ಮಗುವನ್ನು ಎದೆಗೆ ಕಟ್ಟಿಕೊಂಡು ಮ್ಯಾರಾಥಾನ್ ಓಡಿದ ತಂದೆ: ನೆಟ್ಟಿಗರಿಂದ ಭಾರೀ ಆಕ್ರೋಶ!
Viral News: ಕೇರಳದ ಕೊಚ್ಚಿಯಲ್ಲಿ ಮ್ಯಾರಥಾನ್ ನಡೆದಿದ್ದು ಹಲವು ಓಟಗಾರರು ಪಾಲ್ಗೊಂಡಿದ್ದರು. ಆದರೆ ಇದೇ ಓಟಗಾರರಲ್ಲಿ ಒಬ್ಬ ತಂದೆ ತನ್ನ ಮಗುವನ್ನು ಮುಂಭಾಗದ ಕ್ಯಾರಿಯರ್‌ನಲ್ಲಿ ಕಟ್ಟಿ ಕೊಂಡು ಓಡುತ್ತಿರುವ ದೃಶ್ಯವೊಂದು ಕಂಡುಬಂದಿದೆ. ಈ ಬಗ್ಗೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗುವನ್ನು ಕಟ್ಟಿಕೊಂಡು ಮ್ಯಾರಥಾನ್ ಓಡಿದ ತಂದೆ -
ಕೊಚ್ಚಿ, ಫೆ.2: ಇತ್ತೀಚೆಗಷ್ಟೇ ಕೇರಳದ ಕೊಚ್ಚಿಯಲ್ಲಿ ಮ್ಯಾರಥಾನ್ ನಡೆದಿದ್ದು ಹಲವು ಓಟಗಾರರು ಪಾಲ್ಗೊಂಡಿದ್ದರು. ಆದರೆ ಇದೇ ಓಟಗಾರರಲ್ಲಿ ಒಬ್ಬ ತಂದೆ ತನ್ನ ಮಗುವನ್ನು ಮುಂಭಾಗದ ಕ್ಯಾರಿಯರ್‌ನಲ್ಲಿ ಕಟ್ಟಿಕೊಂಡು ಓಡುತ್ತಿರುವ ದೃಶ್ಯವೊಂದು (Viral News) ಕಂಡುಬಂದಿದೆ. ಸದ್ಯ ಈ ಬಗ್ಗೆ ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಫೆಬ್ರವರಿ 1, 2026 ರಂದು ನಡೆದ 'ನಮ್ಮುಡೆ ರನ್' ಮ್ಯಾರಾಥಾನ್‌ನಲ್ಲಿ ಈ ಘಟನೆ ಸಂಭವಿಸಿದ್ದು ಪುಟ್ಟ ಮಗುವನ್ನು ಆ ವ್ಯಕ್ತಿ ಎದೆಗೆ ಕಟ್ಟಿಕೊಂಡು ಓಡುತ್ತಿರುವುದು ಕಾಣಬಹುದು.
ಬಿಳಿ ಟಿ-ಶರ್ಟ್ ಹಾಗೂ ಟ್ರಾಕ್ ಪ್ಯಾಂಟ್ ಧರಿಸಿದ್ದ ವ್ಯಕ್ತಿಯೊಬ್ಬರು 'ಬೇಬಿ ಕ್ಯಾರಿಯರ್' ಬಳಸಿ ಮಗುವನ್ನು ಎದೆಗೆ ಕಟ್ಟಿಕೊಂಡು ಮ್ಯಾರಾಥಾನ್‌ನಲ್ಲಿ ಓಡುತ್ತಿದ್ದರು. ಮಗು ತಂದೆಯ ಎದೆಯ ಮೇಲೆ ಆರಾಮವಾಗಿ ಮಲಗಿದರೂ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ತಂದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೊದಲ್ಲಿ ತಂದೆ ಎದೆಗೆ ಕಟ್ಟಲಾದ ಮುಂಭಾಗದ ಬೇಬಿ ಕ್ಯಾರಿಯರ್‌ನಲ್ಲಿ ಮಗುವನ್ನು ಹೊತ್ತುಕೊಂಡು ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿರುವುದನ್ನು ಕಾಣಬಹುದು.
ತಂದೆ ತನ್ನ ಎಡಗೈಯಲ್ಲಿ ಬಾಟಲಿಯನ್ನು ಹಿಡಿದಿದ್ದಾರೆ, ಆದರೆ ಅವರ ಬಲಗೈ ಮಗುವಿನ ತಲೆಯ ಬಳಿ ಇರುತ್ತದೆ. ಆದರೆ ಓಡುವಾಗ ಮಗುವಿನ ಬೆನ್ನು ಮತ್ತು ಕುತ್ತಿಗೆಯ ಮೇಲೆ ತೀವ್ರವಾದ ಒತ್ತಡ ಬೀರಬಹುದು. ಅನೇಕ ಬಳಕೆದಾರರು ತಂದೆ ತನ್ನ ಮಗುವನ್ನು ಎದೆಗೆ ಕಟ್ಟಿಕೊಂಡು ಓಡುವ ಆಯ್ಕೆಯ ಬಗ್ಗೆ ಕಳವಳ ಮತ್ತು ಟೀಕೆಯನ್ನು ವ್ಯಕ್ತಪಡಿಸಿದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಇದನ್ನು "ತಂದೆಯ ಪ್ರೀತಿ" ಎಂದು ಕರೆಯುವ ಬದಲು "ಕ್ರೌರ್ಯ" ಎಂದು ಜನರು ಟೀಕಿಸುತ್ತಿದ್ದಾರೆ. ಒಬ್ಬ ಬಳಕೆದಾರರು, "ಎಲ್ಲಾ ಮಕ್ಕಳು ಪೋಷಕರಿಗೆ ಅರ್ಹರು, ಆದರೆ ಎಲ್ಲಾ ಪೋಷಕರು ಮಕ್ಕಳಿಗೆ ಅರ್ಹರಲ್ಲ" ಎಂದು ಬರೆದುಕೊಂಡಿದ್ದಾರೆ.ಮತ್ತೊಬ್ಬರು ಹೀಗೆ ಮಗುವನ್ನು ಹಿಡಿದು ಓಡಾಡಲು ಇಲ್ಲಿ ಹೇಗೆ ಅನುಮತಿಸಲಾಯಿತು ಎಂದು ಪ್ರಶ್ನಿಸಿದರು. ಹೆಚ್ಚಿನವರು ಇದು ''ಅಮಾನವೀಯ" ಎಂದು ಕಿಡಿಕಾರಿದ್ದಾರೆ.