ಅಮೆರಿಕದಲ್ಲಿ ಮೃತಪಟ್ಟಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ!
accident in US: ಅಮೆರಿಕದ ಸಿಯಾಟಲ್‌ನಲ್ಲಿ ಪೊಲೀಸ್ ಅಧಿಕಾರಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಮೃತಪಟ್ಟಿದ್ದರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನಗರ ಆಡಳಿತವು 29 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹262 ಕೋಟಿ) ಪರಿಹಾರ ನೀಡಲು ಒಪ್ಪಿಕೊಂಡಿದೆ.
ಅಪಘಾತದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯ ಸಾವು ಪ್ರಕರಣ: 262 ಕೋಟಿ ರೂ. ಪರಿಹಾರ -
ವಾಷಿಂಗ್ಟನ್, ಫೆ.12: ಪೊಲೀಸ್ ಅಧಿಕಾರಿಯೊಬ್ಬರ ಬೇಜವಾಬ್ದಾರಿನದಿಂದ ಅಪಘಾತದಲ್ಲಿ (accident in US) ಮೃತಪಟ್ಟಿದ್ದ ಭಾರತೀಯ ಮೂಲದ ಯುವತಿಯೊಬ್ಬಳ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ. 2023ರ ಜನವರಿಯಲ್ಲಿ ಈ ಘಟನೆ ನಡೆದಿತ್ತು. ಪೊಲೀಸ್ ಅಧಿಕಾರಿಯೊಬ್ಬರ ಅತಿ ವೇಗದ ಚಾಲನೆಯಿಂದ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಮೂಲದ 23 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ (Jaahnavi Kandula) ಮೃತಪಟ್ಟಿದ್ದರು. ಈ ಸಂಬಂಧ ಆಕೆಯ ಕುಟುಂಬವು ಮೊಕದ್ದಮೆ ದಾಖಲಿಸಿದ್ದರು. ಇದೀಗ ಸಿಯಾಟಲ್ ಅಧಿಕಾರಿಗಳು 29 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ರೂ. 262 ಕೋಟಿ) ಪಾವತಿಸಲು ಒಪ್ಪಿಕೊಂಡಿದ್ದಾರೆ.
ನಗರ ಆಡಳಿತ ಹಾಗೂ ಕಳೆದ ವರ್ಷ ವಜಾಗೊಂಡ ಮಾಜಿ ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ವಿರುದ್ಧ 2024ರಲ್ಲಿ ದಾಖಲಿಸಲಾಗಿದ್ದ 110 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮೊಕದ್ದಮೆಯನ್ನು ಈ ಒಪ್ಪಂದದ ಮೂಲಕ ಅಂತ್ಯಗೊಳಿಸಲಾಗಿದೆ. ಈ ಪರಿಹಾರ ಮೊತ್ತದಲ್ಲಿ ಸುಮಾರು 20 ಮಿಲಿಯನ್ ಅಮೆರಿಕನ್ ಡಾಲರ್ ನಗರ ಆಡಳಿತದ ವಿಮಾ ಪಾಲಿಸಿಯಿಂದ ಭರಿಸಲಾಗುವ ನಿರೀಕ್ಷೆಯಿದೆ.
ಕಾನ್ಪುರ ಲಂಬೋರ್ಘಿನಿ ಅಪಘಾತ; ಕೊನೆಗೂ ಉದ್ಯಮಿ ಪುತ್ರನನ್ನು ಬಂಧಿಸಿದ ಪೊಲೀಸರು
ಇತ್ಯರ್ಥವನ್ನು ಘೋಷಿಸುವ ವೇಳೆ, ಮೃತ ವಿದ್ಯಾರ್ಥಿನಿಯ ಕುಟುಂಬದ ಪರ ವಕೀಲೆ ಎರಿಕಾ ಇವಾನ್ಸ್, ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿತ್ತು ಎಂದು ಹೇಳಿದರು. ಹಣಕಾಸಿನ ಪರಿಹಾರದಿಂದ ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಸಮಾಧಾನ ತರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಿಯಾಟಲ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ವ್ಯಾಸಾಂಗ ಮಾಡುತ್ತಿದ್ದ ಕಂದುಲಾ, ಜನವರಿ 23, 2023 ರಂದು ರಸ್ತೆ ದಾಟುತ್ತಿದ್ದಾಗ ದುರ್ಮರಣಕ್ಕೀಡಾದರು. ವೇಗವಾಗಿ ಕಾರು ಚಲಾಯಿಸುತ್ತಿದ್ದ ಪೊಲೀಸ್ ಅಧಿಕಾರಿಯ ವಾಹನಕ್ಕೆ ಬಲಿಯಾದರು. ಸೈರನ್ ಮೊಳಗಿಸಿಕೊಂಡೇ ವಾಹನ ಚಲಾಯಿಸಿದ್ದರು ಎನ್ನಲಾಗಿದೆ.
ಡ್ಯಾಶ್‌ಕ್ಯಾಮ್ ದೃಶ್ಯಾವಳಿಯಲ್ಲಿ ಕಂದುಲಾ ಅವರು ರಸ್ತೆ ದಾಟಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ. ಅಪಘಾತದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ ಕಂದುಲಾ, 100 ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಹಾರಿ ಕೆಳಕ್ಕೆ ಬಿದ್ದರು.
Bidar Accident: ಬೀದರ್‌ನಲ್ಲಿ ಭೀಕರ ಅಪಘಾತ; ಬ್ರಿಡ್ಜ್‌ಗೆ ಸ್ಕೂಟಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ದುರ್ಮರಣ
ಕುಡಿದ ಮತ್ತಿನಲ್ಲಿ ನಟ ಮಯೂರ್ ಪಟೇಲ್ ಸರಣಿ ಅಪಘಾತ
ಬೆಂಗಳೂರಿನಲ್ಲಿ ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ಇತ್ತೀಚೆಗೆ ಕುಡಿದ ಮತ್ತಿನಲ್ಲಿ ಅಪಘಾತ ಎಸಗಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಲ್ಲದೆ, ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆಸಿ ಸರಣಿ ಅಪಘಾತ ಎಸಗಿದ್ದರು. ಬೆಂಗಳೂರಿನ ದೊಮ್ಮಲೂರಿನ ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಮೂರು ಕಾರುಗಳು ಜಖಂ ಆಗಿದ್ದು, ಈ ವೇಳೆ ಕಂಟ್ರೋಲ್ ರೂಮ್‌ಗೆ ಚಾಲಕರು ಕರೆ ಮಾಡಿದ್ದರು.
ಬಳಿಕ ಪೊಲೀಸರು ನಟ ಮಯೂರ್ ಪಟೇಲ್‌ರನ್ನು ಠಾಣೆಗೆ ಕರೆದೊಯ್ದರು. ಕಾರು ಮಾಲೀಕ ಶ್ರೀನಿವಾಸ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.