ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದುಬೈ, ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಕೇಳಿಬಂತು ಭಾರಿ ಸ್ಫೋಟದ ಸದ್ದು

Gulf Airports Hit by Iran Attack: ಮಧ್ಯಪ್ರಾಚ್ಯ ಯುದ್ಧವು 16ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ ಇರಾನ್ ಬಳಿಕ, ಇದೀಗ ದುಬೈಯ ಮರೀನಾ ಮತ್ತು ಅಲ್ ಸುಫೌಹ್ ಪ್ರದೇಶಗಳಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಮತ್ತೊಂದೆಡೆ, ಕೆಲವು ಡ್ರೋನ್‌ಗಳು ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿವೆ.

ದುಬೈ, ಕುವೈತ್ ವಿಮಾನ ನಿಲ್ದಾಣದಲ್ಲಿ ಇರಾನ್ ದಾಳಿ

ಅಬುಧಾಬಿ, ಮಾ. 15: ಮಧ್ಯಪ್ರಾಚ್ಯ ಯುದ್ಧವು (Middle east crisis) 16ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ ಭಾನುವಾರ (ಮಾ. 15) ಇರಾನ್ ದಾಳಿಗಳ (Iran war) ಬಳಿಕ ದುಬೈಯ ಮರೀನಾ ಮತ್ತು ಅಲ್ ಸುಫೌಹ್ ಪ್ರದೇಶಗಳಲ್ಲಿ ಭಾರಿ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಇದೇ ವೇಳೆ ಫುಜೈರಾ ತೈಲ ಟರ್ಮಿನಲ್‌ನಲ್ಲಿ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ ಎಂದು ತಿಳಿದುಬಂದಿದೆ.

ಮತ್ತೊಂದೆಡೆ, ಕೆಲವು ಡ್ರೋನ್‌ಗಳು ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿವೆ. ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಫುಜೈರಾದಿಂದ ಕಡು ಕಪ್ಪು ಹೊಗೆಯ ಮೋಡಗಳು ಮೇಲೇರಿದವು. ಅಗ್ನಿಶಾಮಕದಳದ ಸಿಬ್ಬಂದಿ ಗಂಟೆಗಟ್ಟಲೆ ಸತತವಾಗಿ ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟಿದ್ದಾರೆ. ಜೋರ್ಡಾನ್ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆ.

ಶನಿವಾರವೂ (ಮಾ. 14) ದುಬೈ ನಗರದ ಮಧ್ಯಭಾಗದಲ್ಲಿ ಸ್ಫೋಟದಂತಹ ಸದ್ದುಗಳು ಕೇಳಿಬಂದಿದ್ದವು. ಇದೇ ರೀತಿಯ ಘಟನೆಗಳು ಶುಕ್ರವಾರ (ಮಾ. 13) ನಗರದಲ್ಲಿನ ಚಟುವಟಿಕೆಯಿಂದ ಕಿಕ್ಕಿರಿದ ಡೌನ್‌ಟೌನ್ ದುಬೈ ಪ್ರದೇಶದಲ್ಲಿಯೂ ವರದಿಯಾಗಿದ್ದವು.

ಮಾತುಕತೆಗೆ ಇರಾನ್ ಸಿದ್ಧವಾದರೂ ನಮಗೆ ಯುದ್ಧ ತೃಪ್ತಿ ಕೊಟ್ಟಿಲ್ಲ ಎಂದ ದೊಡ್ಡಣ್ಣ

ಭಾನುವಾರದ (ಮಾ. 15) ದಾಳಿಗಳು ನಡೆಯುವುದಕ್ಕೂ ಮೊದಲು ಉದ್ವಿಗ್ನತೆ ಮತ್ತಷ್ಟು ಹೆಚ್ಚಿತ್ತು. ಏಕೆಂದರೆ ಅಮೆರಿಕವು ಇರಾನ್‌ನ ಪ್ರಮುಖ ತೈಲ ಕೇಂದ್ರವಾಗಿರುವ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆಸಿತ್ತು. ಈ ದ್ವೀಪದಲ್ಲಿ ದೇಶದ ಸುಮಾರು ಶೇ. 90ರಷ್ಟು ತೈಲ ಸಂಸ್ಕರಣೆ ನಡೆಯುತ್ತದೆ ಮತ್ತು ರಫ್ತಿಗೆ ಪ್ರಮುಖ ಕೇಂದ್ರವಾಗಿದೆ.

