ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮರುಬಳಕೆ ರಾಕೆಟ್ ತಂತ್ರಜ್ಞಾನದಲ್ಲಿ ಚೀನಾದ ಐತಿಹಾಸಿಕ ಸಾಧನೆ; 'ಲಾಂಗ್ ಮಾರ್ಚ್-10B' ಬೂಸ್ಟರ್ ಯಶಸ್ವಿ ಮರುಪಡೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, 'ಲಾಂಗ್ ಮಾರ್ಚ್-10B' ರಾಕೆಟ್‌ನ ಮೊದಲ ಹಂತದ ಬೂಸ್ಟರ್ ಅನ್ನು ಯಶಸ್ವಿಯಾಗಿ ಮರುಪಡೆದಿದೆ. ಈ ಸಾಧನೆಯೊಂದಿಗೆ ಮರುಬಳಕೆ ಮಾಡಬಹುದಾದ ರಾಕೆಟ್ ತಂತ್ರಜ್ಞಾನದಲ್ಲಿ ಚೀನಾ ಹೊಸ ಮೈಲಿಗಲ್ಲು ಸ್ಥಾಪಿಸಿದ್ದು, ಸ್ಪೇಸ್‌ಎಕ್ಸ್‌ನ ಫಾಲ್ಕನ್ 9ಗೆ ಪ್ರಬಲ ಪೈಪೋಟಿ ನೀಡುವತ್ತ ಹೆಜ್ಜೆ ಇಟ್ಟಿದೆ.

ಸ್ಪೇಸ್‌ಎಕ್ಸ್‌ಗೆ ಪೈಪೋಟಿ: ಮರುಬಳಕೆ ರಾಕೆಟ್ ಪರೀಕ್ಷೆಯಲ್ಲಿ ಚೀನಾ ಯಶಸ್ವಿ

ರಾಕೆಟ್ ತಂತ್ರಜ್ಞಾನ -

Profile
Sushmitha Jain Jul 10, 2026 7:01 PM

ಬೀಜಿಂಗ್‌: ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ (Chaina) ಶುಕ್ರವಾರ ಐತಿಹಾಸಿಕ ಮೈಲಿಗಲ್ಲೊಂದನ್ನು ಸಾಧಿಸಿದೆ. ಮರುಬಳಕೆ ಮಾಡಬಹುದಾದ ಪ್ರಾಯೋಗಿಕ ರಾಕೆಟ್ ಮರುಪಡೆಯುವಿಕೆ ವ್ಯವಸ್ಥೆ (rocket retrieval system)ಯನ್ನು ಚೀನಾ ಯಶಸ್ವಿಯಾಗಿ ಪರೀಕ್ಷಿಸಿದೆ. ಮಧ್ಯಾಹ್ನ ಉಡಾವಣೆಗೊಂಡ 'ಲಾಂಗ್ ಮಾರ್ಚ್-10B' ರಾಕೆಟ್‌ನ ಮೊದಲ ಹಂತ ಅಥವಾ ಬೂಸ್ಟರ್, ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳುವ ಮೂಲಕ ದೇಶದ ಮೊದಲ ನಿಯಂತ್ರಿತ ರಾಕೆಟ್ ರಿಕವರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಕ್ಷಿಣ ಚೀನಾದ ಹೈನಾನ್ ವಾಣಿಜ್ಯ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಮಧ್ಯಾಹ್ನ 12:15 ಕ್ಕೆ ರಾಕೆಟ್ ಮುನ್ನುಗ್ಗಿತು. ಬೂಸ್ಟರ್ ಮತ್ತು ಮೇಲಿನ ಹಂತವು ಬೇರ್ಪಟ್ಟ ಸುಮಾರು ಆರು ನಿಮಿಷಗಳ ನಂತರ, ಬೂಸ್ಟರ್ ಲಂಬವಾಗಿ (ವರ್ಟಿಕಲಿ) ಕೆಳಕ್ಕೆ ಮರಳಿ, ಸಮುದ್ರದಲ್ಲಿದ್ದ ತೇಲುವ ವೇದಿಕೆಯೊಂದರ ಮೇಲಿದ್ದ 'ನೆಟ್-ಕ್ಯಾಪ್ಚರ್' ವ್ಯವಸ್ಥೆಯ ಮೂಲಕ ಯಶಸ್ವಿಯಾಗಿ ಮರುಪಡೆಯಲಾಯಿತು ಎಂದು ಚೀನಾದ ಸಿಸಿಟಿವಿ ಮಾಧ್ಯಮ ವರದಿ ಮಾಡಿದೆ. ಇದು ಮರುಬಳಕೆ ಮಾಡಬಹುದಾದರಾಕೆಟ್ ತಂತ್ರಜ್ಞಾನದಲ್ಲಿ ಚೀನಾದ ಬೃಹತ್ ಜಿಗಿತವಾಗಿದೆ.

