ಜೆರುಸಲೇಂ, ಅ. 2: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೋಗುತ್ತಿದ್ದ ಫ್ಲೈದುಬೈ ವಿಮಾನದೊಳಗೆ (Flydubai Incident) ಸಹ-ಪೈಲಟ್ ರೂಪದಲ್ಲಿ ನುಸುಳಿದ್ದ ಒಮಾನ್ ಪ್ರಜೆ 9/11 ಮಾದರಿ ದಾಳಿ ನಡೆಸಲು ಉದ್ದೇಶಿಸಿ ವಿಫಲನಾಗಿದ್ದಾನೆ. ಭಾರತದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಅವರ ಸಾಹಸದಿಂದ ಸಂಭವಿಸಬಹುದಾಗಿದ್ದ ಅತೀ ದೊಡ್ಡ ವೈಮಾನಿಕ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. 174 ಪ್ರಯಾಣಿಕರಿದ್ದ ಈ ವಿಮಾನದಲ್ಲಿ 166 ಇಸ್ರೇಲ್ ಪ್ರಜೆ ಇದ್ದರು. ಸ್ಮಿತ್ ಮೇಲೆ ದಾಳಿ ನಡೆಸಿ ವಿಮಾನವನ್ನು ಹೈಜಾಕ್ ನಡೆಸಲು ಮುಂದಾಗಿದ್ದ ಸಹ-ಪೈಲಟ್ ಒಮಾನ್ ಪ್ರಜೆ ಉಗ್ರವಾದದಿಂದ ಪ್ರಭಾವಿತನಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನ ತೀವ್ರ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಘಟನೆ ಬಗ್ಗೆ ಕಿಡಿಕಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಕೃತ್ಯಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಶುಕ್ರವಾರ (ಅಕ್ಟೋಬರ್ 2) ಈ ಬಗ್ಗೆ ಮಾತನಾಡಿದ ಅವರು, ಈ ಘಟನೆಯ ಹಿಂದೆ ಯಾರೇ ಇದ್ದರೂ ಇಸ್ರೇಲ್ ತಕ್ಕ ಪಾಠ ಕಲಿಸಲಿದೆ ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರದ ದೇಶಗಳ ಸಿಬ್ಬಂದಿಗೆ ನಿರ್ಬಂಧ ವಿಧಿಸಿದ್ದರೂ ಒಮಾನ್‌ಗೆ ಸೇರಿದ ಸಹ ಪೈಲಟ್ ಟೆಲ್ ಅವೀವ್‌ಗೆ ಹೊರಟ ವಿಮಾನದೊಳಗೆ ಬರಲು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ಇಸ್ರೇಲ್ ತನಿಖೆ ನಡೆಸುತ್ತಿದೆ ಎಂದು ʼದಿ ಟೆಲಿಗ್ರಾಫ್ʼ ವರದಿ ಮಾಡಿದೆ.
ಶತ್ರುಗಳಿಗೆ ಎಚ್ಚರಿಕೆ ನೀಡಿದ ಬೆಂಜಮಿನ್ ನೆತನ್ಯಾಹು:
ಬೆಂಜಮಿನ್ ನೆತನ್ಯಾಹು ಎಚ್ಚರಿಕೆ
ಶತ್ರುಗಳಿಗೆ ಕಠಿಣ ಎಚ್ಚರಿಕೆ ನೀಡಿದ ನೆತನ್ಯಾಹು, ʼʼದಾಳಿ ನಡೆಸಿದ ಆ ಸಹ ಪೈಲಟ್ ಇಸ್ಲಾಮಿಕ್ ಉಗ್ರಗಾಮಿ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿದ್ದ ಎನ್ನುವುದು ತಿಳಿದು ಬಂದಿದೆ. ಎಲ್ಲ ಪ್ರಯಾಣಿಕರೊಂದಿಗೆ ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದಲೇ ಆತ ಬಂದಿದ್ದ" ಎಂದು ಹೇಳಿದ್ದಾರೆ. "ಆತನನ್ನು ಯಾರಾದರೂ ಕಳುಹಿಸಿದ್ದರೇ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಅವನನ್ನು ಕಳುಹಿಸಿದವರು ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು ಹೇಳುವ ಮೂಲಕ ಕಠಿಣ ಕ್ರಮದ ಮುನ್ಸೂಚನೆ ನೀಡಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಆರೋಗ್ಯ ಸ್ಥಿರ: ನಗುತ್ತ ಮಾತನಾಡುತ್ತಿದ್ದಾರೆ ಎಂದ ಭಾರತದ ರಾಯಭಾರಿ
ಗುರುವಾರ 'ಫಾಕ್ಸ್ & ಫ್ರೆಂಡ್ಸ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನೆತನ್ಯಾಹು, ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರದ ದೇಶಗಳ ಪೈಲಟ್‌ಗಳು ವಿಮಾನಗಳನ್ನು ಹಾರಿಸುವುದನ್ನು ನಿಷೇಧಿಸಲಾಗಿದ್ದರೂ, ಆ ನಿಯಮದಲ್ಲಿನ ಲೋಪದೋಷವನ್ನು ಬಳಸಿಕೊಂಡು ಸಹ ಪೈಲಟ್ ಕರ್ತವ್ಯಕ್ಕೆ ಹಾಜರಾಗಿದ್ದ ಎಂದು ತಿಳಿಸಿದ್ದರು.
