ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ಲೈದುಬೈ ಮೇಲಿನ ದಾಳಿಯಲ್ಲಿ ಇರಾನ್ ಕೈವಾಡ ? ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದೇನು?

Flydubai: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಪತನಗೊಳಿಸುವ ಪ್ರಯತ್ನದಲ್ಲಿ ಇರಾನ್ ಕೈವಾಡ ಸಾಧ್ಯತೆ ಇದೆಯೇ ಎನ್ನುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತನಿಖೆಗಿಂತ ಮೊದಲು ಹೇಳುವುದು ತುಂಬಾ ಮುಂಚಿತವಾಗುತ್ತದೆ ಎಂದು ಹೇಳಿದರು.

ಫ್ಲೈದುಬೈ ದಾಳಿಯಲ್ಲಿ ಇರಾನ್ ಭಾಗಿ: ಇಸ್ರೇಲ್ ಪ್ರಧಾನಿ ಹೇಳಿದ್ದೇನು?

ಸಂಗ್ರಹ ಚಿತ್ರ -

ಟೆಲ್ ಅವೀವ್: ಫ್ಲೈ ದುಬೈ ವಿಮಾನದಲ್ಲಿ (Flydubai Attack) ನಡೆದಿರುವ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಇರಾನ್ ಕೈವಾಡವಿದೆ ಎನ್ನುವ ಕುರಿತು ಪ್ರತಿಕ್ರಿಯಿಸಲು ಇಸ್ರೇಲ್ (Israel) ನಿರಾಕರಿಸಿದೆ. ಈಗ ಏನೇ ಹೇಳುವುದು ಕೂಡ ಮುಂಚಿತವಾಗುತ್ತದೆ ಎಂದು ತಿಳಿಸಿದೆ. ಫ್ಲೈದುಬೈ ದಾಳಿಗೆ ಸಂಬಂಧಿಸಿದ ತನಿಖೆಯಲ್ಲಿ ಇಸ್ರೇಲ್ ಕೂಡ ಯುಎಇಯೊಂದಿಗೆ (UAE) ಸಹಕರಿಸಲು ನಿರ್ಧರಿಸಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಅವರು ಯುಎಇ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ತನಿಖೆಯಲ್ಲಿ ನಾವು ಕೂಡ ಭಾಗವಹಿಸಲು ಒಪ್ಪಿಕೊಂಡಿರುವುದಾಗಿ ತಿಳಿಸಿದರು.

ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿಯಲ್ಲಿ ಇರಾನ್‌ನ ಕೈವಾಡವಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಹೇಳುವುದು ತುಂಬಾ ಮುಂಚಿತವಾಗುತ್ತದೆ. ಆದರೆ ಟೆಲ್ ಅವಿವ್‌ ತನಿಖೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

‘ತಲೆ, ಕೈಗಳು ಸೀಳಿಹೋಗಿದ್ದವು’: ವಿಮಾನದಲ್ಲಿಯೇ ಭಾರತೀಯ ಪೈಲಟ್‌ಗೆ ತುರ್ತು ಚಿಕಿತ್ಸೆ ನೀಡಿದ ದಂತವೈದ್ಯ ಹೇಳಿದ್ದೇನು?

ತನಿಖೆಗೆ ಟೆಲ್ ಅವಿವ್ ಸಂಪೂರ್ಣ ಸಹಕಾರವನ್ನು ನೀಡುತ್ತದೆ. ವಿಮಾನದಲ್ಲಿ ಏನಾಯಿತು, ಯಾಕಾಯಿತು ಎಂಬುದನ್ನು ತಿಳಿಯುವ ಕುತೂಹಲ ನಮಗೂ ಇದೆ ಎಂದ ಅವರು, ಇದಕ್ಕೆ ಸಂಬಂಧಿಸಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಧ್ಯಕ್ಷ ಬಿನ್ ಜಾಯೆದ್ ಅವರೊಂದಿಗೆ ಮಾತನಾಡಿದ್ದೇನೆ. ನಾವು ತನಿಖೆಗೆ ಸೇರಬೇಕೆಂದು ಅವರು ಹೇಳಿದ ತಕ್ಷಣ ನಾವು ಒಪ್ಪಿಕೊಂಡಿದ್ದೇವೆ ಎಂದರು. ಫ್ಲೈ ದುಬೈ ದಾಳಿಯಲ್ಲಿ ಇರಾನ್ ಕೈವಾಡವಿದೆ ಎನ್ನುವ ಕುರಿತು ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

ದುಬೈಯಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಭಯೋತ್ಪಾದನೆ ದಾಳಿಯ ಬಳಿಕ ಅದನ್ನು ಸೌದಿ ಅರೇಬಿಯಾಕ್ಕೆ ತಿರುಗಿಸಲಾಯಿತು. ವಿಮಾನವು 7500ಕ್ಕೆ ಬದಲು ತುರ್ತು ಕೋಡ್ 7700 ಅನ್ನು ರವಾನಿಸಿತು. ಇದು ಸಂಭಾವ್ಯ ಅಪಹರಣದಂತಹ ಸೂಚನೆಯನ್ನು ನೀಡುವ ಅಂತಾರಾಷ್ಟ್ರೀಯ ಕೋಡ್ ಆಗಿದೆ.

ಓಮನ್ ಮೂಲದ ಕೋ-ಪೈಲಟ್ ಸಹೋದ್ಯೋಗಿ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿ ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ. ಇದರಿಂದ ಕೆಲ ಹೊತ್ತು ವಿಮಾನ ನಿಯಂತ್ರಣ ಕಳೆದುಕೊಂಡು ಏಕಾಏಕಿ ಸಾವಿರಾರು ಅಡಿ ಕೆಳಕ್ಕೆ ಇಳಿದಿದೆ. ಕೊನೆಗೆ ಫ್ಲೈದುಬೈಯ ಇನ್ನೊಬ್ಬ ಪೈಲಟ್‌ ನೆರವಿನಿಂದ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಇಳಿಸಲಾಗಿದೆ.

Amitabh Bachchan: ‘ಕೆಬಿಸಿ 18’ ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಕಾಲಿಗೆ ಗಾಯ

ವಿಮಾನದ ಕಾಕ್‌ಪಿಟ್ ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದಾರೆ. ಈ ವೇಳೆ ಅವರು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಿ ವಶಕ್ಕೆ ಪಡೆದರು. ವಿಮಾನ ಸೌದಿ ಅರೇಬಿಯಾದ ತಬೂಕ್‌ನಲ್ಲಿ ಇಳಿದ ತಕ್ಷಣ ಸ್ಮಿತ್ ಮಚ್ಚರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.