ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ದೇಶದಲ್ಲಿ ಬಾಡಿಗೆಗೆ ಬಾಯ್‍ಫ್ರೆಂಡ್ ಸಿಗುತ್ತಾರೆ; ಗೆಳೆಯನೊಂದಿಗೆ ಕಾಲ ಕಳೆದು ವಿಡಿಯೊ ಅಪ್‌ಲೋಡ್‌ ಮಾಡಿದ ಯುವತಿ

Rented Boyfriend: ಒಂಟಿತನದಿಂದ ಬೇಸತ್ತವರಿಗೆ ಜಪಾನ್‌ನಲ್ಲಿದೆ ಪರಿಹಾರ. ಹಣ ಪಾವತಿ ಮಾಡಿದರೆ, ಇಲ್ಲಿ ಬಾಡಿಗೆಗೆ ಬಾಯ್ ಫ್ರೆಂಡ್ ಹಾಗೂ ಗರ್ಲ್ ಫ್ರೆಂಡ್ ಸಿಗುತ್ತಾರೆ. ಯುವತಿಯೊಬ್ಬಳು ಬಾಡಿಗೆ ಬಾಯ್‍ಫ್ರೆಂಡ್ ಜತೆ ಕೆಲವು ಸಮಯ ಕಳೆದಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ.

ಈ ದೇಶದಲ್ಲಿ ಬಾಡಿಗೆಗೆ ಬಾಯ್‍ಫ್ರೆಂಡ್ ಸಿಗುತ್ತಾರೆ!

-

Priyanka P Priyanka P Sep 9, 2025 10:43 PM

ಟೋಕಿಯೊ: ಈ ಡಿಜಿಟಲ್ ಜಗತ್ತಿನಲ್ಲಿ, ಅರ್ಥಪೂರ್ಣ ಸಂಬಂಧಗಳನ್ನು ರೂಪಿಸುವುದು ಮತ್ತು ನಿರ್ವಹಿಸುವುದು ಸವಾಲಿನದ್ದಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅನೇಕರು ಒಂಟಿತನದಿಂದ ಬಳಲುತ್ತಿದ್ದಾರೆ. ಹೀಗಾಗಿ ಒಂಟಿತನವನ್ನು ನಿಭಾಯಿಸಲು ಅಸಾಂಪ್ರದಾಯಿಕ ಪರಿಹಾರ ಮಾರ್ಗದತ್ತ ಮುಖ ಮಾಡುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗಳು ಒಡನಾಟಕ್ಕಾಗಿ ಹಣ ಪಾವತಿಸುತ್ತಾರೆ. ವಿಶೇಷವಾಗಿ ಜಪಾನ್‌ (Japan)ನಂತಹ ದೇಶಗಳಲ್ಲಿ ಬಾಡಿಗೆ ಬಾಯ್‌ಫ್ರೆಂಡ್ (Boyfriend) ಅಥವಾ ಬಾಡಿಗೆ ಗರ್ಲ್‌ಫ್ರೆಂಡ್ ಅನುಭವಗಳನ್ನು ನೀಡುವ ಸೇವೆಗಳು ಜನಪ್ರಿಯತೆಯನ್ನು ಗಳಿಸುತ್ತಿವೆ.

ಟೋಕಿಯೊದಲ್ಲಿ ಒಂಟಿಯಾಗಿ ವಾಸಿಸುವ ಆಸ್ಟ್ರೇಲಿಯಾದ ಯುವತಿ ಸಾರಾ ಎಂಬಾಕೆ, ತನ್ನ ಒಂಟಿತನವನ್ನು ಎದುರಿಸಲು ವಿಭಿನ್ನವಾದದ್ದನ್ನು ಪ್ರಯತ್ನಿಸಲು ನಿರ್ಧರಿಸಿದಳು. ಒಂದು ವರ್ಷಕ್ಕೂ ಹೆಚ್ಚು ಕಾಲ ಒಂಟಿಯಾಗಿದ್ದ ನಂತರ, ಬಾಡಿಗೆಗೆ ಗೆಳೆಯರನ್ನು ನೀಡುವ ವೆಬ್‌ಸೈಟ್ ಅವಳು ಗಮನಿಸಿ, ಕುತೂಹಲಗೊಂಡಳು. ಅವಳು 26 ವರ್ಷದ ನರುಮಿ ಎಂಬ ವ್ಯಕ್ತಿಯೊಂದಿಗೆ ಎರಡು ಗಂಟೆಗಳ ಡೇಟಿಂಗ್ ಬುಕ್ ಮಾಡಿದಳು. ಅವನ ಪ್ರೊಫೈಲ್ ಫ್ಯಾಷನ್, ಪುರುಷರ ಮೇಕಪ್ ಮತ್ತು ಬೈಕ್‌ಗಳ ಮೇಲಿನ ಪ್ರೀತಿಯನ್ನು ಉಲ್ಲೇಖಿಸಿತ್ತು.

