Donald Trump: ಟ್ರಂಪ್ ಚಿನ್ನದ ಪ್ರತಿಮೆ ಅನಾವರಣ- ಬಹಳ ಅಪರೂಪವಾಗಿದೆ 12ಅಡಿ ಎತ್ತರದ ಈ ಮೂರ್ತಿ!
ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿ ದರವನ್ನು ಬುಧವಾರ ಕಾಲು ಪಾಯಿಂಟ್ ಕಡಿತಗೊಳಿಸಿದ್ದು ಇದಕ್ಕೆ ಹೊಂದಿಕೆಯಾಗುವಂತೆ ಯುಎಸ್ ಕ್ಯಾಪಿಟಲ್ ಹೊರಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 12 ಅಡಿ ಎತ್ತರದ ಚಿನ್ನದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

-

ವಾಷಿಂಗ್ಟನ್: ಫೆಡರಲ್ ರಿಸರ್ವ್ (Federal Reserve) ಬಡ್ಡಿ ದರವನ್ನು (Interest rate cut) ಕಡಿತಗೊಳಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಬಿಟ್‌ಕಾಯಿನ್ ಹಿಡಿದಿರುವ 12 ಅಡಿ ಎತ್ತರದ ಚಿನ್ನದ ಪ್ರತಿಮೆಯನ್ನು (Golden Statue ) ಯುಎಸ್ ಕ್ಯಾಪಿಟಲ್ ಹೊರಗೆ ಸ್ಥಾಪಿಸಲಾಗಿದೆ. ಡಿಜಿಟಲ್ ಕರೆನ್ಸಿಯ ಭವಿಷ್ಯ, ಹಣಕಾಸು ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಫೆಡರಲ್ ಸರ್ಕಾರದ ಪಾತ್ರದ ಬಗ್ಗೆ ಚರ್ಚೆ ಉಂಟು ಮಾಡಲು ಇದನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ(Social Media) ಭಾರಿ ವೈರಲ್ (Viral News) ಆಗುತ್ತಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ದೇಶಾದ್ಯಂತ ವಲಸೆ ಕಾರ್ಮಿಕರ ಕುರಿತು ಕಳವಳಗಳ ಹೆಚ್ಚಾಗುತ್ತಿರುವ ನಡುವೆಯೇ ಬುಧವಾರ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿ ದರವನ್ನು ಕಾಲು ಪಾಯಿಂಟ್ ಕಡಿತಗೊಳಿಸಿದ್ದು ಇದಕ್ಕೆ ಹೊಂದಿಕೆಯಾಗುವಂತೆ ಯುಎಸ್ ಕ್ಯಾಪಿಟಲ್ ಹೊರಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 12 ಅಡಿ ಎತ್ತರದ ಚಿನ್ನದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
🤯 ¿Ya vieron la nueva estatua de Trump?
— tododecripto.eth (@tododecripto) September 17, 2025
🚀 Sostiene 1 BTC
✨ Está hecha de oro
📐 Mide 12 pies de altura
🏛️ Está frente al capitolio
¿El mensaje es claro no? 🧑🏻💻 pic.twitter.com/cjktPfuFpZ
ಡಿಜಿಟಲ್ ಕರೆನ್ಸಿಯ ಭವಿಷ್ಯ, ಹಣಕಾಸು ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಫೆಡರಲ್ ಸರ್ಕಾರದ ಪಾತ್ರದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಲು ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಅನೇಕರು ಕಾಮೆಂಟ್ ಕೂಡ ಮಾಡಿದ್ದು, ಅಮೆರಿಕ ಅಧ್ಯಕ್ಷರು ಕ್ರಿಪ್ಟೋಕರೆನ್ಸಿ ಪರ ನಿಲುವನ್ನು ಹೊಗಳಲು ಈ ರೀತಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Dad Movie: ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್ʼ ಚಿತ್ರಕ್ಕೆ ನಂದಿ ಬೆಟ್ಟದಲ್ಲಿ 2ನೇ ಹಂತದ ಚಿತ್ರೀಕರಣ
ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿದರವನ್ನು ಬುಧವಾರ ಕಾಲು ಪಾಯಿಂಟ್ ನಷ್ಟು ಕಡಿತಗೊಳಿಸಿತು. ಇದು ತನ್ನ ಅಲ್ಪಾವಧಿಯ ದರವನ್ನು ಶೇಕಡಾ 4.1 ರಿಂದ ಶೇಕಡಾ 4.3 ಕ್ಕೆ ಇಳಿಸಿದೆ. ವರ್ಷದ ಆರಂಭದಲ್ಲಿ ಜೆರೋಮ್ ಪೊವೆಲ್ ಅವರ ನೇತೃತ್ವದ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳಲ್ಲಿ ಬದಲಾವಣೆಗಳನ್ನು ಮಾಡಿರಲಿಲ್ಲ.