ಈ ಕುರಿತು ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ಪಡೆಗಳು ದ್ವೀಪದಲ್ಲಿದ್ದ ಎಲ್ಲ ಸೈನಿಕ ಗುರಿಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಪರ್ಷಿಯನ್ ಕೊಲ್ಲಿಯಲ್ಲಿ ಇರುವ ತೈಲ ಸೌಲಭ್ಯಗಳನ್ನು ಉದ್ದೇಶಪೂರ್ವಕವಾಗಿ ದಾಳಿ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇರಾನ್ ಈ ಸಂಘರ್ಷದ ಸಮಯದಲ್ಲಿ ಯುಎಇ ಮೇಲೆ ಈಗಾಗಲೇ 1,800ಕ್ಕೂ ಹೆಚ್ಚು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ. ಇದರಲ್ಲಿ 1,600 ಡ್ರೋನ್‌ಗಳು, 294 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 15 ಕ್ರೂಸ್ ಕ್ಷಿಪಣಿಗಳು ಸೇರಿವೆ. ಈ ದಾಳಿಯಲ್ಲಿ ಆರು ಜನರು ಮೃತಪಟ್ಟಿದ್ದು, 141 ಜನರು ಗಾಯಗೊಂಡಿದ್ದಾರೆ. ಶನಿವಾರ ಮಾತ್ರ, ಒಂಭತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 33 ಡ್ರೋನ್‌ಗಳನ್ನು ಯುಎಇ ಕಡೆಗೆ ಹಾರಿಸಲಾಗಿದೆ.

ಇದೇ ವೇಳೆ ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳು, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದಲ್ಲಿ 10 ವಿದೇಶಿ ನಾಗರಿಕರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಗಾಯಾಳು ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ರಕ್ಷಣೆಗೆ ರಹಸ್ಯ ಸೈನ್ಯ ನೋಪೋ ನಿಯೋಜನೆ

ಇದಲ್ಲದೆ ಇರಾನ್, ಕುವೈತ್‌ನಿಂದ ಓಮನ್‌ವರೆಗೆ ಇರುವ ಗಲ್ಫ್ ಪ್ರದೇಶದ ಪ್ರಮುಖ ಇಂಧನ ಕೇಂದ್ರಗಳನ್ನೂ ಕ್ರಮಬದ್ಧವಾಗಿ ಗುರಿಯಾಗಿಸಲಾಗಿದೆ. ಇವುಗಳಲ್ಲಿ ರಾಸ್ ತನುರಾ ಸಂಸ್ಕರಣಾ (ಸೌದಿ ಅರೇಬಿಯಾದ ಅತಿ ದೊಡ್ಡ ತೈಲ ಶುದ್ಧೀಕರಣ ಘಟಕ), ರಾಸ್ ಲಫಾನ್ ಅನಿಲ ಸಂಸ್ಕರಣಾ (ಕತಾರ್‌ನ ಪ್ರಮುಖ ಅನಿಲ ಸಂಸ್ಕರಣಾ ಕೇಂದ್ರ) ಹಾಗೂ ರುವೈಸ್ ಸಂಸ್ಕರಣಾಗಾರ ಇರುವ ಸಂಕೀರ್ಣವೂ ಸೇರಿವೆ. ಈ ಎಲ್ಲ ಪ್ರಮುಖ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ ಎಂದು ವರದಿಯಾಗಿದೆ.

ಬಹ್ರೇನ್‌ನ ರಾಜಧಾನಿ ಮನಾಮದಲ್ಲಿ ಸ್ಫೋಟಗಳು ಕೇಳಿಬಂದವು. ಇರಾನ್ ದಾಳಿಗಳು ಪ್ರಾರಂಭವಾದಾಗಿನಿಂದ 125 ಕ್ಷಿಪಣಿಗಳು ಮತ್ತು 203 ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ಬಹ್ರೇನ್‌ ಹೇಳಿದೆ. ಈ ದಾಳಿಯ ನಡುವೆ, ಏಪ್ರಿಲ್‌ನಲ್ಲಿ ಬಹ್ರೇನ್ ಮತ್ತು ಸೌದಿ ಅರೇಬಿಯಾದಲ್ಲಿ ನಡೆಯಬೇಕಿದ್ದ ಫಾರ್ಮುಲಾ ಒನ್ ರೇಸ್‌ಗಳನ್ನು ರದ್ದುಗೊಳಿಸಲಾಯಿತು.