Nepal Earthquake: ನೇಪಾಳದಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪ; 6.1 ತೀವ್ರತೆ ದಾಖಲು
ಇತ್ತೀಚಿನ ಕೆಲವು ದಿಗಗಳಿಂದ ಪದೇ ಪದೆ ಭೂಕಂಪ ಸಂಭವಿಸುತ್ತಿದೆ. ನೇಪಾಳದ ಸಿಂಧುಪಾಲ್ಚೋಕ್ ಜಿಲ್ಲೆಯ ಭೈರಬ್ ಕುಂಡಾ ಸುತ್ತಮುತ್ತ ಬೆಳಗಿನ ಜಾವ 2.35 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪ ತೀವ್ರ 6.1 ಎಂದು ಅಂದಾಜಿಸಲಾಗಿದೆ.


ಕಠ್ಮಂಡು: ನೇಪಾಳದಲ್ಲಿ ಶುಕ್ರವಾರ ಮುಂಜಾನೆ 6.1 ತೀವ್ರತೆಯ ಭೂಕಂಪ(Nepal Earthquake) ಸಂಭವಿಸಿದ್ದು, ಹಿಮಾಲಯ ಪ್ರದೇಶದಾದ್ಯಂತ ಭೂಮಿ ಕಂಪಿಸಿದ ಅನುಭವವಾಗಿದೆ. ಪಟನಾ ಮತ್ತು ಬಿಹಾರದ ಹತ್ತಿರದ ಪ್ರದೇಶಗಳಲ್ಲಿಯೂ ಕಂಪನದ ಅನುಭವವಾಗಿದೆ. ನೇಪಾಳದ ಸಿಂಧುಪಾಲ್ಚೋಕ್ ಜಿಲ್ಲೆಯ ಭೈರಬ್ ಕುಂಡಾ ಸುತ್ತಮುತ್ತ ಬೆಳಗಿನ ಜಾವ 2.35 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರವು ಭೂಕಂಪವನ್ನು 5.6 ತೀವ್ರತೆ ಎಂದು ಹೇಳಿದೆ. ಆದರೆ ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಅದನ್ನು 6.1 ಎಂದು ಅಂದಾಜಿಸಿದೆ. ನಂತರ 6.1 ತೀವ್ರತೆಯ ಭೂಕಂಪವನ್ನು ಪ್ರಬಲವೆಂದು ಪರಿಗಣಿಸಲಾಗಿದೆ ಮತ್ತು ಅದು ದೊಡ್ಡ ಮಟ್ಟದ ಹಾನಿಯನ್ನುಂಟುಮಾಡಬಹುದು. ಇನ್ನು ಭೂಕಂಪದಿಂದ ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿಗಳು ಇಲ್ಲಿಯವರೆಗೆ ವರದಿಯಾಗಿಲ್ಲ.
ಇನ್ನು ಈ ಬಗ್ಗೆ ನೇಪಾಳದ ಹಿರಿಯ ಅಧಿಕಾರಿ ಗಣೇಶ್ ನೇಪಾಳಿ ಪ್ರತಿಕ್ರಿಯಿಸಿದ್ದು, ಗಾಢಾ ನಿದ್ದೆಯಲ್ಲಿದ್ದ ನಾವು ಏಕಾಏಕಿ ಕಟ್ಟಡ ಅಲುಗಾಡಿದಂತೆ ಭಾಸವಾಯ್ತು. ಭಯಗೊಂಡ ನಾವು ಮನೆಯಿಂದ ಹೊರಗೆ ಧಾವಿಸಿದೆವು. ಜನರು ಈಗ ಮನೆಗಳಿಗೆ ಮರಳಿದ್ದಾರೆ. ಇಲ್ಲಿಯವರೆಗೆ ನಮಗೆ ಯಾವುದೇ ಹಾನಿ ಅಥವಾ ಸಾವು-ನೋವುಗಳ ಬಗ್ಗೆ ವರದಿ ಬಂದಿಲ್ಲ" ಎಂದು ರಾಯಿಟರ್ಸ್‌ಗೆ ತಿಳಿಸಿದರು.
#Earthquake jolts #Patna at 2:37 am pic.twitter.com/6EpPy473ZN
— K Sarvottam (@k_sarvottam21) February 27, 2025
ಉತ್ತರಭಾರತದಲ್ಲೂ ಭೂಮಿ ಕಂಪಿಸಿದ ಅನುಭವ
ಇನ್ನು ನೇಪಾಳದ ಭೂಕಂಪದಿಂದಾಗಿ ಉತ್ತರಭಾರತದ ಕೆಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವುಂಟಾಗಿದೆ. ಬಿಹಾರದ ಪಟನಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕಟ್ಟಡಗಳು ಮತ್ತು ಸೀಲಿಂಗ್ ಫ್ಯಾನ್‌ಗಳು ಅಲುಗಾಡುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಜನರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. 35 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ ಎನ್ನಲಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ಕೇಂದ್ರಬಿಂದು ನೇಪಾಳವಾಗಿತ್ತು. ಮೊದಲ ಭೂಕಂಪ ಬಿಹಾರ ಗಡಿಯ ಬಳಿ ಸಂಭವಿಸಿದೆ. ನೇಪಾಳದ ಬಾಗ್ಮತಿ ಪ್ರಾಂತ್ಯದಲ್ಲಿ ತಡರಾತ್ರಿ 2.36ಕ್ಕೆ ಭೂಕಂಪನದ ಅನುಭವವಾಗಿದೆ. ಈ ಸ್ಥಳವು ಬಿಹಾರದ ಮುಜಫರ್‌ಪುರದಿಂದ ಸುಮಾರು 189 ಕಿಲೋಮೀಟರ್ ದೂರದಲ್ಲಿದೆ. ಇದರಿಂದಾಗಿ ಮಿಥಿಲಾ ಪ್ರದೇಶದಲ್ಲಿ ಮಲಗಿದ್ದ ಜನರು ಕೂಡ ಭೂಮಿಯ ಕಂಪನದಿಂದಾಗಿ ಎಚ್ಚರಗೊಂಡರು.
ಈ ಸುದ್ದಿಯನ್ನೂ ಓದಿ: Kolkata earthquake : ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ; ಕೋಲ್ಕತ್ತಾ ಸೇರಿದಂತೆ ಹಲವು ಸ್ಥಳಗಳಲ್ಲಿ ಕಂಪನದ ಅನುಭವ
ಬಿಹಾರದ ಪಾಟ್ನಾದಲ್ಲಿ ಬಲವಾದ ಭೂಕಂಪನದ ಅನುಭವವಾಯಿತು. ಎಲ್ಲವೂ ನಡುಗುತ್ತಿತ್ತು ಆದರೆ ಇಲ್ಲಿಯವರೆಗೆ ಯಾವುದೇ ಗೋಚರ ಹಾನಿ ಕಂಡುಬಂದಿಲ್ಲ" ಎಂದು ನಿಖಿಲ್ ಸಿಂಗ್ ಎಂಬ ನೆಟ್ಟಿಗರು ಬರೆದಿದ್ದಾರೆ.