ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hamas leaders In POK: ಪಿಒಕೆಯಲ್ಲಿ ಹಮಾಸ್ ನಾಯಕರಿಗೆ ಭರ್ಜರಿ ಸ್ವಾಗತ- ಜೈಶ್ ಉಗ್ರರಿಂದ ಬೈಕ್ ರ್‍ಯಾಲಿ!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಭಾರತ ವಿರೋಧಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಮಾಸ್ ನಾಯಕರಿಗೆ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಭಯೋತ್ಪಾದಕರು ವಿಐಪಿ ಸ್ವಾಗತ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೊ ಭಾರೀ ವೈರಲ್ ಆಗುತ್ತಿದೆ. ಹಮಾಸ್ ನಾಯಕರು ರಾವಲ್ಕೋಟೆಯ ಶಹೀದ್ ಸಬೀರ್ ಕ್ರೀಡಾಂಗಣಕ್ಕೆ(Shaheed Sabir Stadium) ಐಷಾರಾಮಿ ಎಸ್‌ಯುವಿ ಕಾರುಗಳಲ್ಲಿ ಆಗಮಿಸಿದ್ದಾರೆ.

ಪಿಒಕೆಯಲ್ಲಿ ಹಮಾಸ್‌ ನಾಯಕರಿಗೆ ಅದ್ಧೂರಿ ಸ್ವಾಗತ!

Hamas Leaders in POK

Profile Deekshith Nair Feb 6, 2025 5:21 PM

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(POK) ನಡೆದ ಭಾರತ ವಿರೋಧಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಮಾಸ್ ನಾಯಕರಿಗೆ(Hamas Leaders In POK) ಜೈಶ್-ಎ-ಮೊಹಮ್ಮದ್ (JEM) ಮತ್ತು ಲಷ್ಕರ್-ಎ-ತೈಬಾ (LET) ಭಯೋತ್ಪಾದಕರು ವಿಐಪಿ ಸ್ವಾಗತ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೊ ಭಾರೀ ವೈರಲ್ ಆಗುತ್ತಿದೆ. ಹಮಾಸ್ ನಾಯಕರು ರಾವಲ್ಕೋಟೆಯ( Rawalakote) ಶಹೀದ್ ಸಬೀರ್ ಕ್ರೀಡಾಂಗಣಕ್ಕೆ(Shaheed Sabir Stadium) ಐಷಾರಾಮಿ ಎಸ್‌ಯುವಿ ಕಾರುಗಳಲ್ಲಿ ಆಗಮಿಸಿದ್ದಾರೆ. ಜೈಶ್ ಮತ್ತು ಲಷ್ಕರ್ ಭಯೋತ್ಪಾದಕರು ಬೈಕ್‌ಗಳು ಮತ್ತು ಕುದುರೆಗಳ ಮೇಲೆ ಕೂತು ಅವರನ್ನು ಸುತ್ತುವರೆದು ಅದ್ಧೂರಿ ಸ್ವಾಗತ ನೀಡಿದ್ದಾರೆ.

ವಿಡಿಯೊದಲ್ಲಿ ಕಾಣುವಂತೆ ಜೈಶ್ ಮತ್ತು ಲಷ್ಕರ್ ಭಯೋತ್ಪಾದಕರು ಪ್ಯಾಲೆಸ್ತೀನ್ ಉಗ್ರ ಗುಂಪಿನ ಧ್ವಜದೊಂದಿಗೆ ಬೈಕ್ ಮತ್ತು ಕುದುರೆ ರ‍್ಯಾಲಿ ನಡೆಸಿದ್ದಾರೆ. ಅವರು ಮೊದಲ ಬಾರಿಗೆ ಪಿಒಕೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಹಾಗಾಗಿ ಹಮಾಸ್‌ ನಾಯಕರ ಮೇಲೆ ಹೂಗಳನ್ನು ಸುರಿದು ಭರ್ಜರಿ ಸ್ವಾಗತ ಕೋರಿದ್ದಾರೆ.



ಫೆ. 5 ರಂದು ಈ ಸಮ್ಮೇಳನ ನಡೆದಿದ್ದು ಹಮಾಸ್‌ನ ಹಲವು ನಾಯಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ತಲ್ಹಾ ಸೈಫ್ ಮತ್ತು ಜೈಶ್ ಕಮಾಂಡರ್ ಅಸ್ಗರ್ ಖಾನ್ ಕಾಶ್ಮೀರಿ ಸೇರಿದಂತೆ ಉನ್ನತ ಭಯೋತ್ಪಾದಕ ನಾಯಕರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನೂ ಓದಿ:Jaishankar: ಅಕ್ರಮ ವಲಸಿಗರ ಕೈಗೆ ಕೋಳ ಹಾಕುವುದು ಅಮೆರಿಕದ ನೀತಿ- ಸಂಸತ್ತಿನಲ್ಲಿ ಜೈಶಂಕರ್‌ ಸ್ಪಷ್ಟನೆ!

ಇಸ್ರೇಲಿ ಒತ್ತೆಯಾಳುಗಳ ಮೇಲೆ ಅತ್ಯಾಚಾರ- ಸಲಿಂಗಿಗಳಿಗೆ ಗಲ್ಲು

ಪ್ಯಾಲೆಸ್ತೀನ್ ಉಗ್ರ ಸಂಘಟನೆ ಹಮಾಸ್‌ಇಸ್ರೇಲಿ ಪುರುಷ ಒತ್ತೆಯಾಳುಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತನ್ನ ಸಂಘಟನೆಯಲ್ಲಿದ್ದ ಸಲಿಂಗಿಗಳಿಗೆ ಚಿತ್ರಹಿಂಸೆ ನೀಡಿ ಗಲ್ಲಿಗೇರಿಸಿದೆ ಎಂದು ತಿಳಿದು ಬಂದಿದೆ. ಸಲಿಂಗ ಸಂಬಂಧಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಖಚಿತಪಡಿಸಿರುವ ಹಮಾಸ್‌ ತನ್ನ ಸಂಘಟನೆಯಲ್ಲಿರುವ ಸಲಿಂಗಿಗಳನ್ನು ಕ್ರೂರವಾಗಿ ಶಿಕ್ಷಿಸುತ್ತಿದೆ. ಈಗಾಗಲೇ ಒತ್ತೆಯಾಳುಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕೆಲವರನ್ನು ನೇಣಿಗೇರಿಸಿದೆ. ಕಳೆದ ಅಕ್ಟೋಬರ್ 7, 2023ರಂದು ಹಮಾಸ್‌ ನಡೆಸಿದ್ದ ಭೀಕರ ದಾಳಿಯಲ್ಲಿ ಸರಿ ಸುಮಾರು 1,200 ಇಸ್ರೇಲಿ ಪ್ರಜೆಗಳು ದಾರುಣವಾಗಿ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ನೂರಾರು ಇಸ್ರೇಲಿ ನಾಗರಿಕರನ್ನು ಹಮಾಸ್‌ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿತ್ತು. ಈ ಪೈಕಿ ಪುರುಷ ಒತ್ತೆಯಾಳುಗಳ ಮೇಲೆ ಹಮಾಸ್‌ ಸಂಘಟನೆಯ ಸಲಿಂಗಿಗಳು ಅತ್ಯಾಚಾರ ನಡೆಸಿದ್ದರು ಎಂದು ಪ್ಯಾಲೆಸ್ತೀನ್‌ ಉಗ್ರ ಸಂಘಟನೆ ತಿಳಿಸಿದೆ.