ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs WI: ಡೆಲ್ಲಿ ಟೆಸ್ಟ್‌ನಲ್ಲಿ ನಿತೀಶ್‌ ರೆಡ್ಡಿಗೆ ಚಾನ್ಸ್‌ ನೀಡಿದ್ದೇಕೆ?-ಆರ್‌ ಅಶ್ವಿನ್‌ ಪ್ರಶ್ನೆ!

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನಿತೀಶ್‌ ರೆಡ್ಡಿ ಅವರ ಆಯ್ಕೆಯ ಬಗ್ಗೆ ಸ್ಪಿನ್‌ ದಂತಕತೆ ಆರ್‌ ಅಶ್ವಿನ್‌ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಆಲ್‌ರೌಂಡರ್‌ ಆಗಿ ಅಕ್ಷರ್‌ ಪಟೇಲ್‌ಗೆ ಅವಕಾಶ ನೀಡಬೇಕಾಗಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ ಭಾರತ ತಂಡ, ಎರಡನೇ ಪಂದ್ಯ ಗೆದ್ದು ಟೆಸ್ಟ್‌ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ.

ಡೆಲ್ಲಿ ಟೆಸ್ಟ್‌ನಲ್ಲಿ ನಿತೀಶ್‌ ರೆಡ್ಡಿಗೆ ಚಾನ್ಸ್‌ ನೀಡಿದ್ದೇಕೆ? ಅಶ್ವಿನ್‌

ನಿತೀಶ್‌ ರೆಡ್ಡಿ ಆಯ್ಕೆಯನ್ನು ಪ್ರಶ್ನಿಸಿದ ಆರ್‌ ಅಶ್ವಿನ್‌. -

Profile Ramesh Kote Oct 14, 2025 11:07 PM

ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ ಮಂಗವಾರ ಅಂತ್ಯವಾಗಿದ್ದ ಎರಡನೇ ಟೆಸ್ಟ್‌ ಪಂದ್ಯದ (IND vs WI) ಭಾರತ ತಂಡದ ಪ್ಲೇಯಿಂಗ್‌ xiನಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ (Nitish Reddy) ಅವರ ಆಯ್ಕೆಯನ್ನು ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಿತೀಶ್‌ ರೆಡ್ಡಿ ಅವರ ಬದಲು ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ಅವಕಾಶ ನೀಡಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ತಂಡ, ಎರಡನೇ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಟೀಮ್‌ ಇಂಡಿಯಾ 2-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತು.

ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿಗೆ ಕೇವಲ ನಾಲ್ಕು ಓವರ್‌ಗಳನ್ನು ಬೌಲ್‌ ಮಾಡಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಅವರು ಒಂದೇ ಒಂದು ಓವರ್‌ ಕೂಡ ಬೌಲ್‌ ಮಾಡಿರಲಿಲ್ಲ. ಡೆಲ್ಲಿ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ 390 ರನ್‌ಗಳನ್ನು ಕಲೆ ಹಾಕಿತ್ತು. ಆದರೆ, ಈ ಇನಿಂಗ್ಸ್‌ನಲ್ಲಿ ನಾಯಕ ಶುಭಮನ್‌ ಗಿಲ್‌ ಅವರು ನಿತೀಶ್‌ ಕುಮಾರ್‌ಗೆ ಒಂದೇ ಒಂದು ಈ ಓವರ್‌ ಕೂಡ ಕೊಟ್ಟಿರಲಿಲ್ಲ.

IND vs WI: ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡರೂ ಬೇಸರ ಹೊರಹಾಕಿದ ಗೌತಮ್‌ ಗಂಭೀರ್!

