ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜತೆ ಬಾಹ್ಯಾಕಾಶಕ್ಕೆ ಹಾರಿದ 'ಡಲ್ಕೋಫ್ಲೆಕ್ಸ್‌'

Artemis II: ನಾಸಾದ ಐತಿಹಾಸಿಕ 'ಆರ್ಟೆಮಿಸ್ 2' ಬಾಹ್ಯಾಕಾಶ ಯಾನ ಇದೀಗ ಅಂತಿಮ ಹಂತದಲ್ಲಿದೆ. ಈ 10 ದಿನಗಳ ರೋಚಕ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ಕಾಪಾಡಲು ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ 'ಡಲ್ಕೋಲಾಕ್ಸ್' ಕೂಡ ಸ್ಥಾನ ಪಡೆದಿದೆ.

ಗಗನಯಾತ್ರಿಗಳ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಡಲ್ಕೋಫ್ಲೆಕ್ಸ್‌ಗೆ ಸ್ಥಾನ

ಡಲ್ಕೋಫ್ಲೆಕ್ಸ್ ಮಾತ್ರೆ -

Profile
Siddalinga Swamy Apr 13, 2026 6:32 PM

ಹೊಸದಿಲ್ಲಿ, ಏ.13: ಮನುಷ್ಯನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸಿದ ನಾಸಾದ ಐತಿಹಾಸಿಕ 'ಆರ್ಟೆಮಿಸ್ 2' (Artemis II) ಬಾಹ್ಯಾಕಾಶ ಯಾನ ಇದೀಗ ಅಂತಿಮ ಹಂತದಲ್ಲಿದೆ. ಈ 10 ದಿನಗಳ ರೋಚಕ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ಕಾಪಾಡಲು ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ 'ಡಲ್ಕೋಲಾಕ್ಸ್' ಕೂಡ ಸ್ಥಾನ ಪಡೆದಿದೆ. ಭಾರತದಲ್ಲಿ ಈ ಔಷಧಿಯನ್ನು 'ಡಲ್ಕೋಫ್ಲೆಕ್ಸ್' ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಬಾಹ್ಯಾಕಾಶದಲ್ಲಿ ಮಲಬದ್ಧತೆ ಸಮಸ್ಯೆ ಕಾಡುವುದೇಕೆ?

ಬಾಹ್ಯಾಕಾಶ ಪ್ರಯಾಣ ಎಷ್ಟೇ ಅದ್ಭುತವಾಗಿದ್ದರೂ, ಅಲ್ಲಿಯೂ ಮನುಷ್ಯನ ಹೊಟ್ಟೆ ಮತ್ತು ಜೀರ್ಣಕ್ರಿಯೆ ಭೂಮಿಯ ನಿಯಮಗಳನ್ನೇ ಪಾಲಿಸುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಇದರಿಂದಾಗಿ ಕರುಳಿನ ಚಲನೆ ತುಂಬಾ ನಿಧಾನವಾಗುತ್ತದೆ. ಜೊತೆಗೆ ಗಗನಯಾತ್ರಿಗಳಿಗೆ ಅಲ್ಲಿ ಓಡಾಡಲು ಜಾಗ ಕಡಿಮೆ. ಹೀಗಾಗಿ ಅವರು ವಿಶೇಷ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದ ಅವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು ಸಾಮಾನ್ಯ. ಹೀಗಾಗಿಯೇ ನಾಸಾ ಈ ನಂಬಿಕಾರ್ಹ ಔಷಧಿಯನ್ನು ಜೊತೆಗೆ ಕಳುಹಿಸಿದೆ.

ನಾಸಾದ ಏಕೈಕ ಆಯ್ಕೆ ಡಲ್ಕೋಲಾಕ್ಸ್

ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡಲು ನಾಸಾದ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿರುವ ಏಕೈಕ ಬ್ರ್ಯಾಂಡ್ 'ಡಲ್ಕೋಲಾಕ್ಸ್' (ಭಾರತದಲ್ಲಿ ಡಲ್ಕೋಫ್ಲೆಕ್ಸ್). ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಹಲವು ದಶಕಗಳಿಂದ ಗಗನಯಾತ್ರಿಗಳು ಇದನ್ನು ಬಳಸುತ್ತಿದ್ದಾರೆ.

