೆ ಹೆಚ್ಚು ತೂಕ ಇಲ್ಲದ ನಾಜೂಕು ದೇಹದವರು ನೀವಾಗಿದ್ದರೆ, ಆಸ್ಪತ್ರೆೆ ವಾಸ ಮಾಡಿದ ಮೇಲೆ ಸಹ ಬಿಟ್ಟು ಬಿಟ್ಟು ಉಪವಾಸ ಮಾಡುವ ವಿಧಾನ ನಿಷೇಧಿತ. ಇನ್ನೊೊಂದು ವಿಷಯ. ಆಗಲೇ ಹೇಳಿದಂತೆ ಉಪವಾಸದಲ್ಲಿದ್ದೀರಿ ಎಂದರೆ ಆಹಾರ ಸೇವಿಸುತ್ತಿಿಲ್ಲ ಎಂದಷ್ಟೇ ಅರ್ಥ. ನೀರು, ಕಾಫಿ, ಟೀ ಇನ್ನಿಿತರ ಪಾನೀಯ ಸೇವನೆಗೆ ಯಾವ ನಿರ್ಬಂಧವೂ ಇಲ್ಲ. ಇವು ಉಪವಾಸ ಮುರಿಯುವುದಿಲ್ಲ.
ಉಪವಾಸಕ್ಕೆೆ ಬಿಡುವು ಕೊಡುವಾಗ ಏನನ್ನು ಸೇವಿಸುವ ಮೂಲಕ ಅದನ್ನು ನಿಲ್ಲಿಸಬೇಕು ಎಂಬುದೂ ಬಹಳ ಮುಖ್ಯ. ಅದನ್ನು ನಾನು ಹೇಳದೇ ಇದ್ದರೆ ಈ ವಿವರಣೆ ಅಪೂರ್ಣ. ಅತ್ಯುತ್ತಮ ಪ್ರೊೊಟೀನ್, ಸಾವಯವ ಅಥವಾ ಪಾಶ್ಚರೀಕರಣಗೊಳಿಸಿದ ಮಾಂಸ, ಮೀನು, ಒಳ್ಳೆೆಯ ಕೊಬ್ಬಿಿನಾಂಶ ಇರುವ ಪದಾರ್ಥಗಳಿಂದ ನಿರಶನಕ್ಕೆೆ ಕೊನೆ ಹೇಳಿದರೆ ಅದು ನಮ್ಮ ಹಾರ್ಮೋನುಗಳ ಉತ್ಪತ್ತಿಿಗೆ ಬಹಳ ಸಹಕಾರಿ. ಹೊಟ್ಟೆೆ ತುಂಬಿದ ಭಾವ, ಸಂತೃಪ್ತಿಿ, ನಾಲಗೆಯ ರಸಮೊಗ್ಗೆೆಗಳು ಅರಳುವುದು ಸಹ ಆಗಬೇಕು!
ಕೊಬ್ಬು ಸೇವನೆ ಕೂಡದು ಎಂದು ಹೇಳುವ ಬ್ರಿಿಗೇಡ್‌ಗಂತೂ ನಾನು ಸೇರಿಲ್ಲ. 20 ವರ್ಷದ ಹಿಂದೆ ಆಗಿದ್ದರೆ ಅಂತಹ ಸಲಹೆ ನನ್ನಿಿಂದ ಬರುತ್ತಿಿತ್ತೇನೋ. ಆದರೆ ಈಗ ನಮ್ಮ ಜ್ಞಾಾನ ಸುಧಾರಿಸುವುದರಿಂದ ಅವಕ್ಯಾಾಡೊ, ತೆಂಗಿನೆಣ್ಣೆೆ, ಬೆಣ್ಣೆೆ, ನಟ್‌ಸ್ ತರಹದ, ದೇಹಕ್ಕೆೆ ಬಹಳ ಬೇಕಾದ ಸಂಸ್ಕರಿಸದ ಕೊಬ್ಬು ಎಲ್ಲ ಸೇವಿಸಬಹುದು. ಹಸುರು ತರಕಾರಿ, ಬೆರ್ರಿಿ, ಸಿಹಿ ಗೆಣಸನ್ನು ಬ್ರೆೆಡ್ ಮತ್ತು ಪಾಸ್ತಾಾಗಳ ಜಾಗದಲ್ಲಿ ಬದಲಿಸಿಕೊಳ್ಳಿಿ. ಈ ಮಧ್ಯೆೆ ಸಕ್ಕರೆ, ಆಲ್ಕೋೋಹಾಲ್ ಸೇವಿಸಿ ಇಲ್ಲಿಯತನಕ ಉಂಟಾದ ಎಲ್ಲ ಒಳ್ಳೆೆಯ ಪರಿಣಾಮಗಳನ್ನು ಕಳೆದುಕೊಳ್ಳುವುದು ಬೇಡ. ಧಾರಾಳವಾಗಿ ನೀರು ಕುಡಿಯುವುದಂತೂ ಕಡ್ಡಾಾಯ.
ಆರರಿಂದ ಎಂಟು ವಾರಗಳು ಕಾಯಬೇಕಾಗಬಹುದು. ಆದರೆ ಮಾರುಕಟ್ಟೆೆಯಲ್ಲಿ ಸಿಗುವ ತೂಕ ಇಳಿಸುವ ದುಬಾರಿ ‘ಮ್ಯಾಾಜಿಕ್ ಔಷಧ’ಗಳಿಗಿಂತ ಆಗಾಗ ಉಪವಾಸ ಮಾಡುವ ವಿಧಾನ ಸಾವಿರ ಪಾಲು ಮೇಲು.
ಸಿಂಥಿಯಾ ತುರ್‌ಲಾವ್
ನ್ಯೂಟ್ರಿಿಷನ್ ತಜ್ಞೆೆ, ಉದ್ಯಮಿ ಹಾಗೂ ವೆಲ್‌ನೆಸ್ ಕೋಚ್ ಆಗಿರುವ ಸಿಂಥಿಯಾ ವೈದ್ಯಕೀಯ ವಿಜ್ಞಾಾನದ ಈ ವಿಭಾಗದಲ್ಲಿ 20 ವರ್ಷಕ್ಕೂ ಅಧಿಕ ಅನುಭವ ಉಳ್ಳವರು. ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿಿರುವ ಹೃದ್ರೋಗಕ್ಕೆೆ, ಹಲವು ಆರೋಗ್ಯ ಸಮಸ್ಯೆೆಗಳಿಗೆ, ಮಹಿಳೆಯರ ಸ್ಥೂಲಕಾಯ ನಿವಾರಣೆಗೆ ಉತ್ತಮ ಆಹಾರ ಪದ್ಧತಿ ಅನುಸರಿಸುವುದೊಂದೇ ಪರಿಹಾರ ಎಂದು ಪ್ರತಿಪಾದಿಸುತ್ತಾಾರೆ.