ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ನೂತನ ಕಾರ್ಯಕಾರಿ ಸಮಿತಿಗೆ ಅವಿರೋಧ ಆಯ್ಕೆ
ನಗರದ ಹೊರವಲಯದ ಚಿತ್ರಾವತಿ ಆರ್ಯ ವೈಶ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಮಹಾಸಭೆ ನಡೆಯಿತು. ಒಕ್ಕೂಟದ ಅಧ್ಯಕ್ಷ ಬಯ್ಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರಗಳ ಪರಿಶೋಧನೆ ನಡೆಸಿ, ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ನಡೆದ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ನೂತನ ಕಾರ್ಯಕಾರಿ ಸಮಿತಿಗೆ ಅವಿರೋಧ ಆಯ್ಕೆ -
ಚಿಕ್ಕಬಳ್ಳಾಪುರ: ನಗರದ ಹೊರವಲಯದ ಚಿತ್ರಾವತಿ ಆರ್ಯ ವೈಶ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಸದಸ್ಯರ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಮಹಾಸಭೆ ನಡೆಯಿತು.
ಒಕ್ಕೂಟದ ಅಧ್ಯಕ್ಷ ಬಯ್ಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೆಕ್ಕಪತ್ರಗಳ ಪರಿಶೋಧನೆ ನಡೆಸಿ, ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ನಡೆದ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: Chikkaballapur News: ಪಾರ್ಥೇನಿಯಂ ಮುಕ್ತ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಿ: ಡಾ. ಕೆ.ಎನ್.ಗೀತಾ
ಭಾರತೀಯ ಜೀವ ವಿಮಾ ಪ್ರತಿನಿಧಿಗಳ ನೂತನ ಅಧ್ಯಕ್ಷರನ್ನಾಗಿ ಪಿ.ಕೆ.ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಕೆ.ಎಂ.ವೆAಕಟಶಿವಾರೆಡ್ಡಿ, ಖಜಾಂಚಿ ಕೆ.ಎಲ್.ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಕೆ.ವಿ.ರಮೇಶ್, ಉಪಾಧ್ಯಕ್ಷರಾಗಿ ಬಾಗೇಪಲ್ಲಿ ವೆಂಟರಮಣಪ್ಪ, ಕೆ.ಎನ್.ಶ್ರೀಕಾಂತ್, ಚಲಪತಿ, ಗೋಕರ್ಣ ಅವರನ್ನು ಆಯ್ಕೆ ಮಾಡಲಾಯಿತು.
ಚಿಕ್ಕಬಳ್ಳಾಪುರ ಶಾಖೆಯ ಮಾಜಿ ಅಧ್ಯಕ್ಷ ಎಮ್. ಸೋಮಶೇಖರ್ ಮಾಜಿ ಕಾರ್ಯದರ್ಶಿ ಮೋಹನ್ ಬಾಬು ಮಾಜಿ ಖಜಾಂಚಿ ರಮೇಶ್ ಗುಪ್ತ ಬೆಂಗಳೂರು ವಿಭಾಗೀಯ-೨ ಕಾರ್ಯದರ್ಶಿ ಡಿ.ಎಂ.ಮಂಜುನಾಥ್, ಖಜಾಂಚಿ ಜನಾರ್ಧನ್ ನಾಯರ್, ದಕ್ಷಿಣ ಮಧ್ಯ ವಲಯದ ಉಪಾಧ್ಯಕ್ಷ ರವೀಂದ್ರನಾಥ್, ದಕ್ಷಿಣ ಮಧ್ಯವಲಯದ ಕಾರ್ಯಕಾರಿಣಿ ಸದಸ್ಯ ಟಿ.ಸಿ.ಲಕ್ಷ್ಮಣ್, ಮಂಜುನಾಥ್ ಗೌರಿಬಿದನೂರು, ದಕ್ಷಿಣ ಮಧ್ಯ ವಲಯ ಸಂಘಟನಾ ಕಾರ್ಯದರ್ಶಿ ರಾಮಲಿಂಗಯ್ಯ, ಅಖಿಲ ಭಾರತ ಜೀವ ವಿಮಾ ವೇಲ್‌ಫೇರ್ ಕಮಿಟಿ ಛೇರ್ಮನ್ ಸಿ.ಜಿ.ಲೋಕೆಂದ್ರ, ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಹಾಜರಿದ್ದರು.