ಹೊರ್ಮುಜ್ ಜಲಸಂಧಿ ದಿಗ್ಬಂಧನ: ಗಣಿತ ಸೂತ್ರದ ಮೂಲಕ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಎಚ್ಚರಿಕೆ
ಯುಎಸ್ ಮತ್ತು ಇರಾನ್ ಸಂಘರ್ಷದ ಮಧ್ಯೆ ಹೊರ್ಮುಜ್ ಜಲಸಂಧಿಯ ಮೇಲೆ ತೀವ್ರ ಒತ್ತಡ ಉಂಟಾಗಿದೆ. ಇರಾನ್ ನಿಯಂತ್ರಣದಲ್ಲಿರುವ ಈ ಜಲಸಂಧಿಯನ್ನು ಮುಕ್ತಗೊಳಿಸಲು ಅಮೆರಿಕ ಈಗ ಟೆಹರಾನ್ ಮೇಲೆ ಒತ್ತಡ ಹೇರಲು ಹೊರ್ಮುಜ್ ಜಲಮಾರ್ಗದಲ್ಲಿ ದಿಗ್ಬಂಧನ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಎಚ್ಚರಿಕೆಯನ್ನು ನೀಡುತ್ತಿದೆ.
ಸಂಗ್ರಹ ಚಿತ್ರ -
ಟೆಹರಾನ್: ಹೊರ್ಮುಜ್ ಜಲಸಂಧಿ (Strait of Hormuz) ಮೇಲೆ ಅಮೆರಿಕ ದಿಗ್ಬಂಧನ (US blockade) ವಿಧಿಸಲು ಸಜ್ಜಾಗುತ್ತಿದ್ದಂತೆ ಇರಾನ್ (Iran war) ಕೂಡ ಅಮೆರಿಕದ ಮೇಲೆ ಪ್ರತಿ ದಾಳಿ ನಡೆಸುವ ಸಿದ್ಧತೆ ನಡೆಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಇಲ್ಲಿ ದಿಗ್ಬಂಧನ ವಿಧಿಸಲು ಕರೆ ನೀಡಿದ ಬೆನ್ನಲ್ಲೇ ಇರಾನ್ ನಾಯಕರು ಕೂಡ ಅಮೆರಿಕಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ. ಇದೀಗ ಇರಾನಿನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ (Parliament Speaker Mohammad Bagher Ghalibaf) ಅವರು ಗಣಿತ ಸೂತ್ರದ ಮೂಲಕ ಅಮೆರಿಕಕ್ಕೆ ತೈಲ ಬೆಲೆ ಏರಿಕೆಯ ಮುನ್ಸೂಚನೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಇರಾನಿನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಮತ್ತಷ್ಟು ಏರಿಕೆಯಾಗುವ ಸೂಚನೆ ನೀಡಿದ್ದಾರೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇದಕ್ಕೆ ಪ್ರತಿಯಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿತ್ತು. ಇದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಂಟಾಗಿದೆ.
ಭಾರತದ ಹಡಗುಗಳು ಹೊರ್ಮುಜ್ ಟೋಲ್ ಪಾವತಿಸಬೇಕಾಗಿಲ್ಲ: ಮಿತ್ರರಾಷ್ಟ್ರಕ್ಕೆ ಇರಾನ್ ಅಭಯ
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ಪರಸ್ಪರ ಎಚ್ಚರಿಕೆಯನ್ನು ನೀಡುತ್ತಿದ್ದು, ಇದರಿಂದ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಮೆರಿಕವು ಹೊರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ವಿಧಿಸಲು ಸಿದ್ಧತೆ ನಡೆಸುತ್ತಿದೆ. ಈ ನಡುವೆ ಇರಾನ್ ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಅವರು ಗಣಿತ ಸೂತ್ರದ ಮೂಲಕ ತೈಲ ಬೆಲೆ ಏರಿಕೆ, ವಿಶ್ವದಾದ್ಯಂತ ಇದು ಬೀರುವ ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
GHALIBAF, IRANS REGIME LEAD NEGOTIATOR VIA X:
— Mossad Commentary (@MOSSADil) April 12, 2026
“Enjoy the current pump figures. With the so-called 'blockade', Soon you'll be nostalgic for $4–$5 gas.
