ಆಮ್ಸ್ಟರ್‌ಡ್ಯಾಮ್: ಬೀದಿನಾಯಿಗಳ (Street Dogs) ಹಾವಳಿಯನ್ನು ತಡೆಗಟ್ಟಲು ಅವುಗಳನ್ನು ಸೆರೆಹಿಡಿದು ಪುನರ್ವಸತಿ ಕಲ್ಪಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ. ಇದು ಪ್ರಾಣಿ ಪ್ರಿಯರಲ್ಲಿ (animal lovers) ಕೋಪವನ್ನು ಹುಟ್ಟುಹಾಕಿದೆ. ಈ ಕ್ರಮವು ಮೂಕ ಜೀವಿಗಳಿಗೆ ಅನ್ಯಾಯವಾಗಿದೆ ಎಂಬುದು ಪ್ರಾಣಿ ಪ್ರಿಯರ ವಾದ. ಆದರೆ, ಕಳೆದ ಎರಡು ಮೂರು ವರ್ಷಗಳಲ್ಲಿ ನಾಯಿ ಕಡಿತದ ಘಟನೆಗಳು ಗಮನಾರ್ಹವಾಗಿ ಹೆಚ್ಚಿದ ಪರಿಣಾಮ, ಸುಪ್ರೀಂ ಕೋರ್ಟ್ ಈ ರೀತಿ ಆದೇಶ ಹೊರಡಿಸಿದೆ. ಈಗ ವಿಷಯ ಏನಂದ್ರೆ ಈ ದೇಶದಲ್ಲಿ ಬೀದಿ ನಾಯಿಗಳೇ ಇಲ್ವಂತೆ. ಅಷ್ಟೇ ಅಲ್ಲ ಅದನ್ನು ರಕ್ಷಿಸಲು ಪೊಲೀಸ್ ಪಡೆಯೂ ಇದೆ. ಯಾವುದು ಆ ದೇಶ ಅಂತೀರಾ? ಮುಂದೆ ಓದಿ.
ನೆದರ್ಲ್ಯಾಂಡ್ಸ್ (Netherlands) ಬೀದಿ ನಾಯಿಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುವ ದೇಶ. ನಾಯಿಗಳನ್ನು ಕೊಲ್ಲುವುದು ಇಲ್ಲಿ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅವುಗಳ ರಕ್ಷಣೆಯನ್ನು ಖಾತ್ರಿಪಡಿಸಲು ಪೊಲೀಸ್ ಪಡೆಯನ್ನೂ ನೇಮಕ ಮಾಡಲಾಗಿದೆ. ನೆದರ್ಲ್ಯಾಂಡ್ಸ್ ದೇಶವು ಬೀದಿ ನಾಯಿಗಳನ್ನು ನಿರ್ವಹಿಸಲು ಸಮಗ್ರ ಕಾರ್ಯತಂತ್ರವನ್ನು ಬಳಸುತ್ತದೆ. ರಕ್ಷಣೆ, ಆರೋಗ್ಯ ಮತ್ತು ಕಾನೂನು ಸುರಕ್ಷತಾ ಕ್ರಮಗಳನ್ನು ಇದು ಕೈಗೊಂಡಿದೆ.
ಬೀದಿ ನಾಯಿಗಳನ್ನು ಹಿಡಿದು ಅದಕ್ಕೆ ಲಸಿಕೆ ಹಾಕಲಾಗುತ್ತದೆ. ನಂತರ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ಅವುಗಳಿಗೆ ಆಹಾರ ಮತ್ತು ಆರೈಕೆ ಮಾಡಲಾಗುತ್ತದೆ. ಈ ವಿಧಾನವು ನಾಯಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಇನ್ನು ನೆದರ್ಲ್ಯಾಂಡ್ಸ್‌ನಲ್ಲಿ ನಾಯಿಗಳನ್ನು ಖರೀದಿಸುವುದರ ಮೇಲೆ ಭಾರಿ ತೆರಿಗೆಯನ್ನು ವಿಧಿಸಲಾಗುತ್ತದೆ. ಇದು ಜನರನ್ನು ಆಶ್ರಯ ತಾಣಗಳಿಂದ ಶ್ವಾನಗಳನ್ನು ದತ್ತು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಹಾಗೆಯೇ, ಶ್ವಾನ ಪೊಲೀಸ್ ಪಡೆಯು ನಾಯಿಗಳ ಮೇಲೆ ಯಾರಾಧರೂ ಅಪರಾಧ ಎಸಗಿದ್ದರೆ ತನಿಖೆ ಮಾಡುತ್ತದೆ.
