ಸೌದಿ ಅರೇಬಿಯಾದಲ್ಲಿ ಹೆಲಿಕಾಪ್ಟರ್ ಪತನ; 14 ಮಂದಿ ಸಾವು: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಸ್ಥಿತಿಯ ಮಧ್ಯೆ ಅವಘಡ
Helicopter Crashes: ಸೌದಿ ಅರೇಬಿಯಾದಲ್ಲಿ ಭಾನುವಾರ (ಜೂನ್ 28) ಹೆಲಿಕಾಪ್ಟರ್ ಪತನವಾಗಿ ಸುಮಾರು 14 ಮಂದಿ ಮೃತಪಟ್ಟಿದ್ದಾರೆ. ಹೊರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿರುವ, ಸೌದಿ ಅರೇಬಿಯಾ ಪೂರ್ವ ಕರಾವಳಿಯ ರಾಸ್ ತನುರಾದಲ್ಲಿ ಈ ಅವಘಡ ಸಂಭವಿಸಿದೆ. ಕಾರನ ತಿಳಿದು ಬಂದಿಲ್ಲ.
ಸಾಂದರ್ಭಿಕ ಚಿತ್ರ -
ರಿಯಾದ್, ಜೂ. 28: ಸೌದಿ ಅರೇಬಿಯಾದಲ್ಲಿ ಭಾನುವಾರ (ಜೂನ್ 28) ಭೀಕರ ವೈಮಾನಿಕ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್ ಪತನವಾಗಿ ಸುಮಾರು 14 ಮಂದಿ ಮೃತಪಟ್ಟಿದ್ದಾರೆ (Helicopter Crashes). ಹೊರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿರುವ, ಸೌದಿ ಅರೇಬಿಯಾ ಪೂರ್ವ ಕರಾವಳಿಯ ರಾಸ್ ತನುರಾದಲ್ಲಿ ಈ ಅವಘಡ ಸಂಭವಿಸಿದೆ. ದೈತ್ಯ ತೈಲ ಕಂಪನಿ ಅರಾಮ್ಕೊಗೆ ಸೇರಿದ ಹೆಲಿಕಾಪ್ಟರ್ ಇದಾಗಿದ್ದು, ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಪಶ್ಚಿಮ ಏಷ್ಯಾದಲ್ಲಿ ಮತ್ತೆ ಸಂಘರ್ಷ ಭುಗಿಲೆದ್ದಿದ್ದು, ಅದಕ್ಕೂ ಈ ದುರಂತಕ್ಕೂ ಕಾರಣವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಭಾರತೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ. ಸದ್ಯ ಈ ಬಗ್ಗೆ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅರಾಮ್ಕೊ ಕಂಪನಿ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಸೌದಿ ಅರೇಬಿಯಾದಲ್ಲಿ ಪತನಗೊಂಡ ಹೆಲಿಕಾಪ್ಟರ್:
Reuters: Helicopter belonging to Saudi oil giant Aramco, crashed on Sunday in Ras Tanura on Saudi Arabia's eastern coast west of the Strait of Hormuz, killing 14 nationals#SaudiArabia #SaudiAramco #BreakingNews #HelicopterCrash #RasTanura #StraitOfHormuz #Aviation #NewsAlert pic.twitter.com/DxHTtsigXt
— VIRAL VOLT (@ViralVolT1) June 28, 2026
ʼʼಹೆಲಿಕಾಪ್ಟರ್ ಪತನಗೊಳ್ಳುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿದ್ದ ಯಾರೊಬ್ಬರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ. ಮೃತಪಟ್ಟ ಎಲ್ಲ 14 ಮಂದಿಯೂ ಸೌದಿ ಅರೇಬಿಯಾದ ನಾಗರಿಕರುʼʼ ಎಂದು ಇಂಧನ ಸಚಿವಾಲಯ ಸ್ಪಷ್ಟಪಡಿಸಿದೆ. ಮೃತರು ಅರಾಮ್ಕೊ ಸಂಸ್ಥೆಯ ಸಿಬ್ಬಂದಿ ಮತ್ತು ತಾಂತ್ರಿಕ ತಜ್ಞರು ಎನ್ನಲಾಗಿದ್ದು, ಅವರ ಅಧಿಕೃತ ಗುರುತನ್ನು ಬಹುರಂಗಪಡಿಸಿಲ್ಲ.
ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕ ವಾಯುಪಡೆಯ ಬಿ-52 ಬಾಂಬರ್ ಪತನ; 8 ಮಂದಿ ದುರ್ಮರಣ
ಕಾರಣ ನಿಗೂಢ
ಈ ಹೆಲಿಕಾಪ್ಟರ್ ದುರಂತಕ್ಕೆ ನಿಖರ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ತಾಂತ್ರಿಕ ದೋಷ ಅಥವಾ ಹವಾಮಾನ ವೈಪರೀತ್ಯದ ಕಾರಣದಿಂದ ಈ ಅಪಘಾತ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಸೌದಿ ಸರ್ಕಾರ ಆದೇಶ ಹೊರಡಿಸಿದೆ. ವಿಶೇಷ ತನಿಖಾ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಹೆಲಿಕಾಪ್ಟರ್‌ನ ಬ್ಲ್ಯಾಕ್ ಬಾಕ್ಸ್ ಪತ್ತೆಹಚ್ಚಲು ಕಾರ್ಯಾಚರಣೆ ಕೈಗೊಂಡಿದೆ. ಪಶ್ಚಿಮ ಏಷ್ಯಾ ವಲಯದಲ್ಲೇ ಅತ್ಯಂತ ದೊಡ್ಡದಾದ ತೈಲ ಶುದ್ದೀಕರಣ ಘಟಕವನ್ನು ಹೊಂದಿರುವ ರಾಸ್ ತನುರಾ ಪ್ರದೇಶದಲ್ಲಿ ಈ ದುರಂತ ನಡೆದಿರುವುದು ಆತಂಕ ಮೂಡಿಸಿದೆ.
ಶುಕ್ರವಾರ (ಜೂನ್ 26) ಅರಾಮ್ಕೊ ರಾಸ್ ತನುರಾ ಟರ್ಮಿನಲ್‌ನಲ್ಲಿ ಕಚ್ಚಾ ತೈಲ ಲೋಡ್ ಪುನರಾರಂಭಿಸಿದ ಎರಡು ದಿನಗಳ ನಂತರ ಈ ಅಪಘಾತ ಸಂಭವಿಸಿದೆ. ಕಂಪನಿಯು ಸುಮಾರು 4 ತಿಂಗಳ ಕಾಲ ಟರ್ಮಿನಲ್‌ನ ಲೋಡ್ ಸ್ಥಗಿತಗೊಳಿಸಿತ್ತು. ಸೌದಿ ಅರೇಬಿಯಾ ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಎನಿಸಿಕೊಂಡಿದೆ.
ಪಿಒಕೆಯಲ್ಲಿ ಪಾಕಿಸ್ತಾನ ಸೈನಿಕರು ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಪತನ; 21 ಮಂದಿ ಸಾವಿನ ಶಂಕೆ
ಫ್ರಾನ್ಸ್‌ನಲ್ಲಿ ವಿಮಾನ ಪತನವಾಗಿ 11 ಮಂದಿ ಸಾವು
ಪ್ಯಾರಿಸ್: ಈಶಾನ್ಯ ಫ್ರಾನ್ಸ್‌ನಲ್ಲೂ ಭಾನುವಾರ ವೈಮಾನಿಕ ದುರಂತ ಸಂಭವಿಸಿದ್ದು, ಟೊಂಬ್ಲಿನ್ ಪಟ್ಟಣದಲ್ಲಿ ವಿಮಾನ ಅಪಘಾತ ಸಂಭವಿಸಿ 11 ಜನರು ಬಲಿಯಾಗಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಮಾನವು ಸ್ಥಳೀಯ ಸಮಯ ಬೆಳಗ್ಗೆ 11 ಗಂಟೆ ಸುಮಾರಿಗೆ ಪತನಗೊಂಡಿದೆ. ಪೈಲಟ್ ಮತ್ತು ಎಲ್ಲ 10 ಪ್ರಯಾಣಿಕರು, 5 ವಿದ್ಯಾರ್ಥಿಗಳು ಮತ್ತು 5 ಬೋಧಕರು ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಅಪಘಾತಕ್ಕೂ ಕಾರಣ ತಿಳಿದು ಬಂದಿಲ್ಲ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.