ಉಕ್ರೇನ್ ಮೇಲೆ ಮತ್ತೆ ರಷ್ಯಾ ಭೀಕರ ದಾಳಿ; 27 ಮಂದಿ ಸಾವು, 50 ವಸತಿ ಕಟ್ಟಡಗಳಿಗೆ ಹಾನಿ
ಉಕ್ರೇನ್ ರಾಜಧಾನಿ ಕೈವ್ ಸಮೀಪದ ಬುಚಾ ಜಿಲ್ಲೆಯ ಮೇಲೆ ರಷ್ಯಾ ಭೀಕರ ದಾಳಿ ನಡೆಸಿದ್ದು, ಸುಮಾರು 27 ಮಂದಿ ಸಾವನ್ನಪ್ಪಿದ್ದಾರೆ. 50 ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ರಷ್ಯಾ ದಾಳಿಯ ಬಳಿಕ ಮನೆ, ರೆಸ್ಟೋರೆಂಟ್‌ಗಳಿಗೆ ಬೆಂಕಿ ದೊಡ್ಡ ಪ್ರಮಾಣದಲ್ಲಿ ಹರಡಿತ್ತು. ಸ್ಥಳದಿಂದ 381 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಕೈವ್: ಉಕ್ರೇನ್ ಮೇಲೆ ರಷ್ಯಾ ಶುಕ್ರವಾರ ರಾತ್ರಿ ಪೂರ್ತಿ ದಾಳಿ (Russian Strikes Ukraine) ನಡೆಸಿದ್ದು, ಸುಮಾರು 27 ಮಂದಿ ಸಾವನ್ನಪ್ಪಿದ್ದಾರೆ. ಉಕ್ರೇನ್ ರಾಜಧಾನಿ ಕೈವ್ (Kyiv) ಸಮೀಪದ ಬುಚಾ ಜಿಲ್ಲೆಯ (Bucha district) ಮೇಲೆ ರಷ್ಯಾ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ನಾಲ್ವರು ಮಕ್ಕಳು ಸೇರಿದಂತೆ 42 ಮಂದಿ ಗಾಯಗೊಂಡಿದ್ದು, 381 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಟೈಮೂರ್ ಟ್ಕಾಚೆಂಕೊ ಅವರು ಶನಿವಾರ ತಿಳಿಸಿದ್ದಾರೆ. ದಾಳಿಯಾದ ತಕ್ಷಣವೇ ಸ್ಥಳದಲ್ಲಿ ತುರ್ತು ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ. ಕಟ್ಟಡಗಳಿಗೆ ಆಗಿರುವ ಹಾನಿಯನ್ನು ಪರಿಶೀಲನೆಯೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಉಕ್ರೇನ್‌ನ ಕೈವ್ ಸಮೀಪದ ಬುಚಾ ಜಿಲ್ಲೆಯ ಮೇಲೆ ರಷ್ಯಾ ನಡೆಸಿದ ದಾಳಿಯಿಂದ 27 ಮಂದಿ ಸಾವನ್ನಪ್ಪಿದ್ದು, 50 ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ದಾಳಿಯಲ್ಲಿ ಕನಿಷ್ಠ 50 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ಇದರಿಂದ ಹಲವಾರು ಮನೆಗಳು ಬೆಂಕಿಗೆ ಆಹುತಿಯಾಗಿದೆ ಎಂದು ಅವರು ಹೇಳಿದರು.
ಇಂದಿನಿಂದ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಪ್ರವಾಸ: ಪ್ರಧಾನಿ ನರೇಂದ್ರ ಮೋದಿ ಕಾರ್ಯಸೂಚಿಯಲ್ಲಿ ಏನಿದೆ ?
