ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

30ಕ್ಕೂ ಹೆಚ್ಚು ಇರಾನ್‌ ಹಡಗುಗಳನ್ನು ನಾಶಪಡಿಸಿದ್ದೇವೆ ಎಂದ ಅಮೆರಿಕ

US Says It Has Destroyed: ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕ ಮಿಲಿಟರಿ 30ಕ್ಕೂ ಹೆಚ್ಚು ಇರಾನಿನ ಹಡಗುಗಳನ್ನು ಮುಳುಗಿಸಲಾಗಿದೆ ಎಂದು ಮಧ್ಯಪ್ರಾಚ್ಯದಲ್ಲಿ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿರುವ ಅಮೆರಿಕದ ಉನ್ನತ ಕಮಾಂಡರ್ ಹೇಳಿದ್ದಾರೆ. ಈ ಯುದ್ಧದ ಆರಂಭದಿಂದಲೇ ಇರಾನ್ ನೌಕಾಪಡೆಯ ಮೇಲೆ ತೀವ್ರ ದಾಳಿಗಳು ನಡೆಯುತ್ತಿದ್ದು, ಹಲವು ಹಡಗುಗಳನ್ನು ಈಗಾಗಲೇ ನಾಶಪಡಿಸಲಾಗಿದೆ ಎಂದಿದ್ದಾರೆ.

30ಕ್ಕೂ ಹೆಚ್ಚು ಇರಾನ್‌ ಹಡಗು ಧ್ವಂಸಗೊಳಿಸಿದ ಅಮೆರಿಕ

ಬ್ರಾಡ್ ಕೂಪರ್ (ಸಂಗ್ರಹ ಚಿತ್ರ) -

Priyanka P
Priyanka P Mar 6, 2026 8:15 PM

ಟೆಹರಾನ್, ಮಾ. 6: ಇರಾನ್ ಜತೆಗಿನ ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕ ಮಿಲಿಟರಿ 30ಕ್ಕೂ ಹೆಚ್ಚು ಇರಾನಿನ ಹಡಗುಗಳನ್ನು (Iranian Ships) ಮುಳುಗಿಸಿದೆ ಎಂದು ಮಧ್ಯಪ್ರಾಚ್ಯದಲ್ಲಿ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿರುವ (Middle East conflict) ಯುನೈಟೆಡ್ ಸ್ಟೇಟ್ಸ್‌ನ ಉನ್ನತ ಕಮಾಂಡರ್ ಹೇಳಿದ್ದಾರೆ. ಇತ್ತೀಚಿನ ದಾಳಿಯಲ್ಲಿ ಡ್ರೋನ್‌ಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಒಂದು ದೊಡ್ಡ ಹಡಗಿಗೂ ಅಮೆರಿಕ ಸೇನೆ ದಾಳಿ ನಡೆಸಿದ್ದು, ಅದು ಈಗ ಬೆಂಕಿಗಾಹುತಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಯುದ್ಧ ಆರಂಭದಿಂದಲೇ ಇರಾನ್ ನೌಕಾಪಡೆಯ ಮೇಲೆ ತೀವ್ರ ದಾಳಿಗಳು ನಡೆಯುತ್ತಿದ್ದು, ಹಲವು ಹಡಗುಗಳನ್ನು ಈಗಾಗಲೇ ನಾಶಪಡಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಹೇಳಿದ್ದಾರೆ. ʼʼಅಮೆರಿಕದ ಸೇನೆ ಈಗಾಗಲೇ 30ಕ್ಕೂ ಹೆಚ್ಚು ಇರಾನ್ ಹಡಗುಗಳನ್ನು ಮುಳುಗಿಸಿದೆʼʼ ಎಂದು ಅಡ್ಮಿರಲ್ ಬ್ರಾಡ್ ಕೂಪರ್ ಮಾಹಿತಿ ನೀಡಿದ್ದಾರೆ.

ಶ್ರೀಲಂಕಾ ಬಳಿ ಅಮೆರಿಕ ದಾಳಿ ನಡೆಸಿದ ಇರಾನಿನ ಯುದ್ಧ ನೌಕೆಯ ಸಹಾಯಕ್ಕೆ ತೆರಳಿದ ಭಾರತದ ಹಡಗು

ಯುದ್ಧದ ಮೊದಲ ದಿನಗಳೊಂದಿಗೆ ಹೋಲಿಸಿದರೆ ಈಗ ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಯುದ್ಧದ ಮೊದಲ ದಿನದೊಂದಿಗೆ ಹೋಲಿಸಿದರೆ ಇರಾನ್ ನಡೆಸುತ್ತಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳು ಸುಮಾರು ಶೇ. 90ರಷ್ಟು ಕುಸಿದಿವೆ ಎಂದು ತಿಳಿಸಿದ್ದಾರೆ.

