ಅಂದು ಕೋಟಿ ವ್ಯವಹಾರ ನಡೆಸಿದ್ದ ಉದ್ಯಮಿ ಇಂದು ಡ್ರೈವರ್: ಕಣ್ಣೀರು ತರಿಸುವಂತಿದೆ ಇವರ ಕಥೆ!
Viral News: ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ನನ್ನ ಜೀವನದ ದಿಕ್ಕೆ ಬದಲಾಯಿತು ಎಂದು ವ್ಯಕ್ತಿಯೋರ್ವ ಟ್ವಿಟ್ಟರ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೋಟಿ ಕೋಟಿ ಹಣಕಾಸಿನ ವ್ಯವ ಹಾರ ಮಾಡುತ್ತಿದ್ದ ಉದ್ಯಮಿಯಾಗಿದ್ದ ತಾನು ಈಗ ರ‍್ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ಕಾಲದಲ್ಲಿ ಐಶಾರಾಮಿ ಜೀವನ ಕಂಡಿದ್ದ ತನಗೆ ಈಗ ನಿತ್ಯ ಜೀವನ ತಳ್ಳಲು ಕಷ್ಟ ಪಡು ವಂತಾಗಿದೆ ಎಂಬರ್ಥದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಕೋಟಿ ವ್ಯವಹಾರ ನಡೆಸಿದ ಉದ್ಯಮಿ ಈಗ ಚಾಲಕ -
ಬೆಂಗಳೂರು, ಡಿ. 24: ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಒಂದೊಂದು ರೂಪದಲ್ಲಿ ಬರಲಿದೆ. ಮನೆಕೆಲಸ, ಕಚೇರಿ ಕೆಲಸ , ಮದುವೆ, ಮಕ್ಕಳು ಎಂಬ ಜವಾಬ್ದಾರಿಗಳ ನಡುವೆ ನಿತ್ಯ ಜೀವನ ಸಾಗಿ ಸುವವರು ನಮ್ಮ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಅಂತೆಯೇ ಕೋವಿಡ್ ಸಮಯದಲ್ಲಿ ಸಾಮಾನ್ಯ ಜನರ ಕಥೆ ಬಹಳ ಭೀಕರವಾಗಿ ಇತ್ತು. ಕೋವಿಡ್ ಕಾಲಘಟ್ಟದಲ್ಲಿ ಮನೆ, ಕೆಲಸ , ಕುಟುಂಬದವರನ್ನು ಕಳೆದುಕೊಂಡ ಪ್ರಮಾಣ ಲೆಕ್ಕವಿಲ್ಲದಷ್ಟು ಎನ್ನಬಹುದು. ಅಂತೆಯೇ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ನನ್ನ ಜೀವನದ ದಿಕ್ಕೆ ಬದಲಾಯಿತು ಎಂದು ವ್ಯಕ್ತಿಯೋರ್ವ ಟ್ವಿಟ್ಟರ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕೋಟಿ ಕೋಟಿ ಹಣಕಾಸಿನ ವ್ಯವಹಾರ ಮಾಡುತ್ತಿದ್ದ ಉದ್ಯಮಿಯಾಗಿದ್ದ ತಾನು ಈಗ ರ‍್ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ಕಾಲದಲ್ಲಿ ಐಶಾರಾಮಿ ಜೀವನ ಕಂಡಿದ್ದ ತನಗೆ ಈಗ ನಿತ್ಯ ಜೀವನ ತಳ್ಳಲು ಕಷ್ಟ ಪಡುವಂತಾಗಿದೆ ಎಂಬರ್ಥದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಚಿರಾಗ್ ಎನ್ನುವ ಹೆಸರಿನ ವ್ಯಕ್ತಿಯು ತನ್ನ ಜೀವನದ ಅನಿರೀಕ್ಷಿತ ಘಟನೆಗಳ ಬಗ್ಗೆ ವಿವರಿಸಿದ್ದನ್ನು ಕಾಣಬಹುದು. ತಾನು ಅಮಿಟಿಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದಿದ್ದೆ...ಒಂದು ಕಾಲದಲ್ಲಿ ಆರಾಮದಾಯಕ ಜೀವನವು ತನ್ನದಾಗಿತ್ತು ಎಂದು ಟ್ಟಿಟ್ಟರ್ ಎಕ್ಸ್ ಪೋಸ್ಟ್ ನಲ್ಲಿ ಅವರು ಬರೆದುಕೊಂಡಿದ್ದಾರೆ. ತನ್ನ ತಂದೆಯು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು , ಸುಖದ , ಐಶಾರಾಮಿ ಜೀವನ ತನ್ನದಾಗಿತ್ತು. ಕಷ್ಟಗಳೆ ಇರಲಿಲ್ಲ ಹೀಗಾಗಿ ಕುಟುಂಬದ ಸಹಕಾರದೊಂದಿಗೆ ವ್ಯವಹಾರದಲ್ಲಿ ಹಣ ವಿನಿಯೋಗಿಸಿದ್ದೆ ಆಗ ಜೀವನ ತುಂಬಾ ಚೆನ್ನಾಗಿತ್ತು ಎಂದು ಬರೆದಿದ್ದನ್ನು ಪೋಸ್ಟ್ ನಲ್ಲಿ ಕಾಣಬಹುದು.