ಬೋರಿಸ್ಪಿಲ್ ಜಿಲ್ಲೆಯ ಮೇಲೆ ನಡೆದಿರುವ ಇನ್ನೊಂದು ಪ್ರತ್ಯೇಕ ದಾಳಿಯಲ್ಲಿ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ರಷ್ಯಾದ ಭಯೋತ್ಪಾದನೆಯ ಮತ್ತೊಂದು ಬಲಿಪಶು ಬಾಲಕ ಎಂದು ಟ್ಕಾಚೆಂಕೊ ತಿಳಿಸಿದ್ದಾರೆ.
The civilian death toll from the Russian Geran-4 jet-drone strike on an ammunition depot in Kyiv Oblast, and it's subsequent secondary detonations, has risen to 27, with 42 others injured.
— AMK Mapping 🇳🇿 (@AMK_Mapping_) August 29, 2026
381 people, including 59 children, have been evacuated from the area. Around 50… pic.twitter.com/6hMgcjrpwU
ರಷ್ಯಾ ದಾಳಿಯ ಬಳಿಕ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ರಕ್ಷಣಾ ಕಾರ್ಯಾಚರಣೆಗಾಗಿ 300ಕ್ಕೂ ಹೆಚ್ಚು ಜನರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಒಡೆಸಾ, ಡ್ನಿಪ್ರೊಪೆಟ್ರೋವ್ಸ್ಕ್, ಸುಮಿ ಮತ್ತು ಜಪೋರಿಝಿಯಾ ಪ್ರದೇಶಗಳಲ್ಲಿ ರಾತ್ರಿ ಹೆಚ್ಚಿನ ದಲಿಗಳಾಗಿವೆ ಎಂದು ಅವರು ಹೇಳಿದರು.
ಕೈವ್ ಸುತ್ತಮುತ್ತ ನಿರಂತರವಾಗಿ ಮೂರು ದಿನಗಳಿಂದ ರಷ್ಯಾ ವಾಯುದಾಳಿಗಳನ್ನು ನಡೆಸುತ್ತಿದೆ. ಮೈಲಾ ಗ್ರಾಮದಲ್ಲಿ ಗೋದಾಮಿನ ಮೇಲೆ ನಡೆದ ದಾಳಿಯ ಬಳಿಕ ಬುಚಾ ಮೇಲೆ ದಾಳಿಯಾಗಿದೆ. ವೃದ್ಧರು, ಅಂಗವಿಕಲರ ಆರೈಕೆ ಗೃಹ ಮತ್ತು ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. 370ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಇನ್ನು ಕೂಡ ಸ್ಥಳಾಂತರಿಸುವ ಕಾರ್ಯ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಕೆಲವು ತಿಂಗಳಿನಿಂದ ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ತೀವ್ರಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಕೈವ್ ಕೂಡ ರಷ್ಯಾದ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದೆ. ಶನಿವಾರ ರಾತ್ರಿವರೆಗೆ 233 ರಷ್ಯಾದ ಮಾನವರಹಿತ ವೈಮಾನಿಕ ವಿಮಾನಗಳನ್ನು ಉಕ್ರೇನ್ ಸೇನೆ ಹೊಡೆದುರುಳಿಸಿದೆ.
ಭಾರತಕ್ಕೆ ಭಾರತವೇ ಸಾಟಿ: ಪ್ರವಾಹ ಪೀಡಿತ ನೇಪಾಳಕ್ಕೆ ತ್ವರಿತ ನೆರವು; 62 ಟನ್ ಪರಿಹಾರ ಸಾಮಗ್ರಿ ರವಾನೆ
ಕಳೆದ 24 ಗಂಟೆಗಳಲ್ಲಿ ಮಾಸ್ಕೋ ಬೆಲ್ಗೊರೊಡ್ ಮತ್ತು ರೋಸ್ಟೊವ್ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಏಳು ಜನರು ಗಾಯಗೊಂಡಿದ್ದಾರೆ ಎಂದು ರೋಸ್ಟೊವ್ ಗವರ್ನರ್ ಯೂರಿ ಸ್ಲುಸರ್ ತಿಳಿಸಿದ್ದಾರೆ.