ΔO_BSOH>0 ⇒ f(f(O))>f(O)”
Why is he more worried about American gas prices than most Americans? It’s almost like he was… pic.twitter.com/2vOwOpvAVS
ಟೆಹರಾನ್ ನಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ಪರಿಣಾಮ ಈಗಾಗಲೇ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 100 ಡಾಲರ್ ದಾಟಿದೆ. ಇದು ಮಾರುಕಟ್ಟೆ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಇದೀಗ ಮತ್ತೆ ಅಮೆರಿಕವು ಇರಾನಿನ ಬಂದರುಗಳಿಗೆ ಬರುವ ಹಡಗುಗಳ ಮೇಲೆ ನೌಕಾ ದಿಗ್ಬಂಧನ ವಿಧಿಸಲು ನಿರ್ಧರಿಸಿದೆ. ಇದರಿಂದ ಜಾಗತಿಕ ತೈಲ ಬೆಲೆಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಗಣಿತ ಸೂತ್ರದ ಮೂಲಕ ಗಾಲಿಬಾಫ್ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಗಾಲಿಬಾಫ್ ಅವರು ಸಮುದ್ರದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರ್ಬಂಧ ವಿಧಿಸಲು ಪ್ರಯತ್ನಿಸುತ್ತಿರುವುದಕ್ಕೆ ವ್ಯಂಗ್ಯವಾಡಿದರು.
ಯಾವುದೇ ಗಲ್ಫ್ ಬಂದರು ಸುರಕ್ಷಿತವಾಗಿರೋದಿಲ್ಲ: ಅಮೆರಿಕದ ದಿಗ್ಬಂಧನಕ್ಕೂ ಮೊದಲೇ ಇರಾನ್ ಎಚ್ಚರಿಕೆ
ಇಂಧನ ಬೆಲೆ ಏರಿಕೆಗಳ ಬಗ್ಗೆ ಅಮೆರಿಕನ್ ಗ್ರಾಹಕರಿಗೆ ಎಚ್ಚರಿಕೆ ನೀಡಿದ ಅವರು ಶ್ವೇತಭವನದ ಬಳಿ ಪೆಟ್ರೋಲ್ ಬೆಲೆಗಳ ಚಿತ್ರವನ್ನು ಹಂಚಿಕೊಂಡು ಶೀಘ್ರದಲ್ಲೇ ಇದು ಹಳೆಯದಾಗುತ್ತದೆ ಎಂದು ಹೇಳಿದ್ದಾರೆ. ಇದರೊಂದಿಗೆ ಅವರು "ΔO_BSOH > 0 ⇒ f(f(O)) > f(O)" ಎಂಬ ಗಣಿತ ಸೂತ್ರವನ್ನು ಬರೆದಿದ್ದು, (ಇದರ ಅರ್ಥ ತೈಲ ಪೂರೈಕೆಯಲ್ಲಿ ಉಂಟಾಗುವ ಅಡಚಣೆಗಳು ಕ್ಯಾಸ್ಕೇಡಿಂಗ್ ಪರಿಣಾಮವನ್ನು ಉಂಟುಮಾಡಬಹುದು. ಮಾರುಕಟ್ಟೆ ಮೇಲೆ ತೀವ್ರ ಆಘಾತವನ್ನು ಉಂಟು ಮಾಡುತ್ತದೆ.) ಹೊರ್ಮುಜ್ ಜಲಸಂಧಿಯ ಸುತ್ತಲಿನ ಯಾವುದೇ ಕ್ರಮವು ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಯನ್ನು ಪ್ರಚೋದಿಸುತ್ತದೆ ಎಂದು ತಿಳಿಸಿದ್ದಾರೆ.