Life is so unfair, man.
— Chiraag (@0xChiraag) December 22, 2025
I was on a Rapido bike today, just a normal ride. The driver asked me where I live, which college I go to. Casual stuff.
Then out of nowhere, he started telling me his story. He said he did hotel management from Amity. Life was good back then when his…
ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಕೋವಿಡ್ ನಿಂದ ಉದ್ಯಮ ಕ್ಷೇತ್ರದಲ್ಲಿ 13–14 ಕೋಟಿ ರೂ.ಗಳ ತನಕವು ನಷ್ಟವಾಗಿದೆ. ಇದರಿಂದಾಗಿ ತಮ್ಮ ಉದ್ಯಮ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಾಯಿತು ಎಂದು ಚಾಲಕ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಬಳಿಕ ಹೊಸ ಉದ್ಯಮ ಒಂದನ್ನು ಪ್ರಾರಂಭಿಸುವ ಪ್ರಯತ್ನವೂ ಮಾಡಲಾಗಿದ್ದು ಅದುಕೂಡ ವಿಫಲವಾಯಿತು, ಇದರಿಂದಾಗಿ ಅವರಿಗೆ ಇನ್ನೂ 4 ಲಕ್ಷ ರೂ. ನಷ್ಟವಾಯಿತು, ಯಾವುದೇ ಉಳಿತಾಯವಿಲ್ಲದೆ ಈಗ ರ‍್ಯಾಪಿಡೋ ನಂಬಿಕೊಂಡು ಜೀವನ ಸಾಗಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ.
Viral News: ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ
ಕೋವಿಡ್ ನಿಂದಾಗಿ ಅನೇಕರ ಜೀವನ ಬರಿದಾಗಿದ್ದು ಅಂತವರಲ್ಲಿ ತಾನು ಒಬ್ಬನು ಎಂದು ಅವರು ಹೇಳಿದ್ದಾರೆ. ಕೋವಿಡ್ ವ್ಯಾಪಕವಾದ ಹಿನ್ನೆಲೆ ಹಣಕಾಸಿನ ಉಳಿತಾಯವು ಇಲ್ಲದೆ ಆರ್ಥಿಕ ಸಂಕಷ್ಟ ಅನುಭವಿಸಿದೆ. ಕೋವಿಡ್ ಸಮಸ್ಯೆ ನಿಧಾನವಾಗಿ ಸುಧಾರಿಸಿದಂತೆ ಎಲ್ಲ ಕಡೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಾ ಹೋಯಿತು. ಎಲ್ಲಿಯೂ ಕೆಲಸ ಸಿಗಲಿಲ್ಲ ಜೀವನ ನಿರ್ವಹಣೆ ಕೂಡ ಕಷ್ಟ ವಾಯಿತು. ನನ್ನಲ್ಲಿ ಇದ್ದದ್ದು ಈ ಬೈಕ್ ಮಾತ್ರ. ಹೀಗಾಗಿ ರ‍್ಯಾಪಿಡೋ ರೈಡರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ದೇವರ ಮೇಲೆ ನನಗೆ ನಂಬಿಕೆ ಇನ್ನು ಇದೆ. ಈಗ ಸಿಕ್ಕ ರ‍್ಯಾಪಿಡೋ ಕೆಲಸವನ್ನು ಖುಷಿಯಿಂದ ಮಾಡುತ್ತೇನೆ. ಅದರ ಜೊತೆಗೆ ಏನಾದರೂ ಸಾಧನೆ ಮಾಡುವ ಭರವಸೆ ಇರುವುದಾಗಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಆನ್‌ಲೈನ್‌ನಲ್ಲಿ ವ್ಯಾಪಕ ಗಮನ ಸೆಳೆದಿದ್ದು ನೆಟ್ಟಿಗರಿಂದಲೂ ತರತರನಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೀವನದಲ್ಲಿ ಕಷ್ಟಗಳು ಬಂದಾಗಲೇ ಮನುಷ್ಯ ಇನ್ನಷ್ಟು ಬಲಶಾಲಿಯಾಗುವುದು. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಸಮರಸದಿಂದ ಬದುಕು ಸಾಗಿಸಿ ಆಗ ಯಾವ ಕಷ್ಟವು ನಿಮಗೆ ನೋವು ಉಂಟು ಮಾಡಲಾರದು ಎಂದು ಬಳಕೆದಾರರೊಬ್ಬರು ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.