ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hamas hostages: ಹಮಾಸ್ ಸೆರೆಯಲ್ಲಿ ಜೀವಂತವಾಗಿದ್ದಾನೆ ಎಂದುಕೊಂಡಿದ್ದ ನೇಪಾಳ ವಿದ್ಯಾರ್ಥಿ ಸಾವು

ಇಸ್ರೇಲ್‌-ಹಮಾಸ್‌ ಸಂಘರ್ಷಕ್ಕೆ ಅಂತ್ಯ ಹಾಡಲಾಗಿದೆ. ಎರಡೂ ಕಡೆಗಳಲ್ಲಿ ಬಂಧಿಗಳಾಗಿವವರನ್ನು ಹಸ್ತಾಂತರಿಸಲಾಗುತ್ತಿದೆ. ಈ ಮಧ್ಯೆ ಹಮಾಸ್‌ನ ಒತ್ತೆಯಾಳುವಾಗಿದ್ದ ನೇಪಾಳದ ವಿದ್ಯಾರ್ಥಿ ಬಿಪಿನ್ ಜೋಶಿ ಮೃತಪಟ್ಟಿದ್ದಾನೆ ಎಂದು ದೃಢಪಡಿಸಲಾಗಿದೆ. ಈತ ಜೀವಂತವಾಗಿದ್ದಾನೆ ಎಂದೇ ನಂಬಲಾಗಿತ್ತು. ಆದರೆ ಇದೀಗ ಹಮಾಸ್ ತನ್ನಲ್ಲಿ ಇನ್ನು ಜೀವಂತವಾಗಿರುವ ಯಾವುದೇ ಒತ್ತೆಯಾಳುಗಳಿಲ್ಲ ಎಂದು ಹೇಳಿದ ಬಳಿಕ ಆತ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಲಾಗಿದೆ.

ಹಮಾಸ್ ಸೆರೆಯಲ್ಲಿದ್ದ ನೇಪಾಳದ ವಿದ್ಯಾರ್ಥಿ ಸಾವು

-

ಗಾಜಾ: ಹಮಾಸ್‌ನ ಒತ್ತೆಯಾಳುವಾಗಿದ್ದ ನೇಪಾಳದ ವಿದ್ಯಾರ್ಥಿ (Nepalese Student) ಸಾವನ್ನಪ್ಪಿರುವುದಾಗಿ ಎರಡು ವರ್ಷಗಳ ಬಳಿಕ ತಿಳಿದು ಬಂದಿದೆ. ನೇಪಾಳದ ವಿದ್ಯಾರ್ಥಿ ಬಿಪಿನ್ ಜೋಶಿ (Nepalese Student Bipin Joshi) ಜೀವಂತವಾಗಿದ್ದಾನೆ ಎಂದೇ ನಂಬಲಾಗಿತ್ತು. ಆದರೆ ಹಮಾಸ್ (Hamas) ತನ್ನಲ್ಲಿ ಯಾರೂ ಇನ್ನು ಜೀವಂತ ಒತ್ತೆಯಾಳುಗಳಿಲ್ಲ (Israeli hostages) ಎಂದು ಘೋಷಿಸಿದ ಅನಂತರ ಆತ ಸಾವನ್ನಪ್ಪಿರುವುದು ದೃಢಪಟ್ಟಿದೆ. ಹಮಾಸ್ ದಾಳಿಗೆ ಕೇವಲ ಮೂರು ವಾರಗಳ ಮೊದಲು ಅಂದರೆ 2023ರ ಅಕ್ಟೋಬರ್ 7ರಂದು ಇಸ್ರೇಲ್‌ಗೆ ಆಗಮಿಸಿದ 23 ವರ್ಷದ ನೇಪಾಳದ ಕೃಷಿ ವಿದ್ಯಾರ್ಥಿ (Nepalese agriculture student) ಬಿಪಿನ್ ಜೋಶಿ ಅಲ್ಲಿ ಒತ್ತೆಯಾಳುವಾಗಿ ಸೆರೆಯಾಗಿದ್ದನು.

ಆತ ಜೀವಂತವಾಗಿದ್ದಾನೆ ಎಂದೇ ನಂಬಲಾಗಿತ್ತು. ಆದರೆ ಸುಮಾರು ಎರಡು ವರ್ಷಗಳ ಅನಂತರ ಸೋಮವಾರ ಹಮಾಸ್ ತನ್ನಲ್ಲಿ ಇನ್ನು ಯಾವುದೇ ಜೀವಂತ ಒತ್ತೆಯಾಳುಗಳಿಲ್ಲ ಎಂದು ಘೋಷಿಸಿದಾಗ ಜೋಶಿ ಮೃತಪಟ್ಟಿರುವುದನ್ನು ದೃಢಪಡಿಸಲಾಗಿದೆ.

ಆ ದಿನ ಏನಾಗಿತ್ತು ಎಂಬುದರ ಕುರಿತು ಬದುಕುಳಿದ ಏಕೈಕ ನೇಪಾಳಿ ಪ್ರಜೆ ಹಿಮಾಂಚಲ್ ಕಟ್ಟೆಲ್ ಹೇಳುವುದು ಹೀಗೆ...: ಗಾಜಾ ಗಡಿಯ ಸಮೀಪವಿರುವ ಇಸ್ರೇಲ್‌ನ ಕಿಬ್ಬುಟ್ಜ್ ಅಲುಮಿಮ್‌ನಲ್ಲಿ ಸುಧಾರಿತ ಕೃಷಿ ತಂತ್ರಗಳನ್ನು ಕಲಿಯುವ ಕನಸಿನೊಂದಿಗೆ ಜೋಶಿ ಇಸ್ರೇಲ್‌ಗೆ ಬಂದಿದ್ದ. ಇಲ್ಲಿ 16 ನೇಪಾಳದ ವಿದ್ಯಾರ್ಥಿಗಳು ಕೂಡ ಇದ್ದರು. ಆದರೆ ತಾವು ಗಡಿ ರೇಖೆಯ ಅತ್ಯಂತ ಸಮೀಪವಿದ್ದೇವೆ ಎಂಬುದು ಅವರಿಗೆ ತಿಳಿದಿರಲಿಲ್ಲ.

ಇಸ್ರೇಲ್‌ನ ಕಿಬ್ಬುಟ್ಜ್‌ಗೆ ಹಮಾಸ್ ಬಂದೂಕುಧಾರಿಗಳು ದಾಳಿ ಮಾಡಿ ಹತ್ತು ಮಂದಿಯನ್ನು ಕೊಂದು ಹಾಕಿದರು. ಉಗ್ರಗಾಮಿಗಳು ಒಳಗೆ ಗ್ರೆನೇಡ್ ಎಸೆದರು. ಆದರೆ ಬಿಪಿನ್ ಅದನ್ನು ಹಿಡಿದು ಅದು ಸ್ಫೋಟಗೊಳ್ಳುವ ಮೊದಲು ಬೇರೆಡೆಗೆ ಎಸೆದ. ಇದರಿಂದಾಗಿ ನಮ್ಮ ಜೀವ ಉಳಿಯಿತು. ದಾಳಿಯಲ್ಲಿ ಗಾಯಗೊಂಡ ಜೋಶಿ ಮತ್ತು ಇಬ್ಬರು ಥಾಯ್ ಕಾರ್ಮಿಕರು ಹಮಾಸ್ ಉಗ್ರರು ಸೆರೆ ಹಿಡಿದರು ಎಂದು ಕಟ್ಟೆಲ್ ತಿಳಿಸಿದ್ದಾರೆ.



ಜೋಶಿಯ ಚಿತ್ರವು ಕಿಬ್ಬುಟ್ಜ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲಿ ಆತನನ್ನು ಸೆರೆಹಿಡಿದವರು ಗಾಜಾ ಕಡೆಗೆ ಕರೆದೊಯ್ಯುತ್ತಿರುವುದು ಕಂಡು ಬಂದಿದೆ. ಇದಾದ ಹಲವು ತಿಂಗಳ ಕಾಲ ಜೋಶಿ ಕುಟುಂಬವು ಸಹಾಯಕ್ಕಾಗಿ ಅಧಿಕಾರಿಗಳನ್ನು ಭೇಟಿ ಮಾಡಲು ಪ್ರತಿ ದಿನ ಕಠ್ಮಂಡುವಿಗೆ ತೆರಳುತ್ತಿತ್ತು. ಬಳಿಕ ಕುಟುಂಬವು ಇಸ್ರೇಲ್‌ಗೆ ಪ್ರಯಾಣಿಸಿ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಭೇಟಿ ಮಾಡಿತು. ಟೆಲ್ ಅವೀವ್‌ನ ಹೋಸ್ಟೇಜ್ ಸ್ಕ್ವೇರ್‌ನಲ್ಲಿರುವ ಇತರ ಇಸ್ರೇಲಿ ಬಂಧಿತರ ಭಾವಚಿತ್ರಗಳ ಪಕ್ಕದಲ್ಲಿ ಬಿಪಿನ್ ಅವರ ಛಾಯಾಚಿತ್ರ ಕಂಡು ಬೆಚ್ಚಿ ಬಿದ್ದಿತ್ತು. ಆದರೂ ಜೋಶಿ ಮರಳಿ ಬರುವ ನಿರೀಕ್ಷೆಗಳಿತ್ತು.

ಇದನ್ನೂ ಓದಿ: Viral News: 65 ವರ್ಷಗಳಲ್ಲಿ ಕೇವಲ ಇಬ್ಬರು ಅಧ್ಯಕ್ಷರನ್ನಷ್ಟೇ ಕಂಡಿದೆ ಈ ದೇಶ- ಯಾವುದು ಆ ರಾಷ್ಟ್ರ? ಮುಂದೆ ಓದಿ

2023ರ ನವೆಂಬರ್‌ನಲ್ಲಿ ಜೋಶಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿ ಕೊನೆಯ ವಿಡಿಯೊಗಳು ಸಿಕ್ಕಿದವು. ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ಹಮಾಸ್ ಎಲ್ಲ ಬದುಕುಳಿದ ಸೆರೆಯಾಳುಗಳನ್ನು ಮುಕ್ತಗೊಳಿಸಲು ಉದ್ದೇಶಿಸಲಾದ ಹೊಸ ಕದನ ವಿರಾಮ ಒಪ್ಪಂದದ ಅಡಿಯಲ್ಲಿ 20 ಒತ್ತೆಯಾಳುಗಳನ್ನು ಸೋಮವಾರ ಬಿಡುಗಡೆ ಮಾಡಿದ್ದು ಇದರಲ್ಲಿ ಜೋಶಿ ಇರಲಿಲ್ಲ. ಆದರೆ ಆತನ ದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸ್ರೇಲ್ ದೃಢಪಡಿಸಿತು. ಗಾಜಾದಲ್ಲಿ ಜೀವಂತವಾಗಿದ್ದಾನೆಂದು ನಂಬಲಾದ ಏಕೈಕ ಇಸ್ರೇಲಿ ಅಲ್ಲದ ಒತ್ತೆಯಾಳು ಜೋಶಿ ಆಗಿದ್ದ. ಆದರೆ ಇದೀಗ ಆ ನಿರೀಕ್ಷೆಯೂ ಕಮರಿ ಹೋಗಿದೆ.