ಇಸ್ರೇಲ್ ಮತ್ತು ಒಮನ್ ನಡುವೆ ಯಾವುದೇ ಅಧಿಕೃತ ರಾಜತಾಂತ್ರಿಕ ಸಂಬಂಧಗಳಿಲ್ಲ. ರಾಜತಾಂತ್ರಿಕ ಸಂಬಂಧವಿಲ್ಲದ ದೇಶಗಳ ಪೈಲಟ್‌ಗಳಿಗೆ ಇಸ್ರೇಲ್‌ಗೆ ವಿಮಾನಗಳನ್ನು ಹಾರಿಸಲು ಅನುಮತಿ ಇಲ್ಲ ಎಂದು ನೆತನ್ಯಾಹು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಟೆಲ್ ಅವೀವ್‌ಗೆ ತೆರಳುವ ವಿಮಾನಕ್ಕೆ ಒಮಾನ್ ಪ್ರಜೆಯಾದ ಈ ಸಹ ಪೈಲಟ್ ಹೇಗೆ ನಿಯೋಜನೆಗೊಂಡ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ. ಸದ್ಯ ಬೆಂಜಮಿನ್ ನೆತನ್ಯಾಹು ಅವರ ಎಚ್ಚರಿಕೆಯನ್ನು ಜಗತ್ತು ಗಮನಿಸುತ್ತಿದೆ. ಉಗ್ರವಾದದ ವಿರುದ್ಧ ಕಠಿಣ ನಿಲು ತಳೆದಿರುವ ಇಸ್ರೇಲ್‌ನ ಮುಂದೆ ನಡೆ ಕುತೂಹಲ ಮೂಡಿಸಿದೆ.
ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಅಶೋಕ ಚಕ್ರ ಪ್ರಶಸ್ತಿ ನೀಡುವಂತೆ ಪತ್ರ
ಫ್ಲೈದುಬೈ ವಿಮಾದಲ್ಲಿ ಅಗಿದ್ದೇನು?
ಸೆಪ್ಟೆಂಬರ್ 30ರಂದು ದುಬೈಯಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಸುಮಾರು 34 ಸಾವಿರ ಅಡಿ ಎತ್ತರದಲ್ಲಿದ್ದಾಗ ಒಮಾನ್ ಮೂಲದ ಸಹ ಪೈಲಟ್ ಏಕಾಏಕಿ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ. ವಿಮಾನವನ್ನು ಪತನಗೊಳಿಸುವ ಉದ್ದೇಶದಿಂದ ಸುತ್ತಿಗೆಯಂತಹ ಆಯುಧದಿಂದ ಸ್ಮಿತ್ ಮೇಲೆ ಎರಗಿದ್ದ. ತೀವ್ರ ಗಾಯಗೊಂಡಿದ್ದರೂ ಸ್ಮಿತ್ ಕಾಕ್‌ಪಿಟ್‌ನ ಬಾಗಿಲು ತೆರೆದು ಅಪಾಯದ ಸೂಚನೆ ನೀಡಿದ್ದರು. ತಕ್ಷಣ ಪ್ರಯಾಣಿಕರು ಕ್ಯಾಬಿನ್‌ಗೆ ನುಗ್ಗಿ ದಾಳಿಕೋರನನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಮಾನದಲ್ಲಿದ್ದ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ಏರ್‌ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ್ದರು.
ವಿದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.