ಇದನ್ನೂ ಓದಿ: Viral Video: ಬೀದಿ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ; ವಿಡಿಯೋ ವೈರಲ್
ಎಲ್ಲಾ ನಾಯಿಗಳನ್ನು ಜನಿಸಿದ ಏಳು ವಾರಗಳಲ್ಲಿ ಮೈಕ್ರೋಚಿಪ್ ಮಾಡಬೇಕು ಮತ್ತು ಎಂಟು ವಾರಗಳಲ್ಲಿ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ನೋಂದಾಯಿಸಬೇಕು. ಇದು ಕಳೆದುಹೋದ ಅಥವಾ ಕಳ್ಳತನವಾದ ನಾಯಿಗಳನ್ನು ಅವುಗಳ ಮಾಲೀಕರಿಗೆ ಮತ್ತೆ ಹಿಂದಿರುಗಿಸುವಂತೆ ಮಾಡುತ್ತದೆ. ಅಲ್ಲದೆ ಪಶುವೈದ್ಯಕೀಯ ಚಿಕಿತ್ಸಾಯಗಳು 24 ಗಂಟೆಗಳ ಕಾಲವು ಕಾರ್ಯನಿರ್ವಹಿಸುತ್ತದೆ.
ಈ ದೇಶಗಳಲ್ಲಿರುವ ನಿಯಮಗಳು
- ಚೀನಾ: ಕೆಲವು ನಗರಗಳಲ್ಲಿ ಆಕ್ರಮಣಕಾರಿ ಅಥವಾ ಅನಾರೋಗ್ಯ ಪೀಡಿತ ಬೀದಿ ನಾಯಿಗಳನ್ನು ಹಿಡಿದು ದಯಾಮರಣ ಮಾಡಲಾಗುತ್ತವದೆ. ಆದರೂ ಇಲ್ಲಿ ರಕ್ಷಣಾ ಸಂಸ್ಥೆಗಳು ಅಸ್ತಿತ್ವದಲ್ಲಿವೆ ಮತ್ತು ಸಾಕು ನಾಯಿಗಳು ಪರವಾನಗಿ ಮತ್ತು ಲಸಿಕೆ ನಿಯಮಗಳನ್ನು ಪಾಲಿಸಬೇಕು.
- ಅಮೆರಿಕ ಮತ್ತು ಯುರೋಪ್: ಬೀದಿ ನಾಯಿಗಳಿಗೆ ಆಶ್ರಯ ತಾಣ ನೀಡಲಾಗುತ್ತದೆ. ದತ್ತು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ. ಆದರೆ, ಹೆಚ್ಚು ಕಾಲ ಯಾರೂ ತೆಗೆದುಕೊಳ್ಳದಿದ್ದರೆ ಅವುಗಳಿಗೆ ದಯಾಮರಣ ನೀಡಬಹುದು.
- ಟರ್ಕಿ: ಹೆಚ್ಚಾಗಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡಲಾಗುತ್ತದೆ. ಇವುಗಳಿಗೆ ಲಸಿಕೆ ಮತ್ತು ಸಂತಾನಹರಣ ಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಲಾಗುತ್ತದೆ.
- ಆಗ್ನೇಯ ಏಷ್ಯಾ: ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಅನೇಕ ಬೀದಿ ನಾಯಿಗಳಿವೆ. ವಿಷ ಸೇವಿಸಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಅನೇಕ ಸರ್ಕಾರೇತರ ಸಂಸ್ಥೆಗಳು ಶ್ವಾನಗಳ ಆರೈಕೆ ಮಾಡುತ್ತವೆ.
ಇದನ್ನೂ ಓದಿ: Stray Dog Protest: ಬೀದಿ ನಾಯಿ ವಿರುದ್ಧ ಕ್ರಮ; ಪ್ರಾಣಿ ಹಕ್ಕುಗಳ ಹೋರಾಟಗಾರರು-ಪೊಲೀಸರ ನಡುವೆ ಗುದ್ದಾಟ: ಇಲ್ಲಿದೆ ವಿಡಿಯೊ