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಆರ್‌ ಅಶ್ವಿನ್‌ ಅವರು, ಎರಡನೇ ಟೆಸ್ಟ್‌ ಪಂದ್ಯದಲ್ಲಿ ನಿತೀಶ್‌ ಕುಮಾರ್‌ ರೆಡ್ಡಿಗೆ ಅವಕಾಶ ನೀಡುವ ಬದಲು ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್‌ ಅಥವಾ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ಅವಕಾಶ ನೀಡಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ನಿತೀಶ್‌ ಕುಮಾರ್‌ ರೆಡ್ಡಿ ಅವರ ಪಾತ್ರವನ್ನು ನಾವು ನೋಡಿದರೆ, ನಾನು ವಿಶೇಷ ಬ್ಯಾಟ್ಸ್‌ಮನ್‌ ಅಥವಾ ಬೌಲರ್‌ ಅನ್ನು ಆಡಿಸಲು ಬಯಸುತ್ತೇನೆ. ನೀವು ಬೇಕಿದ್ದರೆ ಅಕ್ಷರ್‌ ಪಟೇಲ್‌ ಅವರನ್ನು ಆಡಿಸಬಹುದಿತ್ತು. ಇವರು ಏನು ಕಡಿಮೆ ಮಾಡಿದ್ದಾರೆ? ಅವರು ಮ್ಯಾಚ್‌ ವಿನ್ನರ್‌," ಎಂದು ಹೇಳಿದ್ದಾರೆ.

IND vs WI: ಭಾರತ-ವಿಂಡೀಸ್‌ ಟೆಸ್ಟ್ ಸರಣಿಯ ಪ್ರಶಸ್ತಿ ವಿಜೇತರು, ಗೆದ್ದ ಬಹುಮಾನದ ಪಟ್ಟಿ ಇಲ್ಲಿದೆ

"ಸ್ಪಿನ್ ವಿರುದ್ಧ ಅಕ್ಷರ್ ಪಟೇಲ್ ಅತ್ಯುತ್ತಮ ರಕ್ಷಣೆಯ ಹೊಂದಿದ್ದಾರೆ, ಆದ್ದರಿಂದ ನೀವು ಅವರನ್ನು ಬಳಸದಿದ್ದರೆ, ವಿಶೇಷವಾಗಿ ಸಿರಾಜ್, ಬುಮ್ರಾ ಮತ್ತು ಎರಡನೇ ಸೀಮರ್ ನಡುವೆ ಆಯ್ಕೆ ಮಾಡುವಾಗ, ನಿತೀಶ್ ಬ್ಯಾಟಿಂಗ್ ಆಳಕ್ಕೆ ತಕ್ಕಂತೆ ಆಡಬಹುದು, ಇಲ್ಲದಿದ್ದರೆ ನನಗೆ ಯಾವುದೇ ಅರ್ಥವಿಲ್ಲ. ನಿತೀಶ್ ಉತ್ತಮ ಬ್ಯಾಟ್ಸ್‌ಮನ್ ಆದರೆ ಸ್ವಲ್ಪ ಹೆಚ್ಚಿನ ಪಾತ್ರ ವ್ಯಾಖ್ಯಾನವಿರಬಹುದು," ಎಂದು ಅವರು ತಿಳಿಸಿದ್ದಾರೆ.

ಭಾರತ ಪರ ಇದುವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಕ್ಷರ್, 35.88ರ ಸರಾಸರಿಯಲ್ಲಿ 646 ರನ್ ಗಳಿಸಿದ್ದಾರೆ, ನಾಲ್ಕು ಅರ್ಧಶತಕಗಳನ್ನು ಹೊಂದಿದ್ದಾರೆ. ಬೌಲಿಂಗ್‌ನಲ್ಲಿ ಅವರು 19.34 ಸರಾಸರಿಯಲ್ಲಿ 55 ವಿಕೆಟ್‌ಗಳನ್ನು ಪಡೆದಿದ್ದಾರೆ. ರೆಡ್ಡಿ ಒಂಬತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 29.69ರ ಸರಾಸರಿಯಲ್ಲಿ 386 ರನ್‌ಗಳನ್ನು ಗಳಿಸಿದ್ದಾರೆ, ಒಂದು ಶತಕವನ್ನು ಸಹ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ ಅವರು 39.62ರ ಸರಾಸರಿಯಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ.