ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ukraine-Russia: ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ವಾಯುದಾಳಿ; ಪಿಂಚಣಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ 24 ಜನ ಸಾವು

ಉಕ್ರೇನ್ ಡೊನೆಟ್ಸ್ಕ್ ಮೇಲೆ ರಷ್ಯಾ ಗ್ಲೈಡ್ ಬಾಂಬ್ ದಾಳಿ ಮಾಡಿದ್ದು, ಈ ಅವಘಡದಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದು, 19 ಜನರು ಗಾಯಗೊಂಡಿದ್ದಾರೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ಗುಪ್ತವಾಗಿ ರಹಸ್ಯ ಕಾರ್ಯಾಚರಣೆ ನಡೆಸಿರುವುದು ಉಕ್ರೇನ್ ಅನ್ನೇ ಬೆಚ್ಚಿಬೀಳಿಸಿದೆ. ಹಾಗಾದರೆ, ರಷ್ಯಾ ಕಾರ್ಯಾಚರಣೆ ಹೇಗಿತ್ತು? ಅದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಉಕ್ರೇನ್‌ ಮೇಲೆ ರಷ್ಯಾ ಗ್ಲೈಡ್ ಬಾಂಬ್ ದಾಳಿ

ಸಾಂಧರ್ಬಿಕ ಚಿತ್ರ -

Profile Sushmitha Jain Sep 10, 2025 2:16 PM

ಕೀವ್‌: ಉಕ್ರೇನ್‌ನ (Ukraine) ಡೊನೆಟ್ಸ್ಕ್ (Donetsk) ಪ್ರದೇಶದ ಯಾರೋವಾ ಗ್ರಾಮದಲ್ಲಿ ರಷ್ಯಾ (Russia) ಗ್ಲೈಡ್ ಬಾಂಬ್ (Glide Bomb) ದಾಳಿ ನಡೆಸಿದ್ದು, ಕನಿಷ್ಠ 24 ಜನರು ಮೃತಪಟ್ಟಿದ್ದು, 19 ಜನರು ಗಾಯಗೊಂಡಿದ್ದಾರೆ. ಈ ದಾಳಿಯು ಮಂಗಳವಾರ (ಸೆ. 9) ಬೆಳಗ್ಗೆ 11 ಗಂಟೆಗೆ ಪಿಂಚಣಿ ಸಂಗ್ರಹಿಸಲು ಸಾಲಿನಲ್ಲಿ ನಿಂತಿದ್ದ ಜನರ ಮೇಲೆ ನಡೆದಿದೆ. ಈ ಘಟನೆಯಿಂದಾಗಿ ಪೋಲೆಂಡ್‌ನ ಸೈನ್ಯವು ಹೈ ಅಲರ್ಟ್‌ನಲ್ಲಿದೆ.

ಯಾರೋವಾ ಗ್ರಾಮವು ಯುದ್ಧದ ಸ್ಥಳದಿಂದ ಕೇವಲ 10 ಕಿ.ಮೀ. ದೂರದಲ್ಲಿದೆ. ಡೊನೆಟ್ಸ್ಕ್ ಪ್ರಾದೇಶಿಕ ಮುಖ್ಯಸ್ಥ ವಾಡಿಮ್ ಫಿಲಾಶ್ಕಿನ್ ಪ್ರಕಾರ, ಮೃತಪಟ್ಟವರಲ್ಲಿ 23 ಜನರು ವೃದ್ಧರು. ಗ್ರಾಮದ ನಿವಾಸಿ ಹೆನ್ನಾಡಿಯ್ ಟ್ರಶ್ ತಮ್ಮ ಪತ್ನಿಯು ಅತ್ತೆಯ ಪಿಂಚಣಿಗಾಗಿ ಕಾಯುತ್ತಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. “ಈ ದೃಶ್ಯವನ್ನು ವಿವರಿಸಲು ಪದಗಳಿಲ್ಲ” ಎಂದು ಟ್ರಶ್ ಹೇಳಿದ್ದಾರೆ. “ಹಿಂದೆ ದಾಳಿಗಳು ಗ್ರಾಮದ ಹೊರವಲಯದಲ್ಲಿ ನಡೆಯುತ್ತಿದ್ದವು, ಈ ಬಾರಿ ಕೇಂದ್ರದಲ್ಲೇ ಆಯಿತು” ಎಂದು ಅವರು ತಿಳಿಸಿದ್ದಾರೆ.



ರಷ್ಯಾದ “ತೀವ್ರ ವೈಮಾನಿಕ ದಾಳಿಗಳ” ಕಾರಣದಿಂದ ಪೋಲೆಂಡ್‌ನ ಸೈನ್ಯವು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನವರೆಗೆ ಹೈ ಅಲರ್ಟ್‌ನಲ್ಲಿತ್ತು. ಪೋಲಿಷ್ ಸೈನ್ಯದ ಕಾರ್ಯಾಚರಣಾ ಕಮಾಂಡ್, “ನಮ್ಮ ವಾಯುಪ್ರದೇಶದ ಭದ್ರತೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಪೋಲಿಷ್ ಮತ್ತು ಮಿತ್ರರಾಷ್ಟ್ರದ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ರಾಡಾರ್ ಗುಪ್ತಚರ ವ್ಯವಸ್ಥೆಯು ಉನ್ನತ ಎಚ್ಚರಿಕೆಯಲ್ಲಿದೆ” ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಓದಿ: Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಈ ದಾಳಿಯನ್ನು “ಕ್ರೂರ” ಎಂದು ಕರೆದು, ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನವನ್ನು ಹೇರಲು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ. “ವಿಶ್ವವು ಮೌನವಾಗಿರಬಾರದು. ಅಮೆರಿಕ, ಯುರೋಪ್, ಜಿ20ರಿಂದ ಪ್ರತಿಕ್ರಿಯೆ ಬೇಕು” ಎಂದು ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ. ಉಕ್ರೇನ್‌ನ ಆಂತರಿಕ ಸಚಿವಾಲಯದ ಪ್ರಕಾರ, 24 ಜನರು ಮೃತಪಟ್ಟಿದ್ದಾರೆ. ಉಕ್ರೇನ್‌ನ ಒಟ್ಟು 12,000 ನಾಗರಿಕರು ಮೂರು ವರ್ಷದ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಯುಎನ್ ತಿಳಿಸಿದೆ.

ಕೆಲವು ಗ್ಲೈಡ್ ಬಾಂಬ್‌ಗಳ ತೂಕ 1,360 ಕೆಜಿಯವರೆಗಿರುತ್ತದೆ. ಇದು 2022ರಲ್ಲಿ ಮೊದಲು ಬಳಸಿದಾಗಿನ ಆರು ಪಟ್ಟು ಹೆಚ್ಚಾಗಿದೆ. ಯಾರೋವಾದಲ್ಲಿ ಮೊಬೈಲ್ ಪೋಸ್ಟ್ ಆಫೀಸ್‌ನ ವಾಹನವು ದಾಳಿಯಿಂದ ಹಾನಿಗೊಂಡಿದೆ. ಈ ಗ್ರಾಮವು 2022ರಲ್ಲಿ ರಷ್ಯಾದಿಂದ ಆಕ್ರಮಿತವಾಗಿತ್ತು. ಆದರೆ ಉಕ್ರೇನ್‌ನ ಕೌಂಟರ್‌ಆಫೆನ್ಸಿವ್‌ನಿಂದ ಮುಕ್ತವಾಯಿತು.