ಆ ಡೇಟ್‌ನ ಬೆಲೆ £150 (ಸುಮಾರು 18,000 ರೂ.), ಯಾವುದೇ ಹೆಚ್ಚುವರಿ ವೆಚ್ಚಗಳನ್ನು ಸೇರಿಸದೆ, ಸಾರಾ ಎಲ್ಲವನ್ನೂ ಭರಿಸಬೇಕಾಗಿತ್ತು. ಇದು ದುಬಾರಿ ವ್ಯವಹಾರವಾಗಿದ್ದರೂ, ನಂತರ ನಡೆದದ್ದು ಸ್ಮರಣೀಯ ಅನುಭವವಾಯಿತು.

ವಿಡಿಯೊ ವೀಕ್ಷಿಸಿ:



ಭೇಟಿಯಾಗುವ ಮೊದಲು, ನರುಮಿಯು ಸಾರಾಗೆ ನನ್ನ ಮುದ್ದು ಮತ್ತು ನನ್ನ ದೇವತೆ ಎಂದು ಕರೆದು ಪ್ರೀತಿಯ, ಸಿಹಿ ಸಂದೇಶಗಳನ್ನು ಕಳುಹಿಸಿದ್ದ. ಆತನಿಗೆ ನಿಜವಾಗಿಯೂ ಯಾರನ್ನಾದರೂ ಹೇಗೆ ಹೊಗಳಬೇಕೆಂದು ತಿಳಿದಿದೆ ಎಂದು ಸಾರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ತನ್ನ ಅನುಭವವನ್ನು ಹಂಚಿಕೊಂಡಳು. ಆತನನ್ನು ನೋಡಿದ ಕೂಡಲೇ ಆಕರ್ಷಿತಳಾಗಿದ್ದಲ್ಲದೆ, ಅವನು ಮೊದಲ ಬಾರಿಗೆ ತನ್ನ ಕೈ ಹಿಡಿದಾಗ ನಾಚಿಕೆಪಟ್ಟಿದ್ದಾಗಿ ಹೇಳಿದ್ದಾಳೆ.

ಈ ಜೋಡಿ ಊಟಕ್ಕೆ ಹೊರಟರು. ಅವರು ಪರಸ್ಪರ ನಗು ಹಂಚುತ್ತ ಮಾತನಾಡಿದರು. ಒಬ್ಬರಿಗೊಬ್ಬರು ಊಟವನ್ನು ತಿನ್ನಿಸಿದರು. ಡೇಟಿಂಗ್ ಸಮಯದಲ್ಲಿ ನರುಮಿಯು 2024ರ ಜನವರಿಯಿಂದ ಈ ಕೆಲಸ ಮಾಡುತ್ತಿದ್ದೇನೆ ಮತ್ತು ಸಾಮಾನ್ಯವಾಗಿ ತಿಂಗಳಿಗೆ ಸುಮಾರು 10 ಮಹಿಳೆಯರೊಂದಿಗೆ ಡೇಟಿಂಗ್‌ಗೆ ಹೋಗುತ್ತೇನೆ ಎಂದು ಬಹಿರಂಗಪಡಿಸಿದ್ದಾನೆ. ಹೆಚ್ಚಾಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಮತ್ತು ವಿವಾಹಿತ ಮಹಿಳೆಯರೇ ಹೆಚ್ಚು ಡೇಟಿಂಗ್‍ಗೆ ಕರೆಯುವುದಾಗಿ ತಿಳಿಸಿದ್ದಾನೆ.

