ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಯಹೂದಿ ಸಭೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 50 ವರ್ಷದ (Bondi beach shooting) ಸಾಜಿದ್ ಅಕ್ರಮ್ ಭಾರತೀಯ ಪ್ರಜೆ ಎಂದು ಫಿಲಿಪೈನ್ಸ್ ವಲಸೆ ಬ್ಯೂರೋ ಮಂಗಳವಾರ ದೃಢಪಡಿಸಿದೆ. ಭಾನುವಾರ ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಹನುಕ್ಕಾ ಕಾರ್ಯಕ್ರಮದಲ್ಲಿ ಸಾಜಿದ್ ಅಕ್ರಮ್ ಮತ್ತು ಆತನ ಮಗ 24 ವರ್ಷದ ನವೀದ್ ಅಕ್ರಮ್ ದಾಳಿ ನಡೆಸಿದ್ದು, ಒಟ್ಟು ಹದಿನೈದು ಜನರು ಸಾವನ್ನಪ್ಪಿ, 42 ಜನರು ಗಾಯಗೊಂಡಿದ್ದರು.
50 ವರ್ಷದ ಸಾಜಿದ್ ಅಕ್ರಮ್ ಹಣ್ಣಿನ ಅಂಗಡಿಯೊಂದರ ಮಾಲೀಕನಾಗಿದ್ದ. ಈತ ಪೊಲೀಸರ ಗುಂಡೇಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದ. ಇನ್ನು ಈತನ ಮಗ ನವೀದ್ ಅಕ್ರಮ್. ಈತನನ್ನು ಘಟನಾ ಸ್ಥಳದಲ್ಲೇ ಬಂಧಿಸಲಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಪೊಲೀಸ್ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಭಾರತೀಯ ಪ್ರಜೆಯಾದ ತಂದೆ ಮಗ ಆಸ್ಟ್ರೇಲಿಯಾಗೆ ವಲಸೆ ಬಂದಿದ್ದರು.
ಹಂತಕರು ದಾಳಿ ನಡೆಸುವ ಮೊದಲು ತಮ್ಮ ಕುಟುಂಬ ಸದಸ್ಯರಿಗೆ ವಾರಾಂತ್ಯದ ಮೀನುಗಾರಿಕೆಗಾಗಿ ಜರ್ವಿಸ್ ಬೇಗೆ ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದರು. ಆರೋಪಿಗಳ ಬಳಿ ಬಂದೂಕು ಪರವಾನಗಿ ಇತ್ತೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ನ್ಯೂ ಸೌಥ್ ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಯೋತ್ಪಾದಕರ ದಾಳಿಯನ್ನು ಉಲ್ಲೇಖಿಸಿ ಆಸ್ಟ್ರೇಲಿಯಾದ ಗೃಹ ಸಚಿವ ಟೋನಿ ಬರ್ಕ್, 1998 ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ದೇಶಕ್ಕೆ ಇವರು ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಯಾರೆಂದು ಬಹಿರಂಗಪಡಿಸಿದ ಎನ್‌ಐಎ!
ಭಾರತೀಯ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಜೊತೆ ಚರ್ಚೆ ನಡೆಸಿದ್ದಾಗಿ ಆಸ್ಟ್ರೇಲಿಯಾ ಸರ್ಕಾರ ಹೇಳಿಕೊಂಡಿದೆ. ಚಿವ ಜೈಶಂಕರ್ ಅವರ ಸಂತಾಪ ಮತ್ತು ಭಾರತ ಸರ್ಕಾರದ ಬೆಂಬಲ ಸಂದೇಶಗಳಿಗಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸಿದೆ. ಯೆಹೂದ್ಯ ವಿರೋಧಿ, ಹಿಂಸೆ ಮತ್ತು ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ ಎಂದು ಜೈಶಂಕರ್ ಹೇಳಿರುವುದಾಗಿ ಗೃಹ ಸಚಿವ ಹೇಳಿದರು. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮಂಗಳವಾರ, ಇಬ್ಬರು ದಾಳಿಕೋರರು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂದ ಪ್ರೇರಿತರಾಗಿದ್ದರು ಮತ್ತು ಭಯೋತ್ಪಾದಕ ಗುಂಪಿನೊಂದಿಗೆ ಸಂಬಂಧಿಸಿದ ನಂಬಿಕೆಗಳಿಂದ ಪ್ರಭಾವಕ್ಕೆ ಒಳಗಾಗಿದ್ದರು ಎಂದು ಅವರು ಹೇಳಿದ್ದಾರೆ.