ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

6ನೇ ಬಾರಿ ವಿವಾಹ! 25 ವರ್ಷದ ಪ್ರಿಯತಮನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 55ರ ಮಹಿಳೆ; ಬರೋಬ್ಬರಿ 68 ಕೋಟಿ ರುಪಾಯಿ ವರದಕ್ಷಿಣೆ

55 ವರ್ಷದ ಮಹಿಳೆಯೊಬ್ಬಳು 25 ವರ್ಷದ ಯುವಕನನ್ನು ಮದುವೆಯಾಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಉದ್ಯಮಿಯಾಗಿರುವ ಮಹಿಳೆಯು, 68 ಕೋಟಿ ರುಪಾಯಿ ವರದಕ್ಷಿಣೆ ನೀಡಿ ವಿವಾಹವಾಗಿದ್ದಾಳೆ. 55 ವರ್ಷದ ಯು ವೆನ್ಹಾಂಗ್, ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಡೇಲಿಯನ್‌ನಲ್ಲಿ ಜನಿಸಿದಳು. ಯುವಕನನ್ನು ಮದುವೆಯಾಗುವ ಮುನ್ನ ಆಕೆ ಅದಾಗಲೇ 5 ಮದುವೆಯಾಗಿದ್ದಳು.

25 ವರ್ಷದ ಯುವಕನನ್ನು ಮದುವೆಯಾದ 55ರ ಮಹಿಳೆ

ಬೀಜಿಂಗ್, ಏ. 4: ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬ ಮಾತನ್ನು ಕೇಳಿರಬಹುದು. ಹಾಗೆಯೇ ಮದುವೆಗೆ ಕೂಡ ಈ ಮಾತು ಅನ್ವಯವಾಗುತ್ತದೆ. ಮದುವೆ ಪ್ರತಿಯೊಬ್ಬನ ಇಚ್ಛೆ. ಇಳಿ ವಯಸ್ಸಿನಲ್ಲೂ ಮದುವೆಯಾಗುವವರೂ ಇದ್ದಾರೆ. ಅದೇ ರೀತಿ ಇದೀಗ 55 ವರ್ಷದ ಮಹಿಳೆಯೊಬ್ಬಳು 25 ವರ್ಷದ ಯುವಕನನ್ನು ವರಿಸಿರುವ ಘಟನೆ ಚೀನಾದಲ್ಲಿ (China) ನಡೆದಿದೆ.

ಉದ್ಯಮಿ ಮಹಿಳೆಯು 68 ಕೋಟಿ ರುಪಾಯಿ ವರದಕ್ಷಿಣೆ ನೀಡಿ ವಿವಾಹವಾಗಿದ್ದಾಳೆ. 55 ವರ್ಷದ ಯು ವೆನ್ಹಾಂಗ್, ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಡೇಲಿಯನ್‌ನಲ್ಲಿ ಜನಿಸಿದಳು. ಆಕೆಯ ತಂದೆ ಮೃತಪಟ್ಟ ನಂತರ, ತಾಯಿ ಮತ್ತು ತಮ್ಮನನ್ನು ಪೋಷಿಸಲು 18ನೇ ವಯಸ್ಸಿನಲ್ಲಿ ಸೌಂದರ್ಯ ವರ್ಧಕ ಉತ್ಪನ್ನಗಳ ಉದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು.

ಮೊದಲಿಗೆ ಹಚ್ಚೆ ಹಾಕುವ ಮೂಲಕ ವೃತ್ತಿ ಜೀವನ ಆರಂಭಿಸಿದ ಬಳಿಕ ತನ್ನದೇ ಆದ ಬ್ಯೂಟಿ ಸಲೂನ್ ಅನ್ನು ಪ್ರಾರಂಭಿಸಿದಳು. 2004ರಲ್ಲಿ ಹಾಂಗ್ ಕಾಂಗ್‌ನಲ್ಲಿ ಯಂಗ್ ಮೆರ್ರಿ ರಿಯಲ್ ಇಂಟರ್‌ನ್ಯಾಷನಲ್ ಗ್ರೂಪ್ ಸ್ಥಾಪಿಸಿದಳು. ಕ್ರಮೇಣ ವೈದ್ಯಕೀಯ ಸೌಂದರ್ಯಶಾಸ್ತ್ರದ ಬೃಹತ್ ಸಾಮ್ರಾಜ್ಯವನ್ನು ನಿರ್ಮಿಸಿದಳು.