ಇದರಲ್ಲಿರುವ 'ಬಿಸಾಕೋಡಿಲ್' ಎಂಬ ಅಂಶವು ಕರುಳಿನ ಸಹಜ ಚಲನೆಯನ್ನು ಉತ್ತೇಜಿಸಿ, ಕೇವಲ 6 ಗಂಟೆಗಳಲ್ಲಿ ನಿರಾಳತೆ ನೀಡುತ್ತದೆ. ಇದು ಚಟವಾಗುವ ಔಷಧಿ ಅಲ್ಲದೇ ಇರುವುದರಿಂದ ಇದು ಬಳಕೆಗೆ ಅತ್ಯಂತ ಸುರಕ್ಷಿತವಾಗಿದೆ.

ಈ ಬಗ್ಗೆ ಮಾತನಾಡಿರುವ ಒಪೆಲ್ಲಾ ಇಂಡಿಯಾ ಕಂಪನಿಯ ನಿರ್ದೇಶಕಿ ನೂಪುರ್ ಗುರ್ಬಕ್ಸಾನಿ, ʼನಾಸಾದ ಈ ಮಹತ್ವದ ಯೋಜನೆಯಲ್ಲಿ ನಮ್ಮ ಬ್ರ್ಯಾಂಡ್ ಸೇರ್ಪಡೆಯಾಗಿರುವುದು ವೈದ್ಯರು ಮತ್ತು ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷ, ಮನೆಯಿಂದ ಹಿಡಿದು ಬಾಹ್ಯಾಕಾಶದವರೆಗೂ, ಎಲ್ಲೆಡೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಇದು ಎತ್ತಿ ತೋರಿಸುತ್ತದೆʼ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಭೂಮಿಯ ಮೇಲಿರುವಾಗಲೂ ಒತ್ತಡ, ದೀರ್ಘಕಾಲದ ಪ್ರಯಾಣ ಅಥವಾ ದಿನಚರಿಯಲ್ಲಿ ಬದಲಾವಣೆಯಾದಾಗ ಜನರಿಗೆ ಮಲಬದ್ಧತೆ ಕಾಡುತ್ತದೆ. ಇಂತಹ ಸಮಯದಲ್ಲಿಯೂ ಇದು ಅತ್ಯುತ್ತಮ ಪರಿಹಾರವಾಗಿದೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲುಗಲ್ಲು: ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ, ಪ್ರಯೋಗ ಯಶಸ್ವಿ!

ಭಾರತದಲ್ಲಿಯೂ ಲಭ್ಯ 'ಡಲ್ಕೋಫ್ಲೆಕ್ಸ್'

ಭಾರತದಲ್ಲಿ 2017ರಲ್ಲಿ 'ಡಲ್ಕೋಲಾಕ್ಸ್' ಹೆಸರನ್ನು 'ಡಲ್ಕೋಫ್ಲೆಕ್ಸ್' ಎಂದು ಬದಲಾಯಿಸಲಾಯಿತು. ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಇದು ವಿವಿಧ ರೂಪಗಳಲ್ಲಿ ಲಭ್ಯವಿದೆ.

  • 5 mg ಮಾತ್ರೆ: ರಾತ್ರಿ ಸೇವಿಸಿದರೆ 6-8 ಗಂಟೆಗಳಲ್ಲಿ ಅಂದರೆ ಬೆಳಗಾಗುವಷ್ಟರಲ್ಲಿ ಸುಗಮ ಪರಿಹಾರ ನೀಡುತ್ತದೆ.
  • 5 mg ಸಪೊಸಿಟರಿ: 0 ದಿಂದ 10 ವರ್ಷದೊಳಗಿನ ಮಕ್ಕಳಿಗೆ ಇದು ಶೀಘ್ರ ಪರಿಹಾರ ನೀಡುತ್ತದೆ.
  • 10 mg ಸಪೊಸಿಟರಿ: 10 ವರ್ಷ ಮೇಲ್ಪಟ್ಟವರಿಗೆ ಹಾಗೂ ವಯಸ್ಕರಿಗೆ ತಕ್ಷಣದ ಪರಿಹಾರ ನೀಡಲು ಇದು ಉಪಯುಕ್ತವಾಗಿದೆ.