ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Syria Conflict : ಸಿರಿಯಾದಲ್ಲಿ ಭೀಕರ ಸಂಘರ್ಷ : 2 ದಿನದಲ್ಲಿ 1,000 ಕ್ಕೂ ಅಧಿಕ ಮಂದಿ ಸಾವು

ಸಿರಿಯಾದಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಬೆಂಬಲಿಗರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿದ್ದು, ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಲಟಾಕಿಯಾ ನಗರದ ಸುತ್ತಮುತ್ತಲಿನ ದೊಡ್ಡ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರನ್ನು ಕಡಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಸಿರಿಯಾ ಸಂಘರ್ಘ; 2 ದಿನದಲ್ಲಿ 1,000 ಕ್ಕೂ ಅಧಿಕ  ಸಾವು

ಸಿರಿಯಾ ಬಂಡುಕೋರರು

Profile Vishakha Bhat Mar 9, 2025 8:17 AM

ಡಮಾಸ್ಕಸ್‌: ಸಿರಿಯಾದಲ್ಲಿ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಬೆಂಬಲಿಗರ ನಡುವೆ ಹಿಂಸಾತ್ಮಕ ಘರ್ಷಣೆಗಳು (Syria Conflict) ನಡೆಯುತ್ತಿದ್ದು, ಇಲ್ಲಿಯವರೆಗೆ 1000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 14 ವರ್ಷಗಳಲ್ಲಿ ಸಿರಿಯಾದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಈ ಸಂಘರ್ಷವು ಅತ್ಯಂತ ಭೀಕರ ಸಂಘರ್ಷ ಎಂದು ಹೇಳಲಾಗಿದೆ. ಲಟಾಕಿಯಾ ನಗರದ ಸುತ್ತಮುತ್ತಲಿನ ದೊಡ್ಡ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರನ್ನು ಕಡಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮೂರು ತಿಂಗಳ ಹಿಂದೆ ಅಸ್ಸಾದ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಬಂಡುಕೋರರು ದೇಶವನ್ನು ವಶಪಡಿಸಿಕೊಂಡಾಗ ಈ ಹಿಂಸಾಚಾರ ಪ್ರಾರಂಭವಾಯಿತು. ಗುರುವಾರ ಕರಾವಳಿ ಪಟ್ಟಣವಾದ ಜಬ್ಲೆಹ್ ಬಳಿ ವ್ಯಕ್ತಿಯೊಬ್ಬನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾಗ ಭದ್ರತಾ ಪಡೆಗಳು ಅಸ್ಸಾದ್ ಬೆಂಬಲಿಗರಿಂದ ಹಠಾತ್ ದಾಳಿ ನಡೆದಿತ್ತು. ಸಿರಿಯನ್ ಸರ್ಕಾರವು ಅಸ್ಸಾದ್ ಬೆಂಬಲಿಗರ ದಾಳಿಯ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಹಿಂಸಾಚಾರಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಿದೆ ಎಂದು ಹೇಳಿದೆ. ಶುಕ್ರವಾರ, ಸುನ್ನಿ ಮುಸ್ಲಿಂ ಬಂದೂಕುಧಾರಿಗಳು ಅಲ್ಪಸಂಖ್ಯಾತ ಅಲಾವೈಟ್ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಾರಂಭಿಸಿದರು. ಇದಾದ ನಂತರ ಎರಡೂ ಕಡೆಯವರ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡಿತು.

ಅಲವೈಟ್ ಸಮುದಾಯದ ಹಳ್ಳಿಗಳು ಮತ್ತು ಪಟ್ಟಣಗಳಿಂದ ಬಂದ ಮಾಹಿತಿಯ ಪ್ರಕಾರ, ಬಂದೂಕುಧಾರಿಗಳು ಅಲವೈಟ್ ಸಮುದಾಯದ ಹೆಚ್ಚಿನ ಪುರುಷರನ್ನು ಬೀದಿಗಳಲ್ಲಿ ಅಥವಾ ಅವರ ಮನೆಗಳ ಬಾಗಿಲುಗಳಲ್ಲಿ ಗುಂಡು ಹಾರಿಸಿದ್ದಾರೆ. ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯದ ಪ್ರಕಾರ, ಇದುವರೆಗೆ ಸಂಘರ್ಷದಲ್ಲಿ 428 ಅಲಾವೈಟ್‌ಗಳು ಸಾವನ್ನಪ್ಪಿದ್ದಾರೆ, ಆದರೆ 120 ಅಸ್ಸಾದ್ ಪರ ಹೋರಾಟಗಾರರು ಮತ್ತು 89 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ಅಲ್ಪ ಮಟ್ಟಿಗೆ ಪರಿಸ್ಥಿತಿ ಸಮತೋಲನದಲ್ಲಿದ್ದು, ಶಾಂತಿ ನೆಲೆಸಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Siriya Conflict: ಎಲ್ಲೆಂದರಲ್ಲಿ ಗುಂಡಿನ ದಾಳಿ, ಬ್ಯಾಂಕ್‌ ಲೂಟಿ, ವಾಹನಗಳೆಲ್ಲಾ ಪುಡಿ ಪುಡಿ; ಸಿರಿಯಾದ ಭೀಕರತೆ ಬಗ್ಗೆ ಈತ ಹೇಳೋದೇನು?

ಡಿಸೆಂಬರ್ 8, 2024 ರಲ್ಲಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಪದಚ್ಯುತರಾದ ಬಳಿಕ, ಸಿರಿಯಾ ಬಂಡುಕೋರರ ಗುಂಪುಗಳು ಮತ್ತು ಕುರ್ದಿಶ್ ನೇತೃತ್ವದ ಪಡೆಗಳ ನಿಯಂತ್ರಣಕ್ಕೆ ಬಂದಿದೆ. ಸಿರಿಯಾದ ಬಂಡುಕೋರ ಗುಂಪುಗಳು ಡಿಸೆಂಬರ್ 7, ಭಾನುವಾರದಂದು ಸಿರಿಯಾದ ರಾಜಧಾನಿ ಡಮಾಸ್ಕಸ್ ಪ್ರವೇಶಿಸಿದವು. ನವೆಂಬರ್‌ನಲ್ಲಿ ತಿಂಗಳು ಅಲೆಪ್ಪೊ, ಹಾಮಾದಂತಹ ಪ್ರಮುಖ ಸಿರಿಯನ್ ನಗರಗಳನ್ನು ವಶಪಡಿಸಿಕೊಳ್ಳುವ ಮೂಲಕ ಆರಂಭಗೊಂಡ ಈ ಬಂಡುಕೋರ ಕಾರ್ಯಾಚರಣೆ, ರಾಜಧಾನಿಯ ವಶಪಡಿಸಿಕೊಳ್ಳುವ ಮೂಲಕ ಬಂಡಾಯ ಮುಕ್ತಾಯಗೊಂಡಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ನಗರವನ್ನು ವಶಪಡಿಸಿಕೊಳ್ಳುವ ಕೆಲ ಗಂಟೆಗಳ ಮುನ್ನ ಅಸ್ಸಾದ್ ದೇಶ ತ್ಯಜಿಸಿದ್ದರು.