ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುದ್ಧ ಖಂಡಿಸಿದ ಪೋಪ್ ಲಿಯೋಗೆ ಇರಾನ್ ಮೆಚ್ಚುಗೆ; ಡೊನಾಲ್ಡ್‌ ಟ್ರಂಪ್‌ ಟೀಕಿಸಿದ ಬೆನ್ನಲ್ಲೇ ಹೊಸ ಬೆಳವಣಿಗೆ

ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ದಾಳಿ ನಡೆಸಿದ ಮೇಲೆ ಇದನ್ನು ಖಂಡಿಸುವ ಧೈರ್ಯವನ್ನು ಯಾರೂ ಮಾಡಿಲ್ಲ. ಆದರೆ ಇದೀಗ 14ನೇ ಪೋಪ್ ಲಿಯೋ ಅವರು ಇದನ್ನು ಖಂಡಿಸಿದ್ದು, ಶಾಂತಿ ಸ್ಥಾಪನೆಗಾಗಿ ಕರೆ ನೀಡಿದ್ದಾರೆ. ಇದನ್ನು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಸ್ವಾಗತಿಸಿದ್ದು, ಇದು ಶಾಂತಿ ಪ್ರತಿಪಾದಕರಿಗೆ ದಾರಿದೀಪವಾಗಿದೆ.

ಸಂಗ್ರಹ ಚಿತ್ರ

ಟೆಹರಾನ್: ಯುದ್ಧ ಮತ್ತು ಹಿಂಸಾಚಾರವನ್ನು 14ನೇ ಪೋಪ್ ಲಿಯೋ (Pope Leo XIV) ಅವರು ಖಂಡಿಸಿದ್ದು, ಇದನ್ನು ಇರಾನ್ ಸಂಸತ್ತಿನ ಸ್ಪೀಕರ್ (Iranian Parliament speaker) ಮೊಹಮ್ಮದ್ ಬಘರ್ ಗಾಲಿಬಾಫ್ (Mohammad Baqer Qalibaf) ಅವರು ಸ್ವಾಗತಿಸಿದ್ದಾರೆ. ಇದು ಶಾಂತಿ ಪ್ರತಿಪಾದಕರಿಗೆ ದಾರಿದೀಪವಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ (Social media) ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಯುದ್ಧದ ಅಪರಾಧಗಳನ್ನು ಖಂಡಿಸಲು ನನಗೆ ಭಯವಿಲ್ಲ ಎಂದು ಪೋಪ್ ಅವರು ಹೇಳಿದ್ದಾರೆ. ಅವರ ಈ ನಿರ್ಭೀತ ನಿಲುವನ್ನು ನಾವು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.

ಪೋಪ್ ಅವರು ನಾಗರಿಕರ ಹತ್ಯೆಯ ವಿರುದ್ಧ ನೈತಿಕ ನಿಲುವನ್ನು ತೋರಿದ್ದಾರೆ. ನನಗೆ ಭಯವಿಲ್ಲ ಎನ್ನುವ ಘೋಷಣೆಯ ಮೂಲಕ ಅವರು ಯುದ್ಧ ಅಪರಾಧಗಳನ್ನು ವಿರೋಧಿಸುವವರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮೊಹಮ್ಮದ್ ಬಘರ್ ಗಾಲಿಬಾಫ್ ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ದಿಗ್ಬಂಧನ: ಗಣಿತ ಸೂತ್ರದ ಮೂಲಕ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಎಚ್ಚರಿಕೆ

ಪೋಪ್ ಲಿಯೋ ಅವರ ನಿರ್ಭೀತ ನಿಲುವನ್ನುಇರಾನ್ ಗೌರವಿಸುತ್ತದೆ. ಇಸ್ರೇಲ್ ಮತ್ತು ಯುಎಸ್‌ನ ಯುದ್ಧ ಅಪರಾಧಗಳನ್ನು ಅವರು ಖಂಡಿಸುವಾಗ ನನಗೆ ಯಾವುದೇ ಭಯವಿಲ್ಲ. ಈ ಘೋಷಣೆಯು ಅಮಾಯಕರ ಹತ್ಯೆಯ ಬಗ್ಗೆ ಮೌನವಾಗಿರಲು ನಿರಾಕರಿಸುವ ಎಲ್ಲರಿಗೂ ಮಾರ್ಗವಾಗಿದೆ. ಇವರ ನಾಯಕತ್ವವು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಅವರು ತೋರಿರುವ ಈ ಬೆಳಕಿಗೆ ಧನ್ಯವಾದಗಳು ಎಂದು ಹೇಳಿದರು.



