ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cannes 2025: ಕೇನ್ಸ್ ಫಿಲ್ಮ್ ಫೆಸ್ಟಿವಲ್: ತಾಳೆ ಮರ ಬಿದ್ದು ಖ್ಯಾತ ನಿರ್ಮಾಪಕನ ಸ್ಥಿತಿ ಗಂಭೀರ

ಮೇ 17ರಂದು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಜಪಾನಿನ ನಿರ್ಮಾಪಕ ಗ್ರೇ ಡಿ'ಅಲ್ಬಿಯನ್ ಅವರ ಮೇಲೆ ತಾಳೆ ಮರ ಬಿದ್ದು ಗಾಯಗೊಂಡಿದ್ದಾರೆ. ಮೆಡಿಟೆರೇನಿಯನ್ ಸಮುದ್ರದ ತೀರದ ಕ್ರೊಯಿಸೆಟ್ಟೆಯಲ್ಲಿ ಬೆಳಗ್ಗೆ ವಾಕಿಂಗ್ ಹೋದ ಸಂದರ್ಭದಲ್ಲಿ ಜೋರಾಗಿ ಬೀಸಿದ್ದ ಗಾಳಿಯ ಪರಿಣಾಮ ತಾಳೆ ಮರವೊಂದು ಬುಡಸಮೇತ ಅವರ ಮೇಲೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ನಿರ್ಮಾಪಕನಿಗೆ ಗಂಭೀರ ಗಾಯ

Profile Pushpa Kumari May 18, 2025 10:20 PM

ಪ್ಯಾರಿಸ್‌: 2025ರ ಕೆನ್ಸ್ ಚಲನಚಿತ್ರೋತ್ಸವವು (Cannes 2025) ಕಳೆಗಟ್ಟಿದ್ದು, ಈಗಾಗಲೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೇದಿದೆ. ಮೇ 13ರಿಂದ 24ರವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಹಾಲಿವುಡ್, ಬಾಲಿವುಡ್ ಸೇರಿದಂತೆ ಅನೇಕ ಸಿನಿಮಾ ತಾರೆಯರು, ಅಂತಾರಾಷ್ಟ್ರೀಯ ನಿರ್ಮಾಪಕರು ಈ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಚಲನಚಿತ್ರೋತ್ಸವಕ್ಕೆ ಬಂದಿದ್ದ ಅನೇಕ ಸಿನಿಮಾ ಕಲಾವಿದರು ಕೇನ್ಸ್‌ನ ಪ್ರಸಿದ್ಧ ಸ್ಥಳಗಳಿಗೆ ಭೇಟಿ ಕೂಡ ನೀಡುತ್ತಿದ್ದಾರೆ. ಈ ನಡುವೆ ಜಪಾನಿನ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರ ಮೇಲೆ ತಾಳೆ ಮರವೊಂದು ಬಿದ್ದು ಗಂಭೀರ ಗಾಯವಾದ ಘಟನೆ ಕೇನ್ಸ್‌ನ ಕ್ರೊಯಿಸೆಟ್ಟೆಯಲ್ಲಿ ನಡೆದಿದೆ.

ಮೇ 17ರಂದು ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಜಪಾನಿನ ನಿರ್ಮಾಪಕ ಗ್ರೇ ಡಿ'ಅಲ್ಬಿಯನ್ ಮೆಡಿಟೆರೇನಿಯನ್ ಸಮುದ್ರದ ತೀರದ ಕ್ರೊಯಿಸೆಟ್ಟೆಯಲ್ಲಿ ಬೆಳಗ್ಗೆ ವಾಕಿಂಗ್ ಹೋದ ಸಂದರ್ಭದಲ್ಲಿ ಜೋರಾಗಿ ಬೀಸಿದ್ದ ಗಾಳಿಯ ಪರಿಣಾಮ ತಾಳೆ ಮರವೊಂದು ಬುಡಸಮೇತ ಬಿದ್ದಿದೆ.

ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿರುವ ಪ್ರೊಮೆನೇಡ್ ಡೆಲಾ ಕ್ರೊಯಿಸೆಟ್ಟೆ ಒಂದು ಪ್ರಮುಖ ರಸ್ತೆಯಾಗಿದ್ದು ತಾಳೆ ಮರ ಬಿದ್ದ ಸಂದರ್ಭದಲ್ಲಿ ಕೆಲವೇ ಮಂದಿ ಮಾತ್ರವೇ ಅಲ್ಲಿದ್ದರು ಎಂಬುದು ತಿಳಿದುಬಂದಿದೆ. ತಾಳೆ ಮರದ ಬುಡದಲ್ಲಿ ನಿರ್ಮಾಪಕರು ದಣಿವಾರಿಸಿ ಕೊಳ್ಳುತ್ತಿದ್ದರು. ಅದೇ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಿದ್ದ ರಭಸಕ್ಕೆ ತಾಳೆಮರ ಬುಡ ಸಮೇತ ಅವರ ತಲೆ ಮೇಲೆ ಬಿದ್ದಿದ್ದು ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾರೆ. ಅವರಿಗೆ ತೀವ್ರ ಗಾಯವಾಗಿದ್ದ ಕಾರಣ ಆಸ್ಪತ್ರೆ ದಾಖಲಿಸಲಾಯಿತು ಎಂದು ಪ್ರತ್ಯೆಕ್ಷದರ್ಶಿಯೊಬ್ಬರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ತಾಳೆ ಮರವು ರಸ್ತೆಗೆ ಕೂಡ ಅಡ್ಡಲಾಗಿ ಬಿದ್ದ ಕಾರಣ ಮಧ್ಯಾಹ್ನದವರೆಗೂ ಆ ಭಾಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಬಳಿಕ ಮರ ತೆರವುಗೊಳಿಸಿ ಎಂದಿನಂತೆ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಜಪಾನ್ ನಿರ್ಮಾಪಕರ ಸ್ಥಿತಿ ಸದ್ಯ ಸುಧಾರಿಸಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ಅವರ ಆಪ್ತ ಮೂಲದವರು ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: Cannes 2025: ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಲಾಪತಾ ಲೇಡೀಸ್ ಖ್ಯಾತಿಯ ನಿತಾಂಶಿ ಗೋಯೆಲ್

ಇದೇ ಕೇನ್ಸ್‌ ಫಿಲ್ಮ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ ಮೇಲೆ ಕನ್ನಡದ ನಟಿ ದಿಶಾ ಮದನ್ ಹೆಜ್ಜೆ ಹಾಕಿದ್ದು ಕೂಡ ಇತ್ತೀಚೆಗೆ ದೊಡ್ಡ ಮಟ್ಟಿಗಿನ ಸುದ್ದಿಯಾಗಿತ್ತು. ದಿಶಾ ಮದನ್ ಭಾರತೀಯ ಕರಕುಶಲತೆಗೆ ಗೌರವ ಸಲ್ಲಿಸುವ ಸಲುವಾಗಿ 70 ವರ್ಷ ಹಳೆಯ ಶುದ್ಧ ಜರಿ ಕಾಂಚಿವರಂ ಸೀರೆಯನ್ನು ವಿಭಿನ್ನವಾಗಿ ಧರಿಸಿದ್ದರು. ದಿಶಾ ಮದನ್‌ ಲುಕ್‌ ಕಂಡು ನೆಟ್ಟಿಗರು ಫಿದಾ ಆಗಿದ್ದರು. 78ನೇ ಕೇನ್ಸ್ ಚಲನಚಿತ್ರೋತ್ಸವವು ಭರದಿಂದ ಸಾಗುತ್ತಿದ್ದು, 15,000ಕ್ಕೂ ಹೆಚ್ಚು ಸಿನಿಮಾ ವೃತ್ತಿಪರರನ್ನು ಆಕರ್ಷಿಸುತ್ತಲೆ ಇದೆ. ವಿವಿಧ ದೇಶಗಳ ಸೆಲೆಬ್ರಿಟಿಗಳನ್ನು ನೋಡಲು ಜನ ಸಾಗರವೇ ನೆರೆದಿದೆ.