ಲಾಂಗ್ ಮಾರ್ಚ್-10B ಮತ್ತು ಫಾಲ್ಕನ್ 9 ಹೋಲಿಕೆ:

ಚೀನಾದ ಈ ಹೊಸ ರಾಕೆಟ್ ಅನ್ನು ಎಲೋನ್ ಮಾಸ್ಕ್ ಅವರ ಸ್ಪೇಸ್‌ಎಕ್ಸ್ ಸಂಸ್ಥೆಯ 'ಫಾಲ್ಕನ್ 9' ರಾಕೆಟ್‌ಗೆ ಪ್ರಬಲ ಪೈಪೋಟಿ ಎಂದು ನೋಡಲಾಗುತ್ತಿದೆ.

ಲಾಂಗ್ ಮಾರ್ಚ್-10B: ಇದು 63 ಮೀಟರ್ ಎತ್ತರ ಹಾಗೂ 5 ಮೀಟರ್ ವ್ಯಾಸ ಹೊಂದಿರುವ ದ್ರವ ಇಂಧನ ಚಾಲಿತ ವಾಣಿಜ್ಯ ರಾಕೆಟ್ ಆಗಿದೆ. ಇದು ಭೂಮಿಯ ಕೆಳ ಕಕ್ಷೆಗೆ (LEO) 16 ಟನ್ ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಹಚ್ಚೆ ಹಾಕಿಸಿಕೊಂಡ್ರೆ ಸರ್ಕಾರಿ ನೌಕರಿ ಸಿಗಲ್ವಾ? ಹೈ ಕೋರ್ಟ್‌ ನೀಡಿದ ತೀರ್ಪೇನು?

ಫಾಲ್ಕನ್ 9: ಸ್ಪೇಸ್‌ಎಕ್ಸ್‌ನ ಈ ರಾಕೆಟ್ 70 ಮೀಟರ್ ಎತ್ತರವಿದ್ದು, ಭೂಮಿಯ ಕೆಳ ಕಕ್ಷೆಗೆ 22,800 ಕೆಜಿ ತೂಕವನ್ನು ಸಾಗಿಸಬಲ್ಲದು. ಇದು ವರ್ಷಕ್ಕೆ ಸುಮಾರು 150 ಬಾರಿ ಉಡಾವಣೆಗೊಳ್ಳುತ್ತದೆ.

ಸ್ಪೇಸ್‌ಎಕ್ಸ್ ಸಂಸ್ಥೆಯು ಮೊದಲ ಬಾರಿಗೆ 2015 ರ ಡಿಸೆಂಬರ್‌ನಲ್ಲಿ ಇಂತಹದ್ದೇ ಬೂಸ್ಟರ್ ಅನ್ನು ಮರುಪಡೆದು ಇತಿಹಾಸ ನಿರ್ಮಿಸಿತ್ತು. ಇದಾದ ಬಳಿಕ ಬ್ಲೂ ಒರಿಜಿನ್ ಸಂಸ್ಥೆಯು 2025 ರ ನವೆಂಬರ್‌ನಲ್ಲಿ ಈ ಸಾಧನೆ ಮಾಡಿತ್ತು.

ಚೀನಾದ ದಶಕದ ಶ್ರಮಕ್ಕೆ ಸಿಕ್ಕ ಫಲ:

ರಾಕೆಟ್‌ಗಳ ಅತ್ಯಂತ ದುಬಾರಿ ಭಾಗವಾದ ಬೂಸ್ಟರ್ ಅನ್ನು ಮರುಬಳಕೆ ಮಾಡುವುದರಿಂದ ಬಾಹ್ಯಾಕಾಶ ಯೋಜನೆಗಳ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ. ಇದಕ್ಕಾಗಿ ಚೀನಾ ಕಳೆದ ಹತ್ತು ವರ್ಷಗಳಿಂದ ನಿರಂತರ ಸಂಶೋಧನೆ ನಡೆಸುತ್ತಿತ್ತು. ಕಳೆದ ವರ್ಷ ಚೀನಾದ ಖಾಸಗಿ ಸಂಸ್ಥೆ ಲ್ಯಾಂಡ್‌ಸ್ಪೇಸ್ ಹಾಗೂ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಸ್ಥೆ ನಡೆಸಿದ್ದ ಪ್ರಯತ್ನಗಳು ಕೊನೆಯ ಹಂತದ ಲ್ಯಾಂಡಿಂಗ್‌ನಲ್ಲಿ ವಿಫಲವಾಗಿದ್ದವು. ಆದರೆ ಈಗ ಈ ಮೈಲಿಗಲ್ಲು ಸಾಧಿಸಿರುವ ಚೀನಾ, ಇದೇ ವರ್ಷದ ಅಂತ್ಯದ ವೇಳೆಗೆ ಇದೇ ಬೂಸ್ಟರ್ ಅನ್ನು ಮತ್ತೊಂದು ಉಡಾವಣೆಗೆ ಬಳಸಲು ಯೋಜಿಸಿದೆ.