ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಸಂಸತ್ತಿನಲ್ಲಿ ಸಹೋದ್ಯೋಗಿಗಳಿಂದ ಸಂಸದೆಗೆ ಲೈಂಗಿಕ ಕಿರುಕುಳ; ದೂರು ದಾಖಲು

ಸಂಸತ್ತಿನ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಲೈಂಗಿಕವಾಗಿ ಸೂಚಿಸುವ ಮತ್ತು ಜನಾಂಗೀಯವಾಗಿ ಅಸಂವೇದನಾಶೀಲ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಆಸ್ಟ್ರೇಲಿಯಾದ ಸಂಸದೆಯೊಬ್ಬರು ಹಿರಿಯ ಪುರುಷ ಸಹೋದ್ಯೋಗಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಈ ಸುದ್ದಿ ಜಗತ್ತಿನಾದ್ಯಂತ ವೈರಲ್‌ ಆಗಿದೆ.

ಸಂಸತ್ತಿನಲ್ಲಿ ಸಹೋದ್ಯೋಗಿಗಳಿಂದ ಸಂಸದೆಗೆ ಲೈಂಗಿಕ ಕಿರುಕುಳ!

Profile Vishakha Bhat May 28, 2025 11:20 AM

ಕ್ಯಾನ್‌ಬೆರಾ: ಸಂಸತ್ತಿನ ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಲೈಂಗಿಕವಾಗಿ (Physical Abuse) ಸೂಚಿಸುವ ಮತ್ತು ಜನಾಂಗೀಯವಾಗಿ ಅಸಂವೇದನಾಶೀಲ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಆಸ್ಟ್ರೇಲಿಯಾದ ಸಂಸದೆಯೊಬ್ಬರು ಹಿರಿಯ ಪುರುಷ ಸಹೋದ್ಯೋಗಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸೆನೆಟರ್ ಫಾತಿಮಾ ಪೇಮನ್ ಈ ಆರೋಪವನ್ನು ಮಾಡಿದ್ದಾರೆ. ಆರೋಪಿಗಳ ಹೆಸರನ್ನು ಬಹಿರಂಗ ಪಡಿಸದೆ ಅವರು ತುಂಬಾ ಕುಡಿದಿದ್ದರು. ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಸಂಸದೆ ಆರೋಪಿಸಿದ್ದಾರೆ.

ಫಾತಿಮಾ ಪೇಮನ್ ಆರೋಪದ ಪ್ರಕಾರ, ಅವರ ಸಹೋದ್ಯೋಗಳು ಕುಡಿದ ಮತ್ತಿನಲ್ಲಿ ಫಾತಿಮಾ ಬಳಿ ಮೇಜಿನ ಮೇಲೆ ಹತ್ತಿ ನೃತ್ಯ ಮಾಡಿ ಎಂದು ಹೇಳಿದ್ದಾರೆ ಮತ್ತು ಒತ್ತಾಯಪೂರ್ವಕವಾಗಿ ತನಗೆ ಮದ್ಯವನ್ನು ಕುಡಿಸಲು ಪ್ರಯತ್ನಿಸಿದರು. ನಾನು ಕುಡಿಯುವುದಿಲ್ಲ ಎಂದು ಎಷ್ಟು ಸಲ ಹೇಳಿದರೂ ಅವರು ಮತ್ತಷ್ಟು ಒತ್ತಾಯ ಮಾಡಿದ್ದಾರೆ ಎಂದು ಸಂಸದೆ ದೂರಿದ್ದಾರೆ.

