Trump Tariff: ಮುಂದುವರಿದ ಟ್ರಂಪ್ ಸುಂಕ ಸಮರ; ಔಷಧಗಳ ಮೇಲೂ ಶೇ. 100 ರಷ್ಟು ತೆರಿಗೆ
Tariff on drugs:ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಡೊನಾಲ್ಡ್ ಟ್ರಂಪ್, ಅಕ್ಟೋಬರ್ 1, 2025ರಿಂದ ಪ್ರಾರಂಭವಾಗುವಂತೆ ನಾವು ಬ್ರ್ಯಾಂಡೆಡ್ ಅಥವಾ ಪೇಟೆಂಟ್ ಹೊಂದಿರುವ ಔಷಧೀಯ ಉತ್ಪನ್ನಗಳ ಮೇಲೆ 100% ಸುಂಕವನ್ನು ವಿಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

-

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಗುರುವಾರ ಮತ್ತೊಂದು ಸುತ್ತಿನ ಆಮದು ತೆರಿಗೆಗಳನ್ನು(Trump Tariff) ಅನಾವರಣಗೊಳಿಸಿದ್ದು, ಭಾರತಕ್ಕೆ ಮತ್ತೆ ಶಾಕ್ ಎದುರಾಗಿದೆ. ಔಷಧಗಳಿಂದ ಹಿಡಿದು ಅಡುಗೆ ಸರಕುಗಳ ಮೇಲೆ ಶೇ. 100 ರಷ್ಟು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕಕ್ಕೆ ಆಮದಾಗುವ ಬ್ರ್ಯಾಂಡೆಡ್ ಅಥವಾ ಪೇಟೆಂಟ್ ಹೊಂದಿರುವ ಔಷಧ ಉತ್ಪನ್ನಗಳ ಮೇಲೆ ಅಕ್ಟೋಬರ್ 1, 2025ರಿಂದ ಪ್ರಾರಂಭವಾಗುವಂತೆ 100% ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಡೊನಾಲ್ಡ್ ಟ್ರಂಪ್, ಅಕ್ಟೋಬರ್ 1, 2025ರಿಂದ ಪ್ರಾರಂಭವಾಗುವಂತೆ ನಾವು ಬ್ರ್ಯಾಂಡೆಡ್ ಅಥವಾ ಪೇಟೆಂಟ್ ಹೊಂದಿರುವ ಔಷಧೀಯ ಉತ್ಪನ್ನಗಳ ಮೇಲೆ 100% ಸುಂಕವನ್ನು ವಿಧಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಟ್ರಂಪ್ ಸುಂಕದಿಂದ ಭಾರತದ ಮೇಲಾಗುವ ಪರಿಣಾಮ ಏನು?
ಟ್ರಂಪ್‌ನ ಈ ಹೊಸ ತೆರಿಗೆ ನೀತಿಯಿಂದ ಭಾರತದ ಮೇಲೆ ಭಾರೀ ದೊಡ್ಡ ಪ್ರಮಾಣದ ಪರಿಣಾಮ ಬೀರಲಿದೆ. ಅಮೆರಿಕಕ್ಕೆ ಆಮದಾಗುವ ಔಷಧೀಯ ಉತ್ಪನ್ನಗಳ ಮೇಲೆ ಟ್ರಂಪ್ 100% ಸುಂಕ ವಿಧಿಸಿರುವುದರಿಂದ ಅಕ್ಟೋಬರ್ 1ರಿಂದ ಭಾರತದ ಔಷಧ ಉತ್ಪಾದಕ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ. ಏಕೆಂದರೆ ಯುಎಸ್ ಭಾರತದ ಫಾರ್ಮಾ ಕಂಪನಿಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಅದ್ರಲ್ಲೂ ಪ್ರಮುಖವಾಗಿ ಕೈಗೆಟುವಂತಹ ಜೆನೆರಿಕ್ ಮೆಡಿಸಿನ್‌ಗಳು ಸಹ ಒಳಗೊಂಡಿವೆ. 2024ರಲ್ಲಿ ಭಾರತವು $3.6 ಬಿಲಿಯನ್ ಡಾಲರ್‌ನಷ್ಟು (31,626 ಕೋಟಿ ರೂಪಾಯಿ) ಮೌಲ್ಯದ ಔಷಧೀಯ ಉತ್ಪನ್ನಗಳು ಅಮೆರಿಕಾಕ್ಕೆ ರಫ್ತು ಮಾಡಿದೆ. ಅದೇ ರೀತಿಯಲ್ಲಿ ಈ ವರ್ಷ 2025ರ ಮೊದಲಾರ್ಧದಲ್ಲಿ $3.7 ಬಿಲಿಯನ್ (32,505 ಕೋಟಿ ರೂಪಾಯಿ) ಮೌಲ್ಯದ ಔಷಧಿಗಳನ್ನು ರಫ್ತು ಮಾಡಿದೆ.
ಪ್ರಮುಖ ಔಷಧೀಯ ಕಂಪನಿಗಳಾದ ಡಾ. ರೆಡ್ಡಿಸ್, ಸನ್ ಫಾರ್ಮಾ, ಲುಪಿನ್ ಮತ್ತು ಔರೊಬಿಂದೊ ಯುಎಸ್ ಮಾರುಕಟ್ಟೆಯಿಂದ ಹೆಚ್ಚಿನ ಲಾಭ ಪಡೆದಿವೆ. ಆದ್ರೆ ಟ್ರಂಪ್ ಸುಂಕದಿಂದಾಗಿ ಭಾರತದ ಪ್ರಮುಖ ಔಷಧಿ ತಯಾರಕ ಕಂಪನಿಗಳು ತೊಂದರೆಯನ್ನು ಎದುರಿಸುವಂತಾಗಿದೆ.
ಈ ಸುದ್ದಿಯನ್ನೂ ಓದಿ: Donald Trump: ಭಾರತ- ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ಕೊಡಲೇ ಬೇಕು; ಟ್ರಂಪ್
ಕಿಚನ್ ಕ್ಯಾಬಿನೆಟ್ಸ್, ಫರ್ನೀಚರ್, ಟ್ರಕ್‌ಗಳ ಮೇಲೂ ಸುಂಕ!
ಡೊನಾಲ್ಡ್ ಟ್ರಂಪ್ ಆಮದು ಸುಂಕವು ಇತರೆ ಕೆಲವು ವಸ್ತುಗಳ ಮೇಲೂ ಸಹ ಮುಂದುವರೆದಿದೆ. ಅದ್ರಲ್ಲೂ ಕಿಚನ್ ಕ್ಯಾಬಿನೆಟ್‌ಗಳ ಮೇಲೆ 50%, ಫರ್ನಿಚರ್ ಮೇಲೆ 30% ಮತ್ತು ಹೆವಿ ಟ್ರಕ್‌ಗಳ ಮೇಲೆ 25% ಸುಂಕವನ್ನು ವಿಸ್ತರಿಸಲಾಗಿದೆ. ಕಿಚನ್, ಬಾತ್‌ರೂಮ್ ಮತ್ತು ಇತರೆ ಫರ್ನಿಚರ್‌ಗಳ ಆಮದುಗಳಿಂದಾಗಿ ಅಮೆರಿಕಾದಲ್ಲಿ ಸ್ಥಳೀಯ ಉತ್ಪಾದಕರ ಮೇಲೆ ಪರಿಣಾಮ ಬೀರುತ್ತಿದ್ದು, ಈ ಸುಂಕ ಅನಿವಾರ್ಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.