ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲಂಡನ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಐವರಿಗೆ ಗಾಯ

ಲಂಡನ್‌ನ ಗ್ಯಾಂಟ್ಸ್ ಹಿಲ್‌ನ ವುಡ್‌ಫೋರ್ಡ್ ಅವೆನ್ಯೂದಲ್ಲಿರುವ ಭಾರತೀಯ ರೆಸ್ಟೋರೆಂಟ್‌ಗೆ ಮೂವರು ಮುಸುಕುಧಾರಿಗಳು ಶುಕ್ರವಾರ ಸಂಜೆ ಬೆಂಕಿ ಹಚ್ಚಿದ್ದು, ಐವರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಿಟೆಕ್ಟಿವ್ ಚೀಫ್ ಇನ್ಸ್‌ಪೆಕ್ಟರ್ ಮಾರ್ಕ್ ರೋಜರ್ ತಿಳಿಸಿದ್ದಾರೆ.

ಲಂಡನ್‌ನಲ್ಲಿ ಭಾರತೀಯ ರೆಸ್ಟೋರೆಂಟ್‌ಗೆ ಬೆಂಕಿ: ಐವರಿಗೆ ಗಾಯ

ಲಂಡನ್: ಭಾರತೀಯ ರೆಸ್ಟೋರೆಂಟ್ (Indian restaurant)ಗೆ ಮೂವರು ಮುಸುಕುಧಾರಿಗಳು ಬೆಂಕಿ (Fire) ಹೆಚ್ಚಿ ಓಡಿ ಹೋಗಿದ್ದು, ಈ ದಾಳಿಯಲ್ಲಿ ಐವರು ಗಾಯಗೊಂಡಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ. ಇದರ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೂರ್ವ ಲಂಡನ್‌ನ (London) ಗ್ಯಾಂಟ್ಸ್ ಹಿಲ್‌ನ ವುಡ್‌ಫೋರ್ಡ್ ಅವೆನ್ಯೂದಲ್ಲಿರುವ ಭಾರತೀಯ ರೆಸ್ಟೋರೆಂಟ್‌ನೊಳಗಿನಿಂದ (Indian restaurant in london) ಬೆಂಕಿ ಹಚ್ಚಿಕೊಂಡು ವ್ಯಕ್ತಿಯೊಬ್ಬ ಹೊರಗೆ ಓಡಿ ಬರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಬೆಂಕಿ ಉಂಡೆಯಂತೆ ಕಾಣುತ್ತಿತ್ತು ಎಂದು ಪ್ರತ್ಯೇಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಗ್ಯಾಂಟ್ಸ್ ಹಿಲ್‌ನ ವುಡ್‌ಫೋರ್ಡ್ ಅವೆನ್ಯೂದಲ್ಲಿರುವ 'ಇಂಡಿಯನ್ ಅರೋಮಾ' ಉಪಾಹಾರ ಮಂದಿರದಲ್ಲಿ ಶುಕ್ರವಾರ (ಆಗಸ್ಟ್‌ 22) ಸಂಜೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಡಿಟೆಕ್ಟಿವ್ ಚೀಫ್ ಇನ್ಸ್‌ಪೆಕ್ಟರ್ ಮಾರ್ಕ್ ರೋಜರ್ ಹೇಳಿದ್ದಾರೆ.

ರಾತ್ರಿ 9 ಗಂಟೆ ಸುಮಾರಿಗೆ ರೆಸ್ಟೋರೆಂಟ್‌ನಲ್ಲಿ ಜನ ಸಂದಣಿ ಹೆಚ್ಚಿತ್ತು. ಆಗ ಒಳಗೆ ಬಂದ ಮೂವರು ಮುಸುಕುಧಾರಿಗಳು ನೆಲದ ಮೇಲೆ ದ್ರವ ಎಸೆದು ಬೆಂಕಿ ಹಚ್ಚಿದರು. ಕೂಡಲೇ ಬೆಂಕಿಯ ಜ್ವಾಲೆ ರೆಸ್ಟೋರೆಂಟ್ ಒಳಗೆ ಆವರಿಸಿತು. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಗ್ರಾಹಕರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ನೂಕು ನುಗ್ಗಲು ಉಂಟಾಗಿ ಒಟ್ಟು ಐವರು ಗಾಯಗೊಂಡಿದ್ದಾರೆ.

ರೆಸ್ಟೋರೆಂಟ್ ಒಳಗೆ ಊಟ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಲಂಡನ್ ಆಂಬ್ಯುಲೆನ್ಸ್ ಸೇವೆಯ ಅರೆವೈದ್ಯರು ತುರ್ತು ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೂವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೆಸ್ಟೋರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಅದನ್ನು ನಂದಿಸಲು ಅಗ್ನಿಶಾಮಕ ದಳವು ಸುಮಾರು 90 ನಿಮಿಷಗಳನ್ನು ತೆಗೆದುಕೊಂಡಿತ್ತು.

ರೆಸ್ಟೋರೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಗೆ ಸಂಬಂಧಿಸಿ ಮಾತನಾಡಿದ ಮೈಕೆಲ್, ʼʼನಾನು ತಿರುಗಿ ನೋಡಿದಾಗ ಯಾರೋ ಒಬ್ಬ ವ್ಯಕ್ತಿ ಬೆಂಕಿಯ ಉಂಡೆಯಂತೆ ಓಡುತ್ತಿರುವುದನ್ನು ನೋಡಿದೆ. ನಾನು ಮತ್ತು ಸ್ನೇಹಿತರೊಬ್ಬರು ನೀರಿನ ಬಕೆಟ್‌ ತಂದು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದೆವುʼʼ ಎಂದರು.



ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ 15 ವರ್ಷದ ಬಾಲಕ ಮತ್ತು 54 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅವರಿಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ʼʼಇಬ್ಬರನ್ನು ಬಂಧಿಸಲಾಗಿದೆ. ಘಟನೆಯ ಕಾರಣ ಪತ್ತೆ ಹಚ್ಚಲು ತನಿಖೆ ಮುಂದುವರಿಸಲಾಗಿದೆʼʼ ಎಂದು ಮೆಟ್ ಪೊಲೀಸರ ಕೇಂದ್ರ ತಜ್ಞ ಅಪರಾಧ ಉತ್ತರ ಘಟಕದ ಡಿಟೆಕ್ಟಿವ್ ರೋಜರ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ: Kolkata Rape case: ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ- ಎಕ್ಸಾಸ್ಟ್ ಫ್ಯಾನ್‌ನ ರಂಧ್ರದ ಮೂಲಕ ಹೀನ ಕೃತ್ಯ ರೆಕಾರ್ಡ್

ರೋಹಿತ್ ಕಲುವಾಲಾ ಎಂಬವರು ಈ ರೆಸ್ಟೋರೆಂಟ್ ಅನ್ನು ನಿರ್ವಹಿಸುತ್ತಿದ್ದಾರೆ. ಇದು ಅತ್ಯುತ್ತಮ ಗ್ರಾಹಕ ಸೇವೆ ಮತ್ತು ಅಧಿಕೃತ ಪಾಕವಿಧಾನಗಳಿಗೆ ಹೆಸರುವಾಸಿ ಎಂದು ಅದರ ವೆಬ್‌ಸೈಟ್ ವಿವರಿಸಿದೆ. ಈ ರೆಸ್ಟೋರೆಂಟ್‌ಗೆ ವರ್ಷದ ಕರಿ ಪ್ರಶಸ್ತಿಯೂ ಲಭಿಸಿದೆ.