ಇತ್ತೀಚೆಗೆ ಅಲ್ಜೀರಿಯಾಕ್ಕೆ ತೆರಳುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೋಪ್ ಲಿಯೋ ಅವರು ಶಾಂತಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ರಾಜಕೀಯ ವಿವಾದಗಳಿಗೆ ಪ್ರವೇಶಿಸುವ ಉದ್ದೇಶವನ್ನುತಾವು ಹೊಂದಿಲ್ಲ ಎಂದು ಹೇಳಿದರು.

ತಾವು ರಾಜಕಾರಣಿಯಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಯಾವುದೇ ಇಚ್ಛೆಯನ್ನು ಕೂಡ ತಾವು ಹೊಂದಿಲ್ಲ. ನಾನು ಒಳ್ಳೆಯದನ್ನು ಮಾತನಾಡುತ್ತೇನೆ. ಇದನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು..

ಶಾಂತಿಗಾಗಿ ಬಹುಪಕ್ಷೀಯ ಪ್ರಯತ್ನಗಳನ್ನು ಉತ್ತೇಜಿಸಬೇಕಿದೆ. ರಾಷ್ಟ್ರಗಳ ನಡುವೆ ಸಂಬಂಧಗಳ ಸೇತುವೆ ನಿರ್ಮಿಸುವುದು ಮತ್ತು ಸಮನ್ವಯವನ್ನು ಪ್ರೋತ್ಸಾಹಿಸುವುದು ನನ್ನ ಧ್ಯೇಯವಾಗಿದೆ. ಸಮಸ್ಯೆಗಳಿಗೆ ಸರಿಯಾದ ಪರಿಹಾರವನ್ನು ಹುಡುಕುವ ಸಲುವಾಗಿ ರಾಜ್ಯಗಳ ನಡುವೆ ಶಾಂತಿ ಮತ್ತು ಬಹುಪಕ್ಷೀಯ ಸಂವಾದವನ್ನು ಉತ್ತೇಜಿಸಲು ಯುದ್ಧದ ವಿರುದ್ಧ ನಾನು ಗಟ್ಟಿಯಾಗಿ ಮಾತನಾಡುವುದನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದರು.

Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜತೆ ಬಾಹ್ಯಾಕಾಶಕ್ಕೆ ಹಾರಿದ 'ಡಲ್ಕೋಫ್ಲೆಕ್ಸ್‌'

ನಾನು ಯಾವುದೇ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಜಗತ್ತಿನಲ್ಲಿ ಹಲವಾರು ಜನರು ಸಂಕಷ್ಟದಲ್ಲಿದ್ದಾರೆ ಬಳಲುತ್ತಿದ್ದಾರೆ ಎಂದು ಪೋಪ್ ಲಿಯೋ ಹೇಳಿದ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪೋಪ್ ಲಿಯೋ ಅವರಿಗೆ ಅಪರಾಧದ ಬಗ್ಗೆ ತಿಳಿದಿಲ್ಲ. ಅವರು ವಿದೇಶಾಂಗ ನೀತಿ ರೂಪಿಸಲು ತಿಳಿದಿಲ್ಲ. ಲಿಯೋ ಅವರು ಕೃತಜ್ಞರಾಗಿರಬೇಕು. ಯಾಕೆಂದರೆ ಅವರು ಪೋಪ್ ಆಗಲು ಯಾವುದೇ ಪಟ್ಟಿಯಲ್ಲಿ ಇರಲಿಲ್ಲ. ಆದರೆ ಅವರು ಅಮೆರಿಕನ್ ಆಗಿದ್ದರಿಂದ ಅವರನ್ನು ಪೋಪ್ ಮಾಡಲಾಯಿತು. ನಾನು ಶ್ವೇತಭವನದಲ್ಲಿ ಇರದೇ ಇರುತ್ತಿದ್ದರೆ ಇವತ್ತು ಲಿಯೋ ಅವರು ವ್ಯಾಟಿಕನ್‌ನಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದರು.

ವಿದ್ಯಾ ಇರ್ವತ್ತೂರು

View all posts by this author