ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Donald Trump: ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ತಾನೇ ಎಂದು ಘೋಷಿಸಿಕೊಂಡ ಡೊನಾಲ್ಡ್ ಟ್ರಂಪ್!

Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವೆನೆಜುವೆಲಾದ ಹಂಗಾಮಿ (ಅಂತರಿಮ್) ಅಧ್ಯಕ್ಷನಾಗಿ ತಾನು ನೇಮಕಗೊಂಡಿದ್ದೇನೆ ಎಂದು ಘೋಷಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಡಿಜಿಟಲ್ ರೂಪದಲ್ಲಿ ಮಾರ್ಪಡಿಸಿದ ಚಿತ್ರವೊಂದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಡಿಜಿಟಲ್ ರೂಪದಲ್ಲಿ ಮಾರ್ಪಡಿಸಿದ ಚಿತ್ರವೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಂಚಿಕೊಂಡಿದ್ದು, ತಾವು ವೆನೆಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಹೇಳಿಕೊಂಡಿದ್ದಾರೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ (Nicolas Maduro) ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕ ಸೆರೆಹಿಡಿದ ನಂತರ ತೀವ್ರ ಅಂತಾರಾಷ್ಟ್ರೀಯ ವಿವಾದದ ನಡುವೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ವೆನೆಜುವೆಲಾದ ಅಂತರಿಮ್ ನೇತೃತ್ವವನ್ನು ಅಮೆರಿಕದ ಅಧ್ಯಕ್ಷರು ಕಾರ್ಯನಿರ್ವಹಣಾಧಿಕಾರವನ್ನು ಹೊತ್ತಿರುವುದರಿಂದ ಉದ್ಭವಿಸಿಲ್ಲ. ಬದಲಾಗಿ ಅದು ವೆನೆಜುವೆಲಾದ ಮೇಲ್ಮನೆಯ ನ್ಯಾಯಮಂಡಳಿ (Supreme Tribunal of Justice) ಮತ್ತು ಸಂವಿಧಾನಾತ್ಮಕ ಅಧಿಕಾರ ಪರಂಪರಾ ಪ್ರಕ್ರಿಯೆಯ ಮೂಲಕ ದೇಶದ ಒಳಗಿನ ನಿಯಮಗಳಂತೆ ಸ್ಥಾಪಿತವಾಗಿದೆ.

Donald Trump:ಹೈದರಾಬಾದ್‌ನ ರಸ್ತೆಗೆ ಡೊನಾಲ್ಡ್‌ ಟ್ರಂಪ್‌ ಹೆಸರಿಟ್ಟ ತೆಲಂಗಾಣ ಸರ್ಕಾರ; ಯಾಕೆ ಗೊತ್ತಾ?

ವಿಕಿಪೀಡಿಯಾದ ಅಧಿಕೃತ ಪುಟದಲ್ಲಿರುವ ಮಾಹಿತಿಯನ್ನು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ಅವರ ಅಧಿಕೃತ ಭಾವಚಿತ್ರವನ್ನು ಬಳಸಲಾಗಿದೆ. ವೆನೆಜುವೆಲಾದ ಹಂಗಾಮಿ ಅಧ್ಯಕ್ಷರು ಎಂಬ ಬಗ್ಗೆಗಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಆರೋಪಿಸುತ್ತಲೇ ಬಂದಿತ್ತು. ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಹೊರಗಿಡುವ ಪ್ರಯತ್ನಗಳ ಭಾಗವಾಗಿ, ನಿರ್ಬಂಧಗಳನ್ನು ಹೆಚ್ಚಿಸುವುದು, ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಚರಣೆ ಹೆಚ್ಚಿಸುವ ಜೊತೆಗೆ ಕೆರಿಬಿಯನ್ ಮತ್ತು ಪೆಸಿಫಿಕ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊತ್ತಿರುವ ಎರಡು ಡಜನ್‌ಗೂ ಹೆಚ್ಚು ಹಡಗುಗಳನ್ನು ಗುರಿಯಾಗಿಸಿಕೊಂಡು ವೆನೆಜುವೆಲಾದಲ್ಲಿ ಕಾರ್ಯಾಚರಣೆಗಳನ್ನು ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಮೊನ್ನೆಯಷ್ಟೇ ಅಮೆರಿಕ ಸೇನೆ ದಾಳಿ ನಡೆಸಿತು.

ವೆನೆಜುವೆಲಾದ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿಯ ನಂತರ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕದ ಪಡೆಗಳು ಸೆರೆಹಿಡಿದಿವೆ. ಇದೀಗ ಮಡುರೊ ಅಮೆರಿಕ ವಶದಲ್ಲಿದ್ದಾರೆ.

ಮಿಲಿಟರಿ ಕಾರ್ಯಾಚರಣೆಯ ನಂತರ ಅಮೆರಿಕದ ತೈಲ ಕಂಪನಿಗಳು ವೆನೆಜುವೆಲಾಕ್ಕೆ ತೆರಳಿ ಅದರ ಬೃಹತ್ ಕಚ್ಚಾ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅವಕಾಶ ನೀಡುವುದಾಗಿ ಟ್ರಂಪ್‌ ಹೇಳಿದ್ದರು. ವೆನೆಜುವೆಲಾ 2019 ರಿಂದ ಅಮೆರಿಕದ ತೈಲ ನಿರ್ಬಂಧಗಳಿಗೆ ಒಳಗಾಗಿದೆ. ಇದು ದಿನಕ್ಕೆ ಸುಮಾರು ಒಂದು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಉತ್ಪಾದಿಸುತ್ತದೆ. ನಮ್ಮ ಅತಿದೊಡ್ಡ ಯುನೈಟೆಡ್ ಸ್ಟೇಟ್ಸ್ ತೈಲ ಕಂಪನಿಗಳು, ವಿಶ್ವದ ಎಲ್ಲೆಡೆಯೂ ದೊಡ್ಡವು, ಒಳಗೆ ಹೋಗಿ, ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಿ, ಕೆಟ್ಟದಾಗಿ ಮುರಿದುಹೋಗಿರುವ ಮೂಲಸೌಕರ್ಯ, ತೈಲ ಮೂಲಸೌಕರ್ಯವನ್ನು ಸರಿಪಡಿಸಿ, ದೇಶಕ್ಕಾಗಿ ಹಣ ಸಂಪಾದಿಸಲು ಪ್ರಾರಂಭಿಸುತ್ತೇವೆ. ನಾವು ದೊಡ್ಡ ಪ್ರಮಾಣದಲ್ಲಿ ತೈಲವನ್ನು ಮಾರಾಟ ಮಾಡುತ್ತೇವೆ. ಎಲ್ಲಾ ವೆನೆಜುವೆಲಾದ ತೈಲದ ಮೇಲಿನ ನಿರ್ಬಂಧವು ಪೂರ್ಣವಾಗಿ ಜಾರಿಯಲ್ಲಿದೆ ಎಂದು ಟ್ರಂಪ್ ಹೇಳಿದ್ದರು.