Afghanistan Vs Pak: ಮುಂದುವರಿದ ಪಾಕ್-ಅಫ್ಘಾನಿಸ್ತಾನ ಸಂಘರ್ಷ; ಪಾಕಿಸ್ತಾನದ 6 ಸೈನಿಕರು ಬಲಿ
Pakistani soldiers killed: ಅಫ್ಘಾನ್‌ನ ತಾಲಿಬಾನ್ ಪಡೆಗಳು ಒಂದೆಡೆ ಪಾಕಿಸ್ತಾನದ ಪಶ್ಚಿಮ ಗಡಿಯಲ್ಲಿ ಸಂಘರ್ಷಕ್ಕೆ ಇಳಿದಿದ್ದರೆ ಇನ್ನೊಂದೆಡೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಉಗ್ರಗಾಮಿಗಳ ದಾಳಿಗಳು ಹೆಚ್ಚಾಗಿದ್ದು, ಇದರಿಂದ ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಈ ನಡುವೆ ಪಾಕಿಸ್ತಾನದ ಒರಾಕ್ ಜೈ ಜಿಲ್ಲೆಯ ಘಿಲ್ಜೊ ಪ್ರದೇಶದ ಮೇಲೆ ತಾಲಿಬಾನ್ ಪಡೆಗಳು ಭೀಕರ ದಾಳಿ ನಡೆಸಿದ್ದು, ಆರು ಮಂದಿ ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ.

-

ಇಸ್ಲಾಮಾಬಾದ್: ಕಾಬೂಲ್( Afghanistan Vs Pak)ಮೇಲೆ ವಾಯುದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ತಾಲಿಬಾನ್ (Taliban) ಪಾಕಿಸ್ತಾನದ ಮೇಲಿನ ದಾಳಿಯನ್ನು (Afghan Taliban strikes) ಮುಂದುವರಿಸಿದೆ. ಪಾಕಿಸ್ತಾನದ ಒರಾಕ್ ಜೈ ಜಿಲ್ಲೆಯ ಘಿಲ್ಜೊ ಪ್ರದೇಶದ ಬಳಿ ಅಫ್ಘಾನ್ ನ (Afghanistan) ತಾಲಿಬಾನ್ ಪಡೆಗಳು ಮಹಾಮೂದ್ ಜೈ ಪೋಸ್ಟ್‌ಗೆ ನುಗ್ಗಿ ಭೀಕರ ಸಂಘರ್ಷ ನಡೆಸಿದ್ದು, ಸುಮಾರು ಆರು ಮಂದಿ ಪಾಕಿಸ್ತಾನಿ ಸೈನಿಕರು (Pakistan’s security forces) ಸಾವನ್ನಪ್ಪಿದ್ದಾರೆ. ಈ ದಾಳಿಯ ವೇಳೆ ಚಮನ್-ಸ್ಪಿನ್ ಬೋಲ್ಡಕ್ ಗಡಿಯಲ್ಲಿ ಪಾಕಿಸ್ತಾನದ ಹಲವು ಕೇಂದ್ರ ಸ್ಥಾನಗಳು, ಸಂವಹನ ವ್ಯವಸ್ಥೆಗಳಿಗೆ ಅಪಾರ ಹಾನಿಯಾಗಿವೆ ಎನ್ನಲಾಗಿದೆ.
ಒಂದೆಡೆ ಅಫ್ಘಾನ್ ನ ತಾಲಿಬಾನ್ ಪಡೆಗಳು ಪಾಕಿಸ್ತಾನದ ಪಶ್ಚಿಮ ಗಡಿಯಲ್ಲಿ ಸಂಘರ್ಷಕ್ಕೆ ಇಳಿದಿದ್ದರೆ ಇನ್ನೊಂದೆಡೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಉಗ್ರಗಾಮಿಗಳ ದಾಳಿಗಳು ಹೆಚ್ಚಾಗಿದ್ದು, ಇದರಿಂದ ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ.
ಬಲೂಚಿಸ್ತಾನದ ಚಮನ್ ಮತ್ತು ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ನಡುವಿನ ಪ್ರಮುಖ ಕ್ರಾಸಿಂಗ್ ಪಾಯಿಂಟ್ ಆಗಿರುವ ಫ್ರೆಂಡ್‌ಶಿಪ್ ಗೇಟ್ ಬಳಿ ನಿರಂತರ ಶೆಲ್ ದಾಳಿಯಿಂದ ಅಪಾರ ಹಾನಿಯಾಗಿವೆ. ಈ ವೇಳೆ ತನ್ನ ಮನೆಗೆ ಗುಂಡಿನ ದಾಳಿಯಾಗಿವೆ ಎಂದು ಪಾಕಿಸ್ತಾನದ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ಇದು ಇಲ್ಲಿ ಜನಜೀವನ ಅಪಾಯದಲ್ಲಿದೆ ಎಂಬುದನ್ನು ತೋರಿಸಿದೆ.
