Baba Vanga's Prediction: ಏಲಿಯನ್‌ಗಳು ಯಾವ ದೇಶಕ್ಕೆ ಮೊಟ್ಟ ಮೊದಲ ಸಂದೇಶ ಕಳುಹಿಸಲಿದ್ದಾರೆ ಗೊತ್ತಾ? ಬಾಬಾ ವಂಗಾ ಭವಿಷ್ಯವಾಣಿ ಏನು?
Baba Vanga's Prediction: ಬಾಬಾ ವಂಗಾ ಅವರ ಪ್ರಕಾರ, ಏಲಿಯನ್‌ಗಳು 2125 ರಲ್ಲಿ ಹಂಗೇರಿಗೆ ತಮ್ಮ ಮೊತ್ತ ಮೊದಲ ಸಾಂಕೇತಿಕ ಸಂದೇಶಗಳನ್ನು ಕಳುಹಿಸಲಿದ್ದಾರೆ. ಇದಾದ ಬಳಿಕ, ಏಲಿಯನ್‌ಗಳೊಂದಿಗಿನ ಮೊದಲ ನೇರ ಸಂಪರ್ಕವು ಅಲ್ಲಿಯೇ ಸಂಭವಿಸಲಿದೆ. ಈ ವರ್ಷದಿಂದ ನಿಖರವಾಗಿ 100 ವರ್ಷಗಳ ನಂತರ, ಅಂದರೆ 2125 ರಲ್ಲಿ, ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಇಳಿಯಲು ಪ್ರಯತ್ನಿಸಲಿದ್ದು, ಹಂಗೇರಿಯನ್ನು ತಮ್ಮ ತಾಣವಾಗಿ ಆರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ಬಾಬಾ ವಂಗಾ

ತನ್ನ ಅದ್ಭುತ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾದ ಬಾಬಾ ವಂಗಾ(Baba Vanga), ಒಂದು ನಿರ್ದಿಷ್ಟ ಭವಿಷ್ಯವಾಣಿಯಿಂದಾಗಿ ಪ್ರಸ್ತುತ ಬಿಸಿ ಬಿಸಿ ಚರ್ಚೆಯ ವಿಷಯವಾಗಿದ್ದಾರೆ. ಭೂಮಿಯ ಮೇಲಿನ ನಿರ್ದಿಷ್ಟ ಸ್ಥಳದ ಬಗ್ಗೆ ಅವರು ಭವಿಷ್ಯ ನುಡಿದಿದ್ದು, ಈ ಭವಿಷ್ಯವಾಣಿಯು ಸದ್ಯಕ್ಕೆ ಪರ-ವಿರೋಧ ವಾದಗಳನ್ನು ಎದುರಿಸುತ್ತಿದೆ. ಅನ್ಯಗ್ರಹ ಜೀವಿಗಳು (ಏಲಿಯನ್) ಭೂಮಿಯನ್ನು ಯಾವಾಗ ಸಂಪರ್ಕಿಸುತ್ತವೆ? ಅವು ಸಂಪರ್ಕಿಸುವ ಮೊದಲ ದೇಶ ಯಾವುದು? ಎಂಬ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ(Baba Vanga's Prediction) ನುಡಿದಿದ್ದಾರೆ. ಈ ಭವಿಷ್ಯವಾಣಿ(Prediction) ಸರಿಯಲ್ಲ ಎಂಬುದು ಕೆಲವರ ವಾದವಾದರೆ, ಇನ್ನು ಕೆಲವರು ಬಾಬಾ ವಂಗಾ ಭವಿಷ್ಯವಾಣಿ ಸುಳ್ಳಾಗಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಬಾಬಾ ವಂಗಾ ಅವರ ಪ್ರಕಾರ, ಏಲಿಯನ್‌ಗಳು 2125 ರಲ್ಲಿ ಹಂಗೇರಿಗೆ ತಮ್ಮ ಮೊತ್ತ ಮೊದಲ ಸಾಂಕೇತಿಕ ಸಂದೇಶಗಳನ್ನು ಕಳುಹಿಸಲಿದ್ದಾರೆ. ಇದಾದ ಬಳಿಕ, ಏಲಿಯನ್‌ಗಳೊಂದಿಗಿನ ಮೊದಲ ನೇರ ಸಂಪರ್ಕವು ಅಲ್ಲಿಯೇ ಸಂಭವಿಸಲಿದೆ. ಈ ವರ್ಷದಿಂದ ನಿಖರವಾಗಿ 100 ವರ್ಷಗಳ ನಂತರ, ಅಂದರೆ 2125 ರಲ್ಲಿ, ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಇಳಿಯಲು ಪ್ರಯತ್ನಿಸಲಿದ್ದು, ಹಂಗೇರಿಯನ್ನು ತಮ್ಮ ತಾಣವಾಗಿ ಆರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ಬಾಬಾ ವಂಗಾ ಅವರ ಭವಿಷ್ಯವಾಣಿಗಳಿಗೆ ವಿರೋಧ:
ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಕೇಳಲು ರೋಮಾಂಚಕವಾಗಿ ಇರುತ್ತವೆಯಾದರೂ, ಅವುಗಳನ್ನು ಬೆಂಬಲಿಸುವ ವೈಜ್ಞಾನಿಕ ಸಾಕ್ಷ್ಯಾಧಾರಗಳ ಕೊರತೆ ಎಂದಿಗೂ ಕಾಡುತ್ತಲೇ ಇರುತ್ತದೆ. ಹೀಗಾಗಿ, ವಿಜ್ಞಾನವನ್ನು ತರ್ಕದ ಕೇಂದ್ರವಾಗಿ ಗುರುತಿಸುವ ಸಮುದಾಯ, ಬಾಬಾ ವಂಗಾ ಅವರ ಭವಿಷ್ಯವಾಣಿಗಳಿಗೆ ಸೊಪ್ಪು ಹಾಕುವುದಿಲ್ಲ. ಇದನ್ನು ಕೇವಲ ಕಪೋಲಕಲ್ಪಿತ ಊಹೆ ಎಂದು ಅಲ್ಲಗಳೆಯುತ್ತದೆ.