2022 ರಲ್ಲಿ ಪಶ್ಚಿಮ ಆಸ್ಟ್ರೇಲಿಯಾದಿಂದ ಲೇಬರ್ ಸೆನೆಟರ್ ಆಗಿ ಆಯ್ಕೆಯಾದ ಪೇಮನ್, ಕಳೆದ ಸಂಸತ್ತಿನ ಅಧಿವೇಶನದ ಅತ್ಯಂತ ಕಿರಿಯ ಸದಸ್ಯರಾಗಿದ್ದರು. ಪ್ಯಾಲೆಸ್ಟೀನಿಯನ್ ರಾಜ್ಯತ್ವವನ್ನು ಪ್ರತಿಪಾದಿಸುವ ನಿರ್ಣಯದ ಮೇಲೆ ಗ್ರೀನ್ಸ್ ಜೊತೆ ಮತ ಚಲಾಯಿಸಿದ ನಂತರ ಅವರು 2024 ರಲ್ಲಿ ಲೇಬರ್ ಪಕ್ಷವನ್ನು ತೊರೆದರು. ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲಲ್ಲ. 2021 ರಲ್ಲಿ, ಬ್ರಿಟಾನಿ ಹಿಗ್ಗಿನ್ಸ್ ಎಂಬ ಮಹಿಳಾ ಉದ್ಯೋಗಿಯೊಬ್ಬರು ಸಂಸತ್ತಿನಲ್ಲಿ ಸಹೋದ್ಯೋಗಿಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದರು. ಅದರ ನಂತರ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಕಾನ್ಸ್‌ ಫೆಸ್ಟಿವಲ್‌ನಂತೆ ನಡೆಯುವ ACID ಕಾನ್ಸ್‌ ಚಲನಚಿತ್ರೋತ್ಸವ ಕಾರ್ಯಕ್ರಮದ ಉಪಾಧ್ಯಕ್ಷನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ(Physica Abuse) ಕೇಳಿಬಂದಿದೆ. ಮಹಿಳೆಯೊಬ್ಬರು ಈ ಆರೋಪ ಮಾಡಿದ್ದು, ಇದೀಗ ಆತನ ವಿರುದ್ಧ ಕ್ರಮಗೊಂಡು ಅಮಾನತುಗೊಳಿಸಲಾಗಿದೆ. ಫ್ರಾನ್ಸನ್‌ ಚಲನಚಿತ್ರ ಮಂಡಳಿ ಆಯೋಜಿಸಿದ್ದ ಸಭೆಯೊಂದರಲ್ಲಿ, ಏಕಾಏಕಿ ಎದ್ದು ನಿಂತ ಮಹಿಳೆ ACID ಕಾನ್ಸ್‌ ಚಲನಚಿತ್ರ ವಿಭಾಗದ ಉಪಾಧ್ಯಕ್ಷನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾಳೆ. ತಕ್ಷಣವೇ ಅಲ್ಲಿದ್ದ ಸಹಚರರು ಆಕೆಯನ್ನು ವಿಚಾರಿಸಿದ್ದಾರೆ. ತಕ್ಷಣ ಆಕೆ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ. ಆ ವ್ಯಕ್ತಿಯನ್ನು ಆತನ ಸ್ಥಾನದಿಂದ ಅಮಾನತು ಮಾಡಲಾಗಿದೆ. ಮತ್ತು ಪ್ರಕರಣದ ಬಗೆಗಿನ ಸತ್ಯಾಸತ್ಯತೆಯನ್ನು ತೆರೆದಿಡಲು ಆಂತರಿಕ ತನಿಖಾ ಬಾಹ್ಯ ಸಂಸ್ಥೆಗೆ ಪ್ರಕರಣವನ್ನು ವಹಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Cannes Film Festival: ACID ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಆರೋಪಿ ಅಮಾನತು

ಕಾನೂನಿನ ಕೆಲವು ಕಾರಣಗಳಿಂದ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದರು. ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದರು, ಕಾರ್ಯಕರ್ತರು, ಸಾರ್ವಜನಿಕರಿಂದ ವ್ಯಾಪಕವಾಗಿ ಕಾನ್ಸ್‌ ಮೇಲೆ ಒತ್ತಡ ಹೇರಲಾಗುತ್ತಿದೆ.