ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trisha Thosar: ಕಮಲ್‌ ಹಾಸನ್‌ ದಾಖಲೆಯನ್ನೇ ಮುರಿದ್ಳು ಈ ಬಾಲ ನಟಿ! ಈಕೆಯ ಸಾಧನೆ ಎಂಥದ್ದು ಗೊತ್ತಾ?

National Film Awards: ಬಾಲ ಕಲಾವಿದೆ ತ್ರಿಶಾ ಥೋಸರ್ ಅವರು 5ನೇ ವಯಸ್ಸಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಹಿಂದೆ ಭಾರತ ಸಿನಿಮೋದ್ಯಮದ ಖ್ಯಾತ ನಟ ತಮ್ಮ 6ನೇ ವಯಸ್ಸಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು. ಈಗ ಆ ನಟನ ದಾಖಲೆಯನ್ನು ತ್ರಿಶಾ ಥೋಸರ್ ಮುರಿದಿದ್ದಾರೆ.

ಕಮಲ್‌ ಹಾಸನ್‌ ದಾಖಲೆಯನ್ನೇ ಮುರಿದ್ಳು ಈ ಬಾಲ ನಟಿ!

-

Profile Pushpa Kumari Sep 26, 2025 1:15 PM

ನವದೆಹಲಿ: ಚಲನ ಚಿತ್ರೋದ್ಯಮದಲ್ಲಿ ಸಾಧನೆ ಮಾಡಿದ್ದ ಕಲಾವಿದರನ್ನು ಗುರುತಿಸುವ ಸಲುವಾಗಿಯೇ ವರ್ಷ ವರ್ಷವೂ ಸೈಮಾ, ಫಿಫಾ ಸೇರಿದಂತೆ ಅನೇಕ ಪ್ರಶಸ್ತಿ ನೀಡಲಾಗುತ್ತದೆ. ಅದರ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ (National Film Awards) ಮಹಾ ಗೌರವ ಕೂಡ ಸಿಗುತ್ತದೆ. ಅಂತೆಯೇ ಈ ಬಾರಿ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾ ರಂಭವು ಸೆಪ್ಟೆಂಬರ್ 23 ರಂದು ದೆಹಲಿಯಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸಿನಿಮಾ ಕಲಾವಿದರು, ದೇಶದ ಗಣ್ಯರು ಆಗಮಿಸಿದ್ದರು.

ಇದೇ ಕಾರ್ಯಕ್ರಮದಲ್ಲಿ ಬಾಲ ಕಲಾವಿದೆಯ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಬಾಲ ಕಲಾವಿದೆ ತ್ರಿಶಾ ಥೋಸರ್ (Trisha Thosar) ಅವರು 5ನೇ ವಯಸ್ಸಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಹಿಂದೆ ಭಾರತ ಸಿನಿಮೋದ್ಯಮದ ಖ್ಯಾತ ನಟ ತಮ್ಮ 6ನೇ ವಯಸ್ಸಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು ಈಗ ಆ ನಟನ ದಾಖಲೆಯನ್ನು ತ್ರಿಶಾ ಥೋಸರ್ ಮುರಿದಿದ್ದಾರೆ.

ತ್ರಿಶಾ ಥೋಸರ್ ಅವರು ನಾಲ್ 2 ಎಂಬ ಮರಾಠಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಸಿಮಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು ಅವರ ನಟನೆಗೆ ಮೆಚ್ಚಿ ಅತ್ಯುತ್ತಮ ಬಾಲನಟಿ ಪ್ರಶಸ್ತಿ ದೊರಕುವಂತಾಗಿದೆ. ಈಗ ಅವರಿಗೆ ಐದು ವರ್ಷ ವಯಸ್ಸಾಗಿದ್ದು ಅವರು ಈ ಚಿತ್ರದಲ್ಲಿ ನಟಿಸಿದಾಗ ಕೇವಲ ಮೂರು ವರ್ಷದವರಾಗಿದ್ದರು. ಈ ಮೂಲಕ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆಯನ್ನು ತ್ರಿಶಾ ಮಾಡಿದ್ದಾರೆ. ಇದಕ್ಕು ಹಿಂದೆ ನಟ ಕಮಲ್ ಹಾಸನ್ ಅವರು ತಮ್ಮ 6ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.