ಈ ಕುಸಿತವು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರದಿಂದ ನಿರಂತರ ದಾಳಿಗಳ ಪರಿಣಾಮವಾಗಿ ಇರಾನ್‌ನ ಮಿಲಿಟರಿ ಮೂಲಸೌಕರ್ಯಕ್ಕೆ ದೊಡ್ಡಮಟ್ಟದ ಹಾನಿಯುಂಟಾಗಿದೆ ಎನ್ನುವುದರ ಸ್ಪಷ್ಟ ಸೂಚನೆ ಎಂದು ಅವರು ಹೇಳಿದ್ದಾರೆ. ಈ ಮಿಲಿಟರಿ ಕಾರ್ಯಾಚರಣೆಯ ವೇಳೆ ಇರಾನ್‌ನಿಂದ ಹೆಚ್ಚುತ್ತಿರುವ ಡ್ರೋನ್ ದಾಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ವಿನ್ಯಾಸಗೊಳಿಸಿದ ಹೊಸ ವ್ಯವಸ್ಥೆಗಳು ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳನ್ನು ಅಮೆರಿಕ ನಿಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ.

ಐಆರ್‌ಐಎಸ್ ದೇನಾ ಮೇಲಿನ ದಾಳಿಗೆ ಅಮೆರಿಕ ಪಶ್ಚಾತಾಪ ಪಡಲಿದೆ: ಇರಾನ್

ಒಂದೆರಡು ವರ್ಷ ಹಿಂದೆ ನಡೆದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ, ಆಗ 50,000 ಡಾಲರ್ ಮೌಲ್ಯದ ಡ್ರೋನ್ ಅನ್ನು ಹೊಡೆದುರುಳಿಸಲು 2 ಮಿಲಿಯನ್ ಡಾಲರ್ ಮೌಲ್ಯದ ಕ್ಷಿಪಣಿಯನ್ನು ಬಳಸಲಾಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ನಾವು 100,000 ಡಾಲರ್ ಮೌಲ್ಯದ ಡ್ರೋನ್‌ ಕೇವಲ ಡಾಲರ್ 10,000 ಮೌಲ್ಯದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡೇ ಹೊಡೆದುರುಳಿಸುತ್ತಿದ್ದೇವೆ ಎಂದು ಕೂಪರ್ ಹೇಳಿದರು.

ಅಮೆರಿಕ ಬಳಸುತ್ತಿರುವ ಪ್ರಮುಖ ವ್ಯವಸ್ಥೆಗಳಲ್ಲಿ LUCAS ಅಟ್ಯಾಕ್ ಡ್ರೋನ್ ಕೂಡ ಒಂದು. ಅಮೆರಿಕದ ಎಂಜಿನಿಯರ್‌ಗಳು ಇರಾನ್‌ನ ಡ್ರೋನ್‌ಗಳನ್ನು ವಶಪಡಿಸಿಕೊಂಡು ಅವುಗಳನ್ನು ರಿವರ್ಸ್ ಎಂಜಿನಿಯರಿಂಗ್ ಮಾಡಿದ ನಂತರ ಈ LUCAS ದಾಳಿ ಡ್ರೋನ್ ಅಭಿವೃದ್ಧಿಪಡಿಸಲಾಗಿದೆ ಎಂದು ಕೂಪರ್ ತಿಳಿಸಿದ್ದಾರೆ.

ಪ್ರಸ್ತುತ ಸಂಘರ್ಷದಲ್ಲಿ ಈ ವ್ಯವಸ್ಥೆಯು ಅನಿವಾರ್ಯ ಎಂದು ಹೇಳಿದರು. ಇರಾನ್ ಮತ್ತು ಅಮೆರಿಕ ನಡುವಿನ ಹೋರಾಟ ಮತ್ತು ಇಸ್ರೇಲ್ ಮಧ್ಯಪ್ರಾಚ್ಯದಾದ್ಯಂತ ವಿಸ್ತರಿಸುತ್ತಿರುವಾಗ ಕೂಪರ್ ಅವರು ಈ ಹೇಳಿಕೆ ನೀಡಿದ್ದಾರೆ.