ಸಿರಿಯಾದ ಮಸೀದಿಯಲ್ಲಿ ಭೀಕರ ಸ್ಫೋಟ; 8 ಮಂದಿ ಬಲಿ
Massive Explosion At Syria: ಸಿರಿಯಾದ ಹೋಮ್ಸ್ ಸಿಟಿಯ ಮಸೀದಿಯಲ್ಲಿ ಶುಕ್ರವಾರ (ಡಿಸೆಂಬರ್ 26) ಭೀಕರ ಸ್ಫೋಟ ನಡೆದಿದ್ದು, ಕನಿಷ್ಠ 8 ಮಂದಿ ಬಲಿಯಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯವಾದ ಅಲವೈಟ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮಸೀದಿ ಸ್ಫೋಟ ಸಂಭವಿಸಿದೆ.
ಸಿರಿಯಾದಲ್ಲಿ ಭೀಕರ ಸ್ಫೋಟ ಸಂಭವಿಸಿದೆ -
ಡಮಾಸ್ಕಸ್, ಡಿ. 26: ಸಿರಿಯಾದ ಹೋಮ್ಸ್ ಸಿಟಿಯ ಮಸೀದಿಯಲ್ಲಿ ಶುಕ್ರವಾರ (ಡಿಸೆಂಬರ್ 26) ಭೀಕರ ಸ್ಫೋಟ ನಡೆದಿದ್ದು, ಕನಿಷ್ಠ 8 ಮಂದಿ ಬಲಿಯಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯವಾದ ಅಲವೈಟ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮಸೀದಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ (Massive Explosion At Syria). ಹೋಮ್ಸ್ ಸಿಟಿಯ ಇಮಾಮ್ ಅಲಿ ಬಿನ್ ಅಬಿ ತಾಲಿಬ್ ಮಸೀದಿಯ ಒಳಗೆ ಈ ಸ್ಫೋಟ ಸಂಭವಿಸಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ. ದೇಶದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಈ ದಾಳಿಯಲ್ಲಿಕನಿಷ್ಠ 18 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಸ್ಫೋಟವನ್ನು ಭಯೋತ್ಪಾದಕ ಕೃತ್ಯ ಎಂದು ಕರೆದಿರುವ ಸಿರಿಯಾದ ಆಂತರಿಕ ಸಚಿವಾಲಯ, ಶುಕ್ರವಾರದ ಪ್ರಾರ್ಥನೆಯ ಸಮಯವನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದೆ.
ಇಮಾಮ್ ಅಲಿ ಬಿನ್ ಅಬಿ ತಾಲಿಬ್ ಮಸೀದಿಯೊಳಗೆ ಸ್ಫೋಟಕ ವಸ್ತುವೊಂದ ಬ್ಲಾಸ್ಟ್ ಆಗಿದೆ ಎಂದು ಮೂಲಗಳು ತಿಳಿಸಿದೆ. ಸದ್ಯ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದಿದ್ದು, ರಕ್ಷಣಾ ಕಾರ್ಯಾಚರಣರ ನಡೆಯುತ್ತಿದೆ. ಗಾಯಾಳುಗಳನ್ನು ಆಸ್ಪತ್ರಗರ ಕೊಂಡೊಯ್ಯಲಾಗುತ್ತಿದೆ. ಅಲವೈಟ್ ಮೂಲದ ದೀರ್ಘಕಾಲದ ನಾಯಕ ಬಶರ್ ಅಲ್-ಅಸ್ಸಾದ್ ಅವರನ್ನು ಕಳೆದ ವರ್ಷ ಬಂಡುಕೋರರು ಪದಚ್ಯುತಗೊಳಿಸಿ, ಸುನ್ನಿ ಮುಸ್ಲಿಂ ನೇತೃತ್ವದ ಸರ್ಕಾರ ಸ್ಥಾಪನೆಯಾದಾಗಿಂದ ಸಿರಿಯಾ ಹಿಂಸಾಚಾರದಿಂದ ನಲುಗುತ್ತಿದೆ.
