ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹತ್ಯೆಯಾದ ಭಯೋತ್ಪಾದಕರಿಗೆ ಗೌರವ ಸಲ್ಲಿಸಿದ್ರಾ ಪಾಕ್‌ ಸೇನಾ ಮುಖ್ಯಸ್ಥ? ಜೈಶ್ ಕಮಾಂಡರ್‌ನ ವಿಡಿಯೋದಲ್ಲೇನಿದೆ?

ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತೊಮ್ಮೆ ತಮ್ಮ ನೀಚ ಬುದ್ದಿ ತೋರಿಸಿದ್ದು, ಆಪರೇಷನ್ ಸಿಂಧೂರ್ ನಲ್ಲಿ ಹತ್ಯೆಯಾದ ಭಯೋತ್ಪಾದಕರನ್ನು ಮುನೀರ್ ಹೊಗಳಿದ್ದಾರೆ. ಅಷ್ತೇ ಅಲ್ಲದೇ ಅವರನ್ನು ಹುತಾತ್ಮರು ಎಂದು ಕರೆದಿದ್ದು, ಗೌರವ ಸಲ್ಲಿಸುವಂತೆ ಆದೇಶಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಭಾರತದ ವಿರುದ್ಧ ವಿಷ ಕಾರಿದ ಆಸಿಮ್ ಮುನೀರ್ ನರಿ ಬುದ್ದಿ ಜಗತ್ತು ಜಾಹೀರಾಗಿದೆ.

ಹತ್ಯೆಯಾದ ಭಯೋತ್ಪಾದಕರಿಗೆ ಗೌರವ ಸಲ್ಲಿಸಿದ್ರಾ ಪಾಕ್‌ ಸೇನಾ ಮುಖ್ಯಸ್ಥ?

-

Profile Sushmitha Jain Sep 18, 2025 7:33 PM

ನವದೆಹಲಿ: ಭಾರತದ ‘ಆಪರೇಷನ್ ಸಿಂಧೂರ್’ನಿಂದ (Operation Sindoor) ಪಾಕಿಸ್ತಾನದ ಬಹವಲ್‌ಪುರದಲ್ಲಿ (Bahawalpur) ಜೈಶ್-ಎ-ಮೊಹಮ್ಮದ್‌ಗೆ(Jaish-e-Mohammad) ಭಾರಿ ಹಾನಿಯಾದ ಬೆನ್ನಲ್ಲೇ, ಸಂಘಟನೆಯ ಕಮಾಂಡರ್ ಇಲಿಯಾಸ್ ಕಾಶ್ಮೀರಿಯ (Ilyas Kashmir) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಭಾರತದ ದಾಳಿಯಲ್ಲಿ ಕೊಲ್ಲಲ್ಪಟ್ಟ ಉಗ್ರರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪಾಕ್ ಸೇನೆಯ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಕಾಶ್ಮೀರಿ ಹೇಳಿದ್ದಾರೆ.

ಕಾಶ್ಮೀರಿಯ ಪ್ರಕಾರ, ಜನರಲ್ ಮುನೀರ್, “ಆಪರೇಷನ್ ಸಿಂಧೂರ್‌ನಲ್ಲಿ ಕೊಲ್ಲಲ್ಪಟ್ಟ ಉಗ್ರರಿಗೆ ಗೌರವ ಸಲ್ಲಿಸಬೇಕು” ಎಂದು ಆದೇಶಿಸಿದ್ದಾರೆ. ಅಂತ್ಯಕ್ರಿಯೆಗೆ ಭದ್ರತೆಯೊಂದಿಗೆ ಕಮಾಂಡರ್‌ಗಳು ಹಾಜರಾಗಬೇಕೆಂದು ಸೂಚಿಸಿದ್ದಾರೆ. ಇನ್ನೊಂದು ಕ್ಲಿಪ್‌ನಲ್ಲಿ, ಪಾಕ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ನೀಡಿದ ಸಂದರ್ಶನದಲ್ಲಿ, “ನಮ್ಮ ನಾಯಕರು, ಕೊಲ್ಲಲ್ಪಟ್ಟ ಉಗ್ರರಿಗೆ ಗೌರವ ಸಲ್ಲಿಸದಿರಲು ಏನು ಕಾರಣ?” ಎಂದು ಪ್ರಶ್ನಿಸಿದ್ದಾರೆ. ಏಪ್ರಿಲ್ 22ರ ಪಹಲ್ಗಾಂ ದಾಳಿಯಲ್ಲಿ ಜೈಶ್‌ನ ಕೈವಾಡ ಇರುವ ಬಗ್ಗೆ ಭಾರತ ಇನ್ನೂ ಸಾಕ್ಷ್ಯ ನೀಡಿಲ್ಲ ಎಂದು ಅವರು ಹೇಳಿದ್ದಾರೆ.



ಇದೇ ವರ್ಷ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು 26 ಜನರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮೇ.7ರಂದು ‘ಆಪರೇಷನ್ ಸಿಂಧೂರ್’ನಡಿ ಬಹವಲ್‌ಪುರದ ಜೈಶ್-ಎ-ಮೊಹಮ್ಮದ್‌ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಈ ದಾಳಿಯಲ್ಲಿ ಜೈಶ್ ಮುಖ್ಯಸ್ಥ ಮಸೂದ್ ಅಜರ್‌ನ ಹಿರಿಯ ಸಹೋದರಿ, ಆಕೆಯ ಗಂಡ, ಸೋದರಳಿಯ, ಆತನ ಪತ್ನಿ, ಇನ್ನೊಬ್ಬ ಸಂಬಂಧಿಕ, ಐವರು ಮಕ್ಕಳು ಮತ್ತು ಅಜರ್‌ನ ಆಪ್ತರಾದ ಒಬ್ಬ ಸಹಾಯಕ, ಆತನ ತಾಯಿ, ಮತ್ತಿಬ್ಬರು ಕೊಲ್ಲಲ್ಪಟ್ಟರು.

ಈ ದಾಳಿಯಿಂದ ಅಜರ್‌ನ ಕುಟುಂಬ “ಛಿದ್ರವಾಯಿತು” ಎಂದು ಕಾಶ್ಮೀರಿ ಒಪ್ಪಿಕೊಂಡಿದ್ದಾನೆ. ಜೊತೆಗೆ, ಪಾಕಿಸ್ತಾನಕ್ಕಾಗಿ ನೆರೆಯ ದೇಶಗಳಲ್ಲಿ ಹೋರಾಡುವುದರ ಕುರಿತು ಹೆಮ್ಮೆಯಿಂದ ಮಾತನಾಡಿದ್ದಾನೆ. 1999ರ IC-814 ವಿಮಾನ ಅಪಹರಣದ ಬದಲಿಗೆ ಅಜರ್ ಬಿಡುಗಡೆಯಾದ ನಂತರ ಬಹವಲ್‌ಪುರ ಜೈಶ್ ಕೇಂದ್ರವಾಯಿತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪಾಕ್ ಸೇನೆಯ ಉಗ್ರರ ಬೆಂಬಲದ ಬಗ್ಗೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ.