ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Kolkata earthquake : ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ; ಕೋಲ್ಕತ್ತಾ ಸೇರಿದಂತೆ ಹಲವು ಸ್ಥಳಗಳಲ್ಲಿ ಕಂಪನದ ಅನುಭವ

ಮಂಗಳವಾರ ಬೆಳಿಗ್ಗೆ ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೊಲ್ಕತ್ತ ಮತ್ತು ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಬೆಳಿಗ್ಗೆ 6:10 ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ.

ಬಂಗಾಳಕೊಲ್ಲಿಯಲ್ಲಿ ಕಂಪಿಸಿದ ಭೂಮಿ;  5.1 ತೀವ್ರತೆ ದಾಖಲು

ಸಾಂದರ್ಭಿಕ ಚಿತ್ರ

Profile Vishakha Bhat Feb 25, 2025 8:58 AM

ಕೊಲ್ಕತ್ತ: ಮಂಗಳವಾರ ಬೆಳಿಗ್ಗೆ ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೊಲ್ಕತ್ತ (Kolkata earthquake) ಮತ್ತು ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಬೆಳಿಗ್ಗೆ 6:10 ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ. ಒಡಿಶಾದ ಪುರಿ ಬಳಿ ಭೂಕಂಪ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ . ಬಂಗಾಳಕೊಲ್ಲಿಯಲ್ಲಿ 91 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅವರು ಹೇಳಿದರು. ಭೂಕಂಪನವು 19.52 N ಅಕ್ಷಾಂಶ ಮತ್ತು 88.55 E ರೇಖಾಂಶದಲ್ಲಿ ದಾಖಲಾಗಿದೆ.

ಭೂಕಂಪನವಾಗುತ್ತಿದ್ದಂತೆ ಕೊಲ್ಕತ್ತಾ ನಿವಾಸಿಗಳು ಭಯಭೀತರಾಗಿದ್ದರು. ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಯಾರಿಗಾದರೂ ಭೂಕಂಪನದ ಅನುಭವಾಗಿದೆಯೇ, ಎಚ್ಚರವಾಗಿರಿ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ಬೆಳಿಗ್ಗೆ 6:10 ರ ಸುಮಾರಿಗೆ ಭೂಕಂಪನದ ಅನುಭವಾಗಿದೆ. ಒರಿಸ್ಸಾದಿಂದ 175 ಕಿ.ಮೀ ದೂರದಲ್ಲಿ ಕೇಂದ್ರಬಿಂದು ಇರಬಹುದು ಎಂದು ವರದಿಗಳು ಸೂಚಿಸಿವೆ.



ಭಾನುವಾರ, ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬೆಳಿಗ್ಗೆ 8.42 ಕ್ಕೆ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ, ಆದರೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಇಲಾಖೆಯ ಕಚೇರಿಯ ಪ್ರಕಾರ, ಭೂಕಂಪದ ತೀವ್ರತೆ 3.7 ರಷ್ಟಿದ್ದು, ಮಂಡಿ ಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದು 31.48 ಡಿಗ್ರಿ ಅಕ್ಷಾಂಶ ಮತ್ತು 76.95 ಡಿಗ್ರಿ ರೇಖಾಂಶದಲ್ಲಿದೆ. ಸುಂದರ್‌ನಗರ ಪ್ರದೇಶದ ಕಿಯಾರ್ಗಿ ಬಳಿ 7 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಡಿ ಜಿಲ್ಲೆ ಭೂಕಂಪನ ವಲಯ 5 ರ ಅಡಿಯಲ್ಲಿ ಬರುತ್ತದೆ, ಇದು ಹೆಚ್ಚಿನ ಹಾನಿ ಅಪಾಯದ ವಲಯವಾಗಿದೆ.

ಈ ಸುದ್ದಿಯನ್ನೂ ಓದಿ: Earthquake: ದೆಹಲಿ ಬೆನ್ನಲ್ಲೇ ಬಿಹಾರ, ಸಿಕ್ಕಿಂನಲ್ಲೂ ಭೂಕಂಪ; 2.3 ತೀವ್ರತೆ ದಾಖಲು

ಕೊಲ್ಕತ್ತ ಭೂಕಂಪನ ವಲಯ III ರಲ್ಲಿ ಬರುತ್ತದೆ, ಈಶಾನ್ಯ ಭಾರತ, ಹಿಮಾಲಯ ಅಥವಾ ಗುಜರಾತ್‌ನಂತಹ ಸ್ಥಳಗಳಂತೆ ಇದು ಪ್ರಮುಖ ಭೂಕಂಪಗಳಿಗೆ ಗುರಿಯಾಗದಿದ್ದರೂ, ಕಾಲಕಾಲಕ್ಕೆ ನಗರವು ಕಂಪನಗಳಿಗೆ ಒಳಗಾಗುತ್ತದೆ.