Rajyalaxmi Chitrakar: ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನಾಕಾರರ ಆಕ್ರೋಶ; ಮಾಜಿ ಪ್ರಧಾನಿ ಪತ್ನಿ ಸಜೀವ ದಹನ
Nepal Gen Z Protest: ನೇಪಾಳದಲ್ಲಿ ಜೆನ್ ಝಿ ತಲೆಮಾರಿನ ಪ್ರತಿಭಟನಾಕಾರರು ಮಾಜಿ ಪ್ರಧಾನಿ ಜಲನಾಥ್ ಖನಾಲ್ ನಿವಾಸಕ್ಕೆ ಬೆಂಕಿ ಹಚ್ಚಿದ್ದು, ಅವರ ಪತ್ನಿ ರಾಜಲಕ್ಷ್ಮೀ ಚಿತ್ರಾಕರ್ ಜೀವಂತವಾಗಿ ಸುಟ್ಟು ಹೋಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

-

ಕಠ್ಮಂಡು: ಜೆನ್ ಝಿ ತಲೆಮಾರು ನಡೆಸಿದ ಕಂಡು ಕೇರಳರಿಯದ ಹೋರಾಟಕ್ಕೆ ನೇಪಾಳ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಪ್ರತಿಟನಾಕಾರರು ನೇಪಾಳದ ಮಾಜಿ ಪ್ರಧಾನಿ ಜಲನಾಥ್ ಖನಾಲ್ (Jhalanath Khanal) ನಿವಾಸಕ್ಕೆ ಬೆಂಕಿ ಹಚ್ಚಿದ್ದು, ಅವರ ಪತ್ನಿ ರಾಜಲಕ್ಷ್ಮೀ ಚಿತ್ರಾಕರ್ (Rajyalaxmi Chitrakar) ಜೀವಂತವಾಗಿ ಸುಟ್ಟು ಹೋಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಪ್ರತಿಭನಾಕಾರರು ಮನೆಗೆ ಬೆಂಕಿ ಹಚ್ಚಿದ ವೇಳೆ ರಾಜಲಕ್ಷ್ಮೀ ಅದರೊಳಗೆ ಸಿಕ್ಕಿ ಹಾಕಿಕೊಂಡಿದ್ದರು. ಜಲನಾತ್ ಖನಲ್ ಅದೃಷ್ಟವಶಾತ್ ಪಾರಾಗಿದ್ದಾರೆ.
ನೇಪಾಳ ರಾಜಧಾನಿ ಕಠ್ಮಂಡುವಿನ ಡಲ್ಲು ಪ್ರದೇಶದಲ್ಲಿರುವ ಜಲನಾಥ್ ಖನಾಲ್ ಮನೆಗೆ ಮಂಗಳವಾರ (ಸೆಪ್ಟೆಂಬರ್ 9) ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಬೆಂಕಿ ಹಚ್ಚಿದ್ದರು. ಗಾಯಗೊಂಡ ರಾಜಲಕ್ಷ್ಮೀ ಚಿತ್ರಾಕರ್ ಅವರನ್ನು ಕೂಡಲೇ ಕೀರ್ತಿಪುರ ಬರ್ನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Ex Nepal PM's Wife Burnt Alive: Sources
— Saurabh Sharma (@saurabhsherry) September 9, 2025
Ex Nepal PM Jhalanath Khanal's house set on fire by protesters, his wife dies of burn injuries pic.twitter.com/1kPJy2kj6J
ಸೋಶಿಯಲ್ ಮೀಡಿಯಾದ ಮೇಲೆ ಸರ್ಕಾರ ಹೇರಿರುವ ನಿರ್ಬಂಧವನ್ನು ಪ್ರಶ್ನಿಸಿ ಮತ್ತು ಭಷ್ಟಾಚಾರವನ್ನು ವಿರೋಧಿಸಿ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈಗಾಗಲೇ ಪ್ರದಾನಿ ಕೆ.ಪಿ. ಶರ್ಮಾ ಒಲಿ ಮತ್ತು ಅಧ್ಯಕ್ಷ ರಾಮಚಂದ್ರ ಪೌಡೆಲ್ (Ram Chandra Poudel) ರಾಜೀನಾಮೆ ನೀಡಿದ್ದಾರೆ. ಜತೆಗೆ ಸೋಶಿಯಲ್ ಮೀಡಿಯಾ ಮೇಲಿನ ನಿರ್ಬಂಧವನ್ನು ಹಿಂಪಡೆಯಲಾಗಿದೆ.