ಇದನ್ನು ಓದಿ:Pawan Kalyan Movie: ಪವನ್‌ ಕಲ್ಯಾಣ್‌ ನಟನೆಯ 'ಒಜಿ'ಗೆ ಸಖತ್ ರೆಸ್ಪಾನ್ಸ್- ಸಿನಿಮಾ ನೋಡಿ ಪ್ರಶಾಂತ್ ನೀಲ್ ಫುಲ್‌ ಖುಷ್‌!

ಐದು ವರ್ಷದ ಬಾಲಕಿ ತ್ರಿಶಾ ಅವರು ಬಿಳಿ ಬಣ್ಣದ ಸೀರೆಯುಟ್ಟು ಭಾರತದ ರಾಷ್ಟ್ರಪತಿಗಳಿಂದ ಗೌರವವನ್ನು ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಕೂಡ ಆಗಿತ್ತು. ತ್ರಿಶಾಳನ್ನು ನೋಡುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಚಪ್ಪಾಳೆ ತಟ್ಟಿ ಪ್ರೋತ್ಸಾ ಹಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ತ್ರಿಶಾ ಮಾಡಿದ್ದಾರೆ. ಇದಕ್ಕೆ ನಟ ಕಮಲ್ ಹಾಸನ್ ಕೂಡ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ.

ಕಮಲ್ ಹಾಸನ್ ಅವರು ಈ ಬಗ್ಗೆ ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿ ಕೊಂಡಿದ್ದಾರೆ. ಪುಟ್ಟ ಸಾಧಕಿಯಾದ ನಿಮಗೆ ನನ್ನ ನಮನಗಳು. ನಾನು ನನ್ನ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಾಗ ನನಗೆ ಆರು ವರ್ಷ, ನೀವು ನನ್ನ ದಾಖಲೆಯನ್ನು ಮುರಿದಿದ್ದೀರಿ. ನಿಮಗೆ ಒಳ್ಳೆದಾಗಲಿ. ಇನ್ನೂ ಬಹಳ ದೂರ ಸಾಗಬೇಕಾಗಿದೆ,. ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಲೇ ಇರಿ. ನಿಮಗೂ ನಿಮ್ಮ ಕುಟುಂಬಕ್ಕೂ ಅಭಿನಂದನೆಗಳು ಎಂದು ಶುಭಕೋರಿದ್ದಾರೆ. ತ್ರಿಶಾ ಅವರು ಹಲ ವಾರು ಮರಾಠಿ ಭಾಷೆಯ ಸಿನಿಮಾ ಮತ್ತು ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮರಾಠಿ ಕಾಮಿಡಿ ಕ್ರೈಂ ಥ್ರಿಲ್ಲರ್ 'ಆಟ್ಲಿ ಬಾತ್ಮಿ ಫುಟ್ಲಿ' ಯಲ್ಲಿ ಕೂಡ ನಟಿಸಿದರು. ಮಹೇಶ್ ಮಂಜುರೇಕ್ ನಿರ್ದೇಶನದ 'ಪುನ್ಹಾ ಶಿವಾಜಿ ರಾಜೇ ಭೋಸಲೆ' ಚಿತ್ರದಲ್ಲಿ ಸದ್ಯ ನಟಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ತ್ರಿಶಾ ಥೋಸರ್ ಜೊತೆಗೆ ಒಟ್ಟು ಐದು ಮಕ್ಕಳಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ನೀಡಲಾಗಿದೆ. ಶ್ರೀನಿವಾಸ್ ಪೋಕಲೆ, ಭಾರ್ಗವ್ ಜಗ್ತಾಪ್, ಕಬೀರ್ ಖಂಡಾರೆ ಮತ್ತು ಸುಕೃತಿ ವೇಣಿ ಬಂಡ್‌ರೆಡ್ಡಿ ಅವರಿಗೆ ಕೂಡ ಈ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತೀಯ ಚಿತ್ರ ರಂಗದ ಅತ್ಯಂತ ಪ್ರತಿಷ್ಠಿತವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ನಟ ಮೋಹನ್ ಲಾಲ್ ಅವರಿಗೆ ನೀಡಲಾಯಿತು. ನಟ ಶಾರುಖ್ ಖಾನ್ ಅವರಿಗೆ ಜವಾನ್ ಸಿನಿಮಾ ಅಭಿನಯಕ್ಕಾಗಿ ಹಾಗೂ ವಿಕ್ರಾಂತ್ ಮಾಸ್ಸೆ ಅವರಿಗೆ ಟ್ವೆಲ್ತ್ ಫೇಲ್ ಸಿನಿಮಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅಂತೆಯೇ ನಟಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯ ಗರಿಮೆ ದೊರೆತಿದೆ.