ಸಿರಿಯಾದಲ್ಲಿ ಸಂಭವಿಸಿದ ಭೀಕರ ಸ್ಫೋಟ:
Which religion allows the bombing of one of Allah's mosques on Friday?
— إبو riah (@_3buR1ah) December 26, 2025
What law can legitimize the killing of worshipers while prostrating just because they are Alewite?
Unfortunately, the death toll has risen to 12 and over 25 injured in suicide bombing attack inside shiite… pic.twitter.com/tpt8PsTiBy
ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ ಮಸೀದಿಯೊಳಗೆ ಸ್ಫೋಟಕ ವಸ್ತುಗಳನ್ನು ಇರಿಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
"ಈ ಹೇಡಿತನದ ಕೃತ್ಯವು ಮಾನವ ಮತ್ತು ನೈತಿಕ ಮೌಲ್ಯಗಳ ಮೇಲಿನ ಸ್ಪಷ್ಟ ದಾಳಿಯಾಗಿದ್ದು, ಸಿರಿಯಾವನ್ನು ಅಸ್ಥಿರಗೊಳಿಸುವ ಮತ್ತು ಸಿರಿಯನ್ ಜನರ ಮನಸ್ಥಿತಿಯನ್ನು ದುರ್ಬಲಗೊಳಿಸುವ ಹತಾಶ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ" ಎಂದು ಸಿರಿಯಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಲ್-ಖೈದಾದಿಂದ ವಿಶ್ವಸಂಸ್ಥೆಯವರೆಗೆ- ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಸಿರಿಯಾ ಅಧ್ಯಕ್ಷನಾಗಿದ್ದು ಹೇಗೆ?
ಸ್ಥಳೀಯ ನಿವಾಸಿಯೊಬ್ಬರು ಮಾಹಿತಿ ನೀಡಿ, "ಜೋರಾದ ಸ್ಫೋಟದ ಶಬ್ದ ಕೇಳಿಬಂತು. ಅದರ ಬೆನ್ನಲೇ ಗೊಂದಲದ ವಾತಾವರಣ ಮೂಡಿತುʼʼ ಎಂದು ಹೇಳಿದ್ದಾರೆ. "ಯಾರೂ ತಮ್ಮ ಮನೆಯಿಂದ ಹೊರಬರುತ್ತಿಲ್ಲ. ಸುತ್ತಮುತ್ತ ಆಂಬ್ಯುಲೆನ್ಸ್ ಸೈರನ್‌ಗಳನ್ನು ಶಬ್ದವೇ ತುಂಬಿಕೊಂಡಿದೆ" ಎಂದು ವಿವರಿಸಿದ್ದಾರೆ. ಸ್ಫೋಟದ ಬಳಿಕ ಮಸೀದಿಯ ಗೋಡೆಯಲ್ಲಿ ರಂಧ್ರ ಕಂಡು ಬಂದಿರುವ ಫೋಟೊ ಹೊರ ಬಿದ್ದಿದೆ. ಮಸೀದಿಯ ಒಂದು ಭಾಗ ಕಪ್ಪು ಹೊಗೆ ಆವರಿಸಿದ್ದು, ಕಾರ್ಪೆಟ್‌ಗಳು ಮತ್ತು ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಘಟನೆಯ ತೀವ್ರತೆಯನ್ನು ಸಾರಿ ಹೇಳುವಂತಿದೆ.
ಜೂನ್‌ನಲ್ಲಿ ಡಮಾಸ್ಕಸ್ ಚರ್ಚ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 25 ಜನರು ಸಾವನ್ನಪ್ಪಿದ್ದರು. ಸಿರಿಯಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಂಡಾಯಗಾರರು ಮತ್ತು ಅಲವೈಟ್ ಅಲ್ಪಸಂಖ್ಯಾತರ ನಡುವೆ ಕಳೆದ ವರ್ಷ ಸಂಘರ್ಷ ನಡೆದಿತ್ತು. ಈ ವೇಳೆ ಕನಿಷ್ಠ 1,300 ಜನರು ಬಲಿಯಾಗಿದ್ದು. ಈ ಪೈಕಿ ಅಲವೈಟ್ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.