Fire accident: 5 ಅಂತಸ್ತಿನ ಶಾಪಿಂಗ್ ಮಾಲ್‌ನಲ್ಲಿ ಭಾರಿ ಬೆಂಕಿ ಅವಘಡ-50 ಜನ ಬಲಿ
ಇರಾಕ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 50ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.ಅಲ್ಲದೇ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಗವರ್ನರ್ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಬಾಗ್ದಾದ್: ಪೂರ್ವ ಇರಾಕ್‌ನ ಅಲ್-ಕುಟ್ ನಗರದ ಹೈಪರ್‌ಮಾರ್ಕೆಟ್‌ನಲ್ಲಿ ಭಾರೀ ಅಗ್ನಿ ಅವಘಡ(Fire accident) ಸಂಭವಿಸಿದೆ. ಭೀಕರ ದುರ್ಘಟನೆಯಲ್ಲಿ ಸುಮಾರು50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ಗವರ್ನರ್ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
#BREAKING Fifty people were killed in a massive fire in a hypermarket in al-Kut city in eastern Iraq
— Guy Elster גיא אלסטר (@guyelster) July 17, 2025
pic.twitter.com/3r2d3Gx9Cv
ಅಲ್-ಕುಟ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ಈ ಭಾರೀ ದುರ್ಘಟನೆ ಸಂಭವಿಸಿದ್ದು, ರಾತ್ರಿಯಿಡೀ ಬೆಂಕಿ ಆವರಿಸುತ್ತಿರುವುದನ್ನು ತೋರಿಸುತ್ತವೆ, ಆದರೆ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಇನ್ನು ಈ ಅಗ್ನಿ ಅವಘಡಕ್ಕೆ ಕಾರಣ ಏನೆಂಬುದು ಇದುವರೆಗೆ ತಿಳಿದಿಲ್ಲ. ಇನ್ನು ಕಟ್ಟಡ ಮತ್ತು ಮಾಲ್‌ನ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲಾಗಿದೆ.
ಈ ಸುದ್ದಿಯನ್ನೂ ಓದಿ: Fire Accident: ತಿರುಪತಿಗೆ ತೆರಳುತ್ತಿದ್ದ ಸರಕು ರೈಲಿಗೆ ಬೆಂಕಿ; 22 ಬೋಗಿಗಳಿಗೆ ಹಾನಿ