ಜನಸಂಖ್ಯೆ ಹೆಚ್ಚಿಸಲು ಚೀನಾ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ

ಯು ಯಶಸ್ಸಿನ ಕಥೆಯ ಜತೆಗೆ ಆಕೆಯ ಪ್ರಣಯ ಜೀವನವೂ ಅಚ್ಚರಿಯಿಂದ ಕೂಡಿದೆ. ಇತ್ತೀಚಿನ ಮದುವೆಗೂ ಮೊದಲು ಆಕೆ ಐದು ವಿವಾಹ ಮಾಡಿಕೊಂಡಿದ್ದಳು. 45ನೇ ವಯಸ್ಸಿನಲ್ಲಿ 25 ವರ್ಷದ ಅಲ್ಬೇನಿಯನ್ ಮಾಡೆಲ್ ರೊಲ್ಯಾಂಡೊ ಲೆಕಾಜ್ ಅವರೊಂದಿಗೆ ಸಂಬಂಧ ಬೆಳೆಸಿದಳು. ಇಬ್ಬರೂ ಒಂದು ದಶಕದ ಕಾಲ ಒಟ್ಟಿಗೆ ಇದ್ದರು. ಮಗುವನ್ನು ಸಹ ಹೊಂದಿದ್ದರು.

2001ರಲ್ಲಿ ಜನಿಸಿದ ಮತ್ತು ಈ ಹಿಂದೆ ತನ್ನ ಕಂಪನಿಗೆ ಮಾಡೆಲ್ ಆಗಿ ಕೆಲಸ ಮಾಡಿದ್ದ ರೆನ್ರೆನ್ ಎಂಬ ಹೆಸರಿನ 25 ವರ್ಷದ ಲಿಯು ಯುಚೆನ್‌ನನ್ನು ಇದೀಗ ಮದುವೆಯಾಗಿದ್ದಾಳೆ. 2025ರಲ್ಲಿ ಪರಿಚಯವಾದ ಇವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಸಂಸ್ಥೆಯ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದ್ದ ಲಿಯುಗೆ ಯು ಜತೆ ಪ್ರೀತಿ ಬೆಳೆದಿದೆ. ಅಂತಿಮವಾಗಿ ಇವರಿಬ್ಬರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಯು ಪ್ರೀತಿಸಲು ಆರಂಭಿಸಿದ ಬಳಿಕ ರೆನ್ರೆನ್‌ಗೆ ರೋಲ್ಸ್ ರಾಯ್ಸ್ ಮತ್ತು ಮರ್ಸಿಡಿಸ್ ಬೆಂಜ್ ಕಾರ್ ಸೇರಿದಂತೆ ದುಬಾರಿ ಉಡುಗೊರೆಗಳನ್ನು ನೀಡಿದ್ದರು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಇಬ್ಬರೂ‌ 2026ರ ಮಾರ್ಚ್‌ನಲ್ಲಿ ವಿವಾಹಿತರಾದರು. ಯು ರೆನ್ರೆನ್‌ಗೆ ವರದಕ್ಷಿಣೆ ರೂಪದಲ್ಲಿ ನಗದು, ಆಸ್ತಿ ಮತ್ತು ಐಷಾರಾಮಿ ಕಾರುಗಳು ಸೇರಿ 50 ಮಿಲಿಯನ್ ಯುವಾನ್ (68 ಕೋಟಿ ರುಪಾಯಿ) ಮೌಲ್ಯದ ಆಸ್ತಿಯನ್ನು ಉಡುಗೊರೆಯಾಗಿ ನೀಡಿದ್ದಾಳೆ.