ಒಲಿ ಸರ್ಕಾರದ ವಿತ್ತ ಸಚಿವ ಬಿಷ್ಣು ಪ್ರಸಾದ್ ಪೌಡೆಲ್ ಅವರನ್ನು ಪ್ರತಿಭಟನಾಕಾರರು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೋಗುವ ವಿಡಿಯೊ ವೈರಲ್ ಆಗಿದೆ. ಅವರನ್ನು ಕಿಕ್ ಮಾಡುವ, ಎಳೆದಾಡುವ ದೃಶ್ಯ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಈಗಾಗಲೇ ಹಿಂಸಾತ್ಮಕ ಪ್ರತಿಭಟನೆಗೆ 21 ಮಂದಿ ಅಸುನೀಗಿದ್ದಾರೆ.
ಈ ಸುದ್ದಿಯನ್ನೂ ಓದಿ: Nepal Gen Z Protest: ಜೆನ್ ಝಿ ಪ್ರತಿಭಟನೆಗೆ ಮಣಿದು ನೇಪಾಳ ಪ್ರಧಾನಿ ಒಲಿ, ಅಧ್ಯಕ್ಷ ರಾಮಚಂದ್ರ ಪೌಡೆಲ್ ರಾಜೀನಾಮೆ
ಸೋಮವಾರ ರಾತ್ರಿಯೇ ಸೋಶಿಯಲ್ ಮೀಡಿಯಾದಲ್ಲಿನ ನಿಷೇಧವನ್ನು ತೆಗೆದುಹಾಕಲಾಯಿತಾದರೂ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾಕಾರರು ನೇಪಾಳದ ಕೆಲವು ಉನ್ನತ ನಾಯಕರ ಮನೆಗಳಿಗೆ ಮತ್ತು ಸಂಸತ್ತಿನ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ. ಕಠ್ಮಂಡುವಿನ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ಸೇನಾ ಹೆಲಿಕಾಪ್ಟರ್‌ಗಳು ಕೆಲವು ಸಚಿವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿವೆ.
Horrific & Si¢kening Visuals from Nepal: House of former PM Jhalanath Khanal was set on Fire by the Protestors, his wife is burπt alive! Khanal was close to China & had multiple corruption cases against him #NepalProtest pic.twitter.com/ceWnpMn06w
— Mihir Jha (@MihirkJha) September 9, 2025
ಪ್ರವಾಸಿಗರಿಗೆ ಭಾರತ ಸರ್ಕಾರದ ಎಚ್ಚರಿಕೆ
ನೇಪಾಳದಲ್ಲಿ ತಲೆದೋರಿರುವ ಪ್ರಕ್ಷುಬ್ಧ ವಾತಾವರಣದ ಹಿನ್ನೆಲೆಯಲ್ಲಿ ಅಲ್ಲಿಗೆ ಸದ್ಯ ತೆರಳದಂತೆ ಭಾರತ ಸರ್ಕಾರ ಪ್ರವಾಸಿಗರಿಗೆ ಮನವಿ ಮಾಡಿದೆ. ಏರ್ ಇಂಡಿಯಾ, ಇಂಡಿಗೋ ಮತ್ತು ನೇಪಾಳ ಏರ್‌ಲೈನ್ಸ್ ಮಂಗಳವಾರ ದೆಹಲಿಯಿಂದ ಕಠ್ಮಂಡುವಿಗೆ ತೆರಳುವ ತಮ್ಮ ವಿಮಾನ ಸೇವೆಯನ್ನು ರದ್ದುಗೊಳಿಸಿದವು.