ಈ ರೀತಿಯ ಕೆಲಸವನ್ನು ಮೋಸ ಎಂದು ಪರಿಗಣಿಸಬಹುದೇ ಎಂದು ಕೇಳಿದಾಗ, ನರುಮಿ ಶಾಂತವಾಗಿ ಉತ್ತರಿಸಿದ್ದಾನಂತೆ. ಇದು ಸೇವೆ, ವಂಚನೆಯಲ್ಲ ಎಂದು ಹೇಳಿದ್ದಾನೆ. ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಈ ಕೆಲಸವನ್ನು ರಹಸ್ಯವಾಗಿಡುವುದಾಗಿ ಹೇಳಿದ್ದಾನೆ. ಆದರೂ ಕೆಲವರು ಸಾಮಾಜಿಕ ಮಾಧ್ಯಮದ ಮೂಲಕ ಈ ಬಗ್ಗೆ ತಿಳಿದುಕೊಂಡಿದ್ದಾರೆ ಎಂದಿದ್ದಾನೆ.

ನರುಮಿ ಇದನ್ನು ತನ್ನ ಪೂರ್ಣ ಸಮಯದ ಉದ್ಯೋಗವೆಂದು ಪರಿಗಣಿಸದಿದ್ದರೂ, ಈ ಕೆಲಸವು ತನ್ನ ಸಮಯದ ಗಮನಾರ್ಹ ಭಾಗವನ್ನು ತೆಗೆದುಕೊಳ್ಳುತ್ತದೆ ಎಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ ಆತನನ್ನೇ ನಿಯಮಿತವಾಗಿ ಡೇಟಿಂಗ್‍ಗೆ ಕರೆಯುವ ಹೆಂಗಳೆಯರೂ ಇದ್ದಾರಂತೆ. ತನ್ನ ಕ್ಲೈಂಟ್‌ಗಳಲ್ಲಿ ಯಾರಾದರೂ ತನ್ನನ್ನು ಪ್ರೀತಿಸುತ್ತಿದ್ದಾರೆಯೇ ಎಂದು ಸಾರಾ ಕೇಳಿದಾಗ, ನರುಮಿ ಮೌನವಾಗಿದ್ದನು. ಆದರೆ ತುಂಬಾ ಸಮಯ ಡೇಟಿಂಗ್ ಮಾಡಿದ್ದೆಂದರೆ ಒಬ್ಬಳೊಂದಿಗೆ 50 ಗಂಟೆಗಳ ಕಾಲ ಸಮಯ ಕಳೆದಿದ್ದಾನಂತೆ.

ಸಾರಾ ಡೇಟ್ ಅನ್ನು ಇನ್ನೊಂದು ಗಂಟೆ ವಿಸ್ತರಿಸಿದಳು. ಹೆಚ್ಚುವರಿಯಾಗಿ £74 (ಸುಮಾರು 8,800 ರೂ.) ಹಣವನ್ನು ಪಾವತಿಸಿದಳು. ನರುಮಿಯ ಕಣ್ಣುಗಳನ್ನು ನೋಡುತ್ತಾ, ಸಂತೋಷವನ್ನು ಹಣದಿಂದ ಖರೀದಿಸಬಹುದು ಎಂದು ಹೇಳಿದಳು.

ಡೇಟ್ ಮುಗಿದ ನಂತರ, ಸಾರಾ ತನ್ನ ದೈನಂದಿನ ಜೀವನಕ್ಕೆ ಮರಳಿದಳು. ಅನುಭವವನ್ನು ನೆನಪಿಸಿಕೊಳ್ಳುತ್ತ, ನಿಜ ಹೇಳಬೇಕೆಂದರೆ ನನಗೆ ತುಂಬಾ ಮಜಾ ಸಿಕ್ಕಿತು. ಆದರೆ ಅದು ತುಂಬಾ ದುಬಾರಿಯಾಗಿತ್ತು. ಅಲ್ಲದೆ ಬಾಡಿಗೆ ಬಾಯ್‍ಫ್ರೆಂಡ್ ಸುಲಭವಾಗಿ ಸಿಕ್ಕರೆ ವ್ಯಸನವೂ ಆಗಬಹುದು ಎಂದು ಸಾರಾ ಹೇಳಿದ್ದಾಳೆ.

ಇದನ್ನೂ ಓದಿ: Viral Video: ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಮುಳುಗುವ ನಾಟಕ: ಪೊಲೀಸರು ‘ಶವ’ ತೆಗೆಯಲು ಬಂದಾಗ ಎದ್ದ ವ್ಯಕ್ತಿ