ಪಾಕಿಸ್ತಾನದ ಸೈನಿಕರು ಬುಡಕಟ್ಟು ಪ್ರದೇಶಗಳಲ್ಲಿ ಗೆರಿಲ್ಲಾ ಶೈಲಿಯ ಟಿಟಿಪಿ ದಾಳಿಗಳು, ಗಡಿಯುದ್ದಕ್ಕೂ ಅಫ್ಘಾನ್ ತಾಲಿಬಾನ್ ದಾಳಿಗಳಿಂದ ತೀವ್ರ ಒತ್ತಡವನ್ನು ಅನುಭವಿಸುತ್ತಿದೆ. ಅಲ್ಲದೇ ಎರಡು ಕಡೆಗಳಲ್ಲೂ ಅಪಾರ ಸಾವುನೋವುಗಳು ಉಂಟಾಗುತ್ತಿವೆ ಎನ್ನಲಾಗಿದೆ. ಖೈಬರ್ ಪಖ್ತುನ್ ಖ್ವದಲ್ಲಿ ಟಿಟಿಪಿ ದಾಳಿಗಳನ್ನು ತೀವ್ರಗೊಳಿಸಿದೆ. ಇನ್ನೊಂದೆಡೆ ಅಫ್ಘಾನ್ ತಾಲಿಬಾನ್ ಘಟಕಗಳು ಪಾಕಿಸ್ತಾನಿ ಚೆಕ್‌ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡಿದ್ದು, ಹಲವಾರು ಪಾಕಿಸ್ತಾನಿ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ತಾಲಿಬಾನ್ ಕಾರ್ಯಾಚರಣೆಗಳ ಪ್ರಮಾಣ ಮತ್ತು ಸಮಯವನ್ನು ನಿಖರವಾಗಿ ಗುರುತಿಸುವಲ್ಲಿ ವಿಫಲವಾಗಿರುವುದಾಗಿ ಹೇಳಿದ್ದಾರೆ.
ಅಫ್ಘಾನಿಸ್ತಾನದ ಮೇಲಿನ ದಾಳಿಯಲ್ಲಿ ನಾಲ್ವರು ಸಾವು
ಗಡಿ ಘರ್ಷಣೆಯ ನಡುವೆಯೇ ಪಾಕಿಸ್ತಾನ ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಕ್ ಮೇಲೆ ವಾಯುದಾಳಿ ನಡೆಸಿದ್ದು, ಇದರಿಂದ ಸುಮಾರು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನವು ಚಮನ್ ಗಡಿ ಕ್ರಾಸಿಂಗ್ ಬಳಿಯ ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಕ್ ನಗರದಲ್ಲಿ ವೈಮಾನಿಕ ದಾಳಿ ನಡೆಸಿತು. ಈ ವೇಳೆ ಹಲವಾರು ತಾಲಿಬಾನ್ ಪೋಸ್ಟ್‌ಗಳು ನಾಶವಾಗಿವೆ.
ಅಫ್ಘಾನಿಸ್ತಾನದ ಸ್ಪಿನ್ ಬೋಲ್ಡಕ್ ನಗರದ ಮೇಲೆ ಬುಧವಾರ ಪಾಕಿಸ್ತಾನ ವಾಯುದಾಳಿ ನಡೆಸಿತು. ಈ ವೇಳೆ ಚಮನ್ ಗಡಿ ಕ್ರಾಸಿಂಗ್ ಬಳಿಯಲ್ಲಿರುವ ಮೂರು ಅಫ್ಘಾನ್ ತಾಲಿಬಾನ್ ಪೋಸ್ಟ್‌ಗಳ ಮೇಲೆ ದಾಳಿ ಮಾಡಲಾಗಿದೆ. ಡ್ರೋನ್ ಮತ್ತು ವೈಮಾನಿಕ ದಾಳಿಗಳನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ 10 ನಾಗರಿಕರನ್ನು ಚಮನ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ದೇಶಗಳ ನಡುವಿನ ಸಂಘರ್ಷದಲ್ಲಿ ನೂರಾರು ಜನರು ಸಿಲುಕಿಕೊಂಡಿದ್ದಾರೆ. ಅಕ್ಟೋಬರ್ 11ರಂದು ರಾತ್ರಿ ಅಫ್ಘಾನ್ ಪಡೆಗಳು ಪಾಕಿಸ್ತಾನದ ಹಲವಾರು ಮಿಲಿಟರಿ ಠಾಣೆಗಳ ಮೇಲೆ ದಾಳಿ ನಡೆಸಿದ ಮೇಲೆ ಸಂಘರ್ಷ ಆರಂಭವಾಗಿತ್ತು. ಆಫ್ಘನ್ ಭೂಪ್ರದೇಶ ಮತ್ತು ವಾಯುಪ್ರದೇಶದ ಮೂಲಕ ನಡೆಸಿದ ದಾಳಿಯಲ್ಲಿ 58 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿದ್ದರೆ, ತಾವು 23 ಸೈನಿಕರನ್ನು ಕಳೆದುಕೊಂಡಿದ್ದು, 200ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ತಿಳಿಸಿದೆ.
ಇದನ್ನೂ ಓದಿ: Viral Video: ಡೆಲ್ಲಿ ಜನರ ಚಹಾ ಪ್ರೀತಿಗೆ ಆಸ್ಟ್ರೇಲಿಯನ್ ಕಟೆಂಟ್ ಕ್ರಿಯೇಟರ್ ಫುಲ್ ಫಿದಾ! ಫನ್ನಿ ಆಗಿದೆ ಈ ವಿಡಿಯೊ
ಮುಚ್ಚಿದ ಗಡಿ
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ಗಡಿಗಳನ್ನು ಸೋಮವಾರ ಮುಚ್ಚಲಾಗಿದೆ ಎಂದು ಗಡಿ ಪೊಲೀಸ್ ವಕ್ತಾರ ಅಬಿದುಲ್ಲಾ ಉಕಾಬ್ ಹೇಳಿದ್ದಾರೆ. ಅಲ್ಲಿ ಸಿಲುಕಿಕೊಂಡಿದ್ದ ಸುಮಾರು 1,500 ಅಫ್ಘಾನ್ ಪ್ರಜೆಗಳಿಗೆ ಕಾಲ್ನಡಿಗೆಯಲ್ಲಿ ತೆರಳಲು ಅಧಿಕಾರಿಗಳು ಅವಕಾಶ ನೀಡಿದ್ದರು ಎನ್ನಲಾಗಿದೆ.