Operation Sindoor: ಭಯೋತ್ಪಾದಕ ನೆಲೆಗಳ ಮೇಲೆ ದಾಳಿ; ಸ್ಯಾಟ್‌ಲೈಟ್ ಫೋಟೋ ಬಿಡುಗಡೆ ಮಾಡಿದ ಅಮೆರಿಕ
ಭಾರತವು ತನ್ನ ಆಪರೇಷನ್ ಸಿಂದೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ಒಂದು ದಿನದ ನಂತರ , ಅಮೆರಿಕದ ಕಂಪನಿಯೊಂದು ತೆಗೆದ ಉಪಗ್ರಹ ಫೋಟೋಗಳು ವೈರಲ್ ಆಗಿದೆ. ಕೊಲೊರಾಡೋ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್ ಸೆರೆಹಿಡಿದ ಫೋಟೋಗಳು ಎರಡು ಭಯೋತ್ಪಾದಕ ನೆಲೆ ಮೇಲಾದ ದಾಳಿಯ ಚಿತ್ರವನ್ನು ಒಳಗೊಂಡಿದೆ.


ಭಾರತವು ತನ್ನ ಆಪರೇಷನ್ ಸಿಂದೂರ್ (Operation Sindoor) ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ಒಂದು ದಿನದ ನಂತರ , ಅಮೆರಿಕದ ಕಂಪನಿಯೊಂದು ತೆಗೆದ ಉಪಗ್ರಹ ಫೋಟೋಗಳು ವೈರಲ್ ಆಗಿದೆ. ಕೊಲೊರಾಡೋ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್ ಸೆರೆಹಿಡಿದ ಫೋಟೋಗಳು ಎರಡು ಭಯೋತ್ಪಾದಕ ನೆಲೆ ಮೇಲಾದ ದಾಳಿಯ ಚಿತ್ರವನ್ನು ಒಳಗೊಂಡಿದೆ. ಒಂದು ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹಾವಲ್ಪುರದಲ್ಲಿ ಮತ್ತು ಇನ್ನೊಂದು ಪಂಜಾಬ್ ಪ್ರಾಂತ್ಯದ ಲಷ್ಕರ್-ಎ-ತೈಬಾದ ಬೇಸ್ ಮುರಿಡ್ಕೆ.
#WATCH | Satellite pics from Maxar Technologies show damage caused by Indian missile strikes on Jamia Mosque in Bahawalpur and the city of Muridke, Pakistan, before and after the strike.
— ANI (@ANI) May 8, 2025
(Source: Reuters) pic.twitter.com/6idaYwwjOW
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಯ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಮೂಲಕ ಉಗ್ರರ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ. ಬಹಾವಲ್ಪುರದಲ್ಲಿ, ಭಾರತೀಯ ಸಶಸ್ತ್ರ ಪಡೆಗಳು 2015 ರಿಂದ ಕಾರ್ಯನಿರ್ವಹಿಸುತ್ತಿರುವ ಮರ್ಕಜ್ ಸುಭಾನ್ ಅಲ್ಲಾಹ್ ಅನ್ನು ಗುರಿಯಾಗಿಸಿಕೊಂಡವು, ಇದು ಜೈಶ್-ಎ-ಮೊಹಮ್ಮದ್ (ಜೆಎಂ) ನ ತರಬೇತಿ ಮತ್ತು ಬೋಧನೆಗಾಗಿ ಪ್ರಮುಖ ಕೇಂದ್ರವಾಗಿದೆ ಎಂದು ತಿಳಿದು ಬಂದಿತ್ತು. ರಾತ್ರಿ 1 ಗಂಟೆಯಿಂದ ಎರಡರ ನಡುವೆ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಮೂರು ನಿಷೇಧಿತ ಉಗ್ರ ಸಂಘಟನೆಗಳ ಒಂಬತ್ತು ನೆಲೆಗಳ ಮೇಲೆ ಕ್ಷಿಪಣಿಗಳ ಮಳೆಯನ್ನೇ ಸುರಿಸಿದೆ. ಪರಿಣಾಮವಾಗಿ 80ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ: Operation Sindoor: ಛೀ..ನಾಚಿಕೆ ಇಲ್ಲದ ಪಾಕಿಸ್ತಾನ! ಹತ ಉಗ್ರರ ಅಂತ್ಯಕ್ರಿಯೆಯಲ್ಲಿ ಸೇನೆ ಭಾಗಿ; ಮೃತದೇಹಗಳ ಮೇಲೆ ಪಾಕ್ ಧ್ವಜ
ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸುವುದಕ್ಕೂ ಮುನ್ನ ಭಾರತವು ಪಾಕಿಸ್ತಾನ ವಾಯುಪ್ರದೇಶಕ್ಕೆ ಡ್ರೋನ್‌ಗಳನ್ನು ರವಾನಿಸಿ ಪರಿಸ್ಥಿತಿ ಅವಲೋಕನ ನಡೆಸಿತ್ತು. ವಾಯುದಾಳಿಗೂ 20 ನಿಮಿಷ ಮೊದಲು ಅಂದರೆ ಮಂಗಳವಾರ ರಾತ್ರಿ 12.45ಕ್ಕೆ ಭಾರತೀಯ ರಕ್ಷಣಾ ಪಡೆ ಪಾಕಿಸ್ತಾನ ವಾಯುಪ್ರದೇಶಕ್ಕೆ ನಾಲ್ಕು ಡ್ರೋನ್ ರವಾನಿಸಿತ್ತು. ಸರಿಯಾಗಿ 12.45ಕ್ಕೆ ಕೋಟ್ಲಿನೆಲೆ ಮೇಲೆ ಮೊದಲ ಡ್ರೋನ್ ಅಪ್ಪಳಿಸಿತು. ದಾಳಿಯಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಕುಟುಂಬದ 10 ಮಂದಿ ಮೃತಪಟ್ಟಿದ್ದರು. ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಮೇಲಿನ ದಾಳಿಯಲ್ಲಿ ಬಲಿಯಾದವರಲ್ಲಿ ಜೆಇಎಂ ಮುಖ್ಯಸ್ಥನ ಸಹೋದರಿ, ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ವಿಸ್ತೃತ ಕುಟುಂಬದ ಐದು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.