ಈಗಾಗಲೇ ಭೂಮಿಯನ್ನು ಮೀರಿ ಮುಂದುವರಿದ ನಾಗರಿಕತೆಗಳು ಇವೆಯೋ ಎಂದು ಕಂಡುಹಿಡಿಯುವ ಪ್ರಯತ್ನಗಳು ನಡೆಯುತ್ತಿದ್ದು, ಬಾಹ್ಯಾಕಾಶದಲ್ಲಿ ಸ್ವೀಕರಿಸಬಹುದಾಗ ಅಸಾಮಾನ್ಯ ಸಂಕೇತಗಳ ಕುರಿತು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ಪ್ರಯತ್ನಗಳು ಅಂತಹ ಬೇರೆ ಗ್ರಹಗಳ ನಾಗರಿಕತೆಯ ಉಪಸ್ಥಿತಿಯನ್ನು ಸೂಚಿಸಬಹುದು.
Viral Video: ಮಾಜಿ ಕಾರ್ಪೊರೇಟರ್- ಮಹಿಳೆ ನಡುವೆ ಮಾರಾಮಾರಿ; ಅಷ್ಟಕ್ಕೂ ನಡೆದಿದ್ದೇನು? ವಿಡಿಯೊ ನೋಡಿ
ಇತ್ತೀಚಿನ ಆವಿಷ್ಕಾರಗಳು:
ಉದಾಹರಣೆಗೆ, 1,600 ಜ್ಯೋತಿರ್ವರ್ಷ ದೂರದಲ್ಲಿರುವ ಇತ್ತೀಚೆಗೆ ಉರ್ಸಾ ಮೇಜರ್ ನಕ್ಷತ್ರಪುಂಜದಿಂದ ವಿಚಿತ್ರ ರೇಡಿಯೋ ಸಂಕೇತಗಳು ಹುಟ್ಟುತ್ತಿರುವುದು ಪತ್ತೆಯಾಗಿದೆ. ಡಾ. ಐರಿಸ್ ಡಿ ರುಯಿಟರ್ ಕಂಡುಹಿಡಿದ ಈ ಸಂಕೇತಗಳು, ಗುಪ್ತ ಬಿಳಿ ಕುಬ್ಜ ನಕ್ಷತ್ರ ಮತ್ತು ಕೆಂಪು ಕುಬ್ಜ ನಕ್ಷತ್ರದ ನಡುವಿನ ಪರಸ್ಪರ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತವೆ. ಇದು ನಕ್ಷತ್ರಿಕ ಕಾಂತೀಯ ಕ್ಷೇತ್ರ ಮತ್ತು ಕಾಸ್ಮಿಕ್ ರೇಡಿಯೋ ಅಲೆಗಳ ಹೊರಸೂಸುವಿಕೆಯನ್ನು ಒಳಗೊಂಡಿದೆ.
ಬಾಹ್ಯಾಕಾಶ ಅನ್ವೇಷನೆಯ ವೈಜ್ಞಾನಿಕ ಪ್ರಯತ್ನಗಳು ಮುಂದುವರೆದಿದ್ದರೂ, 2125ರಲ್ಲಿ ಹಂಗೇರಿಯ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವಾಣಿಯು ಕೇವಲ ಊಹೆಯಾಗಿಯೇ ಉಳಿದಿದೆ. ಆ ವರ್ಷ ಹಂಗೇರಿ ಬಾಹ್ಯಾಕಾಶದಿಂದ ಸಂಕೇತಗಳನ್ನು ಸ್ವೀಕರಿಸುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಪ್ರಸ್ತುತ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಾಗಿ, ಈ ಭವಿಷ್ಯವಾಣಿಯ ಸತ್ಯಾಸತ್ಯತೆ ಎಷ್ಟು ಎಂಬುದನ್ನು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ.